ಇಂದು ನಡೆಯಲಿದೆ ರಿಯಲ್‌ಮಿ ವಾಚ್‌ 3 ಫಸ್ಟ್‌ ಸೇಲ್‌! ಆಫರ್‌ ಏನಿದೆ?

|

ರಿಯಲ್‌ಮಿ ಕಂಪೆನಿ ಕೆಲ ದಿನಗಳ ಹಿಂದೆ ಪರಿಚಯಿಸಿದ್ದ ರಿಯಲ್‌ಮಿ ವಾಚ್‌ 3 ಸ್ಮಾರ್ಟ್‌ವಾಚ್‌ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಸ್ಮಾರ್ಟ್‌ವಾಚ್‌ ಪ್ರಿಯರನ್ನು ಆಕರ್ಷಿಸಿರುವ ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಇಂದು (ಆಗಸ್ಟ್ 2)ಮಧ್ಯಾಹ್ನ 12 ರಿಂದ ಮೊದಲ ಮಾರಾಟವನ್ನು ಆರಂಭಿಸಲಿದೆ. ಇದು ರಿಯಲ್‌ಮಿ ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಬಜೆಟ್‌ ಬೆಲೆಯನ್ನು ಹೊಂದಿದ್ದು, ಪರಿಚಯಾತ್ಮಕ ಆಫರ್‌ನಲ್ಲಿ ವಿಶೇಷ ರಿಯಾಯಿತಿಯನ್ನು ಕೂಡ ಪಡೆದುಕೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ವಾಚ್‌ 3 ಇಂದು ಮಧ್ಯಾಹ್ನ 12 ರಿಂದ ತನ್ನ ಫಸ್ಟ್‌ ಸೇಲ್‌ ನಡೆಸಲಿದೆ. ಸ್ಮಾರ್ಟ್‌ವಾಚ್‌ ಪ್ರಿಯರ ಆಶಯಕ್ಕೆ ಅನುಗುಣವಾದ ವಿನ್ಯಾಸವನ್ನು ಈ ಸ್ಮಾರ್ಟ್‌ವಾಚ್‌ ಪಡೆದುಕೊಂಡಿದೆ. ಅಲ್ಲದೆ ಫಿಟ್ನೆಸ್‌ ಪ್ರಿಯರನ್ನು ಸೆಳೆಯುವ ಗಮರ್ನಾಹ ಹೆಲ್ತಿ ಫೀಚರ್ಸ್‌ಗಳನ್ನು ಕೂಡ ಈ ವಾಚ್‌ ಒಳಗೊಂಡಿದೆ. ಇದರಲ್ಲಿ ನಾನಾಬಗೆಯ ಹೆಲ್ತ್‌ ಟ್ಯಾಕರ್‌ ಫೀಚರ್ಸ್‌ಗಳಿದ್ದು, ಮಲ್ಟಿ ವರ್ಕೌಟ್‌ ಮೋಡ್‌ಗಳನ್ನು ಕೂಡ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ನಿಂದ ನೇರವಾಗಿ ಕಾಲ್‌ ರಿಸೀವ್‌ ಮಾಡುವ ಆಯ್ಕೆಯನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.

ರಿಯಲ್‌ಮಿ

ರಿಯಲ್‌ಮಿ ವಾಚ್‌ 3 ವಿಶೇಷ ಫೀಚರ್ಸ್‌ಗಳಿಂದ ಮಾತ್ರವಲ್ಲ ವಿನ್ಯಾಸದಿಂದಲೂ ಕೂಡ ಗಮನಸೆಳೆದಿದೆ. ಈ ಸ್ಮಾರ್ಟ್‌ವಾಚ್‌ನ ಡಿಸ್‌ಪ್ಲೇ ಹಿಂದಿನ ವಾಚ್‌ಗಳಿಗಿಂತ 35% ಬ್ರೈಟ್‌ನೆಸ್‌ ನೀಡಲಿದೆ ಎಂದು ರಿಯಲ್‌ಮಿ ಕಂಪೆನಿ ಅಭಿಪ್ರಾಯಪಟ್ಟಿದೆ. ಜೊತೆಗೆ ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಇದಲ್ಲದೆ ಬ್ಲೂಟೂತ್‌ ಕಾಲ್‌ ಅನ್ನು ಕೂಡ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು? ಫಸ್ಟ್‌ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಾರಾಟದ ಸಮಯ ಮತ್ತು ಆಫರ್‌ ಏನು?

ಮಾರಾಟದ ಸಮಯ ಮತ್ತು ಆಫರ್‌ ಏನು?

ರಿಯಲ್‌ಮಿ ವಾಚ್‌ 3 ತನ್ನ ಫಸ್ಟ್‌ ಸೇಲ್‌ ಅನ್ನು ಇಂದು (ಆಗಸ್ಟ್ 2) ಮಧ್ಯಾಹ್ನ 12 ರಿಂದ ಪ್ರಾರಂಭಿಸಲಿದೆ. ಈ ಸೇಲ್‌ ರಿಯಲ್‌ಮಿ ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್ ಮೂಲಕ ನಡೆಯಲಿದ್ದು, ಗ್ರಾಹಕರು ಖರೀದಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ರಿಯಲ್‌ಮಿ ವಾಚ್‌ 3 ಬೆಲೆ 3,499ರೂ. ಆಗಿದೆ. ಆದರೆ ಪರಿಚಯಾತ್ಮಕ ಕೊಡುಗೆಯ ಭಾಗವಾಗಿ, ಕಂಪನಿಯು 500 ರೂ. ಫ್ಲಾಟ್ ರಿಯಾಯಿತಿಯನ್ನು ನೀಡುತ್ತಿದೆ. ಇದರಿಂದ ಈ ಸ್ಮಾರ್ಟ್‌ವಾಚ್‌ ಅನ್ನು ನೀವು ಕೇವಲ 2,999ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ.

ರಿಯಲ್‌ಮಿ ವಾಚ್‌ 3 ಫೀಚರ್ಸ್‌ ಹೇಗಿದೆ?

ರಿಯಲ್‌ಮಿ ವಾಚ್‌ 3 ಫೀಚರ್ಸ್‌ ಹೇಗಿದೆ?

ರಿಯಲ್‌ಮಿ ವಾಚ್‌ 3 ಸ್ಮಾರ್ಟ್‌ವಾಚ್‌ 1.8 ಇಂಚಿನ TFT-LCD ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಅನ್ನು ರೇಟ್ ಮಾಡಿದೆ. ಇನ್ನು ಈ ವಾಚ್‌ನ ಡಿಸ್‌ಪ್ಲೇ ಹಿಂದಿನ ವಾಚ್‌ಗಳ ಡಿಸ್‌ಪ್ಲೇಗಿಂತ 35% ಹೆಚ್ಚಿನ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಹೈಲೈಟ್‌ ಫೀಚರ್ಸ್‌ ಬ್ಲೂಟೂತ್‌ ಕಾಲ್‌ ಬೆಂಬಲಿಸುವುದು. ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಬೆಂಬಲಿಸಲಿದ್ದು, ವಾಚ್‌ನಲ್ಲಿ ಕಾಲ್‌ ರಿಸೀವ್‌ ಮಾಡುವ ಆಯ್ಕೆ ನೀಡಲಾಗಿದೆ.

ವಾಚ್

ಇದು ನಿಮ್ಮ ಮಣಿಕಟ್ಟಿನಲ್ಲಿರುವಾಗ ಸ್ಮಾರ್ಟ್‌ಫೋನ್‌ಗಾಗಿ ಹ್ಯಾಂಡ್ಸ್-ಫ್ರೀ ಸ್ಪೀಕರ್ ಡಿವೈಸ್‌ ಮಾದರಯಲ್ಲಿ ಕಾರ್ಯನಿರ್ವಹಿಸುತ್ತದೆ. ವಾಚ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಜೋಡಿಸಬಹುದು. ಇನ್ನು ರಿಯಲ್‌ಮಿ ವಾಚ್‌ 3 ಹೃದಯ ಬಡಿತ ಮತ್ತು SpO2 ಮಾನಿಟರಿಂಗ್ ಮತ್ತು ಸ್ಲೀಪ್‌ ಟ್ರ್ಯಾಕಿಂಗ್‌ ಸೆನ್ಸಾರ್‌ಗಳನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ವರ್ಕೌಟ್‌ ಟ್ರ್ಯಾಕಿಂಗ್‌ಗಾಗಿ 110 ಕ್ಕೂ ಹೆಚ್ಚು ಫಿಟ್‌ನೆಸ್ ಮೋಡ್‌ಗಳನ್ನು ಹೊಂದಿದೆ. 100+ ಕಸ್ಟಮ್ ವಾಚ್ ಫೇಸ್‌ಗಳನ್ನು ನೀಡುತ್ತದೆ. ಇದು 340mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ ಏಳು ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ.

ರಿಯಲ್‌ಮಿ

ಇದಲ್ಲದೆ ರಿಯಲ್‌ಮಿ ಕಂಪೆನಿ ತನ್ನ ರಿಯಲ್‌ಮಿ ವಾಚ್‌ 3 ಸ್ಮಾರ್ಟ್‌ವಾಚ್‌ ಜೊತೆಗೆ ರಿಯಲ್‌ಮಿ ಪ್ಯಾಡ್‌ X, ಫ್ಲಾಟ್‌ಮಾನಿಟರ್‌, ಬಡ್ಸ್‌ ಏರ್‌ 3 ನಿಯೋ, ಬಡ್ಸ್‌ ವಾಯರ್‌ಲೆಸ್‌ 2S ಇಯರ್‌ಫೋನ್ಸ್‌ ಅನ್ನು ಕೂಡ ಪರಿಚಯಿಸಿತ್ತು. ಇದರಲ್ಲಿ ರಿಯಲ್‌ಮಿ ಪ್ಯಾಡ್‌ X, ಫ್ಲಾಟ್‌ಮಾನಿಟರ್‌, ಬಡ್ಸ್‌ ಏರ್‌ 3 ನಿಯೋ ಖರೀದಿಗೆ ಲಭ್ಯವಿದೆ. ಇದರಲ್ಲಿ ರಿಯಲ್‌ಮಿ ಪ್ಯಾಡ್‌ X ಹಾಗೂ ಫ್ಲಾಟ್‌ಮಾನಿಟರ್‌ ವಿಶೇಷತೆ ಏನಿದೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ರಿಯಲ್‌ಮಿ ಪ್ಯಾಡ್‌ X ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ X ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ X 11 ಇಂಚಿನ WUXGA+ ಫುಲ್‌ ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ. ಇದು 84.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಟ್ಯಾಬ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದರಲ್ಲಿ ಹೆಚ್ಚುವರಿ ಸ್ಟೋರೇಜ್‌ ಅನ್ನು ವರ್ಚುವಲ್ RAM ಆಗಿ 5GB ವರೆಗೆ ವಿಸ್ತರಿಸುವುದಕ್ಕೆ ಅವಕಾಶವಿದೆ.

ರಿಯಲ್‌ಮಿ ಫ್ಲಾಟ್ ಮಾನಿಟರ್

ರಿಯಲ್‌ಮಿ ಫ್ಲಾಟ್ ಮಾನಿಟರ್

ರಿಯಲ್‌ಮಿ ಫ್ಲಾಟ್ ಮಾನಿಟರ್ 23.8 ಇಂಚಿನ ಫುಲ್‌ ಹೆಚ್‌ಡಿ ಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ಇದು ಫ್ಯೂಚರಿಸ್ಟಿಕ್ ಡಿಸ್‌ಪ್ಲೇ ಪ್ರೊಫೈಲ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಮಾನಿಟರ್‌ ಡಿಸ್‌ಪ್ಲೇ 75Hz ಹೆಚ್ಚಿನ ರಿಫ್ರೆಶ್ ರೇಟ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು 8ms ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದ್ದು, ಇದು ವೇಗದ ಮತ್ತು ವಿಳಂಬ-ಮುಕ್ತ ಕಾರ್ಯಕ್ಷಮತೆಯನ್ನು ನೀಡಲಿದೆ. ಅಲ್ಲದೆ ಈ ಫ್ಲಾಟ್‌ ಮಾನಿಟರ್‌ ಮಿಲಿಯನ್ ಬಣ್ಣಗಳನ್ನು ಸಹ ಬೆಂಬಲಿಸುತ್ತದೆ. ಇದು HDMI 1.4 ಪೋರ್ಟ್, USB ಟೈಪ್-C ಪೋರ್ಟ್, DC ಪೋರ್ಟ್ ಮತ್ತು VGA ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಮಾನಿಟರ್‌ ಆಡಿಯೊಗಾಗಿ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.

Best Mobiles in India

English summary
Realme Watch 3 Will Be Available For Purchase Starting Today: Price, Features, Specs

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X