Just In
- 54 min ago
ಹಾನರ್ V40 5G ಸ್ಮಾರ್ಟ್‌ಫೋನ್ ಬಿಡುಗಡೆ! ಡ್ಯುಯೆಲ್ ಸೆಲ್ಫಿ ಕ್ಯಾಮೆರಾ ವಿಶೇಷ!
- 1 hr ago
ಇನ್ಫಿನಿಕ್ಸ್ ಹಾಟ್ 10 ಪ್ಲೇ ಮತ್ತು ರೆಡ್ಮಿ 9 ಪ್ರೈಮ್: ಭಿನ್ನತೆಗಳೆನು?..ಬೆಲೆ ಎಷ್ಟು?
- 2 hrs ago
ಸದ್ಯದಲ್ಲೇ ವಾಟ್ಸಾಪ್ ವೆಬ್ನಲ್ಲಿ ವೀಡಿಯೊ ಮತ್ತು ವಾಯ್ಸ್ ಕಾಲ್ ಫೀಚರ್ಸ್ ಲಭ್ಯ!
- 3 hrs ago
ಜಿಯೋದ ಈ ಅಗ್ಗದ ಡೇಟಾ ಪ್ಯಾಕ್ನಲ್ಲಿ ಈಗ ಭರ್ಜರಿ ಡೇಟಾ ಪ್ರಯೋಜನ!
Don't Miss
- News
ಸಚಿವ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ದೂರು ಹಿಂಪಡೆದ ಮಹಿಳೆ
- Automobiles
ಭಾರತದಲ್ಲಿ ವರ್ಷಕ್ಕೊಂದು ಹೊಚ್ಚ ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಸಿಟ್ರನ್
- Movies
ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ನಟಿ, ಸಂಸದೆ ಸುಮಲತಾ ಅಂಬರೀಶ್
- Sports
ಬಿಎಂಡಬ್ಲ್ಯೂ ನೂತನ ಕಾರು ಖರೀದಿಸಿದ ವೇಗಿ ಮೊಹಮ್ಮದ್ ಸಿರಾಜ್
- Finance
ಷೇರು ಮಾರುಕಟ್ಟೆ ತಲ್ಲಣ; 700 ಪಾಯಿಂಟ್ ಗೂ ಹೆಚ್ಚು ಕುಸಿದ ಸೆನ್ಸೆಕ್ಸ್
- Lifestyle
ಪದೇ ಪದೇ ಬದಲಾಗುವ ನಿಮ್ಮ ಸಂಗಾತಿಯ ಭಾವನೆಗಳನ್ನು ಈ ರೀತಿ ಸರಿ ಮಾಡಿ
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಿಯಲ್ ಮಿ'ಯ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಈಗ ಬಿಗ್ ಡಿಸ್ಕೌಂಟ್!
ಸ್ಮಾರ್ಟ್‌ಫೋನ್‌ಗಳಿಗೆ ಹಬ್ಬದ ದಿನಗಳಲ್ಲಿ ಭರ್ಜರಿ ಆಫರ್ ಇರುತ್ತವೆ. ಇನ್ನುಳಿದ ಸಮಯದಲ್ಲಿ ಯಾವುದೇ ಆಫರ್ ಲಭ್ಯ ಇರಲ್ಲ ಎನ್ನುವ ಮಾತು ಈಗ ಸೂಕ್ತವಲ್ಲ. ಏಕೆಂದರೇ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಸ್ಮಾರ್ಟ್‌ಫೋನ್‌ಗಳಿಗೆ ಆಲ್ ಟೈಮ್ ಒಂದಿಲ್ಲೊಂದು ಕೊಡುಗೆಗಳನ್ನು ಕಂಪನಿಗಳು ಮತ್ತು ಇ-ಕಾಮರ್ಸ್ ತಾಣಗಳು ಘೋಷಿಸುತ್ತಲೇ ಇರುತ್ತವೆ. ಅದೇ ರೀತಿ ಈಗ 'ರಿಯಲ್ ಮಿ' ಸಂಸ್ಥೆಯು ಈ ಚಳಿಗಾಲದ ಸೀಜನ್‌ಗೆ ಹಾಟ್ ಆಫರ್‌ಗಳನ್ನು ಘೋಷಿಸಿದೆ.

ಹೌದು, ಜನಪ್ರಿಯ ರಿಯಲ್ ಮಿ ಸಂಸ್ಥೆಯು 'ರಿಯಲ್ ಮಿ ವಿಂಟರ್ ಸೇಲ್' ಮೇಳವನ್ನು ಆಯೋಜಿಸಿದ್ದು, ತನ್ನ ಇತ್ತೀಚಿಗಿನ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡೀಲ್ ಆಫರ್ ಮಾಡಿದೆ. ಅಂದಹಾಗೇ ಈ ವಿಂಟರ್ ಸೇಲ್ ಮೇಳವು ಇದೇ ಡಿಸೆಂಬರ್ 1ರಿಂದ ಆರಂಭವಾಗಿದ್ದು, ಇದೇ ಡಿ.5ರ ವರೆಗೂ ಇರಲಿದೆ. ಈ ಅವಧಿಯಲ್ಲಿ ರಿಯಲ್ ಮಿ ತಾಣದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಇನ್‌ಸ್ಟಂಟ್ ಡಿಸ್ಕೌಂಟ್, ಇಎಮ್‌ಐ ಆಯ್ಕೆ ಸೇರಿದಂತೆ ಇನ್ನಷ್ಟು ವಿಶೇಷ ಡಿಸ್ಕೌಂಟ್ ಪ್ರಯೋಜನಗಳು ಸಿಗಲಿದೆ. ಇನ್ನು 'ರಿಯಲ್ ಮಿ ವಿಂಟರ್ ಸೇಲ್'ನಲ್ಲಿ ಬೆಸ್ಟ್ ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನ್
ಇತ್ತೀಚಿಗಷ್ಟೆ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ 'ರಿಯಲ್ ಮಿ 5 ಪ್ರೊ' ಸ್ಮಾರ್ಟ್‌ಫೋನಿಗೆ ಡಿಸ್ಕೌಂಟ್ ಆಫರ್ ಲಭ್ಯವಿದೆ. ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್, 4,035mAh ಬ್ಯಾಟರಿ ಬಾಳಿಕೆ, ಕ್ವಾಡ್ ಕ್ಯಾಮೆರಾ, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್ ಫೀಚರ್ಸ್‌ಗಳು ಈ ಫೋನಿನ ಪ್ರಮುಖ ಅಟ್ರ್ಯಾಕ್ಷನ್ ಆಗಿವೆ. ಈ ಸ್ಮಾರ್ಟ್‌ಫೋನ್ 4GB+64GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಇದೀಗ 12,999ರೂ.ಗಳಿಗೆ ಲಭ್ಯ.

'ರಿಯಲ್ ಮಿ X' ಸ್ಮಾರ್ಟ್‌ಫೋನ್
ರಿಯಲ್ ಮಿ ಕಂಪನಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಪೈಕಿ ರಿಯಲ್ ಮಿ X ಫೋನ್ ಸಹ ಒಂದಾಗಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್, 48ಎಂಪಿ ಕ್ಯಾಮೆರಾ ಸೆನ್ಸಾರ್, ಪಾ್‌ಅಪ್ ಸೆಲ್ಫಿ ಕ್ಯಾಮೆರಾ, ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನಿನ 4GB+128GB ಬೇಸ್ ವೇರಿಯಂಟ್ ವಿಂಟರ್ ಸೇಲ್‌ನಲ್ಲಿ 15,999ರೂ.ಗಳಿಗೆ ದೊರೆಯುತ್ತದೆ.

'ರಿಯಲ್ ಮಿ 3 ಪ್ರೊ' ಸ್ಮಾರ್ಟ್‌ಫೋನ್
ಪ್ರಸಕ್ತ ವರ್ಷದಲ್ಲಿ ಬಿಡುಗಡೆ ಆಗಿರುವ 'ರಿಯಲ್ ಮಿ 3 ಪ್ರೊ' ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ 4GB+64GB ಸ್ಟೋರೇಜ್‌ನ ಈ ಸ್ಮಾರ್ಟ್‌ಫೋನ್ 9,999ರೂ.ಗಳಿಗೆ ಗ್ರಾಹಕರಿಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಒಳಗೊಂಡಿದ್ದು, 4,045mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ VOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ.

'ರಿಯಲ್ ಮಿ XT' ಸ್ಮಾರ್ಟ್‌ಫೋನ್
64ಎಂಪಿ ಕ್ಯಾಮೆರಾ ಸೆನ್ಸಾರ್‌ನಿಂದ ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿರುವ 'ರಿಯಲ್ ಮಿ XT' ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಕ್ಯಾಮೆರಾ ಆಯ್ಕೆ ಹೊಂದಿದೆ. ಈ ವಿಂಟರ್ ಸೇಲ್‌ನಲ್ಲಿ 4GB+64GB ವೇರಿಯಂಟ್ ಈ ಸ್ಮಾರ್ಟ್‌ಫೋನ್ 15,999ರೂ.ಗಳಿಗೆ ದೊರೆಯುತ್ತದೆ. ಈ ಫೋನ್ ಸಹ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಒಳಗೊಂಡಿದ್ದು, ಡಾರ್ಕ್ ಮೊಡ್ ಫೀಚರ್ಸ್ ಪಡೆದಿದೆ.

ರಿಯಲ್ ಮಿ C2 ಸ್ಮಾರ್ಟ್‌ಫೋನ್
ರಿಯಲ್ ಮಿ ಸ್ಮಾರ್ಟ್‌ಫೋನ್ ಬಹುತೇಕ ಫೋನ್‌ಗಳು ಅಗ್ಗದ ಬೆಲೆಯಲ್ಲಿವೆ. ಅವುಗಳಲ್ಲಿ 'ರಿಯಲ್ ಮಿ C2' ಫೋನ್ ಸಹ ಒಂದು. ಈ ಸ್ಮಾರ್ಟ್‌ಫೋನ್ ವಿಂಟರ್ ಸೇಲ್‌ನಲ್ಲಿ ಈಗ ಡಿಸ್ಕೌಂಟ ಪಡೆದಿದ್ದು, 3GB+32GB ಬೇಸ್ ವೇರಿಯಂಟ್ 5,999ರೂ.ಗಳಿಗೆ ಸಿಗಲಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ, ಲಾಂಗ್ ಲೈಫ್ ಬ್ಯಾಟರಿ, ಡೈಮಂಡ್ ಕಟ್ ಡಿಸೈನ್‌ನಿಂದ ಗ್ರಾಹಕರನ್ನು ಸೆಳೆದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190