ರಿಯಲ್‌ಮಿ ಇಯರ್‌ ಎಂಡ್‌ ಸೇಲ್‌: ಜನಪ್ರಿಯ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್!

|

ವರ್ಷದ ಕೊನೆಯಲ್ಲಿ ಇ ಕಾಮರ್ಸ್‌ ತಾಣಗಳು ಫೋನ್‌ಗಳಿಗೆ ಕೊಡುಗೆ ನೀಡುತ್ತವೆ. ಅದೇ ರೀತಿ ಜನಪ್ರಿಯ ರಿಯಲ್‌ಮಿ ಕಂಪನಿಯು ಭಾರತದಲ್ಲಿ ತನ್ನ ವರ್ಷಾಂತ್ಯ (Year End Sale) ಸೇಲ್ ಅನ್ನು ಘೋಷಿಸಿದೆ. ಈ ವಿಶೇಷ ಸೇಲ್ ಡಿ. 26 ರಿಂದ ಪ್ರಾರಂಭವಾಗಲಿದ್ದು, ಡಿ. 30ರ ವರೆಗೂ ಇರಲಿದೆ. ಈ ಅವಧಿಯಲ್ಲಿ ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯ ಆಗಲಿದೆ. ಅಂದಹಾಗೇ ಅಧಿಕೃತ ರಿಯಲ್‌ಮಿ.ಕಾಮ್ (Realme.com) ಹಾಗೂ ಫ್ಲಿಪ್‌ಕಾರ್ಟ್‌ ತಾಣಗಳಲ್ಲಿ ಈ ಕೊಡುಗೆ ಲಭ್ಯ ಆಗಲಿದೆ.

ಸ್ಮಾರ್ಟ್‌ಫೋನ್‌ಗಳಿಗೆ

ಹೌದು, ರಿಯಲ್‌ಮಿ ಕಂಪನಿಯು ಇಯರ್‌ ಎಂಡ್ ಸೇಲ್ ಅನ್ನು ಆಯೋಜಸಿದೆ. ಈ ಸೇಲ್‌ನಲ್ಲಿ ಕಂಪನಿಯ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಸಿಗಲಿದೆ. ಮುಖ್ಯವಾಗಿ ರಿಯಲ್‌ಮಿ GT ನಿಯೋ 2 5G ಸೇರಿದಂತೆ ರಿಯಲ್‌ಮಿ ಸಿ ಹಾಗೂ ರಿಯಲ್‌ಮಿ ನಾರ್ಜೋ ಸರಣಿಯ ಕೆಲವು ಫೋನ್‌ಗಳಿಗೆ ಬೊಂಬಾಟ್ ಆಫರ್ ದೊರೆಯಲಿದೆ. ಕೆಲವು ಫೋನ್‌ಗಳು 500 ರಿಂದ ರೂ. 4,000ರೂ.ಗಳ ವರೆಗೂ ರಿಯಾಯಿತಿ ದರದಲ್ಲಿ ಕಾಣಲಿವೆ.

ಸ್ಟೋರೇಜ್

ರಿಯಲ್‌ಮಿ ಕಂಪನಿಯ ಇಯರ್‌ ಎಂಡ್ ಸೇಲ್‌ನಲ್ಲಿ ರಿಯಲ್‌ಮಿ GT ನಿಯೋ 2 5G 8GB + 128GB ಸ್ಟೋರೇಜ್ ಮಾದರಿಗೆ 31,999ರೂ. ಬೆಲೆ ಇದೆ. ಕೊಡುಗೆಯಲ್ಲಿ 4,000 ರೂ. ವರೆಗೂ ಲಭ್ಯವಾಗಲಿದೆ. 12GB + 256GB ಸ್ಟೋರೇಜ್ ಹೊಂದಿರುವ ಹೈ ಎಂಡ್ ಮಾದರಿಯು 35,999ರೂ. ಗೆ ಸಿಗಲಿದೆ ಎಂದು ಹೇಳಲಾಗಿದೆ

ಕಾಣಲಿದೆ

ಅದೇ ರೀತಿ, ರಿಯಲ್‌ಮಿ GT ಮಾಸ್ಟರ್ ಆವೃತ್ತಿಯು ಇಯರ್‌ ಎಂಡ್‌ ಸೇಲ್‌ನಲ್ಲಿ 4,000ರೂ. ಗಳ ವರೆಗೂ ಬೆಲೆ ಕಡಿತ ಕಾಣಲಿದೆ ಎನ್ನಲಾಗಿದೆ. ರಿಯಲ್‌ಮಿ GT ಮಾಸ್ಟರ್ ಆವೃತ್ತಿ 6GB + 256GB ಸಂಗ್ರಹಣೆಯ ವೇರಿಯಂಟ್‌ ಅನ್ನು 25,999ರೂ.ಗಳಿಗೆ ಖರೀದಿಸಬಹುದು. ಹಾಗೆಯೇ 8GB + 128GB ಸ್ಟೋರೇಜ್ ಆಯ್ಕೆಯನ್ನು 27,999ರೂ.ನಲ್ಲಿ ಪಡೆದುಕೊಳ್ಳಬಹುದು. ಇನ್ನು 8GB + 256GB ಸಂಗ್ರಹಣೆ ಹೈ ಎಂಡ್ ಮಾಡೆಲ್ ಅನ್ನು 29,999ರೂ.ಗೆ ಖರೀದಿಸಬಹುದು.

ಸ್ಟೋರೇಜ್

ರಿಯಲ್‌ಮಿ 8 6GB + 128GB ಸ್ಟೋರೇಜ್ ಆವೃತ್ತಿ ಮತ್ತು ರಿಯಲ್‌ಮಿ 8 ಫೋನಿನ 8GB + 128GB ಸ್ಟೋರೇಜ್ ಮಾದರಿ ಎರಡೂ 1,500ರೂ. ದರ ಕಡಿತ ಲಭ್ಯ ಆಗಲಿದೆ. ರಿಯಾಯಿತಿ ಬಳಿಕ ಈ ಫೋನ್‌ಗಳು ಕ್ರಮವಾಗಿ 16,999ರೂ. ಮತ್ತು 17,999ರೂ.ಗೆ ಲಭ್ಯ ಆಗಲಿದೆ. ಹಾಗಾದರೇ ರಿಯಲ್‌ಮಿ ಕಂಪನಿಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ 'ರಿಯಲ್‌ಮಿ GT ನಿಯೋ 2' ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

ಡಿಸ್‌ಪ್ಲೇ ಡಿಸೈನ್ ಮತ್ತು ವಿನ್ಯಾಸ

ಡಿಸ್‌ಪ್ಲೇ ಡಿಸೈನ್ ಮತ್ತು ವಿನ್ಯಾಸ

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ ಫೋನ್‌ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಹಾಗೆಯೇ 6.62 ಇಂಚಿನ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್ ಹೊಂದಿರಲಿದ್ದು, 600Hz ಟಚ್ ಸಾಂಪ್ಲಿಂಗ್ ರೇಟ್ ಪಡೆದಿರಲಿದೆ. ಹಾಗೆಯೇ ಇದು 1300 nits ಬ್ರೈಟ್ನೆಸ್‌ ಪಡೆದಿರಲಿದೆ.

ಪ್ರೊಸೆಸರ್‌ ಬಲ ಯಾವುದು

ಪ್ರೊಸೆಸರ್‌ ಬಲ ಯಾವುದು

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ ಮೀಡಿಯಾ ಮೀಡಿಯಾ ಟೆಕ್ Dimensity 1200 SoC ಪ್ರೊಸೆಸರ್‌ ಅನ್ನು ಹೊಂದಿರಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 6 GB RAM ಮತ್ತು 128 GB, 8 GB + 128 GB ಮತ್ತು 12 GB + 128 GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಹೊಂದಿರಲಿದೆ ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾದ ಅವಕಾಶ ಇರಲಿದೆ.

ತ್ರಿವಳಿ ಕ್ಯಾಮೆರಾ ವಿಶೇಷ

ತ್ರಿವಳಿ ಕ್ಯಾಮೆರಾ ವಿಶೇಷ

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ ಹಿಂಬದಿಯಲ್ಲಿ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದ್ದು ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಒದಗಿಸುವ ಸಾಧ್ಯತೆ ಇದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ರಿಯಲ್‌ಮಿ GT ನಿಯೋ 2 ಸ್ಮಾರ್ಟ್‌ಫೋನ್‌‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ V5.0, GPS ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ.

Best Mobiles in India

English summary
Realme Year End Sale Brings Up to Rs. 4,000 Discount on Few Realme Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X