ಸಾರ್ವಜನಿಕ ಯುಎಸ್ ಬಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಯಾಕೆ ಯಾವತ್ತೂ ಬಳಕೆ ಮಾಡಬಾರದು?

By Gizbot Bureau
|

ಸ್ಮಾರ್ಟ್ ಫೋನ್ ಗಳಲ್ಲಿ ಡಾಟಾ ಟ್ರಾನ್ಫರ್ ಗೆ ಮತ್ತು ಚಾರ್ಜಿಂಗ್ ಗೆ ಇರುವ ಪೋರ್ಟ್ ಒಂದೇ ಆಗಿರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹ್ಯಾಕರ್ಸ್ ಗಳಿಗೆ ಈ ವಿಚಾರ ಸ್ಪಷ್ಟವಾಗಿ ತಿಳಿದಿದೆ ಮತ್ತು ನಿಮ್ಮಿಂದ ಡಾಟಾ ಕದಿಯುವುದಕ್ಕೆ ಅವರು ಸಾಕಷ್ಟು ಮಾರ್ಗಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಟ್ರಾವೆಲಿಂಗ್ ನಲ್ಲಿರುವವರ ಡಾಟಾ ಕದಿಯುವಿಕೆಗೆ ಅವರು ಪ್ರಯತ್ನಿಸುತ್ತಾರೆ. ಪ್ರಯಾಣದಲ್ಲಿರುವ ತಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಗಳನ್ನು ಚಾರ್ಜ್ ಮಾಡಿಕೊಳ್ಳುವುದಕ್ಕಾಗಿ ಉಚಿತ ಚಾರ್ಜಿಂಗ್ ಸ್ಟೇಷನ್ ಗಳನ್ನು ಸಾರ್ವಜನಿಕ ಸ್ಥಳಗಳಾದ ಏರ್ ಪೋರ್ಟ್, ಕಾಫಿ ಶಾಪ್ ಮತ್ತು ಹೊಟೆಲ್ ಗಳಲ್ಲಿ ಬಳಸುವುದಕ್ಕೆ ಮುಂದಾಗುತ್ತಾರೆ. ಇದೇ ಅವಕಾಶವನ್ನು ಹ್ಯಾಕರ್ ಗಳು ಕಾಯುತ್ತಿರುತ್ತಾರೆ.

ಸಾರ್ವಜನಿಕ ಯುಎಸ್ ಬಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಯಾಕೆ ಯಾವತ್ತೂ ಬಳಕೆ ಮಾಡಬಾರದು

ಜ್ಯೂಸ್ ಜ್ಯಾಕಿಂಗ್ ಎನ್ನಲಾಗುವ ಇದು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ಮಾಲ್ವೇರ್ ಗಳನ್ನು ಇನ್ಸ್ಟಾಲ್ ಮಾಡುವಂತಹ ಹಾರ್ಡ್ ವೇರ್ ನ್ನು ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಹ್ಯಾಕರ್ಸ್ ಗಳಿಂದ ಮಾಡಿಫೈ ಮಾಡಲಾಗಿರುತ್ತದೆ. ನೀವು ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಪ್ಲಗ್ ಇನ್ ಆಗುತ್ತಿದ್ದಂತೆ ನಿಮ್ಮ ಫೋನ್ ಸೋಂಕಿಗೆ ತುತ್ತಾಗುತ್ತದೆ.

ಚಾರ್ಜಿಂಗ್ ಪೋರ್ಟ್ಸ್ ಮತ್ತು ಚಾರ್ಜಿಂಗ್ ಕೇಬಲ್ ಎರಡನ್ನೂ ಕೂಡ ಮಾಲ್ವೇರ್ ಗಳನ್ನು ಡೆಲಿವರಿ ಮಾಡುವುದಕ್ಕಾಗಿ ಬಳಕೆ ಮಾಡಬಹುದಾಗಿದೆ. ಒಂದು ವೇಳೆ ನೀವು ಯಾವತ್ತಾದರೂ ಸಾರ್ವಜನಿಕ ಚಾರ್ಜಿಂಗ್ ಪೋರ್ಟ್ ನ್ನು ಬಳಸಿದರೆ ಖಂಡಿತ ಅದು ನಿಮ್ಮ ಬ್ಯಾಡ್ ಡೇ ಆಗಿರುತ್ತದೆ.

ಕೇಬಲ್ ಅಥವಾ ಪವರ್ ಅಡಾಪ್ಟರ್ ಹ್ಯಾಕರ್ ಗಳಿಂದ ನಿರ್ಮಿಸಿರಬಹುದು ಅಥವಾ ಯಾವುದೋ ಪ್ರಯಾಣಿಕ ಮರೆತು ಬಿಟ್ಟು ಹೋಗಿರುವ ಸಾಧ್ಯತೆಯೂ ಇರಬಹುದು. ಒಮ್ಮೆ ಹ್ಯಾಕರ್ ಗಳಿಗೆ ನಿಮ್ಮ ಫೋನಿಗೆ ಆಕ್ಸಿಸ್ ಸಿಕ್ಕಿದೆ ಎಂದಾದರೆ ಆತ/ಆಕೆ ನಿಮ್ಮ ಫೋನ್ ನ್ನು ಕಂಟ್ರೋಲಿಗೆ ತೆಗೆದುಕೊಂಡು ನಿಮ್ಮ ಡಾಟಾ ಕದಿಯುವ ಸಾಧ್ಯತೆ ಇದೆ.

ಹ್ಯಾಕಿಂಗ್ ನಿಂದ ಬಚಾವಾಗಲು ಇರುವ ನಾಲ್ಕು ಪ್ರಮುಖ ದಾರಿಗಳು :

ನಿಮ್ಮನ್ನ ನೀವು ಈ ರೀತಿಯ ಹ್ಯಾಕ್ ನಿಂದ ಬಚಾವಾಗಿಸಿಕೊಳ್ಳುವುದಕ್ಕೆ ಕೆಲವು ಸರಳವಾದ ಮತ್ತು ಸುಲಭವಾದ ಮಾರ್ಗಗಳಿವೆ. ಅವುಗಳ ಬಗ್ಗೆ ಹೇಳ್ತೀವಿ ಕೇಳಿ.

1. ಡಾಟಾ ಬ್ಲಾಕಿಂಗ್ ಎಡಾಪ್ಟರ್ ನ್ನು ಬಳಸಿ

ಒಂದು ವೇಳೆ ನೀವು ಡಾಟಾ ಬ್ಲಾಕಿಂಗ್ ಎಡಾಪ್ಟರ್ ನ್ನು ಬಳಕೆ ಮಾಡಿದರೆ ಉದಾಹರಣೆಗೆ ಪೋರ್ಟ್ ಪೋ 3ನೇ ಜನರೇಷನ್ನಿನ ಡಾಟಾ ಬ್ಲಾಕರ್ (ಅಮೇಜಾನಿನಲ್ಲಿ $6.99), ನಿಮ್ಮ ಲಭ್ಯವಿರುವ ಕೇಬಲ್ ನಿಂದ ಪಬ್ಲಿಕ್ ಯುಎಸ್ ಬಿ ಪೋರ್ಟ್ ನ್ನು ಬಳಕೆ ಮಾಡಬಹುದು.

2. ಯುಎಸ್ ಬಿ ಪೋರ್ಟ್ ಬದಲಾಗಿ ಎಲೆಕ್ಟ್ರಿಕ್ ಔಟ್ ಲೆಟ್ ನ್ನು ಬಳಸಿ

ಯಾವಾಗಲೂ ಎಲೆಕ್ಟ್ರಿಕ್ ಔಟ್ ಲೆಟ್ ನ್ನು ಬಳಕೆ ಮಾಡಿ ಮತ್ತು ಚಾರ್ಜಿಂಗ್ ಸ್ಟೇಷನ್ ನಲ್ಲಿರುವ ಯುಎಸ್ ಬಿ ಪೋರ್ಟ್ ಬಳಕೆ ಬೇಡ.

3.ಪೋರ್ಟೆಬಲ್ ಚಾರ್ಜರ್ ಗೆ ಹೂಡಿಕೆ ಮಾಡಿ

ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ನ್ನು ಸ್ಕಿಪ್ ಮಾಡಿ ಮತ್ತು ಪೋರ್ಟೇಬಲ್ ಚಾರ್ಜರ್ ಗೆ ಹೂಡಿಕೆ ಮಾಡಿ.

4. ಅಪರಿಚಿತ ಡಿವೈಸ್ ಗೆ ಡಾಟಾ ಆಕ್ಸಿಸ್ ನ್ನು ನೀವು ನೀಡುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ

ಐಫೋನಿನಲ್ಲಿ ನೀವು ಯಾವುದೇ ಕಂಪ್ಯೂಟರ್ ಅಥವಾ ಇತರೆ ಡಿವೈಸ್ ಗೆ ಕನೆಕ್ಟ್ ಮಾಡಿದಾಗ ನಿಮಗೆ ಈ ಕಂಪ್ಯೂಟರ್ ಮೇಲೆ ನಂಬಿಕೆ ಇದೆಯಾ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಒಂದು ವೇಳೆ ನೀವು ಇಲ್ಲ ಎಂದು ಹೇಳಿದರೆ ನಿಮ್ಮ ಸೆಟ್ಟಿಂಗ್ಸ್ ಮತ್ತು ಡಾಟಾ ಆಕ್ಸಿಸ್ ಗೆ ಅವಕಾಶವಿರುವುದಿಲ್ಲ. ನಿಮಗೇ ಗೊತ್ತಿಲ್ಲದೆ ನೀವು ನಂಬಿಕೆ ಇಲ್ಲದ ಡಿವೈಸ್ ಗೆ ಒಂದು ವೇಳೆ ಆಕ್ಸಿಸ್ ನೀಡಿದ್ದೇ ಆದಲ್ಲಿ ಸೆಟ್ಟಿಂಗ್ಸ್> ರಿಸೆಟ್>ರಿಸೆಟ್ ಲೊಕೇಷನ್ & ಪ್ರೈವೆಸಿ ಗೆ ತೆರಳಿ ಬದಲಾವಣೆ ಮಾಡಬಹುದು.

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಪಾಪ್ ಅಫ್ ಅಥವಾ ನೋಟಿಫಿಕೇಷನ್ ಲಭ್ಯವಾಗುತ್ತದೆ"ಈ ಡಿವೈಸ್ ನ್ನು ಯುಎಸ್ ಬಿ ಮೂಲಕ ಚಾರ್ಜ್ ಮಾಡಿ" ಎಂದಿರುತ್ತದೆ. ಇದರಡಿಯಲ್ಲಿ " USB ಬಳಕೆ,"ನೀವು ಸಪ್ಲೈ ಪವರ್ ಬಳಕೆ ಮಾಡಿದ್ದೀರೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಬಾಡಿಗೆ ಕಾರಿನಲ್ಲಿ ಪ್ಲಗ್ ಮಾಡುವುದರಿಂದಾಗುವ ಸಮಸ್ಯೆಗಳು :

ಇತ್ತೀಚೆಗೆ ಕಾರುಗಳನ್ನು ನೀವು ಬಾಡಿಗೆ ಪಡೆಯುವಾಗ ಕೆಲವು ಇನ್ಫೋಟೈನ್ಮೆಂಟ್ ಸಿಸ್ಟಮ್ ನ್ನು ಅದರಲ್ಲಿ ಅಳವಡಿಸಲಾಗಿರುತ್ತದೆ. ನಿಮ್ಮ ಫೋನ್ ಕರೆಗಳು, ಟೆಕ್ಸ್ಟ್, ಮ್ಯೂಸಿಕ್, ನೇವಿಗೇಷನ್ ಮತ್ತು ಇತ್ಯಾದಿ ಕೆಲಸಗಳಿಗೆ ಅದನ್ನು ಬಳಕೆ ಮಾಡಬಹುದಾಗಿರುತ್ತದೆ. ಒಮ್ಮೆ ನೀವು ಕನೆಕ್ಟ್ ಆದರೆ ಕಾರಿನಲ್ಲಿ ನಿಮ್ಮ ವಯಕ್ತಿಕ ಮಾಹಿತಿಗಳು ಶೇಖರಣೆಯಾಗುವ ಸಾಧ್ಯತೆ ಇರುತ್ತದೆ.

ಅದರಲ್ಲಿ ನಿಮ್ಮ ಫೋನ್ ನಂಬರ್, ಕರೆಗಳು ಮತ್ತು ಮೆಸೇಜ್ ಲಾಗ್ ಗಳು, ಸ್ಟ್ರೀಮಿಂಗ್ ಮ್ಯೂಸಿಕ್ ಸರ್ವೀಸ್ ಖಾತೆಯ ಮಾಹಿತಿಗಳು, ನೇವಿಗೇಷನ್ ಸಿಸ್ಟಮ್ ಬಳಸಿ ನೀವು ಭೇಟಿ ನೀಡಿದ ಪ್ರದೇಶದ ಮಾಹಿತಿ ಮತ್ತು ಇತ್ಯಾದಿಗಳು ಸೇವ್ ಆಗಿರುತ್ತದೆ. ಕೇವಲ ಕಾರಿನಲ್ಲಿ ನಿಮ್ಮ ಫೋನ್ ನ್ನು ಅನ್ ಪ್ಲಗ್ ಮಾಡುವುದರಿಂದಾಗಿ ಈ ರೀತಿ ಸ್ಟೋರ್ ಆಗಿರುವ ಡಾಟಾಗಳು ಡಿಲೀಟ್ ಆಗುವುದಿಲ್ಲ ಬದಲಾಗಿ ನೀವು ಮ್ಯಾನುವಲ್ ಆಗಿ ಡಾಟಾ ಡಿಲೀಟ್ ಮಾಡಬೇಕಾಗುತ್ತದೆ.

ನೀವು ಕಾರ್ ನ್ನು ಮರಳಿ ನೀಡುವಾಗ ನಿಮ್ಮ ಡಿವೈಸ್ ಅನ್ ಪೇರ್ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಸಿಸ್ಟಮ್ ಸೆಟ್ಟಿಂಗ್ಸ್ ನ್ನು ಅಥವಾ ಬ್ಲೂಟೂತ್ ಸೆಟ್ ಅಪ್ ಮೆನುವನ್ನು ಹುಡುಕಾಡಿ ಮತ್ತು ನಿಮ್ಮ ಡಿವೈಸ್ ನ್ನು ಅಲ್ಲಿಂದ ಡಿಲೀಟ್ ಮಾಡಿ. ನಂತರ ಫ್ಯಾಕ್ಟರಿ ರಿಸೆಟ್ ಆಯ್ಕೆಯನ್ನು ಹುಡುಕಿ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಫ್ಯಾಕ್ಟರಿ ರಿಸೆಟ್ ಮಾಡುವುದನ್ನು ಮರೆಯಬೇಡಿ.

Best Mobiles in India

Read more about:
English summary
Reasons Not To Use A Public Charging Station

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X