ರೆಡ್ ಐಫೋನ್ 7 ಹಾಗೂ 7 ಪ್ಲಸ್ ಮಾರಾಟ ಸ್ಥಗಿತಗೊಳಿಸಿದ ಆಪಲ್!!

By Prathap T
|

ಕ್ಯಾಲಿಫೋರ್ನಿಯಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಆಪಲ್ ಐಫೋನ್ ಎಕ್ಸ್ ಜೊತೆಗೆ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಬಿಡುಗಡೆಗೊಳಿಸಿದ ಮರುದಿನವೇ ರೆಡ್ ಐಫೋನ್ 7 ಮತ್ತು 7 ಪ್ಲಸ್ ಮಾರಾಟ ಸ್ಥಗಿತಗೊಳಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ರೆಡ್ ಐಫೋನ್ 7 ಹಾಗೂ 7 ಪ್ಲಸ್ ಮಾರಾಟ ಸ್ಥಗಿತಗೊಳಿಸಿದ ಆಪಲ್!!

ಕಳೆದ ಮಾರ್ಚ್ ತಿಂಗಳಲ್ಲಿ ಆಪಲ್ ಐಫೋನ್ 7 ಮತ್ತು 7 ಪ್ಲಸ್ ಕೆಂಪು ಬಣ್ಣದ ರೂಪಾಂತರವನ್ನು ಬಿಡುಗಡೆ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಫೋನ್ ಗಳನ್ನು ಬಿಡುಗಡೆಗೊಳಿಸಿದ ನಂತರದ ಆರು ತಿಂಗಳುಗಳ ಬಳಿಕ ಕೆಂಪು ಬಣ್ಣದ ರೂಪಾಂತರವನ್ನು ಪ್ರಾರಂಭಿಸಿತ್ತು.

ಆಪಲ್ ಹಾಗೂ ಆರ್ಇಡಿ ನಡುವಿನ 10 ವರ್ಷದ ಪಾಲುದಾರಿಕೆಯ ಸ್ಮರಣಾರ್ಥ ಆಫ್ರಿಕಾದ ಖಂಡದಲ್ಲಿ ಎಚ್ಐವಿ ಏಡ್ಸ್ ಹರಡುವಿಕೆ ತಡೆಯಲು ಗ್ಲೋಬಲ್ ಫಂಡ್ಗೆ ಧನ ಸಹಾಯ ಮಾಡಲು ನಿಟ್ಟಿನಲ್ಲಿ ಕೆಂಪು ಬಣ್ಣದ ಐಫೋನ್ 7 ಹಾಗೂ 7 ಪ್ಲಸ್ ಮಾರಾಟದ ಆದಾಯವನ್ನು ಕೊಡುಗೆಯಾಗಿ ನೀಡುತ್ತಾ ಬಂದಿತ್ತು.

ಈಗ ರೆಡ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಸ್ಥಗಿತಗೊಳಿಸುತ್ತಿರುವುದಾಗಿ ಆಪಲ್ ದೃಢಪಡಿಸಿದೆ. ಕೆಂಪು ಆವೃತ್ತಿಯನ್ನು ಇನ್ನು ಮುಂದೆ ಮಾರಾಟದ ಪಟ್ಟಿ ಸೇರಿಸುವುದಿಲ್ಲ. ಉಳಿದಿರುವ ಕೆಂಪು ಬಣ್ಣದ ಐಫೋನ್ 7 ಮತ್ತು 7 ಪ್ಲಸ್ ಅಮೆಜಾನ್ ಮತ್ತು ಬೆಸ್ಟ್ ಬೈ ಆನ್ಲೈನ್ ಮಾರಾಟದಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ ಅವರು ಕಂಪೆನಿಯಿಂದ ಹೊಸ ಸ್ಟಾಕ್ ಖರೀದಿಸುವುದಿಲ್ಲ ಎಂದು ತಿಳಿಸಿದೆ. ಹಾಗಾಗಿ ಐಫೋನ್ 7 ರ ಕೆಂಪು ರೂಪಾಂತರವನ್ನು ಖರೀದಿಸಲು ಬಯಸುವವರು ಆನ್ಲೈನ್ ಮುಗಿಬೀಳಿಬೇಕಿದೆ.

ನವರಾತ್ರಿಗೆ ಸ್ಯಾಮ್‌ಸಂಗ್ ಉಡುಗೊರೆ!..ಗ್ಯಾಲಾಕ್ಸಿ ಎಸ್8, ಎಸ್8 ಪ್ಲಸ್ ಬೆಲೆ ಭಾರಿ ಇಳಿಕೆ!!ನವರಾತ್ರಿಗೆ ಸ್ಯಾಮ್‌ಸಂಗ್ ಉಡುಗೊರೆ!..ಗ್ಯಾಲಾಕ್ಸಿ ಎಸ್8, ಎಸ್8 ಪ್ಲಸ್ ಬೆಲೆ ಭಾರಿ ಇಳಿಕೆ!!

ಪ್ರಮುಖವಾಗಿ ಆಪಲ್ ಐಫೋನ್ ಹಿಂದಿನ ಮಾದರಿಗಳನ್ನು ಗೋಲ್ಡ್, ಸಿಲ್ವರ್, ಜೆಟ್ ಬ್ಲಾಕ್, ರೋಸ್ ಗೋಲ್ಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ರೂಪಾಂತರಗಳಲ್ಲಿ ಮಾರಾಟ ಮಾಡುವುದನ್ನು ಮುಂದುವರೆಸಲಿದೆ.

ಐಫೋನ್ 7 ಸ್ಮಾರ್ಟ್ಫೋನ್ ಕೆಂಪು ರೂಪಾಂತರದ ಜೊತೆಗೆ, 256ಜಿಬಿ ರೂಪಾಂತರವನ್ನು ಸಹ ಸ್ಥಗಿತಗೊಳಿಸಿದೆ. ಹೀಗಾಗಿ ಐಫೋನ್ 7 ಮತ್ತು 7 ಪ್ಲಸ್ 32ಜಿಬಿ ಮತ್ತು 128ಜಿಬಿ ರೂಪಾಂತರಗಳು ಮಾತ್ರ ಖರೀದಿಸಲು ಲಭ್ಯವಿರುತ್ತವೆ ಎಂದು ಘೋಷಿಸಿದೆ.

Best Mobiles in India

English summary
Apple has discontinued the Red color variant of the iPhone 7 and 7 Plus and the same will no more be listed for sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X