ನುಬಿಯಾ ಕಂಪೆನಿಯಿಂದ ಎರಡು ಹೊಸ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಅನಾವರಣ!

|

ಟೆಕ್‌ ವಲಯದಲ್ಲಿ ನುಬಿಯಾ ಕಂಪೆನಿ ಜನಪ್ರಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ ತಯಾರಕ ಎನಿಸಿಕೊಂಡಿದೆ. ಜಾಗತಿಕ ಮೊಬೈಲ್‌ ಮಾರುಕಟ್ಟೆಯಲ್ಲಿ ಈಗಾಗಲೇ ಅನೇಕ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ತನ್ನ ಆಕರ್ಷಕ ಡಿಸ್‌ಪ್ಲೇ ವಿನ್ಯಾಸ ಹಾಗೂ ಗೇಮರ್‌ಗಳಿಗೆ ಪೂರಕವಾದ ಪ್ರೊಸೆಸರ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಇದೀಗ ತನ್ನ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಹೊಸದಾಗಿ ರೆಡ್‌ ಮ್ಯಾಜಿಕ್‌ 7S ಮತ್ತು ರೆಡ್‌ ಮ್ಯಾಜಿಕ್‌ 7S ಪ್ರೊ ಫೋನ್‌ಗಳನ್ನು ಸೇರ್ಪಡೆ ಮಾಡಿದೆ.

ನುಬಿಯಾ

ಹೌದು, ನುಬಿಯಾ ಕಂಪೆನಿ ಹೊಸದಾಗಿ ರೆಡ್‌ ಮ್ಯಾಜಿಕ್‌ 7S ಮತ್ತು ರೆಡ್‌ ಮ್ಯಾಜಿಕ್‌ 7S ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಅಲ್ಲದೆ ಈ ಫೋನ್‌ಗಳು 6.8-ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಮತ್ತು ಅಂಡರ್‌ ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರಲ್ಲಿ ರೆಡ್‌ ಮ್ಯಾಜಿಕ್‌ 7S ಸ್ಮಾರ್ಟ್‌ಫೋನ್‌ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಆದರೆ ರೆಡ್‌ ಮ್ಯಾಜಿಕ್‌ 7S ಪ್ರೊ 5,000mAh ಬ್ಯಾಟರಿಯನ್ನು ಹೊಂದಿದೆ.

ನುಬಿಯಾ

ಇನ್ನು ನುಬಿಯಾ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ಗಳು ಗೇಮರ್‌ಗಳಿಗೆ ಪೂರಕವಾದ ಫೀಚರ್ಸ್‌ಗಳನ್ನು ಹೊಂದಿವೆ. ಅದರಂತೆ ಡಿಸ್‌ಪ್ಲೇಯಲ್ಲಿ DC ಡಿಮ್ಮಿಂಗ್ ಮತ್ತು SGS ಐ ಪ್ರೊಟೆಕ್ಷನ್ ಅನ್ನು ಒಳಗೊಂಡಿವೆ. ಗೇಮಿಂಗ್‌ ಸಮಯದಲ್ಲಿ ಫೋನ್‌ನ ಟೆಂಪ್‌ರೇಚರ್‌ ಅನ್ನು ಕಂಟ್ರೋಲ್‌ ಮಾಡಲು ಕೂಲಿಂಗ್‌ ಸಿಸ್ಟಂ ಹೊಂದಿವೆ. ಇದರಲ್ಲಿ ರೆಡ್‌ ಮ್ಯಾಜಿಕ್‌ 7S ಸ್ಮಾರ್ಟ್‌ಫೋನ್‌ ICE ಮ್ಯಾಜಿಕ್ ಕೂಲಿಂಗ್ ಸಿಸ್ಟಮ್ 9.0 ಹೊಂದಿದ್ದರೆ, ರೆಡ್‌ ಮ್ಯಾಜಿಕ್‌ 7S ಪ್ರೊ ಮಾದರಿ ICE 10.0 ಮ್ಯಾಜಿಕ್ ಕೂಲಿಂಗ್ ಟೆಕ್ನಾಲಜಿ ಹೊಂದಿದೆ. ಹಾಗಾದರೆ ಈ ಎರಡು ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿ ಹೇಗಿದೆ? ಇವುಗಳ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ನುಬಿಯಾ ರೆಡ್ ಮ್ಯಾಜಿಕ್ 7S ಸ್ಮಾರ್ಟ್‌ಫೋನ್‌

ನುಬಿಯಾ ರೆಡ್ ಮ್ಯಾಜಿಕ್ 7S ಸ್ಮಾರ್ಟ್‌ಫೋನ್‌

ನುಬಿಯಾ ರೆಡ್ ಮ್ಯಾಜಿಕ್ 7S ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದು 165Hz ರಿಫ್ರೆಶ್ ರೇಟ್, DC ಡಿಮ್ಮಿಂಗ್ ಮತ್ತು SGS ಐ ಪ್ರೊಟೆಕ್ಷನ್ ಪ್ರಮಾಣೀಕರಣವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಆಧಾರಿತ ರೆಡ್ ಮ್ಯಾಜಿಕ್ OS 5.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಫೋನ್‌

ಹಾಗೆಯೇ ಈ ಸ್ಮಾರ್ಟ್‌ಫೋನ್‌ 16GB RAM ಮತ್ತು 512GB ಸ್ಟೋರೇಜ್‌ ಹೊಂದಿದೆ. ಲಾಂಗ್‌ ಗೇಮ್‌ ಗೇಮಿಂಗ್ ಸೆಷನ್‌ಗಳಲ್ಲಿ ಫೋನ್‌ನ ಟೆಂಪ್‌ರೇಚರ್‌ ಕಂಟ್ರೋಲ್‌ ಮಾಡುವುದಕ್ಕಾಗಿ ಇದರಲ್ಲಿ ICE ಮ್ಯಾಜಿಕ್ ಕೂಲಿಂಗ್ ಸಿಸ್ಟಮ್ 9.0 ಅನ್ನು ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ವೈಡ್‌ ಆಂಗಲ್‌ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಅಂಡರ್-ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ರೆಡ್‌ ಮ್ಯಾಜಿಕ್‌ 7S ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, USB ಟೈಪ್-C ಪೋರ್ಟ್ ಮತ್ತು 3.5mm ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ GPS, ಗ್ಲೋನಾಸ್, ಗೆಲಿಲಿಯೋ, ಬೀಡೌ, ಅಕ್ಸಿಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಮತ್ತು ಗೈರೊಸ್ಕೋಪ್ ಬೆಂಬಲಿಸಲಿದೆ. ಜೊತೆಗೆ DTS ಸೌಂಡ್‌ ಹೊಂದಿರುವ ಡ್ಯುಯಲ್ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.

ನುಬಿಯಾ ರೆಡ್ ಮ್ಯಾಜಿಕ್ 7S ಪ್ರೊ ಸ್ಮಾರ್ಟ್‌ಫೋನ್‌

ನುಬಿಯಾ ರೆಡ್ ಮ್ಯಾಜಿಕ್ 7S ಪ್ರೊ ಸ್ಮಾರ್ಟ್‌ಫೋನ್‌

ರೆಡ್ ಮ್ಯಾಜಿಕ್ 7S ಪ್ರೊ ಸ್ಮಾರ್ಟ್‌ಫೋನ್‌ ಕೂಡ 6.8 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇದು ಅಮೋಲೆಟ್‌ ಡಿಸ್‌ಪ್ಲೇ ಆಗಿದ್ದು, 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲಿಸಲಿದೆ. ಈ ಡಿಸ್‌ಪ್ಲೇ DC ಡಿಮ್ಮಿಂಗ್ ಮತ್ತು SGS ಐ ಪ್ರೊಟೆಕ್ಷನ್ ಪ್ರಮಾಣೀಕರಣವನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರೆಡ್‌ ಮ್ಯಾಜಿಕ್‌ OS 5.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟೆಂಪ್‌ರೇಂಚರ್‌ ಕಂಟ್ರೋಲ್‌ಗಾಗಿ ICE 10.0 ಮ್ಯಾಜಿಕ್ ಕೂಲಿಂಗ್ ಟೆಕ್ನಾಲಜಿ ಒಳಗೊಂಡಿದೆ.

ನುಬಿಯಾ

ಇದಲ್ಲದೆ ನುಬಿಯಾ ರೆಡ್ ಮ್ಯಾಜಿಕ್ 7S ಪ್ರೊ ಸ್ಮಾರ್ಟ್‌ಫೋನ್‌ ಮ್ಯಾಜಿಕ್ ಜಿಪಿಯು ಫ್ರೇಮ್ ಸ್ಟೆಬಿಲೈಸೇಶನ್ ಎಂಜಿನ್ ಮತ್ತು ರೆಡ್ ಕೋರ್ 1 ಮೀಸಲಾದ ಗೇಮಿಂಗ್ ಚಿಪ್‌ಸೆಟ್ ಅನ್ನು ಸಹ ಪಡೆಯುತ್ತದೆ. ಈ ಸ್ಮಾರ್ಟ್‌ಫೋನ್‌ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಅಂಡರ್-ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,500mAh ಸಾಮರ್ಥ್ಉದ ಬ್ಯಾಟರಿ ಹೊಂದಿದ್ದು, 135W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಅಲ್ಲದೆ ಡ್ಯುಯಲ್ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್, ಗೇಮ್ ಶೋಲ್ಡರ್ ಬಟನ್ ಮತ್ತು ಡಿಟಿಎಸ್ ಸೌಂಡ್‌ ಡ್ಯುಯಲ್ ಸ್ಪೀಕರ್‌ ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನುಬಿಯಾ ರೆಡ್‌ ಮ್ಯಾಜಿಕ್‌ ಪ್ರಸ್ತುತ ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಲಾಂಚ್‌ ಮಾಡಿದೆ. ಇದರಲ್ಲಿ ನುಬಿಯಾ ರೆಡ್‌ ಮ್ಯಾಜಿಕ್‌ 7S ಸ್ಮಾರ್ಟ್‌ಫೋನ್‌ ಬೆಲೆ 8GB RAM + 128GB ಸ್ಟೋರೇಜ್ ಮಾದರಿಗೆ CNY 3,999 (ಅಂದಾಜು 47,400ರೂ) ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯ ಬೆಲೆ CNY 4,799 (ಅಂದಾಜು 56,900ರೂ) ಮತ್ತು ಟಾಪ್-ಆಫ್-ಲೈನ್ 16GB RAM + 512GB ಸ್ಟೋರೇಜ್ ರೂಪಾಂತರದ ಆಯ್ಕೆಯು CNY 5,499 (ಅಂದಾಜು 65,200ರೂ.)ಗೆ ನಿಗದಿಪಡಿಸಲಾಗಿದೆ.

ಮ್ಯಾಜಿಕ್‌

ಇನ್ನು ರೆಡ್‌ ಮ್ಯಾಜಿಕ್‌ 7S ಪ್ರೊ ಸ್ಮಾರ್ಟ್‌ಫೋನ್‌ ಬೆಲೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ CNY 5,199 (ಅಂದಾಜು 61,650ರೂ)ಆಗಿದೆ. ಹಾಗೆಯೇ 16GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ CNY 5,999 (ಅಂದಾಜು 71,100ರೂ)ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಇದೇ ಜುಲೈ 15 ರಿಂದ ಮಾರಾಟವಾಗಲಿದೆ. ಭಾರತದಲ್ಲಿ ಈ ಫೋನ್‌ಗಳ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Red Magic 7S, Red Magic 7S Pro With Under-Display Camera Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X