ಚೀನಾದಲ್ಲಿ ಸೌಂಡ್‌ ಮಾಡಿದ್ದ ಈ ಡಿವೈಸ್‌ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!

|

ಸ್ಮಾರ್ಟ್‌ಬ್ಯಾಂಡ್‌ಗಳು ತಮ್ಮ ಫಿಟ್ನೆಸ್‌ ಆಧಾರಿತ ಫೀಚರ್ಸ್‌ಗಳಿಂದ ಗಮನಸೆಳೆದಿವೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಬೇಡಿಕೆಯನ್ನು ಪಡೆದುಕೊಂಡಿವೆ. ಇದಕ್ಕೆ ಅನುಗುಣವಾಗಿ ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ಸ್ಮಾರ್ಟ್‌ಬ್ಯಾಂಡ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಶಿಯೋಮಿ ಕಂಪೆನಿ ಕೂಡ ಸೇರಿದೆ. ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್‌ ಅಡಿಯಲ್ಲಿ ಅನೇಕ ಸ್ಮಾರ್ಟ್‌ಬ್ಯಾಂಡ್‌ಗಳನ್ನು ಪರಿಚಯಿಸಿದೆ. ಇದೀಗ ಗ್ಲೋಬಲ್‌ ಮಾರುಕಟ್ಟೆಯಲ್ಲಿ ಹೊಸ ರೆಡ್ಮಿ ಬ್ಯಾಂಡ್‌ 2 ಬಿಡುಗಡೆ ಮಾಡಿದೆ.

ಚೀನಾದಲ್ಲಿ ಸೌಂಡ್‌ ಮಾಡಿದ್ದ ಈ ಡಿವೈಸ್‌ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!

ಹೌದು, ಶಿಯೋಮಿ ಕಂಪೆನಿ ಹೊಸದಾಗಿ ರೆಡ್ಮಿ ಬ್ಯಾಂಡ್‌ 2 ಅನ್ನು ಅನಾವರಣಗೊಳಿಸಿದೆ. ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಬ್ಯಾಂಡ್‌ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು 30+ ಸ್ಪೋರ್ಟ್ಸ್‌ ಮೋಡ್‌ಗಳನ್ನು ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಪಡೆದಿದ್ದು, 5ATM ರೇಟಿಂಗ್‌ನಲ್ಲಿ ನೀರು ಮತ್ತು ದೂಳಿನಿಂದ ರಕ್ಷಣೆಯನ್ನು ನೀಡಲಿದೆ. ಹಾಗಾದ್ರೆ ಶಿಯೋಮಿ ರೆಡ್ಮಿ ಬ್ಯಾಂಡ್‌ 2 ಫೀಚರ್ಸ್‌ ಹೇಗಿದೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್ಮಿ ಬ್ಯಾಂಡ್‌ 2 ಡಿಸೈನ್‌ ಹೇಗಿದೆ?
ಶಿಯೋಮಿ ಕಂಪೆನಿ ಪರಿಚಯಿಸಿರುವ ಹೊಸ ರೆಡ್ಮಿ ಬ್ಯಾಂಡ್‌ 2 ಸ್ಟೈಲಿಶ್‌ ಬಾಡಿ ಡಿಸೈನ್‌ ಹೊಂದಿದೆ. ಇದರಿಂದ ಯುವಜನತೆಗೆ ಇದು ಸೂಕ್ತವಾಗಿದೆ ಎಂದು ಹೇಳಲಾಗಿದೆ. ಯುವಜನರ ಆಶಯಕ್ಕೆ ತಕ್ಕಂತ ವಿನ್ಯಾಸ ಪಡೆದಿರುವ ಈ ಬ್ಯಾಂಡ್‌ 1.47 ಇಂಚಿನ TFT LCD ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 172 × 320 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಡಿಸ್‌ಪ್ಲೇ 450 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದ್ದು, 100ಕ್ಕೂ ಹೆಚ್ಚು ಫ್ರೀ ಲೋಡ್‌ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ಬ್ಯಾಂಡ್‌ನಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ವಾಚ್‌ಫೇಸ್‌ಗಳನ್ನು ಕಸ್ಟಮೈಸ್‌ಗೊಳಿಸುವ ಅವಕಾಶವನ್ನು ನೀಡಲಾಗಿದೆ.

ಚೀನಾದಲ್ಲಿ ಸೌಂಡ್‌ ಮಾಡಿದ್ದ ಈ ಡಿವೈಸ್‌ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!

ರೆಡ್ಮಿ ಬ್ಯಾಂಡ್ 2 ಫೀಚರ್ಸ್‌ ಹೇಗಿದೆ?
ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ಆಪ್ಟಿಕಲ್ ಹಾರ್ಟ್‌ ಬೀಟ್‌ ಮಾನಿಟರಿಂಗ್ ಸೆನ್ಸಾರ್ ಒಳಗೊಂಡಿದೆ. ಜೊತೆಗೆ ರಕ್ತದ ಆಮ್ಲಜನಕದ ಮಾನಿಟರಿಂಗ್ ಸೆನ್ಸಾರ್ ಅನ್ನು ಕೂಡ ನೀಡಲಾಗಿದೆ. ಇದರಿಂದ ಬಳಕೆದಾರರ ಆರೋಗ್ಯವನ್ನು ಮಾನಿಟರಿಂಗ್‌ ಮಾಡಲಿದೆ. ಇದಲ್ಲದೆ ಸ್ಟೆಪ್ಸ್‌, ಸ್ಲಿಪಿಂಗ್‌ ಜೊತೆಗೆ ನಿರಂತರ ಹೃದಯ ಬಡಿತದ ಮೇಲ್ವಿಚಾರಣೆಯನ್ನು ಸಹ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಫಿಟ್‌ನೆಸ್ ಟ್ರ್ಯಾಕರ್ ಅಕ್ಸೆಲೆರೊಮೀಟರ್ ಅನ್ನು ಸಹ ಹೊಂದಿದ್ದು 30 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಪಡೆದಿದೆ.

ರೆಡ್ಮಿ ಬ್ಯಾಂಡ್‌ 2 ಸ್ಮಾರ್ಟ್‌ವಾಚ್‌ 210mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಆದರೆ ಹೆಚ್ಚುವರಿ ಬಳಕೆಯೊಂದಿಗೆ 6 ದಿನಗಳ ಬ್ಯಾಟರಿ ಅವಧಿಯನ್ನು ಪಡೆದುಕೊಳ್ಳವ ಅವಕಾಶ ದೊರೆಯಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಈ ಬ್ಯಾಂಡ್‌ ಬ್ಲೂಟೂತ್ 5.1 ಕನೆಕ್ಟಿವಿಟಿ ಆಯ್ಕೆಯನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳನ್ನು ಬೆಂಬಲಿಸಲಿದೆ.

ಚೀನಾದಲ್ಲಿ ಸೌಂಡ್‌ ಮಾಡಿದ್ದ ಈ ಡಿವೈಸ್‌ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!

ಬೆಲೆ ಮತ್ತು ಲಭ್ಯತೆ
ಪ್ರಸ್ತುತ ಗ್ಲೋಬಲ್‌ ಮಾರುಕಟ್ಟೆಯಲ್ಲಿ ಮಾತ್ರವೇ ರೆಡ್ಮಿ ಬ್ಯಾಂಡ್‌ 2 ಬಿಡುಗಡೆಯಾಗಿದೆ. ಆದರಿಂದ ಜಪಾನ್‌ನಲ್ಲಿ ಇದರ ಬೆಲೆ ¥4,990 (ಅಂದಾಜು 3,200ರೂ) ಆಗಿದೆ. ಇದು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನ ಕೂಡ ಬಹಿರಂಗವಾಗಿಲ್ಲ.

ಇದಲ್ಲದೆ ಈ ವರ್ಷ ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಭಾರಿ ಸಂಚಲನ ಸೃಷ್ಟಿಸುವ ನಿರೀಕ್ಷೆ ಹುಟ್ಟುಹಾಕಿದೆ. ಅದಕ್ಕೆ ತಕ್ಕಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಬಗ್ಗೆ ಎಲ್ಲೆಡೆ ಸಹಜ ಕುತೂಹಲ ಗರಿಗೆದರಿದೆ. ಇದರ ಪ್ರೊಸೆಸರ್‌ ವಿಚಾರ ಇದೀಗ ಎಲ್ಲೆಡೆ ಸಂಚಲನ ಸೃಷ್ಟಿಸುವ ಮೂಲಕ ಈ ಫೋನ್‌ ಮಾರುಕಟ್ಟೆಯಲ್ಲಿ ದೂಳೆಬ್ಬಿಸುವ ಸೂಚನೆ ನೀಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 2023 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಸಾದ್ಯತೆಯಿದೆ. ಶಿಯೋಮಿ Civi 3 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಬಹುದು. ಇದು ಡೈಮೆನ್ಸಿಟಿ 8200 ಚಿಪ್‌ಸೆಟ್‌ ಮೂಲಕ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

Best Mobiles in India

English summary
Redmi Band 2 with 14 Days Battery Life Launched: price, Specifications details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X