ರೆಡ್ಮಿ ಗೇಮಿಂಗ್‌ ಟಿವಿ X ಪ್ರೊ ಲಾಂಚ್; 120Hz ರಿಫ್ರೆಶ್ ರೇಟ್!

|

ಗ್ಯಾಜೆಟ್‌ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ಮಿ ಕಂಪೆನಿ ಆಗಾಗ್ಗೆ ಮಾರುಕಟ್ಟೆಯಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿರುತ್ತದೆ. ಈಗಾಗಲೇ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಹಾಗೂ ಇನ್ನಿತರೆ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಅನಾವರಣ ಮಾಡಿದ್ದು, ಈಗ ತನ್ನದೇ ಉಪ ಬ್ರಾಂಡ್‌ ಆದ ರೆಡ್ಮಿ ಕಂಪೆನಿ ಮೂಲಕ ಹಲವು ಫೀಚರ್ಸ್‌ ಇರುವ ಗೇಮಿಂಗ್‌ ಟಿವಿಯನ್ನು ಅನಾವರಣ ಮಾಡಿದೆ. ಈ ಟಿವಿ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ಗೇಮಿಂಗ್‌

ಹೌದು, ಗೇಮಿಂಗ್‌ ವಲಯವನ್ನು ಗುರಿಯಾಗಿಸಿಕೊಂಡು ರೆಡ್ಮಿ ಗೇಮಿಂಗ್‌ ಟಿವಿ X ಪ್ರೊ ಟಿವಿಯನ್ನು (Redmi Gaming TV X Pro) ಬಿಡುಗಡೆ ಮಾಡಲಾಗಿದೆ. ಇದು 120Hz ರಿಫ್ರೆಶ್ ರೇಟ್‌ ಹಾಗೂ 94% DCI-P3 ವೈಡ್ ಕಲರ್ ಗ್ಯಾಮಟ್, ಕ್ವಾಡ್-ಕೋರ್ A73 ಚಿಪ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ 65 ಇಂಚಿನ ಹಾಗೂ 75 ಇಂಚಿನ ಎರಡು ಸೈಜ್‌ನಲ್ಲಿ ಲಭ್ಯವಿರಲಿದೆ. ಇನ್ನುಳಿದಂತೆ ಇದರ ಮತ್ತಷ್ಟು ಫೀಚರ್ಸ್‌, ಬೆಲೆ ಹಾಗೂ ಲಭ್ಯತೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ರೆಡ್ಮಿ ಗೇಮಿಂಗ್‌ ಟಿವಿ X ಪ್ರೊ ಟಿವಿ 65 ಹಾಗೂ 75 ಇಂಚಿನ ಅಲ್ಟ್ರಾ ಹೆಚ್‌ಡಿ 4k ಡಿಸ್‌ಪ್ಲೇ ಹೊಂದಿದ್ದು, ಇದು 3840 x 2160 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 94% DCI-P3 ವೈಡ್ ಕಲರ್ ಗ್ಯಾಮಟ್ ಜೊತೆಗೆ 120Hz ರಿಫ್ರೆಶ್ ರೇಟ್ ನೀಡಲಿದೆ. ಇದರ ಜೊತೆಗೆ ಇದು 4096 ಮಟ್ಟದ ಬ್ರೈಟ್‌ನೆಸ್ ಹೊಂದಾಣಿಕೆಯನ್ನು ಇದರಲ್ಲಿ ಕಾಣಬಹುದು. ವೇರಿಯಬಲ್ ರಿಫ್ರೆಶ್ ರೇಟ್‌ ಆಯ್ಕೆಯು ಗೇಮ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಬದಲಾಗಲಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ರೆಡ್ಮಿ ಗೇಮಿಂಗ್‌ ಟಿವಿ X ಪ್ರೊ ಟಿವಿ ಕ್ವಾಡ್-ಕೋರ್ A73 ಚಿಪ್ ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM ಹಾಗೂ 32GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದ್ದು, ಎಎಮ್‌ಡಿ ಫ್ರೀಸಿಂಕ್ ಪ್ರೀಮಿಯಂ ವೃತ್ತಿಪರ ಗೇಮ್‌ನ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಹಾಗೆಯೇ ಈ ಟಿವಿ ಕನ್ಸೋಲ್‌ಗಳು, ಹ್ಯಾಂಡ್‌ಹೆಲ್ಡ್‌ಗಳು ಮತ್ತು ಪಿಸಿಗಳ ರೀತಿಯಲ್ಲೂ ಬಳಕೆ ಮಾಡಿಕೊಳ್ಳಬಹುದು.

 ಶತಕೋಟಿ ಬಣ್ಣ

1.07 ಶತಕೋಟಿ ಬಣ್ಣದ ಪ್ರದರ್ಶನದ ಫಿಚರ್ಸ್‌ ಹೊಂದಿರುವ ಇದು, ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸುತ್ತದೆ ಜೊತೆಗೆ ಗೇಮ್‌ ಆರಂಭಿಸಿದಾಗ ಸ್ವಯಂಚಾಲಿತವಾಗಿ ಕಡಿಮೆ ಲೇಟೆನ್ಸಿ ಮೋಡ್ ತಂತಾನೆ ಆನ್‌ ಆಗುತ್ತದೆ (ALLM). ಇದರಿಂದ ಡಿಸ್‌ಪ್ಲೇನಲ್ಲಿ ಇರುವ ಅನಗತ್ಯ ಟಾಸ್ಕ್‌ಗಳನ್ನು ತೆಗೆದುಹಾಕಿ ಬಳಕೆದಾರರು ಗೇಮ್‌ನಲ್ಲಿ ತಲ್ಲೀನವಾಗುವಂತೆ ಅನುವು ಮಾಡಿಕೊಡುತ್ತದೆ.

ಕ್ಲೌಡ್ ಗೇಮಿಂಗ್‌ಗೆ ಬೆಂಬಲ

ಕ್ಲೌಡ್ ಗೇಮಿಂಗ್‌ಗೆ ಬೆಂಬಲ

ರೆಡ್ಮಿ ಗೇಮಿಂಗ್‌ ಟಿವಿ X ಪ್ರೊ ಟಿವಿ ಕ್ಲೌಡ್ ಗೇಮಿಂಗ್ ಅನ್ನು ಸಹ ಬೆಂಬಲಿಸಲಿದೆ. ಬಳಕೆದಾರರು ಡೌನ್‌ಲೋಡ್ ಮಾಡದೆಯೇ 40 ಕ್ಕೂ ಹೆಚ್ಚು ಗೇಮ್‌ಗಳನ್ನು ಆಡಬಹುದಾಗಿದೆ. ಇನ್ನುಳಿದಂತೆ ಕನೆಕ್ಟಿವಿಟಿ ವಿಷಯದಲ್ಲಿ ಹೆಚ್‌ಡಿಎಮ್ಐ 2.1, ಹೆಚ್‌ಡಿಎಮ್ಐ 2.02, ಯುಎಸ್‌ಬಿ 2.02, ನೆಟ್‌ವರ್ಕ್ ಕೇಬಲ್ ಪೋರ್ಟ್, AV ಇನ್‌ಪುಟ್ ಪೋರ್ಟ್, S/PDIF ಇಂಟರ್ಫೇಸ್ ಮತ್ತು ಆಂಟೆನಾ ಇಂಟರ್ಫೇಸ್‌ ಪೋರ್ಟ್‌ಗಳನ್ನು ಹೊಂದಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ರೆಡ್ಮಿ ಗೇಮಿಂಗ್‌ ಟಿವಿ X ಪ್ರೊ ಟಿವಿಯನ್ನು ಮಿ ಚೀನಾದಲ್ಲಿ ಈಗಾಗಲೇ ಮಾರಾಟಕ್ಕೆ ಮುಕ್ತವಾಗಿರಿಸಿದೆ. ಇದರಲ್ಲಿ 65 ಇಂಚಿನ ವೆರಿಯಂಟ್‌ಗೆ $415 ನಿಗದಿ ಮಾಡಲಾಗಿದೆ. ಅದಂತೆ ಭಾರತದಲ್ಲಿ ಅಂದಾಜು 34,298ರೂ. ಗಳಿಗೆ ಲಭ್ಯವಾಗಲಿದೆ. ಹಾಗೆಯೇ 75 ಇಂಚಿನ ವೇರಿಯಂಟ್‌ಗೆ $595 ನಿಗದಿ ಮಾಡಿದೆ. ಹಾಗೆಯೇ ಇದು ಭಾರತದಲ್ಲಿ 49,174ರೂ. ಗಳಿಗೆ ಮಾರಾಟವಾಗಬಹುದು. ಆದರೆ, ಈ ಟಿವಿಯನ್ನು ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಯಾವಾಗ ಅನಾವರಣ ಮಾಡಲಾಗುತ್ತದೆ ಎಂಬುದನ್ನು ಕಂಪೆನಿ ಬಹಿರಂಗಪಡಿಸಿಲ್ಲ.

Best Mobiles in India

English summary
Tech giant Xiaomi has launched gadgets in the market with various features. In addition to this, Redmi Gaming Tv X Pro Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X