ಭರ್ಜರಿ ಡಿಸ್ಕೌಂಟ್‌ನಲ್ಲಿ ರೆಡ್ಮಿ 5G ಸ್ಮಾರ್ಟ್‌ಫೋನ್‌ ಖರೀದಿಗೆ, ಇದೇ ಸರಿಯಾದ ಸಮಯ!

|

ಶಿಯೋಮಿ ಸಂಸ್ಥೆಯು ತನ್ನ ಜನಪ್ರಿಯ ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್ 5G ಆಯ್ಕೆ ಜೊತೆಗೆ ಕೆಲ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಆದರೆ ಇದೀಗ ಕಂಪನಿಯು ಗ್ರಾಹಕರಿಗೆ ಭಾರೀ ಖುಷಿ ನೀಡಿದ್ದು, ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G ಫೋನ್‌ ಅನ್ನು ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಭರ್ಜರಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಬಿಡುಗಡೆ

ಹೌದು, ಜನಪ್ರಿಯ ಅಮೆಜಾನ್‌ ಪ್ಲಾಟ್‌ಫಾರ್ಮ್‌ ತಾಣದಲ್ಲಿ ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G (6GB RAM, 128GB) ವೇರಿಯಂಟ್‌ ಸ್ಮಾರ್ಟ್‌ಫೋನ್ 19,999ರೂ. ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್‌ನಿಂದಲೂ ಕೊಡುಗೆ ಲಭ್ಯವಿದೆ. ಅಂದಹಾಗೆ ಇದೇ ಜನವರಿ 5 ರಂದು ರೆಡ್ಮಿ ನೋಟ್ 12 ಸರಣಿ ಬಿಡುಗಡೆ ಆಗಲಿದೆ. ಹಾಗಾದರೇ ರೆಡ್ಮಿ ನೋಟ್ 11 ಪ್ರೊ ಪ್ಲಸ್‌ ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G ಫೀಚರ್ಸ್‌

ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G ಫೀಚರ್ಸ್‌

ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G 6.67 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಕೂಡ 120Hz ರಿಫ್ರೆಶ್ ರೇಟ್‌ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ಬೆಂಬಲದೊಂದಿಗೆ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 ಪ್ರೊಸೆಸರ್‌ ಬಲವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಟಿರಿಯೊ

ಇದಲ್ಲದೆ 16 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 67W ವೇಗದ ಚಾರ್ಜಿಂಗ್ ಅನ್ನು ಹೊಂದಿದೆ. ಇನ್ನು ಈ ಫೋನ್ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಸ್ಟಿರಿಯೊ ಸ್ಪೀಕರ್ ಸೆಟಪ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, (ಹೈಬ್ರಿಡ್) ಮೈಕ್ರೋ-ಎಸ್‌ಡಿ ಕಾರ್ಡ್ ಸ್ಲಾಟ್, ಐಆರ್ ಬ್ಲಾಸ್ಟರ್ ಮತ್ತು 3.5 ಎಂಎಂ ಆಡಿಯೊ ಜಾಕ್ ಅನ್ನು ಹೊಂದಿದೆ. ಇದು IP53 ಸ್ಪ್ಲಾಶ್-ನಿರೋಧಕ ರೇಟಿಂಗ್ ಅನ್ನು ಸಹ ಹೊಂದಿದೆ. ಆಂಡ್ರಾಯ್ಡ್ 11 ಅನ್ನು ಆಧರಿಸಿದ MIUI 13 ಅನ್ನು ಹ್ಯಾಂಡ್‌ಸೆಟ್ ಬೂಟ್ ಮಾಡುತ್ತದೆ.

ಮೆಮೊರಿ ಹಾಗೂ ಕಲರ್‌ ಆಯ್ಕೆ

ಮೆಮೊರಿ ಹಾಗೂ ಕಲರ್‌ ಆಯ್ಕೆ

ಭಾರತದಲ್ಲಿ ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 5G ಫೋನ್ ಮೂರು ವೇರಿಯಂಟ್ ಆಯ್ಕೆ ಪಡೆದಿದೆ. 6GB RAM + 128GB ಸ್ಟೋರೇಜ್‌ ವೇರಿಯಂಟ್, 8GB + 128GB ಸ್ಟೋರೇಜ್‌ ವೇರಿಯಂಟ್ ಹಾಗೂ 8GB RAM + 256GB ಸ್ಟೋರೇಜ್‌ ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಈ ಫೋನ್ ಈ ಸ್ಮಾರ್ಟ್‌ಫೋನ್‌ ಪೋಲಾರ್ ವೈಟ್, ಗ್ರ್ಯಾಫೈಟ್ ಗ್ರೇ ಮತ್ತು ಅಟ್ಲಾಂಟಿಕ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯ.

ರೆಡ್ಮಿ ನೋಟ್ 12 ಫೋನ್ ಸರಣಿ

ರೆಡ್ಮಿ ನೋಟ್ 12 ಫೋನ್ ಸರಣಿ

ಶಿಯೋಮಿಯ ಬಹುನಿರೀಕ್ಷಿತ ರೆಡ್ಮಿ ನೋಟ್ 12 ಸರಣಿಯು ಇದೇ ಜನವರಿ 5, 2023 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಸರಣಿಯು ರೆಡ್ಮಿ ನೋಟ್ 12 5G, ರೆಡ್ಮಿ ನೋಟ್ 12 ಪ್ರೊ 5G ಮತ್ತು ರೆಡ್ಮಿ ನೋಟ್ 12 ಪ್ರೊ+ 5G ಮಾಡೆಲ್‌ಗಳನ್ನು ಒಳಗೊಂಡಿರಲಿದೆ.

Best Mobiles in India

English summary
Redmi Note 11 Pro Plus price drops on Amazon: check offer price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X