'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಹಿಸುದ್ದಿ!

|

ಮೊಬೈಲ್ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿದ್ದ ಶಿಯೋಮಿ ಕಂಪನಿಯ ರೆಡ್ಮಿ ನೋಟ್ 7 ಸರಣಿಯ ಸ್ಮಾರ್ಟ್‌ಫೋನ್‌ಗಳು ಅಗ್ಗದ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಿವೆ. ಮುಖ್ಯವಾಗಿ ಪ್ರೊಸೆಸರ್, 48ಎಂಪಿ ಕ್ಯಾಮೆರಾ ಫೀಚರ್ಸ್ ಹಾಗೂ ಬಿಗ್ ಬ್ಯಾಟರಿ ಲೈಫ್ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್‌ಗಳತ್ತ ತಿರುಗಿ ನೋಡುವಂತೆ ಮಾಡಿವೆ. ಆದರೆ ಈಗ ಸಂಸ್ಥೆಯು ರೆಡ್ಮಿ ನೋಟ್ 7 ಸರಣಿಯ ಗ್ರಾಹಕರಿಗೆ ಭಾರಿ ಖುಷಿ ಸುದ್ದಿ ನೀಡಿದೆ.

ರೆಡ್ಮಿ ನೋಟ್ 7 ಪ್ರೊ

ಹೌದು, ಶಿಯೋಮಿ ಸಂಸ್ಥೆಯ ರೆಡ್ಮಿ ನೋಟ್ 7 ಪ್ರೊ ಮತ್ತು ರೆಡ್ಮಿ ನೋಟ್ 7 ಸ್ಮಾರ್ಟ್‌ಫೋನ್‌ಗಳು ಅತೀ ಶೀಘ್ರದಲ್ಲಿಯೇ ಕಂಪನಿಯ MIUI 11 ಆಧಾರಿತ ಆಂಡ್ರಾಯ್ಡ್‌ 10 ಆಪರೇಟಿಂಗ್ ಸಿಸ್ಟಮ್‌ಗೆ ಅಪ್‌ಗ್ರೇಡ್ ಆಗಲಿವೆ. ಈಗಾಗಲೇ ಕಂಪನಿಯ MIUI 11 ಓಎಸ್‌ ಕೆಲವು ಫೋನ್‌ಗಳಲ್ಲಿ ಅಪ್‌ಗ್ರೇಡ್ ಆಗಿದ್ದು, ಆದ್ರೆ ಅವು ಆಂಡ್ರಾಯ್ಡ್‌ 9 ಪೈ ಓಎಸ್‌ ಸಪೋರ್ಟ್‌ ಪಡೆದಿವೆ. ಈಗ ಹೊಸ ಆಂಡ್ರಾಯ್ಡ್ 10 ಓಎಸ್‌ ಬೆಂಬಲಿತ ಕಂಪನಿಯ MIUI 11 ಅನ್ನು ರೆಡ್ಮಿ ನೋಟ್ 7 ಸರಣಿ ಪಡೆದುಕೊಂಡಿವೆ.

ಸ್ಮಾರ್ಟ್‌ಫೋನ್ ಆಪರೇಟಿಂಗ್‌

ಅಪ್‌ಡೇಟ್ ನಂತರ ಸ್ಮಾರ್ಟ್‌ಫೋನ್ ಆಪರೇಟಿಂಗ್‌, ಸೆಟ್ಟಿಂಗ್, ಸೇರಿದಂತೆ ಹಲವು ಹೊಸತನಗಳು ಕಾಣಿಸಿಕೊಳ್ಳಲಿವೆ. ಇನ್ನು ರೆಡ್ಮಿ ನೋಟ್ 7 ಪ್ರೊ 4GB RAM + 64GB ವೇರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯು 13,999ರೂ. ಆಗಿದೆ. ಹಾಗೂ 6GB + 128GB ವೇರಿಯಂಟ್ ಬೆಲೆಯು 16,999ರೂ.ಗಳಾಗಿದೆ. ಹಾಗೆಯೇ ರೆಡ್ಮಿ ನೋಟ್ 7 3GB RAM + 32GB ವೇರಿಯಂಟ್ ಫೋನ್ ಬೆಲೆಯು 9,999 ಆಗಿದ್ದು, 6GB RAM + 64GB ವೇರಿಯಂಟ್ ಬೆಲೆಯು 11,999ರೂ. ಆಗಿದೆ. ಹಾಗಾದರೇ ರೆಡ್ಮಿ ನೋಟ್ 7 ಪ್ರೊ ಮತ್ತು ರೆಡ್ಮಿ ನೋಟ್ 7 ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ

ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

ರೆಡ್‌ಮಿ ನೋಟ್ 7 ಪ್ರೊ'-ಪ್ರೊಸೆಸರ್

ರೆಡ್‌ಮಿ ನೋಟ್ 7 ಪ್ರೊ'-ಪ್ರೊಸೆಸರ್

ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

ರೆಡ್‌ಮಿ ನೋಟ್ 7 ಪ್ರೊ'- ಕ್ಯಾಮೆರಾ

ರೆಡ್‌ಮಿ ನೋಟ್ 7 ಪ್ರೊ'- ಕ್ಯಾಮೆರಾ

ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.ಹಾಗೂ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ.

ರೆಡ್‌ಮಿ ನೋಟ್ 7 ಪ್ರೊ-ಬ್ಯಾಟರಿ

ರೆಡ್‌ಮಿ ನೋಟ್ 7 ಪ್ರೊ-ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ

'ರೆಡ್‌ಮಿ ನೋಟ್ 7' ಫೋನ್ 19.5: 9 ಆಕಾರ ಅನುಪಾತದಲ್ಲಿ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯದ 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿರುವ ಡಿಸ್‌ಪ್ಲೇ ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಇದು ಮಲ್ಟಿಮೀಡಿಯಾ ಪ್ರಿಯರ ಮನಗೆಲ್ಲಲು ಯಶಸ್ವಿಯಾಗಿದೆ.

'ರೆಡ್‌ಮಿ ನೋಟ್ 7' -ಪ್ರೊಸೆಸರ್

'ರೆಡ್‌ಮಿ ನೋಟ್ 7' -ಪ್ರೊಸೆಸರ್

'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 2.2GHz ಸ್ನಾಪ್ಡ್ರಾಗನ್ 660 ಎಸ್‌ಒಸಿ ಪ್ರೊಸೆಸರ್, ಅಡ್ರಿನೋ 512 ಗ್ರಾಫಿಕ್ಸ್, 3 ಜಿಬಿ ಮತ್ತು 4 ಜಿಬಿ RAM ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. 32GB ಮತ್ತು 64GB ಮೆಮೊರಿ ಆಯ್ಕೆಗಳ ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು 256GB ವರೆಗೆ ವಿಸ್ತರಿಸುವ ಆಯ್ಕೆಯೂ ಸಹ ಲಭ್ಯವಿದೆ.

 'ರೆಡ್‌ಮಿ ನೋಟ್ 7' -ಕ್ಯಾಮೆರಾ

'ರೆಡ್‌ಮಿ ನೋಟ್ 7' -ಕ್ಯಾಮೆರಾ

ಶಿಯೋಮಿ ಕಂಪೆನಿ ತನ್ನ ರೆಡ್‌ಮಿ ನೋಟ್ 7 ಸ್ಮಾರ್ಟ್‌ಪೋನಿನಲ್ಲಿ 12 ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ನೀಡಿದೆ. (ಭಾರತದಲ್ಲಿ ರೆಡ್‌ಮಿ ನೋಟ್ 7 ಪ್ರೊ ನಲ್ಲಿ ಮಾತ್ರ 48MP+5MP ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ) ಇನ್ನುಳಿದಂತೆ ಡ್ಯುಯಲ್-ಎಲ್ಇಡಿ ಫ್ಲಾಶ್ ಬೆಂಬಲ, ಪಿಡಿಎಎಫ್ ಅನ್ನು ಸಹ ಹಿಂಬಾಗದಲ್ಲಿ ನೋಡಬಹುದಾಗಿದೆ. ಹಾಗೂ 13MP ಸೆಲ್ಫಿ ಕ್ಯಾಮೆರಾ ಇದೆ.

'ರೆಡ್‌ಮಿ ನೋಟ್ 7' -ಬ್ಯಾಟರಿ

'ರೆಡ್‌ಮಿ ನೋಟ್ 7' -ಬ್ಯಾಟರಿ

ಕ್ವಿಕ್ ಚಾರ್ಜ್ 4 ತಂತ್ರಜ್ಞಾನ ಬೆಂಬಲದೊಂದಿಗೆ 4,000 mAh ಬ್ಯಾಟರಿಯನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು 251 ಗಂಟೆಗಳ ಸ್ಟ್ಯಾಂಡ್‌ ಬೈ ಸಮಯ, 23 ಗಂಟೆಗಳ ಟಾಕ್ ಟೈಮ್, 13 ಗಂಟೆಗಳ ವೀಡಿಯೋ ಪ್ಲೇಬ್ಯಾಕ್, ಮತ್ತು 7 ಗಂಟೆಗಳ ಗೇಮಿಂಗ್‌ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ನೀಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
Redmi Note 7 smartphones could soon be getting updated to MIUI 11 based on Android 10 software. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X