Just In
Don't Miss
- News
Breaking; ಫೆ. 26ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರೆಡ್ಮಿ ನೋಟ್ 7ಎಸ್' ಓಪೆನ್ ಸೇಲ್ ಮಧ್ಯರಾತ್ರಿಯಿಂದ ಆರಂಭ!
ಮೊಬೈಲ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡಿದ್ದ ಶಿಯೋಮಿಯ 'ರೆಡ್ಮಿ ನೋಟ್ 7ಎಸ್' ಸ್ಮಾರ್ಟ್‌ಫೋನ್ ಕಳೆದ ವಾರವಷ್ಟೇ ಭಾರತದಲ್ಲಿ ಬಿಡುಗಡೆ ಆಗಿದ್ದು, ಇದೇ ಮೇ 23ರಂದು ತನ್ನ ಮೊದಲ ಸೇಲ್ ಆರಂಭಿಸಿತ್ತು. ಆದಾದ ನಂತರ ಮತ್ತೆ ಇದೇ ಮೇ 29 ರಂದು ಸೆಕೆಂಡ್ ಸೇಲ್ ಆರಂಭಿಸಿದ್ದ ಕಂಪನಿಯು ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಖುಷಿ ನೀಡಿದ್ದು, ಇಂದು ಮಧ್ಯರಾತ್ರಿಯಿಂದ ಭರ್ಜರಿ ಓಪೆನ್ ಸೇಲ್ ಆರಂಭಿಸಲಿದೆ.

ಹೌದು, ಶಿಯೋಮಿಯ 'ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್ ಓಪೆನ್ ಸೇಲ್ ಇದೇ 31 ರಂದು (ಮಧ್ಯರಾತ್ರಿ 12:01am) ಆರಂಭವಾಗಲಿದ್ದು, ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ Mi.com ನಲ್ಲಿ ಖರೀದಿಗೆ ಲಭ್ಯವಿರಲಿದೆ. 48ಎಂಪಿ ಕ್ಯಾಮೆರಾ ಫೀಚರ್ಸ್‌ನಿಂದ ಗ್ರಾಹಕರ ಗಮನ ಸೆಳೆದಿದ್ದು, ಖರೀದಿಯ ಕ್ಷಣಕ್ಕಾಗಿ ರೆಡ್ಮಿ ಅಭಿಮಾನಿಗಳು ಕುತೂಹಲದಿಂದ ಎದುರುನೋಡುತ್ತಿದ್ದಾರೆ.

ಶಿಯೋಮಿ 'ರೆಡ್ಮಿ ನೋಟ್ 7ಎಸ್' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, 3GB RAM ಮತ್ತು 32GB ಸ್ಟೋರೇಜ್ ವೇರಿಯಂಟ್ ಬೆಲೆಯು 10,999ರೂ.ಗಳು ಆಗಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು 12,999 ಆಗಿದೆ. ಹಾಗಾದರೇ ಶಿಯೋಮಿ 'ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್
ರೆಡ್ಮಿ ಸ್ಮಾರ್ಟ್‌ಫೋನ್ ಗ್ಲಾಸಿ ಫಿನಿಶಿಂಗ್ ಲುಕ್‌ನಲ್ಲಿದ್ದು, ಸ್ಟನ್ನಿಂಗ್ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇ ಸುತ್ತಲೂ 2.5D ಕರ್ವ್ ಆಕಾರವನ್ನು ಹೊಂದಿದ್ದು, ಡಿಸ್‌ಪ್ಲೇಗೆ ಗೊರಿಲ್ಲಾ ಗ್ಲಾಸ್ ರಕ್ಷಣೆ ಯೊಂದಿಗೆ ಹಿಂಬದಿಯಲ್ಲೂ ಸಹ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. ಹೀಗಾಗಿ ಸ್ಕ್ರಾಚ್‌ನಿಂದ ಮುಕ್ತವಾಗಿದೆ. ಬ್ಲ್ಯಾಕ್, ಬ್ಲೂ ಮತ್ತು ರೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

ಡಿಸ್‌ಪ್ಲೇ
ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನ್ 6.3 ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಹಾಗೇ ಡಿಸ್‌ಪ್ಲೇಯಲ್ಲಿ ಡಾಟ್ ನಾಚ್ ನೀಡಲಾಗಿದ್ದು ಜೊತೆ ತೆಳುವಾದ 1.95 ಎಂಎಂ ಬೆಜಲ್ ರಚನೆಯನ್ನು ಪಡೆದುಕೊಂಡಿದೆ.

ಕ್ಯಾಮೆರಾ
ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನಿನಲ್ಲಿ 48 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದ್ದು, ಇದರ ಅಪರ್ಚರ್ ಸಾಮರ್ಥ್ಯವು f/1.8 ಆಗಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿದೆ.ಅತ್ಯುತ್ತಮ ಗುಣಮಟ್ಟದಲ್ಲಿ ಫೋಟೊಗಳನ್ನು ಸೆರೆಹಿಡಿಯಬಲ್ಲ ಸೂಪರ್ ಪಿಕ್ಸಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಸೆಲ್ಫಿಗಾಗಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ.

ಸೂಪರ್ ಪಿಕ್ಸಲ್
ಕಂಪನಿಯು ಹೊಸದಾಗಿ ಸೂಪರ್ ಪಿಕ್ಸಲ್ ಟೆಕ್ನೊಲಜಿ ಪರಿಚಯಿಸಿದ್ದು, ಈ ತಂತ್ರಜ್ಞಾನದಲ್ಲಿ ಝೂಮ್ ಮಾಡಿದರು ಫೋಟೊ ಪಿಕ್ಸಲ್ ಒಡೆಯುವುದಿಲ್ಲ. ಅತ್ಯುತ್ತಮ ಝೂಮ್ ಆಯ್ಕೆಯನ್ನು ಈ ಫೋನ್ ಒಳಗೊಂಡಿದ್ದು, AI ತಂತ್ರಜ್ಞಾನ ನೆರವಿನಿಂದ ಮಂದಬೆಳಕಿನಲ್ಲೂ ಉತ್ತಮ ಬ್ರೈಟ್‌ನೆಸ್ ಕಂಡುಕೊಳ್ಳಲಿದೆ. ರಾತ್ರಿವೇಳೆಯಲ್ಲಿ ನೈಟ್‌ಮೋಡ್ ಆಯ್ಕೆಯು ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಗಳನ್ನು ಸೆರೆಹಿಡಿಯಲಿದೆ.

ಪ್ರೊಸೆಸರ್
ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದ್ದು, 2.2ಗಿಗಾಹರ್ಡ್ಜ ಶಕ್ತಿ ಇದೆ. ಹಾಗೆಯೇ ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದ್ದು ಅವು ಕ್ರಮವಾಗಿ 3GB RAM ಮತ್ತು 32GB ಆಂತರಿಕ ಸಂಗ್ರಹ ಹಾಗೂ 4GB RAM ಮತ್ತು 64 GB ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ.

ಇತರೆ ಸೌಲಭ್ಯಗಳು
ಈ ಸ್ಮಾರ್ಟ್‌ಫೋನಿನಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಆಯ್ಕೆಯನ್ನು ಒದಗಿಸಲಾಗಿದೆ. ಇದರೊಂದಿಗೆ 'IR ಬ್ಲಾಸ್ಟರ್' ಸೌಲಭ್ಯವನ್ನು ನೀಡಲಾಗಿದ್ದು, ಇದರ ನೆರವಿನಿಂದ ಟಿವಿ ಸೇರಿದಂತೆ ಇತರೆ ಡಿವೈಸ್‌ಗಳಿಗೆ ಫೋನ್ ಕನೆಕ್ಟ್ ಮಾಡುವ ಆಯ್ಕೆ ದೊರೆಯಲಿದೆ. ಹಾಗೆಯೇ 3.5ಎಂ ಎಂ ಆಡಿಯೊ ಜಾಕ್ ಫೋನಿನಲ್ಲಿ ಕಾಣಬಹುದಾಗಿದೆ.

ಬ್ಯಾಟರಿ
ರೆಡ್ಮಿ ನೋಟ್ 7ಎಸ್ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದ್ದು, 2.0 ಕ್ವಾಲ್ಕಮ್ ಕ್ವಿಕ್ ಚಾರ್ಜರ್(10w) ಸೌಲಭ್ಯವನ್ನು ಪಡೆದಿದೆ. ನಿರಂತರ 13 ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಸಾಮರ್ಥ್ಯ ಪಡೆದಿದೆ ಹಾಗೂ 150 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಶಕ್ತಿ ಇದ್ದು, ಒಟ್ಟು 250 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್ ಸಾಮರ್ಥ್ಯವನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470