ಶಿಯೋಮಿಯಿಂದ ಹೊಸ ರೆಡ್ಮಿ ಸ್ಮಾರ್ಟ್‌ಟಿವಿ A70 ಬಿಡುಗಡೆ! ಅತ್ಯಾಕರ್ಷಕ ಫೀಚರ್ಸ್‌!

|

ಶಿಯೋಮಿ ಕಂಪೆನಿ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಸಾಕಷ್ಟು ಜನಪ್ರಿಯತೆ ಪಡೆದಿದೆ. ತನ್ನ ಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಮಾರುಕಟ್ಟೆಯಲ್ಲಿ ಗಮನಸೆಳೆದಿದೆ. ಇದೀಗ ತನ್ನ ರೆಡ್ಮಿ ಬ್ರ್ಯಾಂಡ್‌ನಲ್ಲಿ ಹೊಸ ರೆಡ್ಮಿ ಸ್ಮಾರ್ಟ್‌ಟಿವಿ A70 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ 4K ರೆಸಲ್ಯೂಶನ್ ಹೊಂದಿರುವ 70 ಇಂಚಿನ ಡಿಸ್‌ಪ್ಲೇ ಸ್ಕ್ರೀನ್‌ ಹೊಂದಿದೆ. ಇದು ಮೆಟಲ್ ಯುನಿಬಾಡಿ ವಿನ್ಯಾಸದೊಂದಿಗೆ ಬರಲಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ರೆಡ್ಮಿ ಬ್ರ್ಯಾಂಡ್‌ನಲ್ಲಿ ಹೊಸ ರೆಡ್ಮಿ ಸ್ಮಾರ್ಟ್‌ಟಿವಿ A70 ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಕ್ವಾಡ್-ಕೋರ್ ಕಾರ್ಟೆಕ್ಸ್ ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಮಾಲಿ GPU ಸಪೋರ್ಟ್‌ನೊಂದಿಗೆ ಬರಲಿದೆ. ರೆಡ್ಮಿ ಸ್ಮಾರ್ಟ್‌ಟಿವಿ A70 20W ​​ಸೌಂಡ್ ಔಟ್‌ಪುಟ್‌ ಅನ್ನು ನೀಡಲಿದೆ. ಇದಕ್ಕಾಗಿ ಡ್ಯುಯಲ್ ಏರ್ ಡಕ್ಟ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಟಿವಿ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಟಿವಿ

ರೆಡ್ಮಿ ಸ್ಮಾರ್ಟ್‌ಟಿವಿ A70 ಹೆಸರೇ ಸೂಚಿಸುವಂತೆ 70-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3840 × 2160 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 5,000:1 ರಚನೆಯ ಅನುಪಾತವನ್ನು ಹೊಂದಿದ್ದು, 96% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದಿದೆ. ಈ ಸ್ಮಾರ್ಟ್‌ಟಿವಿ ಅಲ್ಟ್ರಾ-ನ್ಯಾರೋ ಬೆಜೆಲ್‌ಗಳನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ 178 ಡಿಗ್ರಿ ವ್ಯೂ ಆಂಗಲ್‌ ಬೆಂಬಲಿಸುವ 10 ಬಿಟ್ ಡಿಸ್‌ಪ್ಲೇ ಪ್ಯಾನೆಲ್ ಒಳಗೊಂಡಿದೆ.

ಸ್ಮಾರ್ಟ್

ಇನ್ನು ಈ ಸ್ಮಾರ್ಟ್ ಟಿವಿ ಕ್ವಾಡ್-ಕೋರ್ ಕಾರ್ಟೆಕ್ಸ್ ಪ್ರೊಸೆಸರ್ ವೇಗವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಮಾಲಿ GPU ಸಪೋರ್ಟ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ ಆಧಾರಿತ MIUI ಟಿವಿಯೊಂದಿಗೆ ಮೊದಲೇ ಲೋಡ್ ಆಗುತ್ತದೆ. ಹಾಗೆಯೇ 1.5GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಟಿವಿ ವಾಯ್ಸ್‌ ಕಂಟ್ರೋಲ್‌, ಟಿವಿ ಸ್ಕ್ರೀನ್‌ ಸ್ಕ್ರೀನ್‌ಶಾಟ್‌ಗಳು ಮತ್ತು ಇಂಟೆಲಿಜೆಂಟ್‌ ಸ್ಕ್ರೀನ್‌ ಪ್ರೊಜೆಕ್ಷನ್‌ ಫೀಚರ್ಸ್‌ ಸೇರಿದಂತೆ ಇನ್ನು ಹಲವಾರು ಅನುಕೂಲಕರ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ.

ಸ್ಮಾರ್ಟ್‌ಟಿವಿ

ರೆಡ್ಮಿ ಸ್ಮಾರ್ಟ್‌ಟಿವಿ A70 ಟಿವಿ ಬಳಕೆದಾರರಿಗೆ ಅನುಕೂಲವಾಗುವ ಆಪ್ ಸ್ಟೋರ್, ಮಿಜಿಯಾ ಹೋಮ್, ಎಚ್‌ಡಿ ಪ್ಲೇಯರ್, ಟಿವಿ ಬಟ್ಲರ್, ಕ್ಯಾಲೆಂಡರ್ ಮತ್ತು ಹವಾಮಾನ ಸೇರಿದಂತೆ ಹಲವು ಪ್ರಿ ಇನ್‌ಸ್ಟಾಲ್‌ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಟಿವಿ 20W (2 × 10W) ​​ಸೌಂಡ್ ಔಟ್‌ಪುಟ್‌ ಹೊಂದಿರುವ ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಬಾಸ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಡ್ಯುಯಲ್ ಏರ್ ಡಕ್ಟ್‌ಗಳನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ವೈಫೈ 802.11ac, 2 × HDMI, 2 × USB, ಈಥರ್ನೆಟ್, S/PDIF, ಮತ್ತು AV ಇನ್‌ಪುಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ ಸ್ಮಾರ್ಟ್‌ಟಿವಿ A70 ಪ್ರಸ್ತುತ ಬೆಲೆ RMB 2,999 (ಅಂದಾಜು 35,000ರೂ) ಮತ್ತು ಚೀನಾದಲ್ಲಿ ಖರೀದಿಗೆ ಲಭ್ಯವಿದೆ. ಇದರ ಜಾಗತಿಕ ಬೆಲೆ ಹಾಗೂ ಲಭ್ಯತೆಯ ಬಗ್ಗೆ ಶಿಯೋಮಿ ಕಂಪೆನಿ ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಟಿವಿ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡುವುದು ಡೌಟ್‌ ಎಂದು ಕೂಡ ಟೆಕ್‌ ವಲಯದಲ್ಲಿ ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಸ್ಮಾರ್ಟ್‌ಟಿವಿ ಹೊಸ ತಲೆಮಾರಿನ ಆಯ್ಕೆಯಾಗಿರಲಿದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
Redmi Smart TV A70 4K LED TV Launched: Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X