ರೆಡ್ಮಿ ಪ್ಯಾಡ್‌ ಡಿವೈಸ್‌ಗೆ ಭಾರೀ ಡಿಸ್ಕೌಂಟ್‌; 20,000 ಪೇಜ್‌ಗಳ ಬ್ಯಾಟರಿ ಬ್ಯಾಕ್‌ಅಪ್‌!

|

ಶಿಯೋಮಿ ಕಂಪೆನಿ ತನ್ನ ರೆಡ್ಮಿ ಬ್ರ್ಯಾಂಡ್‌ ನಲ್ಲಿ ಇತ್ತೀಚಿಗೆ ಪರಿಚಯಿಸಿರುವ ರೈಟಿಂಗ್‌ ಪ್ಯಾಡ್‌ ಈಗಾಗಲೇ ಗಮನ ಸೆಳೆದಿದೆ. ರೆಡ್ಮಿಯ ಈ ರೈಟಿಂಗ್‌ ಟ್ಯಾಬ್‌ ಈಗ ಭಾರೀ ರಿಯಾಯಿತಿ ಪಡೆದಿದ್ದು, ಮತ್ತೊಮ್ಮೆ ಗ್ರಾಹಕರು ತಿರುಗಿ ನೋಡುವಂತೆ ಮಾಡಿದೆ. ಇನ್ನು ರೆಡ್ಮಿ ಸಂಸ್ಥೆಯು ಈ ರೈಟಿಂಗ್ ಪ್ಯಾಡ್‌ 8.5 ಇಂಚಿನ ಪಾಲಿಮರ್ LCD ಸ್ಕ್ರೀನ್‌ ರಚನೆಯನ್ನು ಒಳಗೊಂಡಿದೆ.

ರೆಡ್ಮಿ ಪ್ಯಾಡ್‌ ಗೆ ಭಾರೀ ಡಿಸ್ಕೌಂಟ್‌; 20,000 ಪೇಜ್‌ಗಳ ಬ್ಯಾಟರಿ ಬ್ಯಾಕ್‌ಅಪ್‌!

ಹೌದು, ದೈತ್ಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ರೆಡ್ಮಿ ಪ್ಯಾಡ್‌ ಡಿವೈಸ್‌ ಭಾರೀ ರಿಯಾಯಿತಿ ಪಡೆದಿದ್ದು, 699ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಡಿವೈಸ್ ಬೆಲೆಯು 1,999ರೂ, ಆಗಿದ್ದು, 65% ಡಿಸ್ಕೌಂಟ್‌ ನೀಡಲಾಗಿದೆ. ಇದರೊಂದಿಗೆ ಗ್ರಾಹಕರಿಗೆ ಇತರೆ ಕೆಲವು ಕೂಪನ್, ಕ್ಯಾಶ್‌ಬ್ಯಾಕ್‌ ಸೌಲಭ್ಯಗಳು ಸಹ ಲಭ್ಯವಾಗಲಿವೆ. ಹಾಗಾದರೆ ರೆಡ್ಮಿ ಪ್ಯಾಡ್‌ ಡಿವೈಸ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ಪ್ಯಾಡ್‌ ಗೆ ಭಾರೀ ಡಿಸ್ಕೌಂಟ್‌; 20,000 ಪೇಜ್‌ಗಳ ಬ್ಯಾಟರಿ ಬ್ಯಾಕ್‌ಅಪ್‌!

ರೆಡ್ಮಿ ಪ್ಯಾಡ್‌ 8.5 ಇಂಚಿನ ಪಾಲಿಮರ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಜಿಟಲ್‌ ಸ್ಲೇಟ್‌ ಪರಿಸರ ಸ್ನೇಹಿಯಾಗಿದ್ದು, ಕಾಗದ ರಹಿತವಾಗಿದೆ. ಇದು ಸುಮಾರು 20,000 ಪೇಜ್‌ಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದು ಡಿಜಿಟಲ್‌ ಆಗಿರುವುದರಿಂದ ಕಾಗದವನ್ನು ಬಳಸುವ ಅವಶ್ಯಕತೆ ಇದರಲ್ಲಿ ಬರುವುದಿಲ್ಲ. ಬಳಕೆ ಮಾಡಲು ಗ್ರಾಹಕರಿಗೆ ಇದು ಶಿಯೋಮಿ ರೆಡ್ಮಿಯ ಡಿಜಿಟಲ್‌ ಸ್ಲೇಟ್‌ ಹೊಸ ಅನುಭವ ನೀಡಲಿದೆ.

ಗ್ರಾಹಕರು ಈ ಡಿವೈಸ್‌ ನಲ್ಲಿ ನೋಟ್‌ಗಳನ್ನು ಬರೆದುಕೊಳ್ಳುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲ ಇದರಲ್ಲಿ ಸ್ಕೆಚಿಂಗ್‌ ಮಾಡುವುದಕ್ಕೆ ಸೂಕ್ತವಾದ ಫೀಚರ್ಸ್‌ಗಳನ್ನು ನೀಡಲಾಗಿದೆ. ಜೊತೆಗೆ ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಎಲರ ಗಮನ ಸೆಳೆದಿದೆ. ಅಂದಹಾಗೆ ಈ ಪ್ಯಾಡ್‌ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ದೊರೆಯುತ್ತದೆ.

ಈ ರೈಟಿಂಗ್‌ ಪ್ಯಾಡ್ LCD ಟ್ಯಾಬ್ಲೆಟ್ ಎಲೆಕ್ಟ್ರೋಫೋರೆಟಿಕ್ ಡಿಸ್‌ಪ್ಲೇ ಎಂಬ ವಿಶೇಷ ರೀತಿಯ ಸ್ಕ್ರೀನ್‌ ಬಳಸಲಿದೆ. ಇದು ಸ್ಮಾಲ್‌ ಕ್ಯಾಪ್ಸುಲ್‌ಗಳಿಂದ ಮಾಡಲ್ಪಟ್ಟಿದೆ. ಈ ಕ್ಯಾಪ್ಸುಲ್‌ಗಳು ದ್ರವದ ಸಣ್ಣ ಕಣಗಳನ್ನು ಹೊಂದಿದ್ದು, ಅದು ಸುತ್ತಲೂ ಚಲಿಸುತ್ತದೆ. ಇದರಿಂದ ಸ್ಕ್ರೀನ್‌ನ ಬಣ್ಣವನ್ನು ಬದಲಾಯಿಸುತ್ತದೆ. ಇನ್ನು ಈ ಪ್ಯಾಡ್‌ ಸಾಕಷ್ಟು ತೆಳುವಾಗಿದ್ದು, ಕೇವಲ 90 ಗ್ರಾಂ ತೂಕವನ್ನು ಹೊಂದಿದೆ.

ಈ ರೈಟಿಂಗ್‌ ಪ್ಯಾಡ್‌ ಎಡ್ಜ್‌ನಲ್ಲಿ ಬದಲಾಯಿಸಬಹುದಾದ ಸೆಲ್‌ ಅನ್ನು ಒಳಗೊಂಡಿದೆ. ಇದರಿಂದ ನಿಮ್ಮ ರೈಟಿಂಗ್‌ ಪ್ಯಾಡ್‌ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಇದು ಬ್ಯಾಟರಿ ಸೆಲ್‌ ಖಾಲಿಯಾಗುವವರೆಗೆ ಸುಮಾರು 20,000 ಪೇಜ್‌ಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಇದರ ಸ್ಕ್ರೀನ್‌ ಕೆಳಗೆ ಡಿವೈಸ್‌ನ ಮುಂಭಾಗದಲ್ಲಿ, ಡಿಸ್‌ಪ್ಲೇ ರಿಸೆಟ್‌ ಮಾಡಬಹುದಾದ ಆರೆಂಜ್‌ ಕಲರ್‌ ಬಟನ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ಡಿಸ್‌ಪ್ಲೇಯನ್ನು ನೀವು ಬೇಕಾದಗ ರಿಸೆಟ್‌ ಮಾಡಬಹುದಾಗಿದೆ.

ರೆಡ್ಮಿ ಪ್ಯಾಡ್‌ ಗೆ ಭಾರೀ ಡಿಸ್ಕೌಂಟ್‌; 20,000 ಪೇಜ್‌ಗಳ ಬ್ಯಾಟರಿ ಬ್ಯಾಕ್‌ಅಪ್‌!

ರೆಡ್ಮಿ ಪ್ಯಾಡ್‌ ಟ್ಯಾಬ್‌ ಫೀಚರ್ಸ್‌
ರೆಡ್ಮಿ ಪ್ಯಾಡ್‌ ಟ್ಯಾಬ್‌ 10.6 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 2000 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೀಡಿಯಾಟೆಕ್‌ ಹೆಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 OSನಲ್ಲಿ ರನ್‌ ಆಗಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಇದಲ್ಲದೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. 18W ವೇಗದ ಚಾರ್ಜಿಂಗ್‌ ಬೆಂಬಲಿಸುವ 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

English summary
Redmi Writing Pad available at Offer Price on Flipkart: Offer Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X