Subscribe to Gizbot

ಅಂತರ್ಜಾಲದಲ್ಲಿ ಇಂಗ್ಲೀಷ್ ಹೇರಿಕೆಗೆ ಫುಲ್‌ಸ್ಟಾಪ್ ಇಡಲು ಇದು ಸಕಾಲ!! ಏಕೆ?

Written By:

ಇಂಟರ್‌ನೆಟ್ ಎಂದರೆ ಇಂಗ್ಲೀಷ್ ಎನ್ನುವ ಕಾಲ ಇನ್ನೇನು ಕೆಲವೇ ವರ್ಷಗಳಲ್ಲಿ ಬದಲಾಗುವ ನಿರೀಕ್ಷೆ ಇದೆ.! ಹೌದು, ಇಂಟರ್‌ನೆಟ್‌ನ ಭಾಷೆ ಬದಲಾಗುತ್ತಿದೆ. ಇಂಗ್ಲಿಷ್‌ಗೆ ಇದ್ದ ಪಾರಮ್ಯ ಇಲ್ಲವಾಗುತ್ತಿದೆ. ಇಂಟರ್‌ನೆಟ್‌ ಮೇಲೆ ಇಂಗ್ಲೀಷ್ ಪಾರಮ್ಯ ನಿಧಾನವಾಗಿ ಕುಸಿಯುತ್ತಾ ಬಂದಿರುವ ಮಾಹಿತಿ ಹೊರಬಿದ್ದಿದೆ.!!

ಹೊಸತಾಗಿ ಸೇರ್ಪಡೆಯಾಗುತ್ತಿರುವ ಪ್ರತೀ 10 ಮಂದಿ ಇಂಟರ್‌ನೆಟ್‌ ಬಳಕೆದಾರರಲ್ಲಿ 9 ಮಂದಿಯೂ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದ್ದು, 2021ರ ವೇಳೆಗೆ ಇಂಟರ್‌ನೆಟ್‌ನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಭಾಷೆಗಳು ಪ್ರಾದೇಶಿಕ ಭಾಷೆಗಳಾಗಿರಲಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.!!

ಹಾಗಾದರೆ, ಇಂಟರ್‌ನೆಟ್‌ ಮೇಲೆ ಇಂಗ್ಲೀಷ್ ಪಾರಮ್ಯ ಕಡಿಮೆಯಾಗಲು ಕಾರಣ ಏನು? ಪ್ರಾದೇಶಿಕ ಭಾಷೆಗಳಿಂದ ಇಂಟರ್‌ನೆಟ್ ಪ್ರಪಂಚದಲ್ಲಾಗುವ ಬದಲಾವಣೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾಷೆ ಬದಲಾವಣೆಯಲ್ಲಿ ಮೊಬೈಲ್ ಕ್ರಾಂತಿ!!

ಭಾಷೆ ಬದಲಾವಣೆಯಲ್ಲಿ ಮೊಬೈಲ್ ಕ್ರಾಂತಿ!!

ಏಪ್ರಿಲ್‌ನಲ್ಲಿ ಗೂಗಲ್-ಕೆಪಿಎಂಜಿ ಸಮೀಕ್ಷೆ ಬಿಡುಗಡೆ ಮಾಡಿದ ಸಮೀಕ್ಷೆ ಪ್ರಕಾರ, ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ಶೇಕಡಾ 78ರಷ್ಟು ಜನರು ಇಂಟರ್ನೆಟ್ ಬಳಸುವುದು ತಮ್ಮ ಮೊಬೈಲ್‌ಗಳ ಮೂಲಕ ಎಂದು ತಿಳಿದುಬಂದಿದೆ. ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಸೀಮಿತವಾಗಿದ್ದ ಇಂಟರ್‌ನೆಟ್‌ ಮೊಬೈಲಿಗೆ ಬಂದದ್ದು ಭಾಷೆ ಬದಲಾವಣೆಯಲ್ಲಿ ಮೊಬೈಲ್ ಕ್ರಾಂತಿಕಾರಣವಾಯಿತು.!!

ಇಂಗ್ಲೀಷ್ ತೀವ್ರತೆ ಈಗ ಕಡಿಮೆಯಾಗಿದೆ.!!

ಇಂಗ್ಲೀಷ್ ತೀವ್ರತೆ ಈಗ ಕಡಿಮೆಯಾಗಿದೆ.!!

2011ರ ವೇಳೆಗೆ ಇಂಟರ್‌ನೆಟ್‌ನಲ್ಲಿದ್ದ ಇಂಗ್ಲಿಷ್‌ನ ಪ್ರಮಾಣ ಶೇಕಡಾ 27 ರಷ್ಟಾಗಿದ್ದರೆ, 2021 ರ ವೇಳೆಗೆ ಇಂಟರ್‌ನೆಟ್‌ನಲ್ಲಿನ ಇಂಗ್ಲಿಷ್‌ ಪ್ರಮಾಣ 17 ರಷ್ಟಕ್ಕೆ ಇಳಿಯಲಿದೆ ಎನ್ನುವ ವರದಿ ನೀಡಲಾಗಿದೆ.! ಅಂದರೆ ಬರುಬರುತ್ತಾ ಇಂಟರ್‌ನೆಟ್‌ನಲ್ಲಿ ಇಂಗ್ಲೀಷ್ ತೀವ್ರತೆ ಈಗ ಕಡಿಮೆಯಾಗುತ್ತಿದೆ ಎನ್ನುವುದು ತಿಳಿಯುತ್ತದೆ.!!

ಎಲ್ಲಾ ಭಾಷೆಗಳಿಗಳಲ್ಲಿ ಫೇಸ್‌ಬುಕ್, ಗೂಗಲ್‌!!

ಎಲ್ಲಾ ಭಾಷೆಗಳಿಗಳಲ್ಲಿ ಫೇಸ್‌ಬುಕ್, ಗೂಗಲ್‌!!

ಫೇಸ್‌ಬುಕ್, ಗೂಗಲ್‌ನಂತಹ ಪ್ರಖ್ಯಾತ ಅಂತರ್ಜಾಲ ಸಂಸ್ಥೆಗಳು ಇದೀಗ ಎಲ್ಲಾ ಭಾಷೆಗಳಲ್ಲಿಯೂ ತಮ್ಮ ಸೇವೆ ನೀಡುತ್ತಿವೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಇಂದು ಇವುಗಳನ್ನು ಬಳಕೆ ಮಾಡಿದೆ. ನಮಗೆ ಕನ್ನಡದಲ್ಲಿಯೇ ಮಾಹಿತಿ ಒದಗಿಸುವ ಆಪ್‌ಗಳು ಇಂದು ಸಾವಿರಾರು ಲಭ್ಯವಿವೆ.!!

ಕಟ್ಟುನಿಟ್ಟಾದ ನಿಯಮ ಬೇಕಿದೆ!!

ಕಟ್ಟುನಿಟ್ಟಾದ ನಿಯಮ ಬೇಕಿದೆ!!

ಇಷ್ಟೆಲ್ಲಾ ವರದಿಗಳ ನಂತರವೂ ಅಂತರ್ಜಾಲದಲ್ಲಿ ಇಂಗ್ಲೀಷ್ ಭಾಷೆ ಏರಿಕೆ ಬಗ್ಗೆ ಪ್ರಶ್ನೆಗಳು ಮೂಡುತ್ತವೆ. ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಗೆ ಹೋಲಿಸಿದರೆ ಈ ಬಗೆಯ ಉತ್ಪನ್ನಗಳನ್ನು ಬಳಸುವ ಭಾರತೀಯ ಭಾಷೆಗಳನ್ನು ಮಾತ್ರ ಬಲ್ಲವರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ಆಪ್ ತಯಾರಕರು ತಮ್ಮ ಉತ್ಪನ್ನದ ಮಾಹಿತಿಯನ್ನು ಭಾರತೀಯ ಭಾಷೆಗಳಲ್ಲಿ ಒದಗಿಸುತ್ತಿಲ್ಲ ಎಂದರೆ ಅವುಗಳಿಗೂ ಕಟ್ಟುನಿಟ್ಟಾದ ನಿಯಮ ತರಬೇಕಾದುದು ಸರ್ಕಾರದ ಕೆಲಸವಾಗಬೇಕಿದೆ.!!

ಓದಿರಿ:ದೇ 21ಕ್ಕೆ 500 ರೂಪಾಯಿಗೆ ಜಿಯೋ 4G ಫೋನ್ ಬಿಡುಗಡೆ!..ಪ್ರಮುಖ ಪತ್ರಿಕೆ ವರದಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Rural web access will grow on availability of content in languages including kannada,Hindi, Tamil. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot