ಹಾನರ್ ಸ್ಮಾರ್ಟ್ ಫೋನ್ ಬುಕ್ ಮಾಡಿದವರಿಗೆ ಬೊಂಬಾಟ್ ಬಹುಮಾನ

By Lekhaka
|

ಹುವಾವೆ ಕಂಪನಿಯದ ಹಾನರ್ ತನ್ನ ಗ್ರಾಹಕರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ನೂತನವಾಗಿ ಲಾಂಚ್ ಮಾಡಲು ಸಿದ್ಧತೆ ನಡೆಸಿರುವ ಹಾನರ್ 7X ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಅಬ್ಬರಿಸಲಿದೆ. ಅಮೆಜಾನ್ ಮಾತ್ರವೇ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ ಎನ್ನಲಾಗಿದೆ.

ಹಾನರ್ ಸ್ಮಾರ್ಟ್ ಫೋನ್ ಬುಕ್ ಮಾಡಿದವರಿಗೆ ಬೊಂಬಾಟ್ ಬಹುಮಾನ

ಈ ಸ್ಮಾರ್ಟ್ ಫೋನ್ ಬುಕ್ ಮಾಡುವವರಿಗೆ ವಿನೂತನ ಗಿಫ್ಟ್ ನೀಡಲು ಮುಂದಾಗಿರುವ ಹಾನರ್ ತನ್ನ ಹಾನರ್ 7X ಹೆಸರಿನಂತೆ ಅದೃಷ್ಠಶಾಲಿಗಳಿಗೆ 7 ಟ್ರಿಪ್ ಗಳು, 7 ವಿವಿಧ ಪ್ರದೇಶಗಳಿಗೆ, 10 ಹಾನರ್ 7X ಸ್ಮಾರ್ಟ್ ಫೋನ್ ಗಳು, 150 ಪವರ್ ಬ್ಯಾಂಕ್ ಗಳು ಮತ್ತು 850 ಇಯರ್ ಫೋನ್ ಅನ್ನು ಸಹ ಗಿಫ್ಟ್ ಆಗಿ ನೀಡಲಾಗುವುದು ಎಂದು ತಿಳಿಸಿದೆ.

ಷರತ್ತುಗಳು:

ಷರತ್ತುಗಳು:

7 ವಿವಿಧ ಪ್ರದೇಶಗಳಿಗೆ 7 ಟ್ರಿಪ್ ಗಳನ್ನು ಒಬ್ಬ ಲಕ್ಕಿ ವಿಜೇತರಿಗೆ ನೀಡಲಾಗುವುದು. ಅದು ಲಿಮಿಟೆಡ್ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಆ ಅವಧಿಯಲ್ಲಿಯೇ ವಿಜೇತರು ಅದನ್ನು ಬಳಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಅವಧಿಯು ಮುಗಿದು ಹೋಗಲಿದೆ.

ಇದರೊಂದಿಗೆ 10 ಮಂದಿ ವಿಜೇತರಿಗೆ ಹಾನರ್ 7X ಸ್ಮಾರ್ಟ್ ಫೋನ್ ಗಳನ್ನು ನೀಡಲಾಗುವುದು. ಈ ಆಯ್ಜೆಯೂ ಪಾರದರ್ಶಕವಾಗಿರಲಿದೆ.

ಇದಲ್ಲದೇ ರೂ.2399 ಮೌಲ್ಯದ ಹಾನರ್ 10000mAh ಕ್ವೀಕ್ ಚಾರ್ಜ್ ಪವರ್ ಬ್ಯಾಂಕ್ ಗಳನ್ನು ಒಟ್ಟು 150 ಮಂದಿ ವಿಜೇತರಿಗೆ ನೀಡಲಾಗುವುದು ಎನ್ನಲಾಗಿದೆ.

ಇದಲ್ಲದೇ ಒಟ್ಟು 850 ಮಂದಿಗೆ ಇಯರ್ ಫೋನ್ ಅನ್ನು ನೀಡಲಾಗುವುದು ಎನ್ನಲಾಗಿದ್ದು, ಈ ಮೂಲಕ ಎಲ್ಲಾ ಖರೀದಿದಾರರಿಗೂ ಲಾಭ ಮಾಡಿಕೊಡುವ ಕ್ರಮಕ್ಕೆ ಮುಂದಾಗಿದೆ.

ಹಾನರ್ 7X ವಿಶೇಷತೆಗಳು:

ಹಾನರ್ 7X ವಿಶೇಷತೆಗಳು:

ಹಾನರ್ 7X ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿದ್ದು, ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ. 5.93 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದ್ದು, 18:9 ಅನುಪಾತದ ವಿನ್ಯಾಸವನ್ನು ಹೊಂದಿದೆ.

ಇದಲ್ಲದೇ ಆಕ್ಟಾ ಕೋರ್ ಕಿರನ್ 659 ಪ್ರೋಸೆಸರ್ ಅನ್ನುಕಾಣಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗಾದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಅಲ್ಲದೇ EMUI 5.1 ಸಹ ಇದರಲ್ಲಿದೆ. ಒಟ್ಟು ಮೂರು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ದೊರೆಯಲಿದೆ ಎನ್ನಲಾಗಿದೆ. 32GB, 64GB ಮತ್ತು 128GB ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ.

ಹಾನರ್ 7Xನಲ್ಲಿ ಡ್ಯುಯಲ್ ಕ್ಯಾಮೆರಾ ಸೆಪಟ್ ಸನ್ನು ಕಾಣಬಹುದಾಗಿದ್ದು 16MP + 2MP ಕ್ಯಾಮೆರಾವನ್ನು ಇಲ್ಲಿ ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ ಸೆಲ್ಫಿಗಾಗಿ 8MP ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ 3340mAh ಬ್ಯಾಟರಿಯನ್ನು ಒಳಗೊಂಡಿದೆ.

ಆಂಡ್ರಾಯ್ಡ್ ಪ್ರಪಂಚವನ್ನು ಬದಲಿಸಲಿದೆ 'ಸೂಪರ್ ಆಪ್'!..ಹೌದು, ಮಾಮೂಲಿ 'ಆಪ್‌' ಅಲ್ಲ!!ಆಂಡ್ರಾಯ್ಡ್ ಪ್ರಪಂಚವನ್ನು ಬದಲಿಸಲಿದೆ 'ಸೂಪರ್ ಆಪ್'!..ಹೌದು, ಮಾಮೂಲಿ 'ಆಪ್‌' ಅಲ್ಲ!!

 ಹಾನರ್ 7X ಬೆಲೆ:

ಹಾನರ್ 7X ಬೆಲೆ:

ಹಾನರ್ 7X ಈ ಸ್ಮಾರ್ಟ್ ಫೋನು ಮೂರು ಮಾದರಿಯಲ್ಲಿ ದೊರೆಯಲಿದ್ದು, ಕ್ರಮವಾಗಿ ರೂ. 12,800, ರೂ,16,800 ಮತ್ತು 19,800ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಅಮೆಜಾನ್ ನಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ.

Best Mobiles in India

Read more about:
English summary
The Honor 7X is a bezel-less smartphone with rear dual cameras.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X