ರಿಲಾಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ; ಬಂಪರ್ ಆಫರ್
ಟೆಲಿಕಾಂ ಆಪರೇಟರ್ ರಿಲಾಯನ್ಸ್ ಕಂಮ್ಯೂನಿಕೇಷನ್ ಮುಂದಿನ ವಾರದಿಂದ ತನ್ನ 'ಸಿಡಿಎಂಎ' ಗ್ರಾಹಕರಿಗೆ ಎಲ್ಲರೂ ಕೂತೂಹಲಗೊಳ್ಳುವ ಆಫರ್ ನೀಡುತ್ತಿದೆ.
ಅಂದಹಾಗೆ ರಿಲಾಯನ್ಸ್ ಕೇವಲ 93 ರೂಪಾಯಿಗೆ 10GB 4G ಡಾಟಾ ನೀಡುತ್ತಿದ್ದು, ಈ ಸೇವೆಯು ರಿಲಾಯನ್ಸ್ ಜಿಯೊ ನೆಟ್‌ವರ್ಕ್ ಮೂಲಕ ಸಿಗಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಮುಂದೆ ಓದಿರಿ.
ರಿಲಾಯನ್ಸ್ 4G ಸ್ಮಾರ್ಟ್‌ಫೋನ್ 'LYF Water 5' ಬೆಲೆ 11,699

1
ಟೆಲಿಕಾಂ ಆಪರೇಟರ್ ರಿಲಾಯನ್ಸ್ ಕಂಮ್ಯೂನಿಕೇಷನ್ 'ದೂರಸಂಪರ್ಕ ಇಲಾಖೆ'ಗೆ ಪತ್ರ ಬರೆದಿದ್ದು, ಸಿಡಿಎಂಎ ಗ್ರಾಹಕರಿಗೆ 4G ಡಾಟಾ ಸೇವೆ ನೀಡಲು 'ರಿಲಾಯನ್ಸ್ ಜಿಯೊ ಇನ್ಫೋಕಾಂ 4G ನೆಟ್‌ವರ್ಕ್' ಬಳಸಿಕೊಳ್ಳುವುದಾಗಿ ಮಾಹಿತಿ ನೀಡಿದೆ.

2
ರಿಯಾಲಯನ್ಸ್ ಕಂಮ್ಯೂನಿಕೇಷನ್ ನೀಡುತ್ತಿರುವ 93 ರೂಪಾಯಿಯ 10GB 4G ಡಾಟಾ ಬಳಸಿಕೊಳ್ಳಲು ಸಿಡಿಎಂಎ ಗ್ರಾಹಕರಿಗೆ ಮಾತ್ರ ಅವಕಾಶವಿದೆ ಎಂದು ಅಧಿಕೃತ ಮೂಲಗಳು ಪಿಟಿಐ'ಗೆ ತಿಳಿಸಿವೆ.

3
8 ದಶಲಕ್ಷ ರಿಲಾಯನ್ಸ್ ಕಂಮ್ಯೂನಿಕೇಷನ್ 'ಸಿಡಿಎಂಎ' ಗ್ರಾಹಕರಲ್ಲಿ ಶೇಕಡ 90 ರಷ್ಟು ಗ್ರಾಹಕರು 4G ಸೇವೆ ಅಪ್‌ಗ್ರೇಡ್ ಮಾಡಿಕೊಳ್ಳಲು ನಿರ್ಧರಿಸಿದ್ದು, ಕಂಪನಿ ದೂರಸಂಪರ್ಕ ಇಲಾಖೆ ಮೂಲಕ ಡಾಟಾ ಹಂಚಲಿದೆ.

4
ರಿಲಾಯನ್ಸ್ ನೀಡುತ್ತಿರುವ 10GB 4G ಡಾಟಾ ಆರಂಭಿಕ ದರ 93 ರೂಪಾಯಿ ಆಗಿದ್ದು, ಕೆಲವು ಕೇಂದ್ರಗಳಲ್ಲಿ ರೂ.97 ಇದೇ ಸೇವೆಗೆ ಇರಲಿದೆ. ಈ ಮಾಹಿತಿ ರಿಲಾಯನ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಅಂದಹಾಗೆ ಈ ಆಫರ್ ಅನ್ನು ರಿಲಾಯನ್ಸ್ ಇತರೆ ಟೆಲಿಕಾಂ ಆಪರೇಟರ್‌ಗಳ ಸ್ಪರ್ಧೆಯನ್ನು ಎದುರಿಸಲು ನೀಡುತ್ತಿದೆ.

5
ದೂರಸಂಪರ್ಕ ಇಲಾಖೆ ಪ್ರಕಾರ ರಿಲಾಯನ್ಸ್, 12 ಸ್ಥಳಗಳಲ್ಲಿ 4G ಸೇವೆ ಕೇಂದ್ರಗಳನ್ನು ಲಾಂಚ್ ಮಾಡುತ್ತಿದ್ದು, ಅವುಗಳಲ್ಲಿ 'ಮುಂಬೈ, ದೆಹಲಿ, ಕೊಲ್ಕತ್ತ, ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಉತ್ತರ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಬಿಹಾರ ರಾಜ್ಯಗಳು ಸೇರಿವೆ'.

6
ಜುಲೈ ತಿಂಗಳ ಮಧ್ಯಾಂತರದಲ್ಲಿ ರಿಲಾಯನ್ಸ್ ಕಂಪನಿ 4G ಸೇವೆಯನ್ನು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ರಾಜಸ್ತಾನಗಳಲ್ಲಿ ವಿಸ್ತರಣೆ ಮಾಡಲಿದೆ. ಆದರೆ ಈ ವಿಸ್ತರಣೆ ದೂರಸಂಪರ್ಕ ಇಲಾಖೆ ಅನುಮತಿ ನೀಡಿದ ನಂತರ ಎಂದು ಕಂಪನಿ ಹೇಳಿದೆ.

7
ಕಂಪನಿಯು 4G ಸೇವೆ ನೀಡಲು 'ರಿಲಾಯನ್ಸ್ ಜಿಯೊ ಡಾಟಾ ನೆಟ್‌ವರ್ಕ್' ಅನ್ನು 'ಪಾನ್-ಇಂಡಿಯಾ' ಆಧಾರದಲ್ಲಿ ಆಗಸ್ಟ್ ಮಧ್ಯಾಂತರದಿಂದ ಬಳಸಿಕೊಳ್ಳುತ್ತಿದೆ.

8
ರಿಲಾಯನ್ಸ್ ಕಂಪನಿ ರೂ. 6,600 ಕೋಟಿಗೆ 850MHz ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಉದಾರಿಕರಣದಿಂದ 20 ಕೇಂದ್ರಗಳಲ್ಲಿ ಸೇವೆ ನೀಡಲು ಮುಂದಾಗಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಯಾವುದೇ ಆಫರ್ ನೀಡಲು ಉದಾರೀಕರಣ ನೀತಿಯನ್ನು ಹೊಂದಿದೆ.

9
ರಿಲಾಯನ್ಸ್ ಕಂಮ್ಯೂನಿಕೇಷನ್ ಗ್ರಾಹಕರು ಎನಾದರೂ ಹಳೆಯ ಸಿಡಿಎಂಎ ಹ್ಯಾಂಡ್‌ಸೆಟ್‌ಗಳನ್ನು ಇಟ್ಟುಕೊಂಡಿದ್ದರೆ ಮೊದಲೇ ತಿಳಿದುಕೊಳ್ಳಬೇಕಾದ ವಿಷಯವೆಂದರೆ ರಿಲಾಯನ್ಸ್ ನೀಡುವ ಹೊಸ ನೆಟ್‌ವರ್ಕ್ ಅದರಲ್ಲಿ ವರ್ಕ್ ಆಗುವುದಿಲ್ಲ. ಆದ್ದರಿಂದ ಅಪ್‌ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.



Click it and Unblock the Notifications








