ಒಂದನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಾಖಲೆಯ ಲಾಭ!

|

ಆರ್ಥಿಕ ವರ್ಷ 2022-23 ರ ಜೂನ್‌ 30, 2022ಕ್ಕೆ ಅಂತ್ಯವಾದ ಒಂದನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ರಿಲಯನ್ಸ್ ಇಂಡಸ್ಟ್ರೀಸ್‌ ಘೋಷಿಸಿದ್ದು, ದಾಖಲೆಯ 17,955 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 46.3ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟಾರೆ ವರಮಾನ 242,982 ಕೋಟಿ ರೂ.ಗಳಾಗಿದ್ದು, ಒಟ್ಟು ವಾರ್ಷಿಕ ಬೆಳವಣಿಗೆಯು 54.5ಶೇ. ಆಗಿದೆ. ತ್ರೈಮಾಸಿಕದ ಕ್ರೋಢೀಕೃತ ಎಬಿಟಾ 40,179 ಕೋಟಿ ರೂ. ಆಗಿದ್ದು, ವಾರ್ಷಿಕ ಹೋಲಿಕೆಯಲ್ಲಿ ಇದು 45.80 ಕೋಟಿ ಹೆಚ್ಚಳ ಕಂಡಿದೆ.

ಉತ್ಪನ್ನದ

ವಿವಿಧ ದೇಶಗಳ ರಾಜಕೀಯ ಸಂಘರ್ಷಗಳು ಇಂಧನ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿವೆ ಮತ್ತು ಸಾಂಪ್ರದಾಯಿಕ ವ್ಯಾಪಾರ ಹರಿವಿಗೆ ಅಡ್ಡಿ ಉಂಟು ಮಾಡಿವೆ. ಜೊತೆಗೆ ಬೇಡಿಕೆ ಹೆಚ್ಚಳವು ಇಂಧನ ಮಾರುಕಟ್ಟೆ ಸ್ಥಿತ್ಯಂತರವಾಗಿದೆ ಮತ್ತು ಉತ್ಪನ್ನದ ಮಾರ್ಜಿನ್‌ಗಳಲ್ಲಿ ಸುಧಾರಣೆ ಕಂಡುಬಂದಿದೆ. ಕಚ್ಚಾತೈಲ ಮಾರುಕಟ್ಟೆಯಿಂದ ಉಂಟಾಗಿರುವ ಸವಾಲುಗಳ ಮಧ್ಯೆಯೂ, ತೈಲ ವಹಿವಾಟು ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿದೆ ಎಂದು ರಿಲಾಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್ ಅಂಬಾನಿ ಹೇಳಿದ್ದಾರೆ.

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್:

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್:

ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2022-23ರ ಒಂದನೇ ತ್ರೈಮಾಸಿಕದಲ್ಲಿ 4,530 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ವಾರ್ಷಿಕ ಹೋಲಿಕೆಯಲ್ಲಿ ಶೇ. 23.6 ಏರಿಕೆ ಕಂಡಿದ್ದು, ಎಬಿಟಾ ಮಾರ್ಜಿನ್‌ ಶೇ. 48.7 ಆಗಿದೆ. ತ್ರೈಮಾಸಿಕದ ಎಆರ್‌ಪಿಯು ರೂ. 175.70 ಮಾಸಿಕ ಆಗಿದ್ದು, ವಾರ್ಷಿಕ ಆಧಾರದಲ್ಲಿ ಶೇ. 27 ರಷ್ಟು ಪ್ರಗತಿ ಕಂಡುಬಂದಿದೆ ಮತ್ತು ತ್ರೈಮಾಸಿಕ ಆಧಾರದಲ್ಲಿ ಇದು 4.8 ಶೇ. ಆಗಿದೆ.

ರಿಲಯನ್ಸ್ ರೀಟೇಲ್:

ರಿಲಯನ್ಸ್ ರೀಟೇಲ್:

ಇನ್ನು ರಿಲಯನ್ಸ್‌ ರಿಟೇಲ್‌ 20 ಕೋಟಿ ನೋಂದಾಯಿತ ಗ್ರಾಹಕರ ಮೈಲಿಗಲ್ಲನ್ನು ತಲುಪಿದೆ. ತ್ರೈಮಾಸಿಕದ ಕೊನೆಯಲ್ಲಿ ನೋಂದಾಯಿತ ಗ್ರಾಹಕರ ಸಂಖ್ಯೆ 208 ಮಿಲಿಯನ್‌ ಆಗಿದ್ದು, ಇದು ವಾರ್ಷಿಕ ಹೋಲಿಕೆಯಲ್ಲಿ 29% ಹೆಚ್ಚಳವಾಗಿದೆ. 2022-23 ರ ವಿತ್ತವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 38,562 ಕೋಟಿ ರೂ. ಆದಾಯವನ್ನು ಇದು ಗಳಿಸಿದೆ. ಈ ತ್ರೈಮಾಸಿಕದ ಎಬಿಟಾ ರೂ. 3,837 ಕೋಟಿ ರೂ. ಆಗಿದ್ದು, ಇದು 97.7% ಹೆಚ್ಚಳವಾಗಿದೆ. ತ್ರೈಮಾಸಿಕದ ನಿವ್ವಳ ಲಾಭವು 2,061 ಕೋಟಿ ರೂ. ಆಗಿದ್ದು, 114.2% ರಷ್ಟು ಏರಿಕೆ ಕಂಡಿದೆ.

ಹೊಂದಿದಂತಾಗಿದೆ

ತ್ರೈಮಾಸಿಕದಲ್ಲಿ ರಿಲಾಯನ್ಸ್‌ ರಿಟೇಲ್‌ 720 ಸ್ಟೋರ್‌ಗಳನ್ನು ತೆರೆದಿದ್ದು, ದೇಶದ ಎಲ್ಲ ಮೂಲೆಗಳನ್ನೂ ಒಳಗೊಂಡು 43.2 ಮಿಲಿಯನ್‌ ಚದರಡಿ ಪ್ರದೇಶದಲ್ಲಿ ಒಟ್ಟು 15,916 ಸ್ಟೋರ್‌ಗಳನ್ನು ಹೊಂದಿದಂತಾಗಿದೆ. ಅಲ್ಲದೆ, 79 ಗೋದಾಮುಗಳು ಮತ್ತು ಫುಲ್‌ಫಿಲ್‌ಮೆಂಟ್‌ ಸೆಂಟರ್‌ಗಳನ್ನು ತೆರೆದಿದ್ದು, ತನ್ನ ಪೂರೈಕೆ ಸರಣಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ರಿಲಾಯನ್ಸ್‌ ರಿಟೇಲ್‌ ಡಿಜಿಟಲ್‌ ಕಾಮರ್ಸ್‌ನ ದೈನಂದಿ ಆರ್ಡರ್‌ಗಳು ವಾರ್ಷಿಕ ಹೋಲಿಕೆಯಲ್ಲಿ 66% ಕ್ಕೆ ಏರಿಕೆ ಕಂಡಿದೆ.

ತ್ರೈಮಾಸಿಕದಲ್ಲಿ

ರಿಲಯನ್ಸ್ ರೀಟೇಲ್ ಈ ತ್ರೈಮಾಸಿಕದಲ್ಲಿ 3,822 ಕೋಟಿ ರೂ.ಗಳ EBITDA ಹಾಗೂ 2,259 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. 14,412 ಕಾರ್ಯನಿರತ ಭೌತಿಕ ಮಳಿಗೆಗಳನ್ನು ನಿರ್ವಹಿಸುತ್ತಿರುವ ರಿಲಯನ್ಸ್ ರೀಟೇಲ್‌ನ ಜಾಲಕ್ಕೆ ಈ ತ್ರೈಮಾಸಿಕದಲ್ಲಿ 837 ಹೊಸ ಮಳಿಗೆಗಳು ಸೇರಿವೆ.

ಜಿಯೋ ಟೆಲಿಕಾಂನ ಕೆಲವು ಜನಪ್ರಿಯ ಯೋಜನೆಗಳ ಲಿಸ್ಟ್‌ ಇಲ್ಲಿದೆ:

ಜಿಯೋ ಟೆಲಿಕಾಂನ ಕೆಲವು ಜನಪ್ರಿಯ ಯೋಜನೆಗಳ ಲಿಸ್ಟ್‌ ಇಲ್ಲಿದೆ:

ಜಿಯೋ 119ರೂ. ಪ್ರಿಪೇಯ್ಡ್ ಪ್ಲ್ಯಾನ್ - ಜಿಯೋ ಟೆಲಿಕಾಂನ ಈ ಪ್ರಿಪೇಯ್ಡ್‌ ಪ್ಲ್ಯಾನ್‌ 14 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 21 GB ಡೇಟಾ ಪ್ರಯೋಜನ ಸಿಗಲಿದೆ.

ಪ್ರತಿದಿನ

ಜಿಯೋ 209ರೂ. ಪ್ರಿಪೇಯ್ಡ್ ಪ್ಲ್ಯಾನ್ - ಜಿಯೋ ಟೆಲಿಕಾಂನ ಈ ಪ್ರಿಪೇಯ್ಡ್‌ ಪ್ಲ್ಯಾನ್‌ 28 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 1 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಸಿಗಲಿದೆ.

ಡೇಟಾ

ಜಿಯೋದ 239ರೂ. ಪ್ರಿಪೇಯ್ಡ್ ಪ್ಲ್ಯಾನ್ - ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ವಾಯಿಸ್‌ ಕರೆಗಳು ಅನಿಯಮಿತ ಉಚಿತವಾಗಿವೆ. ಜಿಯೋ ಆಪ್ಸ್‌ ಸೇವೆ ಲಭ್ಯ.

ನೆಟವರ್ಕ

ಜಿಯೋದ 299ರೂ. ಪ್ರೀಪೇಯ್ಡ್‌ ಪ್ಲಾನ್ - ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ ಸಹ ಲಭ್ಯ.

ಒಳಗೊಂಡಿದ್ದು

ಜಿಯೋದ 719ರೂ. ಪ್ರೀಪೇಯ್ಡ್‌ ಪ್ಲಾನ್ - ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

Best Mobiles in India

English summary
Reliance Industries: Q1 (FY 2022-23) Financial and Operational Performance of RIL.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X