ಜಿಯೋ ಸಿಮ್ ಖರೀದಿಯಲ್ಲಿ ಮೋಸ, ಗ್ರಾಹಕರೇ ಎಚ್ಚರ!

By Shwetha
|

ರಿಲಾಯನ್ಸ್ ಜಿಯೋ 4ಜಿ ಪ್ರಸ್ತುತ ಭಾರತದಲ್ಲಿ ಹೆಚ್ಚಿನ ಸದ್ದುಗದ್ದಲವನ್ನುಂಟು ಮಾಡುತ್ತಿದೆ. ಉಚಿತ ಮತ್ತು ಅನ್‌ಲಿಮಿಟೆಡ್ 4ಜಿ ಡೇಟಾ, ಕರೆಗಳು ಮತ್ತು ಸಂದೇಶಗಳನ್ನು ಆಸ್ವಾದಿಸುವ ಸುವರ್ಣವಕಾಶವನ್ನು ವೆಲ್‌ಕಮ್ ಆಫರ್ ಯೋಜನಯಡಿಯಲ್ಲಿ ಬಳಕೆದಾರರು ಆನಂದಿಸುತ್ತಿದ್ದಾರೆ. ಆದರೆ ಮೋಸದ ಜಾಡು ಇಲ್ಲೂ ಇದ್ದು ಈ ಆಫರ್ ಅನ್ನು ಇತರ ಕಂಪೆನಿಗಳು ಬೇರೆಯದೇ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ ಆ ಮೋಸಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ

ಓದಿರಿ: 10 ಜಿಬಿ ಉಚಿತ ಡೇಟಾ ಜೊತೆಗೆ ಸ್ಮಾರ್ಟ್‌ಫೋನ್ ಫ್ರಿ!!!

ರೂ 199 ಕ್ಕೆ ಜಿಯೋ ಸಿಮ್ ಮತ್ತು ಎಲ್‌ವೈಎಫ್ ಫೋನ್

ರೂ 199 ಕ್ಕೆ ಜಿಯೋ ಸಿಮ್ ಮತ್ತು ಎಲ್‌ವೈಎಫ್ ಫೋನ್

ಜಿಯೋ ಸಿಮ್‌ಗೆ ಸಂಬಂಧಿಸಿದ ಹಳೆಯ ಮೋಸದ ಬಲೆ ಇದಾಗಿದೆ. ನೀವು ರೂ 199 ಕ್ಕೆ ಎಲ್‌ವೈಎಫ್ ಫೋನ್ ಮತ್ತು ಜಿಯೋ ಸಿಮ್ ಅನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿ ಇದೆ. ಇದು ಕುತಂತ್ರವಾಗಿದ್ದು ಎಲ್‌ವೈಎಫ್ ಫೋನ್ ಬೆಲೆ ರೂ 2,999 ಆಗಿದೆ.

ನಿಮ್ಮ ಮನೆಬಾಗಿಲಿಗೆ ಸಿಮ್ ಬರುತ್ತದೆ

ನಿಮ್ಮ ಮನೆಬಾಗಿಲಿಗೆ ಸಿಮ್ ಬರುತ್ತದೆ

ಸರ್ವೀಸ್ ಪ್ರೊವೈಡರ್‌ಗಳು ಇಂತಹ ಸೇವೆಯನ್ನು ಆರಂಭಿಸುವ ಯೋಜನೆ ಇದ್ದು ಇದರಿಂದ ದೀರ್ಘ ಸಾಲಿನಲ್ಲಿ ನಿಂತುಕೊಳ್ಳುವ ಸ್ಥಿತಿ ಬರುವುದಿಲ್ಲ. ಆದರೆ ದುಡ್ಡು ಪಡೆದುಕೊಳ್ಳುವ ಯಾವುದೇ ಯೋಜನೆ ಇಲ್ಲಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಚಿತ ಜಿಯೋಫೈ ಡಿವೈಸ್

ಉಚಿತ ಜಿಯೋಫೈ ಡಿವೈಸ್

ಕೆಲವು ವಾರಗಳ ಹಿಂದೆ ಸುಳ್ಳು ವೆಬ್‌ಸೈಟ್ ಒಂದು ಈ ಬಗೆಯ ಆಫರ್ ಅನ್ನು ಒದಗಿಸುತ್ತಿದ್ದು ಜಿಯೋ ವೈಫೈ ಹಾಟ್‌ಸ್ಪಾಟ್ ಅನ್ನು ಉಚಿತವಾಗಿ ನೀಡುವ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ. ಇದು ಉಚಿತ 4ಜಿ ಸಿಮ್ ಅನ್ನು ನೀಡುತ್ತಿದೆ ಎಂಬ ಮಾಹಿತಿ ಕೂಡ ಇದೆ. ಈ ವೆಬ್‌ಸೈಟ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕೇಳಲಿದೆ. ಅಂತೆಯೇ ವಾಟ್ಸಾಪ್‌ನಲ್ಲಿ ಮಾಹಿತಿಯನ್ನು ನೀಡಿ ಕೂಪನ್ ಕೋಡ್ ಅನ್ನು ಪಡೆದುಕೊಳ್ಳಬಹುದಾಗಿದೆ

ಆನ್‌ಲೈನ್‌ನಿಂದ ಜಿಯೋ ಸಿಮ್ ಪಡೆದುಕೊಳ್ಳುವುದು

ಆನ್‌ಲೈನ್‌ನಿಂದ ಜಿಯೋ ಸಿಮ್ ಪಡೆದುಕೊಳ್ಳುವುದು

ಜಿಯೋಫೈ ಡಿವೈಸ್ ಸ್ಕ್ಯಾಮ್‌ನಂತೆಯೇ, ಇತ್ತೀಚೆಗೆ ಇನ್ನೊಂದು ಸುಳ್ಳು ವೆಬ್‌ಸೈಟ್ ತಾನು ಉಚಿತವಾಗಿ ಜಿಯೋ 4ಜಿ ಸಿಮ್ ಅನ್ನು ನೀಡುವುದಾಗಿ ಘೋಷಿಸಿದ್ದು ಇದಕ್ಕಾಗಿ ನೀವು ರೂ 199 ಅನ್ನು ಪಾವತಿ ಮಾಡಬೇಕು. ಸಿಮ್ ಪಡೆದುಕೊಳ್ಳಲು ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಕೂಡ ಇರುವುದಿಲ್ಲ.

ಇಂತಹ ಮೋಸದ ಬಲೆಯಿಂದ ದೂರವಿರಿ

ಇಂತಹ ಮೋಸದ ಬಲೆಯಿಂದ ದೂರವಿರಿ

ಇಂತಹ ಜಿಯೋ ಸಿಮ್ ಸಂಬಂಧಿತ ಮೋಸಗಳು ಬಹಳಷ್ಟಿವೆ. ಇಂತಹ ಮೋಸಗಳಿಂದ ದೂರವಿರಲು, ಅಧಿಕೃತ ಜಿಯೋ ವೆಬ್‌ಸೈಟ್ ಬಿಡುಗಡೆ ಮಾಡಿರುವ ವರದಿಗಳನ್ನು ಮಾತ್ರವೇ ನಿಜವೆಂದು ನಂಬಿ. ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸದಿರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Take a look at some of the scams that are centered around the Reliance Jio SIM and the JioFi hotpot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X