ಮಾರ್ಚ್ ಒಂದೇ ತಿಂಗಳಿನಲ್ಲಿ ಜಿಯೋ ಸೆಳೆದಿರುವ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತಾ?

|

ಭಾರತದ ಟೆಲಿಕಾಂ ಪ್ರಪಂಚವನ್ನೆ ಬದಲಾಯಿಸಿದ ಕೀರ್ತಿಗೆ ಪಾತ್ರವಾಗಿರುವ ರಿಲಾಯನ್ಸ್ ಜಿಯೋ ಕಂಪೆನಿ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿಯೂ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಮೊದಲ ಸ್ಥಾನದಲ್ಲಿದೆ. ಈ ಮಾರ್ಚ್ ತಿಂಗಳಿನಲ್ಲಿ 9.42 ಮಿಲಿಯನ್ ಗ್ರಾಹಕರು ಜಿಯೋ ಗ್ರಾಹಕರಾಗಿದ್ದಾರೆ ಎಂದು ಟ್ರಾಯ್ ಬಿಡುಗಡೆ ಮಾಡಿರುವ ರಿಪೋರ್ಟ್‌ನಲ್ಲಿ ತಿಳಿದುಬಂದಿದೆ.

ಇದೇ ವೇಳೆಯಲ್ಲಿ ಭಾರತದ ಮತ್ತೆರಡು ದಿಗ್ಗಜ ಮೊಬೈಲ್ ಸೇವಾ ಸಂಸ್ಥೆಗಳಾಗದ ಐಡಿಯಾ ಮತ್ತು ಏರ್‌ಟೆಲ್ ಕಂಪೆನಿಗಳು ಸಹ ಈ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಾರ್ಚ್ ತಿಂಗಳಿನಲ್ಲಿ ಐಡಿಯಾ ಕಂಪೆನಿಯು 9.14 ಮಿಲಿಯನ್ ಗ್ರಾಹಕರನ್ನು ಸೆಳೆದಿದ್ದರೆ, ಭಾರತಿ ಏರ್‌ಟೆಲ್ ಕಂಪೆನಿ 8.4 ಮಿಲಿಯನ್ ಗ್ರಾಹಕರನ್ನು ಸೆಳೆದು ಈ ಬಾರಿ ನಿಟ್ಟುಸಿರು ಬಿಟ್ಟಿದೆ.

ಮಾರ್ಚ್ ಒಂದೇ ತಿಂಗಳಿನಲ್ಲಿ ಜಿಯೋ ಸೆಳೆದಿರುವ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತಾ?

ಸರ್ಕಾರಿ ನಿಯಮಿತ ಟೆಲಿಕಾಂ ಬಿಎಸ್‌ಎನ್ಎಲ್ 2.4ಮಿಲಿಯನ್ ಗ್ರಾಹಕರನ್ನು ಸೆಳೆದು ಗಮನಸೆಳೆದಿದ್ದರೆ, ಮಾರ್ಚ್ ತಿಂಗಳಿನಲ್ಲಿ ಏರ್‌ಸೆಲ್ ಟೆಲಿಕಾಂ ಅತ್ಯಧಿಕ ಗ್ರಾಹಕರನ್ನು ಕಳೆದುಕೊಂಡಿರುವ ಅವಕೃಪೆಗೆ ಪಾತ್ರವಾಗಿದೆ. ಕೇವಲ ಒಂದೇ ತಿಂಗಳಿನಲ್ಲಿ ಏರ್‌ಸೆಲ್ ಟೆಲಿಕಾಂ ಕಂಪೆನಿ 4.5 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡು ಆತಂಕಕ್ಕೆ ಸಿಲುಕಿದೆ.

ಟಾಟಾ ಟೆಲಿನಾರ್ ಮತ್ತು ಟಾಟಾ ಟೆಲಿಸರ್ವಿಸ್ ಕಂಪೆನಿಗಳು ಸಹ ಗ್ರಾಹಕ ನಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಟೆಲಿನಾರ್ ಮತ್ತು ಟಾಟಾ ಟೆಲಿಸರ್ವಿಸ್ ಕಂಪೆನಿಗಳು ಕ್ರಮವಾಗಿ 2 ಮತ್ತು 1.3 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿವೆ. ಸೇವೆಯನ್ನು ಸ್ಥಗಿತಗೊಳಿಸಿದ ಆರ್‌.ಕಾಮ್ ಟೆಲಿಕಾಂ ಈಗಲೂ 1.85 ಲಕ್ಷ ಗ್ರಾಹಕರನ್ನು ಹೊಂದಿರುವುದು ಆಶ್ಚರ್ಯ ಮೂಡಿಸಿದೆ.

ಮಾರ್ಚ್ ಒಂದೇ ತಿಂಗಳಿನಲ್ಲಿ ಜಿಯೋ ಸೆಳೆದಿರುವ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತಾ?

ಇನ್ನು ಒಟ್ಟಾರೆಯಾಗಿ ಸುನೀಲ್ ಮಿತ್ತಲ್ ನೇತೃತ್ವದ ಏರ್‌ಟೆಲ್ ಟೆಲಿಕಾಂ ಒಟ್ಟಾರೆ 304.19 ಮಿಲಿಯನ್ ಚಂದಾದಾರರನ್ನು ಹೊಂದುವ ಮೂಲಕ ಭಾರತದ ಟೆಲಿಕಾಂ ಅನ್ನು ಮುನ್ನೆಡೆಸುತ್ತಿದೆ. ವೊಡಾಫೋನ್ 222.69 ಮಿಲಿಯನ್ ಮತ್ತು ಐಡಿಯಾ 211.2 ಮಿಲಿಯನ್ ಗ್ರಾಹಕರನ್ನು ಹೊಂದುವ ಮೂಲಕ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.

Oneplus 6 First Impressions - Gizbot Kannada

ಓದಿರಿ: ಮೊಬೈಲ್ ಬ್ಯಾಟರಿ ಸುರಕ್ಷತೆಗಾಗಿ ನೀವು ತಿಳಿಯಲೇಬೇಕಾದ 8 ವಿಷಯಗಳಿವು!!

Best Mobiles in India

English summary
Reliance Jio adds maximum 9.42 million users in March; Idea and Airtel follow. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X