ಜಿಯೋವನ್ನು ಹಿಡಿಯುವವರು ಇಲ್ಲವೇ ಇಲ್ಲ..! ಒಂದೇ ತಿಂಗಳಲ್ಲಿ ಕೋಟಿ ಗ್ರಾಹಕರು..!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದ ವಿಜಯದ ಓಟ ಮುಂದುವರೆದಿದ್ದು, ತಡೆಯುವವರು ಇಲ್ಲದಂತಾಗಿದೆ. 2016ರಿಂದ ಇಲ್ಲಿಯವರೆಗೂ ಜಿಯೋ ತನ್ನದೇ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಟ್ರಾಯ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಯೋ ಇತಿಹಾಸದ ಸಾಧನೆ ಮಾಡಿದ್ದು, ಟೆಲಿಕಾಂ ಲೋಕವನ್ನೇ ಅಚ್ಚರಿಗೊಳಿಸಿದೆ.

ಜಿಯೋವನ್ನು ಹಿಡಿಯುವವರು ಇಲ್ಲವೇ ಇಲ್ಲ..! ಒಂದೇ ತಿಂಗಳಲ್ಲಿ ಕೋಟಿ ಗ್ರಾಹಕರು..!

ಹೌದು, ಭಾರತೀಯ ದೂರ ಸಂಪರ್ಕ ಪ್ರಾಧಿಕಾರ ಬಿಡುಗಡೆ ಮಾಡಿರುವ ಜುಲೈ ದತ್ತಾಂಶಗಳನ್ನು ಗಮನಿಸಿದರೆ ಜಿಯೋ ಸಾಧನೆ ಕಡಿಮೆ ಎನಿಸುವುದಿಲ್ಲ. ಕೇವಲ ಜುಲೈ ತಿಂಗಳಲ್ಲಿ ಒಂದರಲ್ಲೇ 1.17 ಕೋಟಿ ಗ್ರಾಹಕರನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದ್ದು, ಬೇರೆ ಟೆಲಿಕಾಂ ಆಪರೇಟರ್‌ಗಳನ್ನು ಧೂಳಿಪಟ ಮಾಡಿದ್ದು, ದಾಖಲೆಯನ್ನು ನಿರ್ಮಿಸಿದೆ.

10 ಪಟ್ಟು ಹೆಚ್ಚು

10 ಪಟ್ಟು ಹೆಚ್ಚು

ಜುಲೈನಲ್ಲಿ ಜಿಯೋ ಸೇರಿರುವ ಗ್ರಾಹಕರ ಸಂಖ್ಯೆ 1.17 ಕೋಟಿ ಆಗಿದ್ದರೆ, ಉಳಿದ ನೆಟ್‌ವರ್ಕ್‌ಗಳಾದ ಏರ್‌ಟೆಲ್‌, ವೊಡಾಫೋನ್‌, ಬಿಎಸ್‌ಎನ್‌ಎಲ್‌, ಐಡಿಯಾ ಟೆಲಿಕಾಂ ಆಪರೇಟರ್‌ಗಳೆಲ್ಲ ಒಟ್ಟಾಗಿ ಸೇರಿದರೆ ಹೊಸ ಗ್ರಾಹಕರ ಸಂಖ್ಯೆ ಕೇವಲ 11.53 ಲಕ್ಷ ಎಂದರೇ ನಂಬಲೇಬೇಕು. ಜಿಯೋ ದಿಗ್ವಿಜಯದ ಪ್ರಮಾಣ 10 ಪಟ್ಟು ಹೆಚ್ಚಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

41st Reliance AGM: WhatsApp for JioPhone, JioPhone 2, and Jio Giga Fiber
24 ಲಕ್ಷ ಗ್ರಾಹಕರು ಜಿಯೋಗೆ

24 ಲಕ್ಷ ಗ್ರಾಹಕರು ಜಿಯೋಗೆ

ಜಿಯೋ ಜುಲೈನಲ್ಲಿ ಟ್ರಾಯ್‌ ವರದಿ ಪ್ರಕಾರ 1.17 ಕೋಟಿ ಹೊಸ ಗ್ರಾಹಕರನ್ನು ಹೊಂದಿದೆ. ಆದರೆ, ಆ 1.17 ಕೋಟಿ ಗ್ರಾಹಕರಲ್ಲಿ ಟಾಟಾ ಟೆಲಿಸರ್ವಿಸಸ್, ರಿಲಾಯನ್ಸ್‌ ಕಮ್ಯುನಿಕೇಷನ್ಸ್‌ ಮತ್ತು MTNL ಟೆಲಿಕಾಂ ನೆಟ್‌ವರ್ಕ್‌ಗಳಿಂದ ಒಟ್ಟು 24 ಲಕ್ಷ ಗ್ರಾಹಕರು ಜಿಯೋಗೆ ಗ್ರಾಹಕರಾಗಿದ್ದು, ಈ ನೆಟ್‌ವರ್ಕ್‌ಗಳು ಹೀನಾಯ ಸ್ಥಿತಿಗೆ ತಲುಪಿವೆ.

ಏರ್‌ಟೆಲ್‌ ಕೂಡ ಮಣ್ಣು ಮುಕ್ಕಿದೆ

ಏರ್‌ಟೆಲ್‌ ಕೂಡ ಮಣ್ಣು ಮುಕ್ಕಿದೆ

ಟ್ರಾಯ್‌ ಬಿಡುಗಡೆ ಮಾಡಿರುವ ಜುಲೈ ವರದಿಯನ್ನು ಗಮನಿಸಿದರೆ, ಭಾರ್ತಿ ಏರ್‌ಟೆಲ್‌ ಕೂಡ ಮಣ್ಣು ಮುಕ್ಕಿದೆ. ಏರ್‌ಟೆಲ್‌ ಕೇವಲ 3.12 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದ್ದು, ವೊಡಾಫೋನ್‌ ಸಾಧನೆ ಏರ್‌ಟೆಲ್‌ಗಿಂತಲೂ ಉತ್ತಮವಾಗಿದೆ. ಜುಲೈನಲ್ಲಿ ವೊಡಾಫೋನ್‌ ಒಟ್ಟು 6 ಲಕ್ಷ ಹೊಸ ಗ್ರಾಹಕರನ್ನು ಸೇರಿಸಕೊಂಡಿದೆ. ಇನ್ನು ಬಿಎಸ್‌ಎನ್‌ಎಲ್‌ ಮತ್ತು ಐಡಿಯಾ ಸೆಲ್ಯುಲರ್‌ ಕಂಪನಿಗಳು ಕ್ರಮವಾಗಿ 2.25 ಲಕ್ಷ ಹಾಗೂ 5,489 ಗ್ರಾಹಕರನ್ನು ಜುಲೈನಲ್ಲಿ ಸೆಳೆದಿವೆ.

ಟೆಲಿಕಾಂನಲ್ಲಿ ಟಾಟಾ ಯುಗಾಂತ್ಯ..?

ಟೆಲಿಕಾಂನಲ್ಲಿ ಟಾಟಾ ಯುಗಾಂತ್ಯ..?

ಜುಲೈ ವರದಿಯನ್ನು ಗಮನಿಸಿದರೆ ಟಾಟಾ ಟೆಲಿಸರ್ವಿಸಸ್ ಭಾರೀ ತಳವನ್ನು ಕಂಡಿದೆ. ಹೌದು, ಜುಲೈ ತಿಂಗಳು ಒಂದರಲ್ಲಿಯೇ ಟಾಟಾ ನೆಟ್‌ವರ್ಕ್‌ 23.57 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಈ ಇಳಿಕೆಯ ಪ್ರಮಾಣ ಟೆಲಿಕಾಂ ಲೋಕದಲ್ಲಿ ಟಾಟಾ ಯುಗಾಂತ್ಯದ ಸೂಚನೆಯನ್ನು ರವಾನಿಸುತ್ತಿದೆ. ಇದರಂತೆ ರಿಲಾಯನ್ಸ್‌ ಕಮ್ಯುನಿಕೇಷನ್‌ ಹಾಗೂ MTNL ಕ್ರಮವಾಗಿ 31,814 ಮತ್ತು 9,914 ಗ್ರಾಹಕರನ್ನು ಕಳೆದುಕೊಂಡಿವೆ.

ಫಿಕ್ಸೆಡ್‌ ಲೈನ್‌ ಸಿಗ್ಮೆಂಟ್‌ನಲ್ಲಿ ಇಳಿಕೆ

ಫಿಕ್ಸೆಡ್‌ ಲೈನ್‌ ಸಿಗ್ಮೆಂಟ್‌ನಲ್ಲಿ ಇಳಿಕೆ

ಟ್ರಾಯ್‌ ವರದಿಯಂತೆ ಫಿಕ್ಸೆಡ್‌ ಲೈನ್‌ ಸಿಗ್ಮೆಂಟ್‌ ಸಂಪರ್ಕದಲ್ಲಿ ಇಳಿಕೆ ಕಂಡಿದೆ. ಜೂನ್‌ಗೆ ಹೋಲಿಸಿಕೊಂಡರೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೂನ್‌ನಲ್ಲಿ ಈ ಸಂಪರ್ಕ ಪ್ರಮಾಣ 2.24 ಕೋಟಿ ಇತ್ತು. ಆದರೆ, ಜುಲೈನಲ್ಲಿ 2.22 ಕೋಟಿಯಾಗಿದೆ. ಈ ಇಳಿಕೆಗೆ ನಿಖರ ಕಾರಣ ತಿಳಿದಿಲ್ಲ.

ಬ್ರಾಡ್‌ಬ್ಯಾಂಡ್‌ನಲ್ಲಿ ಹೆಚ್ಚಳ

ಬ್ರಾಡ್‌ಬ್ಯಾಂಡ್‌ನಲ್ಲಿ ಹೆಚ್ಚಳ

ಫಿಕ್ಸೆಡ್‌ ಲೈನ್‌ ಸಿಗ್ಮೆಂಟ್‌ ಸಂಪರ್ಕದಲ್ಲಿ ಇಳಿಕೆ ಕಂಡರೂ ಬ್ರಾಡ್‌ಬ್ಯಾಂಡ್‌ ಸಂಪರ್ಕದಲ್ಲಿ ಏರಿಕೆ ಕಂಡಿದೆ. ಜೂನ್‌ನಲ್ಲಿ 44.7 ಕೋಟಿ ಒಟ್ಟು ಬ್ರಾಡ್‌ಬ್ಯಾಂಡ್‌ ಗ್ರಾಹಕರ ಸಂಖ್ಯೆ ಜುಲೈನಲ್ಲಿ 46 ಕೋಟಿ ತಲುಪಿದೆ. ಜುಲೈ 2018ರ ಅಂತ್ಯಕ್ಕೆ ಟಾಪ್‌ 5 ಟೆಲಿಕಾಂ ಆಪರೇಟರ್‌ಗಳು ಬ್ರಾಡ್‌ಬ್ಯಾಂಡ್‌ ಕ್ಷೇತ್ರದಲ್ಲಿ ಶೇ. 97.75 ಮಾರುಕಟ್ಟೆ ಮೌಲ್ಯ ಹೊಂದಿವೆ.

ಬ್ರಾಡ್‌ಬ್ಯಾಂಡ್‌ನಲ್ಲೂ ಜಿಯೋ ಮುಂದೆ

ಬ್ರಾಡ್‌ಬ್ಯಾಂಡ್‌ನಲ್ಲೂ ಜಿಯೋ ಮುಂದೆ

ಜುಲೈ ಅಂತ್ಯಕ್ಕೆ ಬ್ರಾಡ್‌ಬ್ಯಾಂಡ್‌ ಗ್ರಾಹಕರ ಸಂಖ್ಯೆಯಲ್ಲಿ ಜಿಯೋ ಮುಂದಿದೆ. ರಿಲಾಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ 22.7 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ಭಾರ್ತಿ ಏರ್‌ಟೆಲ್‌ 9.53 ಕೋಟಿ, ವೊಡಾಫೋನ್ 6.37 ಕೋಟಿ, ಐಡಿಯಾ ಸೆಲ್ಯುಲರ್ 4.35 ಕೋಟಿ ಮತ್ತು ಬಿಎಸ್‌ಎನ್‌ಎಲ್‌ 2 ಕೋಟಿ ಬ್ರಾಡ್‌ಬ್ಯಾಂಡ್‌ ಗ್ರಾಹಕರನ್ನು ಹೊಂದಿದೆ.

ಒಟ್ಟಾರೆ ಟೆಲಿಕಾಂ ಸಾಂದ್ರತೆಯಲ್ಲೂ ಏರಿಕೆ

ಒಟ್ಟಾರೆ ಟೆಲಿಕಾಂ ಸಾಂದ್ರತೆಯಲ್ಲೂ ಏರಿಕೆ

ಟ್ರಾಯ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಷ್ಟ್ರದ ಒಟ್ಟಾರೆ ಟೆಲಿಕಾಂ ಸಾಂದ್ರತೆಯಲ್ಲೂ ಹೆಚ್ಚಳ ಕಂಡಿದೆ. ಜೂನ್‌ನಲ್ಲಿ ಶೇ. 89.72 ಇದ್ದ ಒಟ್ಟಾರೆ ಟೆಲಿಕಾಂ ಸಾಂದ್ರತೆ ಜುಲೈನಲ್ಲಿ ಶೇ.90.44ಕ್ಕೆ ಏರಿಕೆ ಕಂಡಿದೆ.

Best Mobiles in India

English summary
Reliance Jio adds over 1 crore new subscribers in July; 10 times more than rivals: Report. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X