ಜಿಯೋ ನೀಡಿದ ಏಟಿಗೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಗಾಲು!

|

ಕಳೆದ ಎರಡು ವರ್ಷಗಳಿಂದಲೂ ಭಾರತದ ಟೆಲಿಕಾಂನಲ್ಲಿ ಭರ್ಜರಿ ಆಫರ್‌ಗಳ ಮೂಲಕ ಗಮನಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ 2019 ರಲ್ಲೂ ಭಾರೀ ಜನಪ್ರಿಯತೆಯತ್ತ ಸಾಗಿದೆ. ಕಳೆದ ವರ್ಷ 28 ಕೋಟಿ ಗ್ರಾಹಕರನ್ನು ಹೊಂದಿದ್ದ ರಿಲಯನ್ಸ್ ಜಿಯೋ ಕಳೆದ ಜನವರಿ ತಿಂಗಳೊಂದರಲ್ಲಿಯೇ 93 ಲಕ್ಷ ಮೊಬೈಲ್ ಗ್ರಾಹಕರನ್ನು ಸಂಪಾದಿಸಿದ್ದು, ಉಳಿದ ಟೆಲಿಕಾಂ ಕಂಪೆನಿಗಳಿಗಿಂತ ಭಾರೀ ಮುಂದಿರುವುದನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಂಕಿಅಂಶಗಳು ತಿಳಿಸಿವೆ.

ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿದರೆ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಉಳಿದ ಟೆಲಿಕಾಂ ಕಂಪೆನಿಗಳಿಗಿಂತ ದೇಶದಲ್ಲಿ ಮುಂದಿದ್ದು, ಕಳೆದ ಜನವರಿ ತಿಂಗಳೊಂದರಲ್ಲಿಯೇ ರಿಲಯನ್ಸ್ ಜಿಯೋ 93 ಲಕ್ಷ ಮೊಬೈಲ್ ಗ್ರಾಹಕರನ್ನು ಸಂಪಾದಿಸಿದೆ. ಜಿಯೋ ಸಮೀಪ ಸ್ಪರ್ಧಿ ಭಾರ್ತಿ ಏರ್‌ಟೆಲ್ ಕೇವಲ ಒಂದು ಲಕ್ಷ ಹೊಸ ಗ್ರಾಹಕರನ್ನು ಗಳಿಸಿಕೊಂಡಿದ್ದರೆ, ಆಶ್ಚರ್ಯವಾಗಿ ದೇಶದ ಅತಿದೊಡ್ಡ ಟೆಲಿಕಾಂ ಪೂರೈಕೆಯಾದ ವೊಡಾಫೋನ್ ಐಡಿಯಾ 35.8 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.

ಜಿಯೋ ನೀಡಿದ ಏಟಿಗೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಗಾಲು!

ದೇಶದಲ್ಲಿ ಸದ್ಯ ಒಟ್ಟು 29 ಕೋಟಿ ಜಿಯೊ ಗ್ರಾಹಕರಿದ್ದು ಜನವರಿ ಕೊನೆ ವೇಳೆಗೆ ಶೇಕಡಾ 25ರಷ್ಟು ಮಾರುಕಟ್ಟೆ ಷೇರನ್ನು ಹೊಂದಿದೆ. ಇದೇ ವೇಳೆಯಲ್ಲಿ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದು ಇವುಗಳ ಮಾರುಕಟ್ಟೆ ಷೇರು ಶೇಕಡಾ 35.12 ಮತ್ತು 28.80ಯಷ್ಟಿರುವುದನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಂಕಿಅಂಶಗಳ ಮೂಲಕ ತಿಳಿದುಬಂದಿದೆ. ಇನ್ನು ಬ್ರಾಂಡ್ ಬಾಂಡ್ ಸೇವೆಯಲ್ಲಿಯೂ ಸಹ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ.

ಕಳೆದ ಡಿಸೆಂಬರ್ ನಿಂದ ಜನವರಿ ವೇಳೆಗೆ ದೇಶದಲ್ಲಿ ಬ್ರಾಡ್ ಬಾಂಡ್ ಗಳ ಸೇವೆ 51.8 ಕೋಟಿಯಿಂದ 54 ಕೋಟಿಗೆ ಏರಿಕೆಯಾಗಿದ್ದು, ಮೊಬೈಲ್ ಸಾಧನ ಆಧಾರಿತ ಬ್ರಾಡ್ ಬಾಂಡ್ ಗಳ ಸಂಪರ್ಕ 52.1 ಕೋಟಿ ಗ್ರಾಹಕರೊಂದಿಗೆ ಶೇಕಡಾ 96ರಷ್ಟು ಹೆಚ್ಚಿಗೆಯಾಗಿದೆ. ಇನ್ನು ವೈರ್ ಲೆಸ್ ಸಂಪರ್ಕ 1.82 ಕೋಟಿ ಗ್ರಾಹಕರನ್ನು ತಲುಪಿದೆ.28.94 ಕೋಟಿ ಬ್ರಾಡ್ ಬ್ಯಾಂಡ್ ಗ್ರಾಹಕರೊಂದಿಗೆ ಜಿಯೊ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವುದನ್ನು ಟ್ರಾಯ್ ಅಂಕಿ ಅಂಶಗಳಲ್ಲಿ ನೋಡಬಹುದಾಗಿದೆ.

ಜಿಯೋ ನೀಡಿದ ಏಟಿಗೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಗಾಲು!

ಬ್ರಾಡ್ ಬಾಂಡ್ ಸೇವೆಗಳಲ್ಲಿ ಭಾರ್ತಿ ಏರ್‌ಟೆಲ್ 11 ಕೋಟಿ ಗ್ರಾಹಕರು, ವೊಡಾಫೋನ್ ಐಡಿಯಾ 10.98 ಕೋಟಿ, ಬಿಎಸ್ಎನ್ಎಲ್ 2 ಕೋಟಿ ಮತ್ತು ಟಾಟಾ ಟೆಲಿ ಸರ್ವಿಸ್ ಗ್ರೂಪ್ 22.6 ಲಕ್ಷ ಬ್ರಾಡ್ ಬಾಂಡ್ ಸಂಪರ್ಕವನ್ನು ಹೊಂದಿವೆ. 2019ರ ಆರಂಭದಲ್ಲಿ ದೇಶದ ಅತಿದೊಡ್ಡ ಟೆಲಿಕಾಂ ಪೂರೈಕೆಯಾದ ವೊಡಾಫೋನ್ ಐಡಿಯಾ 35.8 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿರುವುದು ಜಿಯೋ ಜನಪ್ರಿಯತೆ ಮತ್ತಷ್ಟು ಹೆಚ್ಚಿರುವುದನ್ನು ಹೇಳುತ್ತಿದೆ.

Best Mobiles in India

English summary
Reliance Jio adds over 93 lakh new customers in January. When it comes to addingsubscription base, Mukesh Ambani-led Reliance Jio. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X