Subscribe to Gizbot

ಎಲ್ಲೆಡೆ ಜಿಯೋ ನೆಟ್‌ವರ್ಕ್ ಸಿಗಲು ಒಂದೇ ಮೆಟ್ಟಿಲು!..ಆದರೆ, ಏರ್‌ಟೆಲ್ ಅಡ್ಡಗಾಲು?!

Written By:

ಭಾರಿ ನಷ್ಟದಿಂದ ದಿವಾಳಿಯ ಹಂತಕ್ಕೆ ಬಂದಿ ನಿಂತಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್ ಒಡೆತನದ ಬಹುತೇಕ ಆಸ್ತಿ ಜಿಯೋ ಪಾಲಾಗಿದೆ.! ಇನ್ನೇನು ರಿಲಯನ್ಸ್ ಕಮ್ಯೂನಿಕೇಷನ್ ಪೂರ್ತಿ ಜಿಯೋ ತೆಕ್ಕೆಗೆ ಬೀಳಲಿದೆ ಎನ್ನುವಷ್ಟರಲ್ಲಿ ಏರ್‌ಟೆಲ್ ಮತ್ತು ಜಿಯೋ ನಡುವೆ ಮತ್ತೊಂದು ಯುದ್ದ ಆರಂಭವಾಗಿದೆ.!!

ಹೌದು, ರಿಲಯನ್ಸ್ ಕಮ್ಯೂನಿಕೇಷನ್ ಒಡೆತನದ ಬಹುತೇಕ ಆಸ್ತಿ ಜಿಯೋ ಪಾಲಾದ ನಂತರ ಇದೀಗ ಏರ್‌ಟೆಲ್ ಉಳಿದಿರುವ ಆಸ್ತಿಯನ್ನು ಖರೀದಿಸಲು ಪೈಪೋಟಿಗೆ ನಿಂತಿದೆ.! ಆರ್‌ಕಾಂ ಬಳಿಯಿರುವ 850Mhz ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಖರೀದಿಸಲು ಇದೀಗ ಏರ್‌ಟೆಲ್‌ಗೆ ಹಾತೊರೆಯುತ್ತಿದೆ.!! ಹಾಗಾದರೆ, ಏನಿದು 850Mhz ಬ್ಯಾಂಡ್ ಸ್ಪೆಕ್ಟ್ರಮ್? ಜಿಯೋ ಮತ್ತು ಏರ್‌ಟೆಲ್‌ಗೆ ಪೈಪೋಟಿ ಏಕೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
850Mhz ಬ್ಯಾಂಡ್ ಸ್ಪೆಕ್ಟ್ರಮ್!!

850Mhz ಬ್ಯಾಂಡ್ ಸ್ಪೆಕ್ಟ್ರಮ್!!

ಆರ್‌ಕಾಂ ಬಳಿ ಈಗ ಉಳಿದಿರುವ ಏಕೈಕ ಆಸ್ತಿ ಎಂದರೆ 850Mhz ಬ್ಯಾಂಡ್ ಸ್ಪೆಕ್ಟ್ರಮ್! ರಿಲಯನ್ಸ್ ಕಮ್ಯೂನಿಕೇಷನ್ ಒಡೆತನದ ಬಹುತೇಕ ಆಸ್ತಿ ಜಿಯೋ ಪಾಲಾಗಿದ್ದರೂ ಈ 850Mhz ಬ್ಯಾಂಡ್ ಸ್ಪೆಕ್ಟ್ರಮ್ ಮಾತ್ರ ಜಿಯೋ ಕೈಸೇರಿಲ್ಲ.!! ಹಾಗಾಗಿ, 850Mhz ಬ್ಯಾಂಡ್ ಸ್ಪೆಕ್ಟ್ರಮ್ ಖರೀದಿಸಲು ಇದೀಗ ಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ನಿಂತಿವೆ.!!

ಸ್ಪೆಕ್ಟ್ರಮ್ ಖರೀದಿಸಲು ಪೈಪೋಟಿ ಏಕೆ?

ಸ್ಪೆಕ್ಟ್ರಮ್ ಖರೀದಿಸಲು ಪೈಪೋಟಿ ಏಕೆ?

850Mhz ಬ್ಯಾಂಡ್ ಸ್ಪೆಕ್ಟ್ರಮ್ 4ಜಿ ಸೇವೆಗಳಿಗೆ ಸೂಕ್ತವಾದ ಬ್ಯಾಂಡ್ ಎಂದು ಪರಿಗಣಿಸಲಾಗಿದೆ.! ಈ ಸೇವೆ 22 ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯವಿದ್ದು, 4G ನೆಟ್‌ವರ್ಕ್ ವಿಸ್ತರಣೆಗೆ ಉಪಯುಕ್ತವಾಗಿದೆ. ಹಾಗಾಗಿ, 850Mhz ಬ್ಯಾಂಡ್ ಸ್ಪೆಕ್ಟ್ರಮ್ ಖರೀದಿಸಲು ಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ಬಿದ್ದಿದ್ದು, ಈ ಸ್ಪೆಕ್ಟರಮ್ ಖರೀದಿಸಿದವರ 4G ನೆಟ್‌ವರ್ಕ್ ವಿಸ್ತಾರವಾಗಲಿದೆ.!!

850Mhz ಬ್ಯಾಂಡ್ ಸ್ಪೆಕ್ಟ್ರಮ್ ಬೆಲೆ ಎಷ್ಟು?

850Mhz ಬ್ಯಾಂಡ್ ಸ್ಪೆಕ್ಟ್ರಮ್ ಬೆಲೆ ಎಷ್ಟು?

ಆರ್‌ಕಾಂ ಮಾರಾಟ ಮಾಡದೆ ಉಳಿಸಿಕೊಂಡಿರುವ , 850Mhz ಬ್ಯಾಂಡ್ ಸ್ಪೆಕ್ಟ್ರಮ್ ಸುಮಾರು 3,500-4,000 ಕೋಟಿ ರೂಪಾಯಿಗಳಿಗೆ ಬೆಲೆಯಿದೆ ಎಂದು ಉದ್ಯಮದ ವಿಶ್ಲೇಷಕರು ತಿಳಿಸಿದ್ದಾರೆ. ಪ್ರಗಸ್ತುತ ಉಳಿದಿರುವ ದೊಡ್ಡ ಆಸ್ತಿ ಇದಾಗಿರುವುದರಿಂದ ಆರ್‌ಕಾಂ ಹೆಚ್ಚು ಲಾಭದ ನಿರೀಕ್ಷೆಯಲ್ಲಿದೆ.!!

ಜಿಯೋಗೆ ಹೆಚ್ಚು ಅವಶ್ಯಕತೆ!!

ಜಿಯೋಗೆ ಹೆಚ್ಚು ಅವಶ್ಯಕತೆ!!

ಜಿಯೋಗೆ ಏರ್‌ಟೆಲ್ ಮತ್ತು ಇತರೆ ಟೆಲಿಕಾಂಗಳ ಜೊತೆ ಸ್ಪರ್ಧಿಸಲು 850Mhz ಬ್ಯಾಂಡ್ ಸ್ಪೆಕ್ಟ್ರಮ್ ಅವಶ್ಯಕತೆ ಹೆಚ್ಚಿದೆ. ಏರ್‌ಟೆಲ್‌ಲ್ ಮತ್ತು ಐಡಿಯಾ-ವೊಡಾಫೋನ್ ಸಂಯೋಜಿತ ಘಟಕದೊಂದಿಗೆ ಸ್ಪರ್ಧಿಸಲು ಜಿಯೋಗೆ ಈ 50Mhz ಬ್ಯಾಂಡ್ ಸ್ಪೆಕ್ಟ್ರಮ್ ಖರೀದಿಸಲುವ ಅನಿವಾರ್ಯತೆ ಕೂಡ ಇದೆ.!!

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಏರ್‌ಟೆಲ್ ಅಡ್ಡಗಾಲು?

ಏರ್‌ಟೆಲ್ ಅಡ್ಡಗಾಲು?

ಜಿಯೋ ಈಗಾಗಲೇ ಆರ್‌ಕಾಂನ 122.4Mhz 4ಜಿ ಸ್ಪೆಕ್ಟ್ರಂ, 43,000 ಟವರ್, 178,000 ಕಿ.ಮಿ ಇಂಡಿಯಾ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಎಲ್ಲವನ್ನು ಸ್ವಾಧೀನಪಡಿಸಿಕೊಂಡಿದೆ.! ಆದರೆ, ಉಳಿದಿರುವ 850Mhz ಬ್ಯಾಂಡ್ ಸ್ಪೆಕ್ಟ್ರಮ್ ಖರೀದಿಗೆ ಏರ್‌ಟೆಲ್ ಕೂಡ ಮುಂದೆ ಬಂದಿದೆ. ಹಾಗಾಗಿ, ಇದನ್ನು ವ್ಯವಹಾರದ ಪೈಪೋಟಿ ಎನ್ನಬಹುದೊ ಅಥವಾ ಜಿಯೋಗೆ ಏರ್‌ಟೆಲ್ ಅಡ್ಡಗಾಲು ಎನ್ನಬಹುದೊ ಎಂದು ವಿಶ್ಲೇಶಕರು ಚಿಂತೆಯಲ್ಲಿದ್ದಾರೆ.!!

ಓದಿರಿ:ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಕೇಳಿದ ಟಾಪ್ 10 ಪ್ರಶ್ನೆಗಳು ಯಾವುವು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Bharti Airtel, however, is also eyeing RCom’s spectrum in the 850-Mhz band, which is considered suitable band for 4G services. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot