Subscribe to Gizbot

ಜಿಯೋದಿಂದ ಮತ್ತೊಂದು ಹೊಸತನ: ಸಂಖ್ಯೆ 6ರ ಸರಣಿಯ ಮೊಬೈಲ್ ನಂಬರ್‌ಗಳು

Written By:

ದಿನೇ ದಿನೇ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನಲೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸ ಸರಣಿಯ ಮೊಬೈಲ್ ಸಂಖ್ಯೆಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಹೊಸ ಸರಣಿಯ ಮೊಬೈಲ್ ನಂಬರ್‌ಗಳನ್ನು ನೀಡಯವಂತೆ ಟೆಲಿಕಾಂ ಸಚಿವಾಲಯಕ್ಕೆ ಮನವಿ ಮಾಡಿದೆ.

ಜಿಯೋದಿಂದ ಮತ್ತೊಂದು ಹೊಸತನ: ಸಂಖ್ಯೆ 6ರ ಸರಣಿಯ ಮೊಬೈಲ್ ನಂಬರ್‌ಗಳು

ಓದಿರಿ: ಫೆಬ್ರವರಿ 26ಕ್ಕೆ ನೋಕಿಯಾದ ಮತ್ತೊಂದು ಸ್ಮಾರ್ಟ್‌ಪೋನ್‌ ಲಾಂಚ್‌

ಈ ಹಿನ್ನಲೆಯಲ್ಲಿ ಡಿಪರ್ಟ್‌ಮೆಂಟ್ ಆಫ್‌ ಟೆಲಿಕಾಮ್ (DoT) ಸಂಖ್ಯೆ 6ರ ಸರಣಿಯ ಮೊಬೈಲ್ ನಂಬರ್‌ಗಳನ್ನು ಜಿಯೋಗೆ ನೀಡಲು ಮುಂದಾಗಿದೆ. ಈ ಮೂಲಕ ಜಿಯೋ ದೇಶದಲ್ಲಿ ಮೊದಲ ಬಾರಿಗೆ ಸಂಖ್ಯೆ 6ರ ಸರಣಿಯ ಮೊಬೈಲ್‌ ನಂಬರ್ ಗಳನ್ನು ಪಡೆದ ಟೆಲಿಕಾಂ ಕಂಪನಿಯಾಗಲಿದೆ.

ಈಗಾಗಲೇ ಅಸ್ಸಾಂ, ರಾಜಸ್ಥಾನ ಮತ್ತು ತಮಿಳುನಾಡು ಬಳಕೆದಾರಿಗೆ ಹೊಸ ಸರಣಿಯ ಮೊಬೈಲ್ ನಂಬರ್‌ಗಳು ದೊರೆಯಲಿದೆ. ರಾಜಸ್ಥಾನದಲ್ಲಿ 60010-60019 ಸರಣಿಯ ನಂಬರ್‌ಗಳು, ಅಸ್ಸಾಂ ನಲ್ಲಿ 60020-60029 ಸರಣಿಯ ನಂಬರ್‌ಗಳು, 60030-60039 ಸರಣಿಯ ನಂಬರ್‌ಗಳು ತಮಿಳುನಾಡಿನಲ್ಲಿ ದೊರೆಯಲಿದೆ.

ಜಿಯೋದಿಂದ ಮತ್ತೊಂದು ಹೊಸತನ: ಸಂಖ್ಯೆ 6ರ ಸರಣಿಯ ಮೊಬೈಲ್ ನಂಬರ್‌ಗಳು

ಓದಿರಿ: ಏಪ್ರೀಲ್‌ನಲ್ಲಿ ಜಿಯೋ ಡಿಟಿಹೆಚ್ ಲಾಂಚ್: ಮೊದಲ ಮೂರು ತಿಂಗಳೂ ಉಚಿತ, ನಂತರ ಕೇವಲ 99 ರೂ.ಮಾತ್ರ...!

ಈಗಾಗಲೇ ಭಾರತೀಯ ಟೆಲಿಕಾಮ್ ವಲಯದಲ್ಲಿ ಈಗಾಗಲೇ ಸಂಖ್ಯೆ 9, 8, ಮತ್ತು 7 ಸರಣಿಯ ಪೋನ್‌ ನಂಬರ್‌ಗಳು ಚಾಲ್ತಿಯಲ್ಲಿದ್ದು, ಇದಕ್ಕೆ ಸಂಖ್ಯೆ 6 ಸರಣಿ ಹೊಸದಾಗಿ ಸೇರಿಕೊಳ್ಳಲಿದೆ.

ಈಗಾಗಲೇ 9, 8, ಮತ್ತು 7 ಸರಣಿಯ ಪೋನ್‌ ನಂಬರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದಕ್ಕಾಗಿ ಹೊಸ ಸರಣಿಯ ನಂಬರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇಗಾಗಲೇ 20.02 ಮಿಲಿಯನ್ ಬಳಕೆದಾರರಿದ್ದು, 2016ರ ನವೆಂಬರ್‌ ನಂತರದಲ್ಲಿ 1.12 ಬಿಲಿಯನ್ ಬಳಕೆದಾರಾರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

Read more about:
English summary
In a new development, Reliance Jio has reportedly acquired permission to allot mobile numbers that start with the the numeral 6. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot