ದೀಪಾವಳಿ ಧಮಾಕ!..ಮತ್ತೆ ಹೊಸ 8 ಆಫರ್ಸ್ ಘೋಷಿಸಿದ ಜಿಯೋ!!

|

ಜಿಯೋ ಫೈಬರ್‌ ನಂತರ ಯಾವುದೇ ಹೊಸ ಆಫರ್‌ಗಳನ್ನು ಘೋಷಿಸದೇ ನಿರಾಸೆ ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ದೀಪಾವಳಿ ಹಬ್ಬಕ್ಕೆ ಭರ್ಜರಿ ಕೊಡಗೆಗಳನ್ನು ನೀಡಿದೆ. ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ತನ್ನ ಗ್ರಾಹಕರಿಗೆ ಹಬ್ಬದ ಪ್ರಯುಕ್ತ 'ಜಿಯೋ ದಿವಾಲಿ ಧಮಾಕ' ಆಫರ್ ಅಡಿಯಲ್ಲಿ 8 ಹೊಸ ಯೋಜನೆಗಳನ್ನು ಘೋಷಿಸಿದೆ.

ಈ ದೀಪಾವಳಿ ಧಮಾಕ ಆಫರ್​ ಅಡಿಯಲ್ಲಿ ಜಿಯೋ ಫೋನ್, ವಾರ್ಷಿಕ ರೀಚಾರ್ಜ್ ಆಫರ್ ಸೇರಿದಂತೆ ಕ್ಯಾಶ್‌ಬ್ಯಾಕ್‌ನಂತಹ ಹೊಸ ಹೊಸ ಯೋಜನೆಗಳು ಗ್ರಾಹಕರಿಗೆ ಸಿಗಲಿದ್ದು, ದಿಪಾವಳಿ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಅತ್ಯುತ್ತಮ ದರದಲ್ಲಿ ಹೆಚ್ಚಿನದನ್ನು ನೀಡಲು ಜಿಯೋ ಬದ್ದವಾಗಿದೆ ಎಂದು ಕಂಪೆನಿ ತಿಳಿಸಿದೆ.

ದೀಪಾವಳಿ ಧಮಾಕ!..ಮತ್ತೆ ಹೊಸ 8 ಆಫರ್ಸ್ ಘೋಷಿಸಿದ ಜಿಯೋ!!

ಭಾರತೀಯ ಟೆಲಿಕಾಂನಲ್ಲಿ ಈಗಾಗಲೇ ಅಬ್ಬರಿಸುತ್ತಿರುವ ಜಿಯೋ, ಇದೀಗ ದೀಪಾವಳಿ ಧಮಾಕ ಆಫರ್​ ಘೋಷಿಸಿ ಮತ್ತೆ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಹಾಗಾದರೆ, ಭಾರತದ ಗ್ರಾಹಕರ ನೆಚ್ಚಿನ ಟೆಲಿಕಾಂ ಕಂಪೆನಿ ಜಿಯೋ ಪ್ರಕಟಿಸಿರುವ ಹೊಸ 8 ಯೋಜನೆಗಳು ಯಾವುವು? ಜಿಯೋ ಗ್ರಾಹಕರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಜಿಯೋ ಫೋನ್‌ ಭರ್ಜರಿ ಆಫರ್!

ಜಿಯೋ ಫೋನ್‌ ಭರ್ಜರಿ ಆಫರ್!

 • ಜಿಯೋವಿನ ಮೊದಲ 4G ಫೀಚರ್ ಫೋನ್ ಖರೀದಿಸಲು ಈ ದೀಪಾವಳಿ ಹಬ್ಬ ಸರಿಯಾದ ಸಮಯವಾಗಿದೆ. ಜಿಯೋಫೋನ್ ಖರೀದಿಸುವ ಗ್ರಾಹಕರಿಗೆ ಜಿಯೋ ಕೇವಲ 1095 ರೂ.ಗಳಿಗೆ ಫೆಸ್ಟೀವ್ ಗಿಫ್ಟ್ ಕಾರ್ಡ್ ಅನ್ನು ಘೋಷಿಸಿದೆ. ಈ ಕಾರ್ಡ್ ಖರೀದಿಸಿದರೆ, 500 ರೂ.ಗಳಿಗೆ ಜಿಯೋ ಫೋನ್ ಸೇರಿದೆಂತೆ, ಆರು ತಿಂಗಳ ವರೆಗೂ ಉಚಿತ ರೀಚಾರ್ಜ್ ಆಯ್ಕೆಯನ್ನು ನೀಡಲಾಗಿದೆ.
 • ಶೇ.100ರಷ್ಟು ಕ್ಯಾಶ್‌ಬ್ಯಾಕ್ ಆಫರ್

  ಶೇ.100ರಷ್ಟು ಕ್ಯಾಶ್‌ಬ್ಯಾಕ್ ಆಫರ್

  ಜಿಯೋವಿನ 149 ರೂ. ಮೇಲ್ಪಟ್ಟ ರೀಚಾರ್ಜ್‌ಗಳು. ಅಂದರೆ, 198 ರೂ., 299 ರೂ., 349 ರೂ., 399 ರೂ., 448 ರೂ., 449 ರೂ., 498 ರೂ., 509 ರೂ., 799 ರೂ., 999 ರೂ., 1699 ರೂ., 1999 ರೂ., 4999 ರೂ. ಮತ್ತು 9999 ರೂ. ಈ ಎಲ್ಲ ರಿಚಾರ್ಜ್​ಗಳಿಗೆ ಶೇ 100ರಷ್ಟು ಕ್ಯಾಶ್​ಬ್ಯಾಕ್​ ಆಫರ್​ ನೀಡಲಾಗಿದೆ. ರಿಲಯನ್ಸ್ ಶಾಪಿಂಗ್‌ಗಾಗಿ ಇವನ್ನು ಬಳಸಿಕೊಳ್ಳಬಹುದಾಗಿದೆ.

  ಜಿಯೋ ಫೋನ್‌ 2ಗೆ ಕ್ಯಾಶ್‌ಬ್ಯಾಕ್!

  ಜಿಯೋ ಫೋನ್‌ 2ಗೆ ಕ್ಯಾಶ್‌ಬ್ಯಾಕ್!

  ಜಿಯೋ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ್ದ ಜಿಯೋ ಫೋನ್ 2 ಮೇಲೆ ಕ್ಯಾಶ್‌ಬ್ಯಾಕ್ ಅನ್ನು ಪ್ರಕಟಿಸಿದೆ. ಜಿಯೋ ಫೋನ್ 2 ಖರೀದಿಸಿ ಪೇಟಿಎಂ ಮೂಲಕ ಹಣವನ್ನು ಪಾವತಿಸಿದರೆ ತಕ್ಷಣ 200 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ ಎಂದು ಜಿಯೋ ತಿಳಿಸಿದೆ. ನವೆಂಬರ್ 5 ರಿಂದ 12ನೇ ತಾರೀಖಿನವರೆಗೂ ಈ ಹಬ್ಬದ ಆಫರ್ ಗ್ರಾಹಕರಿಗೆ ಲಭ್ಯವಿದೆ ಎಂದು ಜಿಯೋ ತಿಳಿಸಿದೆ.

  ಜಿಯೋ ಫೈ ವಿಥ್​ ಎಲ್‌ಜಿ ಟಿವಿ!

  ಜಿಯೋ ಫೈ ವಿಥ್​ ಎಲ್‌ಜಿ ಟಿವಿ!

  ಯಾವುದೇ ಎಲ್‌ಜಿ ಸ್ಮಾರ್ಟ್‌ಟಿವಿ ಖರೀದಿಗೆ ಜಿಯೋ ಭರ್ಜರಿ ಆಫರ್ ಘೋಷಿಸಿದೆ. ಎಲ್‌ಜಿ ಸ್ಮಾರ್ಟ್‌ಟಿವಿ ಖರೀದಿಸಿದರೆ ಅದರ ಜೊತೆಗೆ ಜಿಯೋವಿನ 'ಜಿಯೋ ಪೈ' ಉಚಿತವಾಗಿ ಸಿಗಲಿದೆ. ಉಚಿತ 'ಜಿಯೋ ಪೈ' ಜೊತೆಗೆ ಜಿಯೋ ಫೈ ಕಾಂಪ್ಲಿಮೆಂಟರಿ, 156 ಜಿಬಿ ಉಚಿತ ಡೇಟಾ ಹಾಗೂ 10GBಯ ಮೂರು ವೋಚರ್‌ಗಳು ಈ ಆಫರ್ ಅಡಿಯಲ್ಲಿ ಗ್ರಾಹಕರಿಗೆ ಲಭ್ಯವಿವೆ.

  ಜಿಯೋ ವಾರ್ಷಿಕ ಪ್ಲಾನ್!

  ಜಿಯೋ ವಾರ್ಷಿಕ ಪ್ಲಾನ್!

  'ಜಿಯೋ ದಿವಾಲಿ ಧಮಾಕ' ಆಫರ್ ಅಡಿಯಲ್ಲಿ ಮೊದಲ ಆಫರ್ ಆಗಿ ಜಿಯೋ ವಾರ್ಷಿಕ ಪ್ಲಾನ್ ಕಾಣಿಸಿಕೊಂಡಿದೆ.ಪೂರ್ತಿ ಒಂದು ವರ್ಷಗಳ ಕಾಲ ಅನ್‌ಲಿಮಿಟೆಡ್ ಕರೆ ಹಾಗೂ ಮೆಸೇಜ್‌ಗಳು ಸೇರಿದಂತೆ ಪ್ರತಿದಿನ 1.5 ಜಿಬಿ ಡೇಟಾವಿರುವ ಈ ವಾರ್ಷಿಕ ಪ್ಲ್ಯಾನ್ ಕೇವಲ 1699 ರೂ.ಗಳಿಗೆ ಲಭ್ಯವಿದೆ. ವಿಶೇಷವೆಂದರೆ, ಈ ಆಫರ್ ಮೇಲೆ ಶೇ.100ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗಿದೆ.

  ಜಿಯೋ ಫೈ ವಿಥ್​ ಲ್ಯಾಪ್​ಟಾಪ್​

  ಜಿಯೋ ಫೈ ವಿಥ್​ ಲ್ಯಾಪ್​ಟಾಪ್​

  ರಿಲಯನ್ಸ್ ರೀಟೇಲ್ ಸ್ಟೋರ್‌ನಲ್ಲಿ ಲ್ಯಾಪ್​ಟಾಪ್​ ಖರೀದಿ ಮಾಡುವ ಗ್ರಾಹಕರಿಗೆ ಜಿಯೋಫೈ ಉಚಿತವಾಗಿ ಸಿಗಲಿದೆ. ಡಿಸೆಂಬರ್ 31 ರ ಒಳಗಾಗಿ 35,000ಕ್ಕಿಂತ ಹೆಚ್ಚು ಬೆಲೆಯ ಲ್ಯಾಪ್‌ಟಾಪ್ ಖರೀದಿಸಿದರೆ, 3 ಸಾವಿರ ರೂ.ವರೆಗೂ ಲಾಭ ಸಿಗಲಿದೆ. 35,000ಕ್ಕಿಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಖರೀದಿಗೆ ಉಚಿತ ಡೇಟಾ ಮಾತ್ರ ಲಭ್ಯವಿದ್ದು, ಡಿವೈಸ್‌ಗೆ 999 ರೂ.ಪಾವತಿಸಬೇಕು.

  4G ಫೋನ್ ಮೇಲೆ 2200 ಕ್ಯಾಶ್​ಬ್ಯಾಕ್

  4G ಫೋನ್ ಮೇಲೆ 2200 ಕ್ಯಾಶ್​ಬ್ಯಾಕ್

  ಯಾವುದೇ ಹೊಸ 4G ಫೋನ್ ಖರೀದಿಸಿದರೂ ಅದರ ಮೇಲೆ ಜಿಯೋ 2200 ರೂ. ಕ್ಯಾಶ್​ಬ್ಯಾಕ್ ಅನ್ನು ಪ್ರಕಟಿಸಿದೆ. ಗ್ರಾಹಕರು ತಮ್ಮ ಸ್ಮಾರ್ಟ್‌ಫೋನಿನಲ್ಲಿ MyJio ಅಪ್ಲಿಕೇಶನ್​ ಮೂಲಕ ಹೊಸ 198 ಅಥವಾ 299 ರೂ. ರಿಚಾರ್ಜ್​ ಮಾಡಿದರೆ, ತಕ್ಷಣ ಅವರಿಗೆ 50 ರೂಪಾಯಿಗಳ 40 ವೋಚರ್‌ಗಳು ಸಿಗಲಿವೆ. ಇವನ್ನು ಮುಂದಿನ ರೀಚಾರ್ಜ್‌ಗೆ ಉಪಯೋಗಿಸಿಕೊಳ್ಳಬಹುದು.

  ವಾಲೆಟ್ ಆಫರ್ಸ್!

  ವಾಲೆಟ್ ಆಫರ್ಸ್!

  ಜಿಯೋ ಜೊತೆಗೆ ಪಾಲುದಾರಿಕೆ ಹೊಂದಿರುವ ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಮತ್ತು ಮೊಬಿಕ್ವಿಕ್ ವಾಲೆಟ್‌ಗಳ ರೀಚಾರ್ಜ್‌ಗಳಿಗೆ ಜಿಯೋ 300 ರೂಪಾಯಿವರೆಗೂ ಕ್ಯಾಶ್‌ಬ್ಯಾಕ್ ಘೋಷಿಸಿದೆ. ಜಿಯೋ ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳನ್ನು ಆಧರಿಸಿ ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಮತ್ತು ಮೊಬಿಕ್ವಿಕ್ ವಾಲೆಟ್‌ಗಳ ರೀಚಾರ್ಜ್‌ ಕ್ಯಾಶ್‌ಬ್ಯಾಕ್ ಪಡೆಯಬಹುದು.

  ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಕೂಡ ಮುಳುಗಡೆ!?

  ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಕೂಡ ಮುಳುಗಡೆ!?

  ಒಂದೆರಡು ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಿದ್ದ ಜನರು ಯೂಟ್ಯೂಬ್ ತೆರೆದು ನೋಡುವಾಗ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ವಿಡಿಯೋಗಳನ್ನು ನೋಡಲು ಸಾಧ್ಯವೇ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಇಂದಿನ ಮೊಬೈಲ್ ಡೇಟಾ ಬೆಳವಣಿಗೆಯನ್ನು ಯಾರೂ ಕೂಡ ಕನಸಿನಲ್ಲೂ ಊಹಿಸಿರಲಿಲ್ಲ ಎನ್ನಬಹುದು ಅಲ್ಲವೇ.?!

  ಆಗ ಮೊಬೈಲ್‌ನಲ್ಲಿ ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಜೊತೆಗೆ ಹೆಚ್ಚು ಹಣ ಬೇಕಾಗುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಮೊಬೈಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಟಿವಿಯನ್ನು ಸಹ ಗಂಟೆಗಟ್ಟಲೆ ನೋಡಬಹುದು. ಅದಕ್ಕಾಗಿಯೇ, ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದ ಡೇಟಾ ಕೊಡುತ್ತಿವೆ. ಅಷ್ಟೆ ಏಕೆ, ಟೆಲಿಕಾಂ ಕಂಪನಿಗಳು ತಂತ್ರಜ್ಞಾನದಲ್ಲಿ ದಿನ ದಿನವೂ ಒಂದೊಂದೇ ಹೆಜ್ಜೆ ಮುಂದಿಡುತ್ತಲೂ ಇವೆ. ಜಿಯೋ ಇಂತಹ ಹೊಸ ಸಾಧ್ಯತೆ ತೆರೆಯುವಲ್ಲಿ ಮೊದಲ ಸ್ಥಾನದಲ್ಲಿದೆ. ನಿಮಗೆ ಗೊತ್ತಾ?

  ಇನ್ನೆರಡು ವರ್ಷಗಳಲ್ಲಿ ಕೇಬಲ್ ಟಿವಿ ಎಂದ ಮಾತೇ ಇರುವುದಿಲ್ಲ ಎನ್ನುತ್ತಿವೆ ವರದಿಗಳು.ಎಲ್‌ಟಿಇ ಮತ್ತು ವಾಯ್ಸ ಓವರ್‌ ಎಲ್‌ಟಿಇ ಎಂಬ ಟೆಕ್ನಾಲಜಿಯನ್ನು ಅವದಿಗೂ ಮೊದಲೇ ಪರಿಚಯಿಸಿ ಯಶಸ್ವಿಯಾದ ಜಿಯೋಯಿಂದಾಗಿ 2019ನೇ ವರ್ಷದಲ್ಲಿ ಟಿವಿ ಮಾರುಕಟ್ಟೆ ಕೂಡ ಭಾರೀ ಬದಲಾಗಲಿದೆ. ಜನರು ಡೇಟಾ ಬಳಸಿ ಟಿವಿ ವೀಕ್ಷಿಸುವ ಕನಸು ನನಸಾಗಲಿದೆ. ಆದರೆ, ಇದಕ್ಕೆ ಪಾವತಿಸಬೇಕಾದ ಹಣ ಮಾತ್ರ ಈಗ ನಾವು ಕೇಬಲ್‌ ಸಂಪರ್ಕ ನೀಡುವವರಿಗೆ ಪಾವತಿಸುವ ಹಣಕ್ಕಿಂತ ಕಡಿಮೆ ಇರಲಿದೆ.!

  ಇಎಂಬಿಎಂಎಸ್ ಎಂಬ ತಂತ್ರಜ್ಞಾನ!

  ಇಎಂಬಿಎಂಎಸ್ ಎಂಬ ತಂತ್ರಜ್ಞಾನ!

  ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಇಎಂಬಿಎಂಎಸ್ ಎಂಬ ಇನ್ನೊಂದು ತಂತ್ರಜ್ಞಾನವನ್ನು ಬಳಸಲು ಜಿಯೋ ಪಣತೊಟ್ಟಿದೆ. ಟೆಲಿಕಾಂ ನೆಟ್‌ವರ್ಕನ್ನೇ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಈ ತಂತ್ರಜ್ಞಾನ ಪರಿಪೂರ್ಣವಾಗಿ ಅಳವಡಿಯಾದರೆ, ಕೇಬಲ್ ಟಿವಿ ಮಾರುಕಟ್ಟೆ ಜೊತೆಗೆ ಡಿಶ್ ಟಿವಿ ಮಾರುಕಟ್ಟೆ ಕೂಡ ಪಾತಾಳಕ್ಕಿಳಿಯುವ ಸೂಚನೆ ಲಭ್ಯವಾಗಿದೆ.

  ಏನಿದು ಇಎಂಬಿಎಂಎಸ್ ತಂತ್ರಜ್ಞಾನ?

  ಏನಿದು ಇಎಂಬಿಎಂಎಸ್ ತಂತ್ರಜ್ಞಾನ?

  ಟೆಲಿಕಾಂ ನೆಟ್‌ವರ್ಕನ್ನೇ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಮೊಬೈಲ್‌ ಕಮ್ಯೂನಿಕೇಶನ್ ಮತ್ತು ಟಿವಿ ಕಮ್ಯೂನ್ಕೇಶನ್ ವಿಧಾನದ ಮೂಲದಲ್ಲೇ ವ್ಯತ್ಯಾಸವಿರುತ್ತದೆ. ಇದು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಟೆಲಿಕಾಂ ನೆಟ್‌ವರ್ಕ್‌ ಸಾಮರ್ಥ್ಯವನ್ನು ದುಪ್ಪಟ್ಟಾ ಗಿಸುವ ಹೈಬ್ರಿಡ್‌ ಟೆಕ್ನಾಲಜಿಯಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸಂಪರ್ಕವನದನ್ನು ಈ ತಂತ್ರಜ್ಞಾನ ಒದಗಿಸಲಿದೆ.

  ಇಎಂಬಿಎಂಎಸ್ vs ಟೆಲಿಕಾಂ ನೆಟ್‌ವರ್ಕ್

  ಇಎಂಬಿಎಂಎಸ್ vs ಟೆಲಿಕಾಂ ನೆಟ್‌ವರ್ಕ್

  ಈಗಿರುವ ಟೆಲಿಕಾಂ ನೆಟ್‌ವರ್ಕ್ಗೂ, ಇನ್ನೇನು ಬರುತ್ತಿರುವ ಇಎಂಬಿಎಂಎಸ್ ತಂತ್ರಜ್ಞಾನಕ್ಕೂ ವ್ಯತ್ಯಾಸಗಳಿವೆ. ಟೆಲಿಕಾಂ ನೆಟ್‌ವರ್ಕ್‌ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುತ್ತೇವೆಂದಾದರೆ ಈ ಒನ್ ವೇ ಕಮ್ಯೂನಿಕೇಶನ್ ಸಾಕಲ್ಲವೇ ಎಂಬ ಪ್ರಶ್ನೆ ಎದುರಾದಾಗ ಈ ಇಎಂಬಿಎಂಎಸ್ ತಂತ್ರಜ್ಞಾನ ಹುಟ್ಟಿಕೊಂಡಿದೆ. ಮೊಬೈಲ್‌ ಕಮ್ಯೂನಿಕೇಶನ್ ಟು ವೇ ಆಗಿದ್ದರೆ, ಟಿವಿ ಒನ್ ವೇ ಆಗಿರುತ್ತದೆ. ಇದು ಟಿವಿ ಪ್ರಪಂಚವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಲಿದೆ.

  ಇಎಂಬಿಎಂಎಸ್ ಏಕೆ ಬೆಸ್ಟ್?

  ಇಎಂಬಿಎಂಎಸ್ ಏಕೆ ಬೆಸ್ಟ್?

  ನಾವು ಮೊಬೈಲ್‌ನಲ್ಲಿ ಟವರ್‌ನಿಂದ ಡೇಟಾ ಸ್ವೀಕರಿಸುತ್ತೇವೆ ಹಾಗೂ ಕಳುಹಿಸುತ್ತೇವೆ. ಇದನ್ನು ಯೂನಿಕಾಸ್ಟ್‌ ಎನ್ನುತ್ತೇವೆ. ಆದರೆ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲ. ಅಂದರೆ ಒಮ್ಮೆ ಒಂದು ಟ್ರಾನ್ಸ್‌ಪಾಂಡರ್ ಅಥವಾ ಟ್ರಾನ್ಸ್‌ಮಿಟರ್ ಸಂಕೇತಗಳನ್ನು ಕಳುಹಿಸಿದ ಮೇಲೆ ಅವು ಯಾವೇ ಸಂಕೇತಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದರಿಂದ ಇಎಂಬಿಎಂಎಸ್ ಸಂಕೇತಗಳ ಸಾಮರ್ಥ್ಯ ಹೆಚ್ಚಿರುತ್ತದೆ.

  ನೆಟ್‌ವರ್ಕ್ ಸ್ಲೋ ಆಗೊಲ್ಲಾ!

  ನೆಟ್‌ವರ್ಕ್ ಸ್ಲೋ ಆಗೊಲ್ಲಾ!

  ಈ ಇಎಂಬಿಎಂಎಸ್ ತಂತ್ರಜ್ಞಾನದ ಮನ್ನೊಂದು ಅನುಕೂಲವೆಂದರೆ ಒಂದೇ ಟವರ್‌ನಡಿ ಸಾವಿರಾರು ಜನರು ಕೂತು ಒಂದೇ ಸಮನೆ ಹೈ ಹೆಚ್‌ಡಿ ಸಿನಿಮಾಗಳನ್ನು ನೋಡಿದರೂ ನೆಟ್‌ವರ್ಕ್‌ ಸ್ಲೋ ಆಗುವುದಿಲ್ಲ. ಈ ಇಎಂಬಿಎಂಎಸ್ ತಂತ್ರಜ್ಞಾನ ಬಳಸಿಕೊಂಡು ಸೆಟ್‌ ಟಾಪ್‌ ಬಾಕ್ಸ್‌ ಅನ್ನು ಟಿವಿಗೆ ಕನೆಕ್ಟ್ ಮಾಡಿದರೆ, ಅತ್ಯದ್ಭುತ ಕ್ಲಾರಿಟಿ ಚಾನೆಲ್‌ಗ‌ಳನ್ನು ನಾವು ಟಿವಿಯಲ್ಲಿ ನೋಡಬಹುದು. ಹಾಗಾಗಿ, ಇದು ಅನಿಯಮಿತ ಮನರಂಜನೆ ಸೇವೆಯನ್ನು ನೀಡಲಿದೆ.

  ಇಂಟರ್‌ನೆಟ್ ಅಗತ್ಯವೇ ಇಲ್ಲ!

  ಇಂಟರ್‌ನೆಟ್ ಅಗತ್ಯವೇ ಇಲ್ಲ!

  ಇಎಂಬಿಎಂಎಸ್ ಕೇವಲ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಮಾತ್ರವಲ್ಲ. ಬದಲಾಗಿ, ಇಂಟರ್‌ನೆಟ್‌ ಅಗತ್ಯವೇ ಇಲ್ಲದೆ ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನದಲ್ಲಿ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲವಾದುದರಿಂದ ಅನಿಯಮಿತ ಡೇಟಾವನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಪಡೆಯಬಹುದಾಗಿದೆ.

  ಅತ್ಯಂತ ಕಡಿಮೆ ವೆಚ್ಚ!

  ಅತ್ಯಂತ ಕಡಿಮೆ ವೆಚ್ಚ!

  ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಬೇಕಾಗುತ್ತದೆ. ಇನ್ನು ಟಿವಿಯಲ್ಲಿ ಜನರು ಡೇಟಾ ಬಳಸಿ ಟಿವಿ ವೀಕ್ಷಿಸಬೇಕು ಎಂದಾದರೆ ಅದಕ್ಕೆ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯವನ್ನು ಒಗಗಿಸಬೇಕಾಗುತ್ತದೆ. ಟವರ್‌ನಿಂದ ಟವರ್‌ಗೆ ಒಎಫ್‌ಸಿ ಜಾಲ, ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ಜಾಲ ಹಾಗೂ ಟವರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲು ಮೂಲಸೌಕರ್ಯ ಮಿತಿಗಳು ಅಡ್ಡಿಯಾಗುತ್ತಿವೆ. ಆದರೆ, ಈ ಇಎಂಬಿಎಂಎಸ್ ತಂತ್ರಜ್ಞಾನ ಕಡಿಮೆ ವೆಚ್ಚದ್ದಾಗಿದೆ.

  ಕೇಬಲ್‌ಗಿಂತ ಕಡಿಮೆ ದರ!

  ಕೇಬಲ್‌ಗಿಂತ ಕಡಿಮೆ ದರ!

  ಈಗಾಗಲೇ ಫೈಬರ್ ಟು ದಿ ಹೋಮ್ ಮೂಲಕ ಹವಾ ಎಬ್ಬಿಸಿರುವ ಜಿಯೋ, ಟಿವಿ ಮಾರುಕಟ್ಟೆಯಲ್ಲಿ ಮತ್ತೊಮದು ಬದಲಾವಣೆಯನ್ನು ತರಲಿದೆ. ಈ ತಂತ್ರಜ್ಞಾನ ಟಿವಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಕೇಬಲ್ ಟಿವಿ ಪ್ರಪಂಚವನ್ನು ತನ್ನ ಸುಳಿಯಲ್ಲಿ ಮುಳಿಗಿಸಿಬಿಡುತ್ತದೆ. ಇನ್ನು ಈಗಿರುವ ಕೇಬಲ್ ಸಂಪರ್ಕ ನೀಡುವ ಡಿಟಿಎಚ್ ಕಂಪನಿಗಳ ಕಥೆ ಕೂಡ ಕೊನೆಗೋಳ್ಳಲಿದೆ. 100 ರಿಂದ 200 ರೂಪಾಯಿಗಳಲ್ಲಿ ನಿಮ್ಮ ಮನೆಗೆ ಕೇಬಲ್ ಸಂಪರ್ಕ ಸಿಗಲಿದೆ.!

  2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!

  2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!

  ಭಾರತದ ಟೆಲಿಕಾಂ ಪ್ರಪಂಚವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಜಿಯೋ ವೇಗಕ್ಕೆ ಈಗಲೂ ಸಹ ಸರಿಸಾಟಿ ಯಾರೂ ಇಲ್ಲ ಎಂಬ ಮಾಹಿತಿಯನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ (ಟ್ರಾಯ್) ಬಿಡುಗಡೆ ಮಾಡಿದೆ. 4G ನೆಟ್​ವರ್ಕ್​ ಲೋಕದಲ್ಲಿ ಸಂಚಲನ ಮೂಡಿಸಿರುವ ಜಿಯೋ 2 ವರ್ಷಗಳ ನಂತರವೂ ಭಾರತದ ಅಂತರ್ಜಾಲ ದಿಗ್ಗಜನಾಗಿ ಮುಂದುವರೆದಿದೆ.

  ಹೌದು, ಪ್ರತಿಸ್ಪರ್ಧಿ ನೆಟ್​ವರ್ಕ್​ಗಳ ವೇಗಕ್ಕಿಂತ ಜಿಯೋ ಇಂಟರ್‌ನೆಟ್ ವೇಗ ದುಪ್ಪಟ್ಟಿದ್ದು, ಜಿಯೋ ಡೌನ್​ಲೋಡ್ ವೇಗ 22.3 ಎಂಬಿಪಿಎಸ್ ಇದ್ದರೆ, ಭಾರ್ತಿ ಏರ್​ಟೆಲ್ ಡೌನ್​ಲೋಡ್ ವೇಗ ಕೇವಲ 10 ಎಂಬಿಪಿಎಸ್ ಮಾತ್ರ ಇದೆ. ಇನ್ನು ವೊಡಾಫೋನ್ ಮತ್ತು ಐಡಿಯಾಗಳು ಕ್ರಮವಾಗಿ 6.2 ಮತ್ತು 6.7 ಎಂಬಿಪಿಎಸ್ ವೇಗದ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

  ಟ್ರಾಯ್ ಬಿಡುಗಡೆ ಮಾಡಿರುವ ಈ ಎಲ್ಲಾ ಅಂಕಿಅಂಶಗಳು ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಗೆ ಸಂಬಂಧಿಸಿದ್ದು, ಮಾಹಿತಿ ಪ್ರಕಾರ ಅಪ್​ಲೋಡ್ ವೇಗದಲ್ಲಿ ಐಡಿಯಾ ಪ್ರಾಬಲ್ಯ ಮೆರೆದಿದೆ. 5.9 ಎಂಬಿಪಿಎಸ್ ವೇಗದ ಮೂಲಕ ಇತರೇ ನೆಟ್​ವರ್ಕ್​ಗಳನ್ನು ಹಿಂದಿಕ್ಕಿರುವ ಐಡಿಯಾಕ್ಕೆ ಜಿಯೋ( 4.9 ಎಂಬಿಪಿಎಸ್) ವೇಗ ಕೂಡ ಸಾಟಿಯಾಗದಿರುವುದು ತಿಳಿದುಬಂದಿದೆ.

  ಭಾರತದ ಟೆಲಿಕಾಂ ಪ್ರಪಂಚದಲ್ಲಿ ಇತ್ತೀಚಿಗಷ್ಟೆ ಎರಡು ವರ್ಷಗಳನ್ನು ಪೂರೈಸಿದ್ದ ಜಿಯೋಗೆ ಈ ಸುದ್ದಿ ಖುಷಿಯನ್ನು ತಂದಿದೆ. ಕೇವಲ ಎರಡು ವರ್ಷಗಳಲ್ಲೇ ಭಾರತದ ಟೆಲಿಕಾಂನಲ್ಲಿ ಜಿಯೋ ನಿರ್ಮಿಸಿರುವ ದಾಖಲೆಗಳನ್ನು ಸಹ ಜಿಯೋ ಪ್ರಕಟಿಸಿದೆ. ಹಾಗಾದರೆ, ಜಿಯೋ ಈ ಎರಡು ವರ್ಷಗಳಲ್ಲಿ ಸಾಧಿಸಿರುವುದೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

  ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

  ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್‌ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್‌ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿ ಉಚಿತ ಕರೆಗಳ ಕನಸು ನನಸಾಗಿದೆ. ಜಿಯೋ ತನ್ನ ಎಲ್ಲ ಟ್ಯಾರಿಫ್ ಪ್ಲಾನುಗಳ ಜೊತೆಯಲ್ಲಿ ಅಪರಿಮಿತ ಉಚಿತ ಕರೆಗಳನ್ನು ನೀಡಿದೆ.

  ಭಾರತಕ್ಕೆ ಈಗ ಮೊದಲ ಸ್ಥಾನ

  ಭಾರತಕ್ಕೆ ಈಗ ಮೊದಲ ಸ್ಥಾನ

  ಟೆಲಿಕಾಂ ಮಾರುಕಟ್ಟೆ ಬಹಳ ಕ್ಷಿಪ್ರವಾಗಿ ಡೇಟಾದತ್ತ ಸಾಗಿದೆ ಹಾಗೂ ಮತ್ತೊಮ್ಮೆ ಗ್ರಾಹಕರಿಗೆ ಜಯ ದೊರೆತಿದೆ. ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ. ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.

  ನವಯುಗವನ್ನು ಸಾರಿದ ಜಿಯೋಫೋನ್:

  ನವಯುಗವನ್ನು ಸಾರಿದ ಜಿಯೋಫೋನ್:

  ಫೀಚರ್‌ಗಳನ್ನು ಅಡಕಗೊಳಿಸಿದ ಫೋನ್‌ಗಳ ಬಳಕೆದಾರರಿಗೆ ಭಾರತದ ಹೊಸ ಸ್ಮಾರ್ಟ್ ಫೋನ್ ಎನಿಸಿದ ಜಿಯೋ ಫೋನ್ ಹೊಸದೊಂದು ಯುಗದ ಪ್ರಾರಂಭವನ್ನು ಸಾರುತ್ತಿದೆ. 2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

  ಜಿಯೋಫೈ ಪರಿಚಯಿಸಿದುದು:

  ಜಿಯೋಫೈ ಪರಿಚಯಿಸಿದುದು:

  ವೈಯಕ್ತಿಕ ಧ್ವನಿ ಹಾಗೂ ಡಾಟಾ ಹಾಟ್ ಸ್ಪಾಟ್‌ಗಳ ಅಳವಡಿಕೆಯಿಂದಾಗಿ ಗ್ರಾಹಕರು ಜಿಯೋ ಡಿಜಿಟಲ್ ಜೀವನಶೈಲಿಯನ್ನು ಅನ್ನು ಹಲವು ಸಾಧನಗಳ ಮೂಲಕ ಬಳಸುವುದು ಸಾಧ್ಯವಾಗಿದೆ. ಅಲ್ಲದೆ, ವಿಒಎಲ್‌ಟಿಇ ಕರೆಗಳ ಲಾಭವನ್ನು ತಮ್ಮ ಹಳೆಯ 2ಜಿ/3ಜಿ ಮೊಬೈಲ್ ಗಳಿಂದಲೂ ಪಡೆಯುವುದಕ್ಕೆ ಅವಕಾಶವಾಗಿದೆ.

  ರೂ. 15ಕ್ಕಿಂತ ಕಡಿಮೆ

  ರೂ. 15ಕ್ಕಿಂತ ಕಡಿಮೆ

  ಪ್ರತಿ ಜಿಬಿಗೆ ರೂ. 250 - ರೂ. 10,000 ಇದ್ದ ದರಗಳು, ಜಿಯೋ ಪ್ರಾರಂಭದ ನಂತರ ಪ್ರತಿ ಜಿಬಿಗೆ ರೂ. 15ಕ್ಕಿಂತ ಕಡಿಮೆಯಾಗಿದ್ದು ದರಪಟ್ಟಿಗಳು ಜನಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ತಲುಪಿವೆ. ಡೇಟಾ ಪ್ರಜಾತಾಂತ್ರೀಕರಣಕ್ಕೆ ದಾರಿತೋರಿದ ಜಿಯೋ, ವಿವಿಧ ಪ್ಲಾನುಗಳ ಮೂಲಕ ಜಿಯೋ ಗ್ರಾಹಕರು ಇನ್ನೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ.ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.

  ಟ್ಯಾರಿಫ್ ಸರಳೀಕರಣ:

  ಟ್ಯಾರಿಫ್ ಸರಳೀಕರಣ:

  ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿ ಸುಮಾರು 22,000 ಪ್ಲಾನುಗಳಿದ್ದವು. ಜಿಯೋ ಬಂದ ನಂತರ ಮೊಬೈಲ್ ಸೇವಾ ಸಂಸ್ಥೆಗಳು ಜಿಯೋ ಮಾದರಿಯನ್ನು ಅನುಸರಿಸುವ ಮೂಲಕ ಪ್ಲಾನುಗಳ ಸಂಖ್ಯೆಯನ್ನು ಕಡಿಮೆಮಾಡಲು ಪ್ರಯತ್ನಿಸುತ್ತಿವೆ. ಕೆಲವೇ ಸರಳ ಪ್ಲಾನುಗಳನ್ನು ಪರಿಚಯಿಸಿರುವ ಜಿಯೋ ಏಕಕಾಲದಲ್ಲಿ ಕೇವಲ ಒಂದೆರಡು ಪ್ಲಾನುಗಳನ್ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. ಇದರಿಂದಾಗಿ ಗ್ರಾಹಕರ ಬದುಕು ಬಹಳ ಸರಳವಾಗಿದೆ ಹಾಗೂ ತಮಗಾಗಿ ಅತ್ಯುತ್ತಮ ಕೊಡುಗೆಯನ್ನು ಸ್ವತಃ ಅವರೇ ಆಯ್ದುಕೊಳ್ಳುವುದು ಸಾಧ್ಯವಾಗಿದೆ.

  ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

  ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

  ಜಿಯೋ ಪ್ರಾರಂಭದ ನಂತರ ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್‌ಬುಕ್‌ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

  ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

  ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

  ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿರುವ ಜಿಯೋ, ಇದಕ್ಕಾಗಿಯೇ ರಿಲಯನ್ಸ್ ಜಿಯೋ ಜಿಗಾ ಫೈಬರ್ ಸೇವೆಯನ್ನು ಆಗಸ್ಟ್ 15 ರಂದು ಲಾಂಚ್ ಮಾಡಲು ಮುಂದಾಗಿದೆ. ಜಿಯೋ ಗಿಗಾ ಫೈಬರ್ ವೊಂದನ್ನು ಪಡೆದುಕೊಂಡರೆ ಸಾಕು ಬಳಕೆದಾರರಿಗೆ ಗಿಗಾ TV ಮತ್ತು ಸ್ಮಾರ್ಟ್‌ ಹೋಮ್‌ಗಳನ್ನು ಲಾಂಚ್ ಮಾಡಲಿದೆ.ರಿಲಯನ್ಸ್ ರೀಟೈಲ್ ನಿಂದ ವಿಒ‌ಎಲ್‌ಟಿಇ ಅಂತರ್ಗತ LYF ಸಾಧನಗಳನ್ನು ಬಿಡುಗಡೆಮಾಡಿದುದರಿಂದ, ಸ್ಮಾರ್ಟ್‌ಫೋನ್ ಬ್ರಾಂಡ್ ಗಳೆಲ್ಲವೂ ಎಲ್‌ಟಿಇ ಶಿಪ್‌ಮೆಂಟ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ಗಳೂ ಎಲ್‌ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.

  ಜಿಯೋ ಗಿಗಾ ಫೈಬರ್‌:

  ಜಿಯೋ ಗಿಗಾ ಫೈಬರ್‌:

  ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿರುವ ಜಿಯೋ, ಇದಕ್ಕಾಗಿಯೇ ರಿಲಯನ್ಸ್ ಜಿಯೋ ಜಿಗಾ ಫೈಬರ್ ಸೇವೆಯನ್ನು ಆಗಸ್ಟ್ 15 ರಂದು ಲಾಂಚ್ ಮಾಡಲು ಮುಂದಾಗಿದೆ. ಜಿಯೋ ಗಿಗಾ ಫೈಬರ್ ವೊಂದನ್ನು ಪಡೆದುಕೊಂಡರೆ ಸಾಕು ಬಳಕೆದಾರರಿಗೆ ಗಿಗಾ TV ಮತ್ತು ಸ್ಮಾರ್ಟ್‌ ಹೋಮ್‌ಗಳನ್ನು ಲಾಂಚ್ ಮಾಡಲಿದೆ.

Most Read Articles
Best Mobiles in India

English summary
As part of the Diwali Dhamaka offer, Jio has launched Rs 1699 annual plan, 100 percent cashback, Jiophone gift card and a host of other exciting deals.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more