ಜಿಯೋದ ಈ ಎರಡು ಹೊಸ ಪ್ಲ್ಯಾನ್‌ ಕಡಿಮೆ ಬೆಲೆಗೆ ಲಭ್ಯ!

|

ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ತಮ್ಮ ಪ್ರೀಪೇಡ್ ಪ್ಲ್ಯಾನ್‌ ದರವನ್ನು ಹೆಚ್ಚಳ ಮಾಡಿದ್ದು, ಹೊಸ ಬೆಲೆಗಳು ಗ್ರಾಹಕರಿಗೆ ದುಬಾರಿ ಅನಿಸಿವೆ. ಏರ್‌ಟೆಲ್, ವೊಡಾಫೋನ್ ಮತ್ತು ಜಿಯೋ ಮೂರು ಟೆಲಿಕಾಂಗಳು ನೂತನ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಗ್ರಾಹಕರು ಅವರಿಗೆ ಸರಿ ಹೊಂದುವ ಪ್ಲ್ಯಾನ್‌ಗಳ ಆಯ್ದು ಕೊಳ್ಳುವುದರಲ್ಲಿ ಬ್ಯಸಿ ಇದ್ದಾರೆ. ಆದ್ರೆ, ಈ ಮೂರು ಟೆಲಿಕಾಂನಲ್ಲಿ ಜಿಯೋನ ಎರಡು ಪ್ಲ್ಯಾನ್ ಗಮನ ಸೆಳೆಯುತ್ತವೆ.

ಬಳಕೆದಾದರರು

ಹೌದು, ಬಹುತೇಕ ಬಳಕೆದಾದರರು ಜಿಯೋ ನೆಟವರ್ಕನತ್ತ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಇತ್ತೀಚಿಗೆ ಜಿಯೋ ಟೆಲಿಕಾಂ ಬಿಡುಗಡೆ ಮಾಡಿರೊ ಹೊಸ ಪ್ಲ್ಯಾನ್‌ಗಳಲ್ಲಿ ಅಗ್ಗದ ಬೆಲೆಯ ತಿಂಗಳ ವ್ಯಾಲಿಡಿಟಿಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ದೀರ್ಘಾವಧಿಯ ಪ್ಲ್ಯಾನ್‌ಗಳು ಸಹ ಇವೆ. ಅವುಗಳಲ್ಲಿ 98ರೂ. ಮತ್ತು 149ರೂ.ಗಳ ಪ್ಲ್ಯಾನ್‌ಗಳು ಅಗ್ಗದ ಪ್ರೈಸ್‌ನಲ್ಲಿ ಗ್ರಾಹಕರನ್ನು ಆಕರ್ಷಿಸಿವೆ.

 28 ದಿನಗಳ

ಜಿಯೋದ ಈ ಎರಡು ಪ್ರೀಪೇಡ್‌ ಪ್ಲ್ಯಾನ್‌ಗಳು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಜಿಯೋ ಯಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳು ಸೌಲಭ್ಯ ಪಡೆದಿವೆ. ಆದರೆ ಇತರೆ ನೆಟವರ್ಕಗಳಿಗೆ IUC ಉಚಿತ ಕರೆಗಳ ಮಿತಿಯನ್ನು ಪಡೆದಿವೆ. ಇನ್ನು ಈ ಪ್ಲ್ಯಾನ್‌ಗಳು ಡಾಟಾ ಹೆಚ್ಚಾಗಿ ಬಳಸುವ ಗ್ರಾಹಕರಿಗೆ ಸೂಕ್ತ ಅನಿಸುವುದಿಲ್ಲ ಬದಲಿಗೆ ಕಡಿಮೆ ದರದಲ್ಲಿ ಜಿಯೋ ಪ್ಲ್ಯಾನ್ ಬಯಸುವವರಿಗೆ ಉತ್ತಮ.

ಜಿಯೋದ 98ರೂ.

ಜಿಯೋದ 98ರೂ. ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ವ್ಯಾಲಿಡಿಟಿಯ ಪೂರ್ಣ ಅವಧಿಗೆ ಒಟ್ಟು 2GB ಡಾಟಾ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಜಿಯೋ ಟು ಜಿಯೋ ಕರೆಗಳು ಸಂಪೂರ್ಣ ಉಚಿತವಾಗಿರುತ್ತವೆ. ಹಾಗೂ ಒಟ್ಟು 300ಎಸ್‌ಎಮ್ಎಸ್‌ಗಳು ಸಹ ಉಚಿತವಾಗಿ ಸಿಗಲಿವೆ. ಇತರೆ ನೆಟವರ್ಕ ಕರೆಗಳಿಗೆ ಯಾವುದೇ ಉಚಿತ ನಿಮಿಷಗಳ ಮಿತಿ ಈ ಪ್ಲ್ಯಾನಿನಲ್ಲಿ ಅಲಭ್ಯ. ಇನ್ನು 64Kbps ವೇಗದಲ್ಲಿ ಇಂಟರ್ನೆಟ ಸೇವೆ ದೊರೆಯಲಿದೆ.

ಜಿಯೋದ 149ರೂ

ಅದೇ ರೀತಿ ಜಿಯೋದ 149ರೂ ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು, ಹಾಗೂ ಜಿಯೋ ಟು ಜಿಯೋ ಸಂಪೂರ್ಣ ಉಚಿತ ಕರೆಗಳ ಸೌಲಭ್ಯ ಸಹ ಲಭ್ಯ. ಜಿಯೋದಿಂದ ಇತರೆ ನೆಟವರ್ಕ ಕರೆ ಮಾಡಲು 300 ಉಚಿತ ನಿಮಿಷಗಳ ಪ್ರಯೋಜನ ನೀಡಲಾಗಿದೆ. ಈ ಅಗ್ಗದ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ 98ರೂ. ಪ್ಲ್ಯಾನ್ ಅಧಿಕ ಡಾಟಾ ಬಳಸದ ಗ್ರಾಹಕರಿಗೆ ಹೆಚ್ಚು ಸೂಕ್ತ. ಹಾಗೂ 149ರೂ.ಪ್ಲ್ಯಾನ್ ಅಗ್ಗದ ಬೆಲೆಯಲ್ಲಿ ಉತ್ತಮ ಆಯ್ಕೆ ಆಗಿದೆ.

Most Read Articles
Best Mobiles in India

English summary
Reliance Jio has relaunched the popular Rs 98 and Rs 149 prepaid plans for its users. to know morte visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X