ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಕೆಲಸ ಕಳೆದುಕೊಂಡ ನೌಕರರು

By Gizbot Bureau
|

ರಿಲಯನ್ಸ್ ಜಿಯೋ ಸಂಸ್ಥೆ ಕರಾರಿನ ಮೇಲೆ ಅಂದರೆ ಕಾಂಟ್ರ್ಯಾಕ್ಟ್ ರೂಪದಲ್ಲಿ ಕೆಲಸಕ್ಕೆ ಪಡೆದಿದ್ದ ಸಿಬ್ಬಂದಿಗಳ ಸಂಖ್ಯೆಯನ್ನು ಇಳಿಸುತ್ತಿದೆ. ಕೆಲವು ಪರ್ಪನೆಂಟ್ ನೌಕರರ ಜೊತೆಗೆ ಒಪ್ಪಂದದ ಮೇರೆಗೆ ಕೆಲಸಕ್ಕಿದ್ದ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಆ ಮೂಲಕ ವೆಚ್ಚ ಕಡಿಮೆ ಮಾಡುವುದು ಮತ್ತು ಆಪರೇಟಿಂಗ್ ಮಾರ್ಜಿನ್ ನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಜನವರಿ-ಮಾರ್ಚ್ ಸಮಯದಲ್ಲೇ ಈ ವಿಚಾರವನ್ನು ಅವರು ತಿಳಿದಿದ್ದರು. ಇದರಲ್ಲಿ ಯಾವುದೇ ಬೆಲೆಯ ಒತ್ತಡ ಅಥವಾ ಇತರೆ ಸಮಸ್ಯೆಯಿಲ್ಲ ಎಂದು ಕಂಪೆನಿ ಹೇಳಿದೆ.

ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಕೆಲಸ ಕಳೆದುಕೊಂಡ ನೌಕರರು

ಗ್ರಾಹಕರ ಮುಖಾಮುಖಿಗಳ ಕಡೆಗೆ ಹೆಚ್ಚು ಬದಲಾವಣೆಯನ್ನು ತರಲಾಗಿದೆ. ಸಪ್ಲೈ ಚೈನ್, ಹೆಚ್ ಆರ್, ಫೈನಾನ್ಸ್, ಆಡಳಿತ ಮತ್ತು ನೆಟ್ ವರ್ಕ್ ವಿಭಾಗಗಳಲ್ಲಿ ಈ ಬದಲಾವಣೆಗಳು ಆಗಿದೆ.

ನಾವು ನಮ್ಮ ಗ್ರಾಹಕರ ಬ್ಯುಸಿನೆಸ್ ನ್ನು ಇನ್ನಷ್ಟು ವಿಸ್ತರಿಸುತ್ತಿದ್ದೇವೆ ಮತ್ತು ಜಿಯೋ ಇಂಡಸ್ಟ್ರಿಯಲ್ಲಿ ನೆಟ್ ರಿರ್ಕ್ರೂಟರ್ ಆಗಿ ಮುಂದುವರಿಯುತ್ತದೆ.ಕನ್ಸ್ಟ್ರಕ್ಷನ್ ಆಕ್ಟಿವಿಟಿಯ ಬೇರೆಬೇರೆ ಪ್ರೊಜೆಕ್ಟ್ ಗಳಿಗೆ ಫಿಕ್ಸ್ಡ್ ಟೈಮ್ ಕಾಂಟ್ರ್ಯಾಕ್ಟ್ ಇರುವ ಸಿಬ್ಬಂದಿಯನ್ನು ತೆಗೆದುಕೊಳ್ಳುವ ವಿಚಾರದ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ. ಸಕ್ರಿಯವಾಗಿ ನೇಮಕಾತಿಯನ್ನು ಮುಂದುವರಿಸುತ್ತೇವೆ ಆದರೆ ಅದು ವೆಚ್ಚದ ಒತ್ತಡಕ್ಕೆ ಸಂಬಂಧಿಸಿದ್ದಲ್ಲ ಆದರೆ ವಿಭಿನ್ನ ರೀತಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ಜಿಯೋ ವಕ್ತಾರರು ತಿಳಿಸಿದ್ದಾರೆ.

ಸುಮಾರು 5000 ಮಂದಿಯನ್ನು ಕಂಪೆನಿ ಈ ನಿಟ್ಟಿನಲ್ಲಿ ಕೆಲಸದಿಂದ ತೆಗೆಯುವ ಬಗ್ಗೆ ತಿಳಿಸಿತ್ತು ಮತ್ತು ಅದರಲ್ಲಿ ಸುಮಾರು 500-600 ಮಂದಿ ಶಾಶ್ವತ ಸಿಬ್ಬಂದಿಯೇ ಆಗಿದ್ದರು ಮತ್ತು ಉಳಿದವರು ಕಾಂಟ್ರ್ಯಾಕ್ಟ್ ರೂಪದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇದನ್ನು ವ್ಯಕ್ತಿಗತವಾಗಿ ವಿಮರ್ಷಿಸಲಾಗಿದೆ.

ಗ್ರಾಹಕರನ್ನು ಸ್ವಾಧೀನ ಪಡಿಸಿಕೊಳ್ಳುವ ವಿಭಾಗದಲ್ಲಿ ಈ ಪ್ರಕ್ರಿಯೆ ಅಧಿಕವಾಗಿ ನಡೆದಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ತಂಡದ ಗಾತ್ರವನ್ನು ಇಳಿಸುವ ಉದ್ದೇಶವಿತ್ತೇ ಹೊರತು ವೆಚ್ಚದ ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜಿಯೋದಿಂದ ಸ್ಪಷ್ಟನೆ ಲಭಿಸಿದೆ. ಸಪ್ಲೈ ಚೈನ್, ಫೈನಾನ್ಸ್, ಹೆಚ್ ಆರ್ ಮತ್ತು ಆಡಳಿತ ವಿಭಾಗದಲ್ಲಿ ಬದಲಾವಣೆಯ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಪೇರೋಲ್ ನಲ್ಲಿ ಜಿಯೋ ಬಳಿ ಸುಮಾರು 15000-20000 ನೌಕರರಿದ್ದಾರೆ. ಆಪರೇಟರ್ ವಿಭಾಗದಲ್ಲಿ ಇದಕ್ಕಿಂತ ದೊಡ್ಡ ಸಂಖ್ಯೆಯೇ ಇದೆ. ಆದರೆ ಅವರು ಥರ್ಡ್ ಪಾರ್ಟಿ ನೌಕರರು.

ಈ ಥರ್ಡ್ ಪಾರ್ಟಿ ನೌಕರರು ಜಿಯೋ ಕಂಪೆನಿಯಿಂದ ಸಂಬಳವನ್ನು ನೇರವಾಗಿ ಪಡೆಯುವುದಿಲ್ಲ ಬದಲಾಗಿ ಅವರು ಮೂರನೇ ಕಂಪೆನಿಯಿಂದ ನೇಮಕಗೊಂಡಿರುವವರಾಗಿದ್ದು ಜಿಯೋ ಸಂಸ್ಥೆಯ ಸೌಲಭ್ಯಗಳು ಅವರಿಗೆ ಲಭಿಸುವುದಿಲ್ಲ ಬದಲಾಗಿ ಅವರನ್ನು ನೇಮಕಾತಿ ಮಾಡಿಕೊಂಡ ಮಧ್ಯವರ್ತಿ ಸಂಸ್ಥೆ ನೀಡುವ ಸಂಬಳಕ್ಕಷ್ಟೇ ಅವರು ಸೀಮಿತರಾಗಿರುತ್ತಾರೆ. ಈ ವಿಚಾರದಲ್ಲಿ ಎಷ್ಟು ಸಂಖ್ಯೆಯ ಮಧ್ಯವರ್ತಿ ಕಂಪೆನಿಗಳು ಅಥವಾ ಸಿಬ್ಬಂದಿಯನ್ನು ಜಿಯೋ ಬಳಸುತ್ತಿದೆ ಎಂಬ ಬಗ್ಗೆ ಜಿಯೋ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ.

ಯಾವಾಗ ಜಿಯೋ ಮಾರುಕಟ್ಟೆ ಪ್ರವೇಶಿಸಿತೋ ಆಗ ಸಾಕಷ್ಟು ಕೈಗಳು ಗ್ರೌಂಡ್ ನಲ್ಲಿ ಅದಕ್ಕೆ ಅಗತ್ಯವಿತ್ತು. ಆದರೆ ಕಳೆದ ಎರಡು ವರ್ಷದಲ್ಲಿ ಜಿಯೋ ಮಾರುಕಟ್ಟೆ ಸ್ಥಿರವಾಗಿ ಉಳಿದಿದೆ ಮತ್ತು ಅದನ್ನು ಇನ್ನೂ ಹೆಚ್ಚಿಸಲು ನಿರೀಕ್ಷಿಸಲಾಗಿದೆ. ಆದರೆ ಅದನ್ನು ಸಾಧಿಸುವುದಕ್ಕೆ ಈ ಹೆಜ್ಜೆ ಎಷ್ಟು ಪರಿಣಾಮಕಾರಿ ಎಂದು ಹೇಳುವುದು ಕಷ್ಟವೆಂದು ಹೇಳುತ್ತರೆ ಹಿರಿಯ ಟೆಲಿಕಾಂ ವಿಶ್ಲೇಷಕರು.

ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಬಡ್ಡಿ, ತೆರಿಗೆ,ಭೋಗ್ಯ ಇತ್ಯಾದಿ 5 ವಿಭಾಗಗಳಲ್ಲಿ ಜಿಯೋ ಗಳಿಕೆಯು 39% ಕುಸಿದಿದೆ. ಒಟ್ಟು ವೆಚ್ಚವು 8% ಹೆಚ್ಚಾಗಿದೆ. ಆದರಲ್ಲೂ ನೆಟ್ವರ್ಕ್ ಆಪರೇಟಿಂಗ್ ವೆಚ್ಚ, ಹಣಕಾಸು ವೆಚ್ಚ ಮತ್ತು ಭೋಗ್ಯ ಶುಲ್ಕಗಳಲ್ಲಿ ಈ ವ್ಯತ್ಯಾಸವನ್ನು ಗಮನಿಸಬಹುದಾಗಿದೆ. ಮಾರ್ಚ್ ಅಂತ್ಯದ ವೇಳೆಗಾಗಲೇ 307 ಮಿಲಿಯನ್ ಚಂದಾದಾರರನ್ನು ಜಿಯೋ ಹೊಂದಿತ್ತು. ಫಿಟ್ಚ್ ರೇಟಿಂಗ್ ನ ಅನ್ವಯ ಕಂಪನಿಯ ಮಾರುಕಟ್ಟೆ ಶೇರ್ 31% ಇದೆ. ನೆಟ್ ಪ್ರಾಫಿಟ್ 2019 ರ ನಾಲ್ಕನೇ ತ್ರೈಮಾಸಿಕದಲ್ಲಿ 840 ಕೋಟಿ ಇದೆ. ಇನ್ನು ವಡಾಫೋನ್ ಐಡಿಯಾ 4,878.3 ಕೋಟಿ ನಷ್ಟದಲ್ಲಿದ್ದರೆ, ಏರ್ ಟೆಲ್ ಇದುವರೆಗೂ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿಲ್ಲ.

ಒಟ್ಟಿನಲ್ಲಿ ಆದಾಯ ಹೆಚ್ಚಿಸಿಕೊಂಡು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುವುದಕ್ಕಾಗಿ ಜಿಯೋ ಒಂದಿಲ್ಲೊಂದು ಕೆಲಸಕ್ಕೆ ಮುಂದಾಗುತ್ತಲೇ ಇರುತ್ತದೆ ಎಂಬುದು ಮಾತ್ರ ಸತ್ಯ. ಸದ್ಯ ಕೆಲಸ ಕಳೆದುಕೊಂಡವರು ಬೇರೆ ಕೆಲಸ ಹುಡುಕಿಕೊಳ್ಳುವುದು ಅನಿವಾರ್ಯ.

Best Mobiles in India

Read more about:
English summary
Reliance Jio cuts jobs, sacks contractual staff

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X