TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಟೆಲಿಕಾಂನಲ್ಲಿ ಜಿಯೋ ಏಟಿಗೆ ಈಗಾಗಲೇ ತತ್ತರಿಸಿರುವ ಟೆಲಿಕಾಂ ಕಂಪೆನಿಗಳ ಪರಿಸ್ಥಿತಿ ಈ ಬಾರಿ ಮತ್ತಷ್ಟು ಹೇಳತೀರದಾಗಿದೆ. ಜಿಯೋ ಬಿರುಗಾಳಿಗೆ ತರಗೆಲೆಯಂತಾಗಿರುವ ಏರ್‌ಟೆಲ್ ಕಂಪೆನಿ ನಿವ್ವಳ ಲಾಭವು ಕಳೆದ 15 ವರ್ಷಗಳಲ್ಲಿ ಮೊದಲ ಸಲ ಕುಸಿದಿದೆ. ಮಾರ್ಚ್‌ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಲಾಭವು ಶೇ.78ರಷ್ಟು ಕುಸಿದಿದ್ದು, ಸತತ ಆರನೇ ತ್ರೈಮಾಸಿಕದಲ್ಲಿ 652 ಕೋಟಿ ನಷ್ಟವನ್ನು ಏರ್‌ಟೆಲ್ ಅನುಭವಿಸಿದೆ.!
ಇನ್ನು ಐಡಿಯಾ ಸೆಲ್ಯುಲರ್ ಕಂಪನಿಯು 2017-18ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ 930 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದೆ. ಕಳೆದ ಅವಧಿಗೆ ಹೋಲಿಸಿದರೆ ನಷ್ಟದ ಪ್ರಮಾಣ ಮೂರು ಪಟ್ಟು ಏರಿಕೆಯಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 325 ಕೋಟಿ ರೂ. ನಷ್ಟ ಅನುಭವಿಸಿದ್ದ ಐಡಿಯಾ ಕಂಪೆನಿ, ಈ ಬಾರಿ 930 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದೆ.
ಟೆಲಿಕಾಂನಲ್ಲಿ ಸ್ಪರ್ಧಾತ್ಮಕ ಮಾರುಕಟ್ಟೆಯಿಂದಾಗಿ ಹೆಚ್ಚು ನಷ್ಟ ಸಂಭವಿಸಿದೆ ಎಂಬುವುದನ್ನು ಒಪ್ಪಬಹುದಾದರೂ, ಟ್ರಾಯ್‌ನ ನಿಯಮಾವಳಿಗಳು ನಷ್ಟಕ್ಕೆ ಕಾರಣ ಎಂದು ಐಡಿಯಾ ಕಂಪೆನಿ ಟ್ರಾಯ್ ಅನ್ನು ದೂರಿದೆ.! ಇವೆಲ್ಲವುಗಳ ನಡುವೆ ರಿಲಾಯನ್ಸ್ ಜಿಯೋ ನಿವ್ವಳ ಲಾಭವನ್ನು ಘೋಷಿಸಿಕೊಂಡಿದೆ. ಹಾಗಾದರೆ, ಟೆಲಿಕಾಂನಲ್ಲಿ ಈ ತ್ರೈಮಾಸಿಕದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.
ಶೇ.24.47ಕ್ಕೆ ಕುಸಿದ ಐಡಿಯಾ ಆದಾಯ!
ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಐಡಿಯಾ ಕಂಪನಿಯ ಕಾರ್ಯನಿರ್ವಹಣೆ ಆದಾಯವೂ ಶೇ.24.47ಕ್ಕೆ ಕುಸಿದಿದ್ದು 6,137 ಕೋಟಿ ರೂ.ನಷ್ಟಿದೆ. 2016-17ರಲ್ಲಿ ಒಟ್ಟಾರೆ ನಷ್ಟವು 4,139 ಕೋಟಿ ರೂ.ನಷ್ಟಿದೆ. ಅದು ಕಳೆದ ವರ್ಷದ ಇದೇ ಅವಧಿಯಲ್ಲಿ 404 ಕೋಟಿ ರೂ.ನಷ್ಟಿತ್ತು. ಕಾರ್ಯಾಚರಣೆ ಆದಾಯವು ಕಳೆದ ವರ್ಷ 36,676 ಕೋಟಿ ರೂ. ಇದ್ದರೆ, ಅದು ಈಗ 28,278 ಕೋಟಿ ರೂ.ಗೆ ಕುಸಿದಿದೆ.
ಜಿಯೋಗೆ 510 ಕೋಟಿ ರೂ.ಲಾಭ
ಟೆಲಿಕಾಂ ಕಂಪೆನಿಗಳೆಲ್ಲವೂ ನಷ್ಟದಲ್ಲಿ ಮುಂದುವರೆದಿದ್ದರೆ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ನಿವ್ವಳ ಲಾಭ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.1.5ರಷ್ಟು ಏರಿಕೆಯಾಗಿದೆ. ಜಿಯೋ ಈ ತ್ರೈ ಮಾಸಿಕದಲ್ಲಿ 510 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ ಎಂದು ತಿಳಿದುಬಂದಿದೆ. ಕಳೆದೆರಡು ತ್ರೈ ಮಾಸಿಕಗಳಿಂದ ಜಿಯೋವಿನ ನಿವ್ವಳ ಆದಾಯ ಹೆಚ್ಚುತ್ತಿದೆ.
ಟ್ರಾಯ್‌ನ ನಿಯಮಾವಳಿಗಳು ನಷ್ಟಕ್ಕೆ ಕಾರಣ!
ದೇಶೀಯ ಮೊಬೈಲ್ ಟರ್ಮಿನೇಷನ್ ಶುಲ್ಕವನ್ನು ನಿಮಿಷಕ್ಕೆ 14 ಪೈಸೆಯಿಂದ 6 ಪೈಸೆಗೆ ಇಳಿಸಲಾಗಿದೆ. ಇನ್ನು ಅಂತಾರಾಷ್ಟ್ರೀಯ ಮೊಬೈಲ್ ಟರ್ಮಿನೇಷನ್ ಸೆಟ್ಲಮೆಂಟ್ ಶುಲ್ಕಗಳನ್ನು ನಿಮಿಷಕ್ಕೆ 53 ಪೈಸೆಯಿಂದ 30 ಪೈಸೆಗೆ ಇಳಿಸಲಾಗಿದೆ. ಇದೆಲ್ಲದರಿಂದ ಟೆಲಿಕಾಂ ಕಂಪನಿಗಳು ಒತ್ತಡಕ್ಕೆ ಸಿಲುಕಿವೆ, ಇದಕ್ಕೆ ನೇರ ಕಾರಣ ಟ್ರಾಯ್‌ನ ನಿಯಮಾವಳಿಗಳು ಎಂದು ಐಡಿಯಾ ದೂರಿದೆ.
ಮಾತನಾಡದ ಏರ್‌ಟೆಲ್!
ಟ್ರಾಯ್‌ನ ನಿಯಮಾವಳಿಗಳು ನಷ್ಟಕ್ಕೆ ಕಾರಣ ಎಂದು ಐಡಿಯಾ ಕಂಪೆನಿ ಟ್ರಾಯ್ ಅನ್ನು ನೇರವಾಗಿ ದೂರಿದೆ. ಆದರೆ, ಕಳೆದ 15 ವರ್ಷಗಳಲ್ಲಿ ಮೊದಲ ಸಲ ನಿವ್ವಳ ಲಾಭವನ್ನು ಕಳೆದುಕೊಂಡಿರುವ ಏರ್‌ಟೆಲ್ ತನ್ನ ನಷ್ಟದ ಬಗ್ಗೆ ಏನನ್ನೂ ಮಾತನಾಡದೆ ಉಳಿದಿದೆ. ಕಳೆದ ತ್ರೈ ಮಾಸಿಕದಲ್ಲಿ ತನ್ನ ನಷ್ಟಕ್ಕೆ ನೇರ ಕಾರಣ ಟ್ರಾಯ್ ಎಂದು ಏರ್‌ಟೆಲ್ ಹೇಳಿಕೊಂಡಿತ್ತು.
ಅಂತಿಮ ಹಂತದಲ್ಲಿ ವಿಲೀನ ಪ್ರಕ್ರಿಯೆ
ವೊಡಾಫೋನ್ ಜತೆ ಐಡಿಯಾ ಕಂಪೆನಿ ವಿಲೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 2018ರ ಜೂನ್‌ನೊಳಗೆ ಪೂರ್ಣಗೊಳ್ಳಲಿದೆ ಎಂದು ಐಡಿಯಾ ಹೇಳಿದೆ. ಐಡಿಯಾ-ವೊಡಾಫೋನ್ ವಿಲೀನವು ಬೃಹತ್ ಟೆಲಿಕಾಂ ಕಂಪನಿ ಸೃಷ್ಟಿಗೆ ಕಾರಣವಾಗಲಿದೆ. ಆ ನಂತರ ಟೆಲಿಕಾಂನಲ್ಲಿ ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯನ್ನು ಐಡಿಯಾ ಹೊಂದಿದೆ.