Subscribe to Gizbot

ಜಿಯೋ ಎಫೆಕ್ಟ್..ಏರ್‌ಟೆಲ್‌ ಆದಾಯಕ್ಕೆ ಕೊಡಲಿಪೆಟ್ಟು!..ಎಷ್ಟು ಇಳಿಕೆಯಾಯ್ತು ಗೊತ್ತಾ!?

Written By:

ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡ 75% ಆದಾಯ ಕಡಿಮೆಯಾಗಿರುವುದಾಗಿ ಏರ್‌ಟೆಲ್ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಹೇಳಿಕೊಂಡಿದೆ.!! ಜಿಯೋ ಮಾರುಕಟ್ಟೆಗೆ ಬಂದ ನಂತರ ಏರ್‌ಟೆಲ್‌ಗೆ ಇದು ಬಹುದೊಡ್ಡ ಹೊಡೆತವಾಗಿದ್ದು, ಇದೇ ಮೊದಲ ಬಾರಿಗೆ ಏರ್‌ಟೆಲ್‌ ಇಷ್ಟು ನಷ್ಟ ಅನುಭವಿಸಿದೆ.!!

ಈ ಬಗ್ಗೆ ಭಾರತ ಮತ್ತು ದಕ್ಷಿಣ ಏಷ್ಯಾದ ಎಮ್‌ಡಿ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಅವರು ಮಾತನಾಡಿ, ಭಾರತೀಯ ಟೆಲಿಕಾಂಗೆ ಹೊಸ ಹೊಸ ಟೆಲಿಕಾಂ ಆಪರೇಟರ್‌ಗಳ ಬರುವಿಕೆಯಿಂದ ಟೆಲಿಕಾಂ ವಾರ್ಷಿಕ 15 ಪರ್ಸೆಂಟ್‌ನಷ್ಟು ನಷ್ಟ ಅನುಭವಿಸುತ್ತಿದೆ. ಇದರಿಂದ ಟೆಲಿಕಾಂ ವಲಯದ ಲಾಭ, ನಗದು ಹರಿವು ಮತ್ತು ಹತೋಟಿಗೆ ಮತ್ತಷ್ಟು ಒತ್ತಡವನ್ನು ಉಂಟುಮಾಡುತ್ತದೆ. ಎಂದು ಹೇಳಿದ್ದಾರೆ.!!

ಜಿಯೋ ಮಾರುಕಟ್ಟೆಗೆ ಬಂದಾಗಿನಿಂದಲೂ ನಷ್ಟದಲ್ಲಿಯೇ ದೂಡುತ್ತಿರುವ ಏರ್‌ಟೆಲ್‌ಗೆ ಇದು ನುಂಗಲಾರದ ತುತ್ತಾಗಿದ್ದು, ಹಾಗಾದರೆ, ಏರ್‌ಟೆಲ್ ಎಷ್ಟು ನಷ್ಟ ಅನುಭವಿಸಿದೆ. ಏರ್‌ಟೆಲ್ ಇಷ್ಟು ನಷ್ಟ ಅನುಭವಿಸಲು ಕಾರಣ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1462 ಕೋಟಿಯಿಂದ 367 ಕೋಟಿಗೆ!!

1462 ಕೋಟಿಯಿಂದ 367 ಕೋಟಿಗೆ!!

ಏರ್‌ಟೆಲ್ ಈ ವರ್ಷದ ತ್ರೈಮಾಸಿಕ ಅವಧಿಯಲ್ಲಿ ತನ್ನ ಆದಾಯದ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ ಇದೇ ಜೂನ್ 30ರ ವೇಳೆಗೆ ಏರ್‌ಟೆಲ್‌ನ ಮೊದಲ ಮೂರು ತಿಂಗಳ ಲಾಭವು 1462 ಕೋಟಿಯಿಂದ 367 ಕೋಟಿಗೆ ಇಳಿಕೆಯಾಗಿದೆ!!

ಎಲ್ಲಾ ಜಿಯೋ ಎಫೆಕ್ಟ್!!

ಎಲ್ಲಾ ಜಿಯೋ ಎಫೆಕ್ಟ್!!

ಭಾರತೀಯ ಟೆಲಿಕಾಂನಲದಲ್ಲಿ ದಿಗ್ಗಜನಾಗಿ ಮೆರೆಯುತ್ತಿದ್ದ ಏರ್‌ಟೆಲ್ ಒಂದೇ ಭಾರಿ ಪಾತಳಕ್ಕಿಳಿಯಲು ನೇರವಾಗಿ ಜಿಯೋ ಕಾರಣವಾಗಿದೆ. ಮೊದಲ ಆರು ತಿಂಗಳು ಉಚಿತ ಸೇವೆ ನೀಡಿದ ನಂತರವೂ ಕಡಿಮೆ ಬೆಲೆಗೆ ಸೇವೆ ನೀಡಿದ ಜಿಯೋಯಿಂದ ಏರ್‌ಟೆಲ್ ಭಾರಿ ನಷ್ಟ ಅನುಭವಿಸಿದೆ.!!

ಡೇಟಾ ಬೆಲೆ ಕಡಿಮೆಯಾಗಿದೆ.!!

ಡೇಟಾ ಬೆಲೆ ಕಡಿಮೆಯಾಗಿದೆ.!!

ಕಳೆದ ವರ್ಷದ ತ್ರೈಮಾಸಿಕದಲ್ಲಿ ಏರ್‌ಟೆಲ್‌ನಿಂದ 158 ಬಿಲಿಯನ್ ಎಂಬಿ ಡೇಟಾ ಬಳಕೆಯಾಗಿದ್ದರೆ. ಈ ತ್ರೈಮಾಸಿಕದಲ್ಲಿ ಏರ್‌ಟೆಲ್ ಡೇಟಾ ಬಳಕೆ ಮೂರುಪಟ್ಟು ಹೆಚ್ಚಾಗಿದೆ.!! 472 ಶತಕೋಟಿ MB ಡೇಟಾವನ್ನು ಈ ವರ್ಷದ ತ್ರೈಮಾಸಿಕದಲ್ಲಿ ಏರ್‌ಟೆಲ್ ಬಳಕೆದಾರರು ಉಪಯೋಗಿಸಿದ್ದಾರೆ. ಆದರೆ, ಡೇಟಾ ಬೆಲೆ ಭಾರಿ ಕಡಿಮೆಯಾಗಿದೆ.!! ಇದು ಏರ್‌ಟೆಲ್‌ಗೆ ಬಹುದೊಡ್ಡ ಹೊಡೆತ ನೀಡಿದೆ.!!

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಶುರುವಾಗಿದೆ ಏರ್‌ಟೆಲ್‌ಗೆ ಭಯ!!

ಶುರುವಾಗಿದೆ ಏರ್‌ಟೆಲ್‌ಗೆ ಭಯ!!

ಇಷ್ಟು ದಿನ ಯಾವ ಟೆಲಿಕಾಂ ಕಂಪೆನಿಗಳ ಭಯವೂ ಇಲ್ಲದೇ ರಾಜನಂತಿದ್ದ ಏರ್‌ಟೆಲ್ ಇದೀಗ ಜಿಯೋಯಿಂದಾಗಿ ಮೊದಲ ಭಾರಿಗೆ ಭಯಪಟ್ಟಿದೆ.!! ಏರ್‌ಟೆಲ್ ಸಿಇಒ ಹೇಳಿದ ಮಾತುಗಳಲ್ಲೇ ಟೆಲಿಕಾಂ ವಲಯದ ಲಾಭ, ನಗದು ಹರಿವು ಮತ್ತು ಹತೋಟಿಗೆ ಮತ್ತಷ್ಟು ಒತ್ತಡ ಉಂಟಾಗಿ, ಏರ್‌ಟೆಲ್ ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚು!!

ಭವಿಷ್ಯದಲ್ಲಿ ಟೆಲಿಕಾಂ ಪರಿಸ್ಥಿತಿ ಏನು?

ಭವಿಷ್ಯದಲ್ಲಿ ಟೆಲಿಕಾಂ ಪರಿಸ್ಥಿತಿ ಏನು?

ಈಗಾಗಲೇ ದರಸಮರದಿಂದ ಕಂಗೆಟ್ಟಿರುವ ಟೆಲಿಕಾಂ ಸ್ಥಿತಿ ಭವಿಷ್ಯದಲ್ಲಿಯೂ ಏನೂ ಬದಲಾಗುವ ಪರಿಸ್ಥಿತಿಯಲ್ಲಿಲ್ಲ.!! ಜಿಯೋ ಈಗಲೂ ಕೂಡ ತನ್ನ ಸೇವೆಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದು, ಜಿಯತೆಗೆ ಉಚಿತ ಮೊಬೈಲ್ ನೀಡುತ್ತಿರುವುದರಿಂದ ಭವಿಷ್ಯದಲ್ಲಿ ಇತರ ಟೆಲಿಕಾಂ ಕಂಪೆನಿಗಳ ಸ್ಥಿತಿ ಅಯೋಮಯವಾಗಲಿದೆ.!!

ಓದಿರಿ:ಜಿಯೋ ಉಚಿತ ಫೋನ್‌ಗೆ ಮತ್ತೊಂದು ಟ್ವಿಸ್ಟ್..ಒಂದೇ ಸಿಮ್!..ಮತ್ತು__ಗೆ ಮಾತ್ರ ಸಪೋರ್ಟ್!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
India's largest telecom operator Bharti Airtel reported 75 percent decline in its first quarter profit from Rs 1,462 crore to 367 crores in the three months ended 30 June. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot