ಜಿಯೋ ನೀಡಿದೆ 200 ರೂ.ಗಿಂತಲೂ ಕಡಿಮೆ ಬೆಲೆಯ ಹೊಸ 5 ರೀಚಾರ್ಜ್ ಪ್ಲಾನ್!

|

ಹೊಸ ವರ್ಷದ ಸಂಭ್ರಮದಲ್ಲಿ ಇತ್ತೀಚಿಗಷ್ಟೇ ಭರ್ಜರಿ ಶೇ. 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡಿದ್ದ ರಿಲಾಯನ್ಸ್ ಜಿಯೋ ಈಗ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ದೇಶದ ಮೊಬೈಲ್​ ನೆಟ್​ವರ್ಕ್​ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ರಿಲಯನ್ಸ್​ ಜಿಯೋ ಇದೀಗ ಹೊಸ ವರ್ಷಕ್ಕಾಗಿ 200 ರೂ.ಗಿಂತಲೂ ಕಡಿಮೆ ಬೆಲೆಯ ಹೊಸ 5 ರೀಚಾರ್ಜ್ ಪ್ಲಾನ್‌ಗಳನ್ನು ಪ್ರಕಟಿಸಿದೆ.

ಜಿಯೋ ನೀಡಿದೆ 200 ರೂ.ಗಿಂತಲೂ ಕಡಿಮೆ ಬೆಲೆಯ ಹೊಸ 5 ರೀಚಾರ್ಜ್ ಪ್ಲಾನ್!

200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಪ್ಲಾನ್​ಗಳನ್ನು ಪ್ರಸ್ತುತ ಪಡಿಸಿರುವ ಜಿಯೋ, ಈ ಪ್ಲಾನ್​ಗಳಲ್ಲಿ ಡೇಟಾ, ಕರೆ ಮತ್ತು ಸಂದೇಶಗಳ ಕೊಡುಗೆಗಳನ್ನು ಒದಗಿಸಿದೆ. ವಿಶೇಷವಾಗಿ ಡೇಟಾ ಮಿತಿಯ ಬಳಿಕ ಕಡಿಮೆ ವೇಗದಲ್ಲಿ ಇಂಟರ್​ನೆಟ್​ ಅನ್ನು ಬಳಸಲು ಅನುಮತಿ ನೀಡಿದೆ. ಹಾಗಾದರೆ, ಜಿಯೋನೀಡಿರುವ ಹೊಸ 5 ರೀಚಾರ್ಜ್ ಪ್ಲಾನ್ ಹೇಗಿದೆ ಎಂಬುದನ್ನು ಮುಂದೆ ಓದಿರಿ.

19 ರೂ. ಜಿಯೋ ಪ್ಲಾನ್

19 ರೂ. ಜಿಯೋ ಪ್ಲಾನ್

ಜಿಯೋವಿನ 19 ರೂ. ರೀಚಾರ್ಜ್ ಮಾಡಿಕೊಂಡರೆ 0.15GB ಡೇಟಾ, ಅನಿಯಮಿತ ಕರೆ, 20 ಎಸ್​ಎಂಎಸ್​ಗಳ ಸೌಲಭ್ಯವನ್ನು ಪಡೆಯಬಹುದು. ಇದರೊಂದಿಗೆ ಜಿಯೋ ಆಪ್​ನ ಚಂದಾದಾರಿಕೆಯನ್ನು ಕೂಡ ನೀಡಲಾಗುತ್ತದೆ. ಹಾಗೆಯೇ 0.15GB ಡೇಟಾ ಮುಗಿದ ಬಳಿಕ 64 Kbps ಸ್ಪೀಡಿನಲ್ಲಿ ಉಚಿತ ಇಂಟರ್​ನೆಟ್​ ಬಳಸಿಕೊಳ್ಳಬಹುದು. ಆದರೆ ಇದರ ವಾಲಿಟಿಡಿ ಕೇವಲ 1 ದಿನವಾಗಿರಲಿದೆ.

52 ರೂ. ಜಿಯೋ ಪ್ಲಾನ್

52 ರೂ. ಜಿಯೋ ಪ್ಲಾನ್

ಜಿಯೋವಿನ ಈ ಪ್ಲಾನಿನಲ್ಲಿ ಒಂದು ವಾರದವರೆಗೆ ದಿನವೂ 0.15GB ಡೇಟಾ ಪಡೆಯುತ್ತೀರಿ. ಅಂದರೆ 7 ದಿನಗಳಿಗೆ ಒಟ್ಟು 1.05GB ಡೇಟಾ ನೀಡಲಾಗುತ್ತದೆ. ಈ ಡೇಟಾ ಮುಕ್ತಾಯದ ಬಳಿಕ 64 Kbps ವೇಗದಲ್ಲಿ ಉಚಿತ ಇಂಟರ್​ನೆಟ್​ನ್ನು ಜಿಯೋ ಒದಗಿಸಲಿದೆ. 52 ರೂ. ರೀಚಾರ್ಜ್​ನಲ್ಲಿ ​ಅನಿಯಮಿತ ಕರೆಯೊಂದಿಗೆ 70 ಎಸ್​ಎಂಎಸ್​ಗಳು ಲಭ್ಯವಿರಲಿದೆ.

98 ರೂ. ಜಿಯೋ ಪ್ಲಾನ್

98 ರೂ. ಜಿಯೋ ಪ್ಲಾನ್

28 ದಿನಗಳ ವಾಲಿಟಿಡಿಯೊಂದಿಗೆ ಅನಿಯಮಿತ ಕರೆಗಳ ಸೌಲಭ್ಯದ ಜೊತೆಗ 98 ರೂ. ಪ್ಲಾನ್​ನಲ್ಲಿ 2 GB ಡೇಟಾ ಮಾತ್ರ ನೀಡಲಾಗಿದೆ. ಡೇಟಾ ಮುಕ್ತಾಯದ ಬಳಿಕ 64 kbps ವೇಗದಲ್ಲಿ ಉಚಿತ ಇಂಟರ್​ನೆಟ್​ ಬಳಸಿಕೊಳ್ಳಬಹುದು. ಒಟ್ಟಾರೆ ನೋಡುವುದಾದರೆ ಈ ಪ್ಲಾನ್​ನಲ್ಲಿ 28 ದಿನಗಳ ಕಾಲ ಅನಿಯಮಿತ ಕರೆ ಮತ್ತು ನಿಯಮಿತ ಡೇಟಾ ಸಿಗಲಿದೆ.

149 ರೂ. ಜಿಯೋ ಪ್ಲಾನ್

149 ರೂ. ಜಿಯೋ ಪ್ಲಾನ್

ಈ ಯೋಜನೆ ಕೂಡ 28 ದಿನಗಳ ವಾಲಿಟಿಡಿ ಹೊಂದಿರುತ್ತದೆ. ಆದರೆ ಇಲ್ಲಿ ದಿನಕ್ಕೆ 1.5GB ಡೇಟಾದಂತೆ ಒಟ್ಟು 42GB ಡೇಟಾ ಸೌಲಭ್ಯ ಸಿಗುತ್ತದೆ. ಹಾಗೆಯೇ ಈ ಪ್ಲಾನ್​ನಲ್ಲಿ ಪ್ರತಿದಿನ ಅನಿಯಮಿತ ಕರೆ ಮತ್ತು 100 ಉಚಿತ ಎಸ್​ಎಂಎಸ್​ ದೊರೆಯುತ್ತದೆ. ಇಲ್ಲೂ ಕೂಡ ಡೈಲಿ ಡೇಟಾ ಮುಕ್ತಾಯದ ಬಳಿಕ 64 kbps ಸ್ಪೀಡಿನಲ್ಲಿ ಉಚಿತ ಇಂಟರ್​ನೆಟ್​ನ್ನು ಜಿಯೋ ನೀಡಲಿದೆ.

 198 ರೂ. ಜಿಯೋ ಪ್ಲಾನ್

198 ರೂ. ಜಿಯೋ ಪ್ಲಾನ್

ಈ ಪ್ಲಾನಿನಲ್ಲಿ ಜಿಯೋ ಗ್ರಾಹಕನಿಗೆ ಅನಿಯಮಿತ ಕರೆ, ಉಚಿತ ಎಸ್​ಎಂಎಸ್​ ಹಾಗೂ ಪ್ರತಿದಿನ 2GB ಡೇಟಾ ಸೇವೆ ಸಿಗಲಿದೆ. ಇದರ ವಾಲಿಟಿಡಿ ಕೂಡ 28 ದಿನಗಳಾಗಿದ್ದು, ದಿನದ ಡೇಟಾ ಮುಕ್ತಾಯದ ಬಳಿಕ 64 kbps ಸ್ಪೀಡಿನಲ್ಲಿ ಉಚಿತ ಇಂಟರ್​ನೆಟ್​ನ್ನು ಬಳಸಿಕೊಳ್ಳಬಹುದು. ಈ ಐದು ಪ್ಲಾನ್‌ಗಳು ಈಗ ಕೇವಲ 200 ರೂ.ಗಳಿಂಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ

Best Mobiles in India

English summary
Reliance jio five top plans under rs 200 which offers data voics. Cheapest Data Plans Under Rs 200 From Jio. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X