ಡೇಟಾ ಲೋಕವೇ ಅಲ್ಲಾಡುವ ಜಿಯೋ ಆಫರ್: ಲೀಕ್ ಮಾಹಿತಿಯಿಂದ ಅಲ್ಲೋಲ-ಕಲ್ಲೋಲ...!

|

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಗಳಿಗೆ ಸಾಕ್ಷಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ಮುಕೇಶ್ ಅಂಬಾನಿ ಗಿಗಾ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಈಗಾಗಲೇ ಅನಾವಣಗೊಳಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇದೇ ಮಾದರಿಯಲ್ಲಿ ಸಾಕಷ್ಟು ಕೂತುಹಲವಕ್ಕೆ ಕಾರಣವಾಗಿದ್ದ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯ ಪ್ರಿವ್ಯೂ ಆಫರ್ ಕುರಿತ ಮಾಹಿತಿಯೊಂದು ಲೀಕ್ ಆಗಿದೆ.

ಡೇಟಾ ಲೋಕವೇ ಅಲ್ಲಾಡುವ  ಜಿಯೋ ಆಫರ್: ಲೀಕ್ ಮಾಹಿತಿಯಿಂದ ಅಲ್ಲೋಲ-ಕಲ್ಲೋಲ...!

ಇದು ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಸೇವೆಯೂ ಆರಂಭದ ನಂತರಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಕಂಪನಿಗಳಿಗೆ ದೊಡ್ಡ ಮಟ್ಟದ ನಷ್ಟವಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಈ ಹೊಸದಾಗಿ ಲೀಕ್ ಆಗಿರುವ ಆಫರ್‌ಗಳ ಮಾಹಿತಿ. ಇದು ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಸೇರಿದಂತೆ ಹಲವು ಕಂಪನಿಗಳಿಗೆ ಬಿಸಿತುಪ್ಪವಾಗಿದೆ.

ಫ್ರೀ ಸೇವೆ ಮೂರು ತಿಂಗಳು:

ಫ್ರೀ ಸೇವೆ ಮೂರು ತಿಂಗಳು:

ಜಿಯೋ ಗಿಗಾ ಫೈಬರ್ ಪ್ರಿವ್ಯೂ ಆಫರ್ ಒಟ್ಟು 90 ದಿನಗಳ ಕಾಲ, ಅಂದರೆ ಮೂರು ತಿಂಗಳು ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ. ಈ ವೇಳೆ ಬಳಕೆದಾರರಿಗೆ 300 GB ಡೇಟಾ ಉಚಿತವಾಗಿ ಸಿಗಲಿದೆ. ಇದರ ಪ್ರಕಾರ ಪ್ರತಿ ತಿಂಗಳಿಗೆ 100 GB ಡೇಟಾ ಸಿಗುತ್ತದೆ.

ಮೈ ಜಿಯೋ ಆಪ್‌:

ಮೈ ಜಿಯೋ ಆಪ್‌:

ಇದಲ್ಲದೇ ಪ್ರಿವ್ಯೂ ಆಫರ್ ನಲ್ಲಿರುವ ಗ್ರಾಹಕರಿಗೆ ತನ್ನ ಮೈ ಜಿಯೋ ಆಪ್ ಮೂಲಕ ಹೆಚ್ಚುವರಿಯಾಗಿ 40 GB ಡೇಟಾವನ್ನು ಬಳಕೆಗೆ ದೊರೆಯಲಿದೆ. ಇದು 1 GBPS ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

Get 1GB free Jio 4G data with Cadbury Dairy Milk - KANNADA
ಕಾಸು ಕೊಡಬೇಕು:

ಕಾಸು ಕೊಡಬೇಕು:

ಆದರೆ ಜಿಯೋ ಸೇವೆಯನ್ನು ಉಚಿತವಾಗಿ ಪಡೆಯಬಹುದು ಆದರೆ ರೂಟರ್ ಗಳ ಭದ್ರತಾ ಠೇವಣಿಯಾಗಿ ರೂ.4,500 ಪಾವತಿಸಬೇಕು. ಅಷ್ಟೇ ಅಲ್ಲದೇ ಇನ್ಸ್ಟಾಲೇಷನ್ ಹಾಗೂ ಇತರೆ ಯಾವುದೇ ವೆಚ್ಚಗಳನ್ನು ನೀವು ಬರಿಸಬೇಕಾಗಿಲ್ಲ.

ಹಣ ಪಾವತಿ ಹೇಗೆ:

ಹಣ ಪಾವತಿ ಹೇಗೆ:

ನೀವು ಜಿಯೋಗೆ ಕ್ರೆಡಿಟ್, ಡೆಬಿಟ್ ಕಾರ್ಡ್, ಜಿಯೋ ಮನಿ, ಪೇಟಿಂಎ ಮೂಲಕ ಹಣವನ್ನು ಪಾವತಿಸಬೇಕಾಗುತ್ತದೆ. ಬಳಕೆ ಮಾಡಿದ ಬಳಿಕ ಈ ರೂಟರ್ ಬೇಡ ಎಂದಾದರೆ ರೂ.4,500 ನಿಮಗೆ ಹಿಂದಿರುಗಲಿದೆ.

1Gbps ಸ್ಪೀಡ್ ಮತ್ತು 4K video ಸ್ಟ್ರೀಮಿಂಗ್:

1Gbps ಸ್ಪೀಡ್ ಮತ್ತು 4K video ಸ್ಟ್ರೀಮಿಂಗ್:

ಜಿಯೋ ಗಿಗಾ ಫೈಬರ್ 1Gbps ಸ್ಪೀಡ್ ನ್ನು ಆಫರ್ ಮಾಡುತ್ತದೆ ಎಂದು ಕಂಪೆನಿ ತಿಳಿಸಿದೆ.ಬಳಕೆದಾರರು 4K video ಸ್ಪ್ರೀಮಿಂಗ್ ಗೆ ಅವಕಾಶ ನೀಡುತ್ತದೆ ಮತ್ತು ನೆಟ್ ವರ್ಕ್ ಮೂಲಕ VR ಗೇಮ್ಸ್ ಗೆ ಸಪೋರ್ಟ್ ಸಿಗುತ್ತದೆ.

1,100 ಸಿಟಿಗಳಲ್ಲಿ:

1,100 ಸಿಟಿಗಳಲ್ಲಿ:

ರಿಲಯನ್ಸ್ ಜಿಯೋ ಸಂಸ್ಥೆ ಗಿಗಾಫೈಬರ್ ಬ್ರಾಂಡ್ ಬ್ಯಾಂಡ್ ಸೇವೆಯನ್ನು ದೇಶದಾದ್ಯಂತ ಸುಮಾರು 1,100 ನಗರಗಳಲ್ಲಿ ಲಭ್ಯತೆ ಒದಗಿಸಲು ಪ್ಲಾನ್ ಮಾಡಿದೆ. ಈಗಾಗಲೇ ಸುಮಾರು 900 ಸಿಟಿಗಳಲ್ಲಿ ಇದರ ಸೇವೆಯನ್ನು ಆರಂಭಿಸಲಾಗಿದೆ.

ದೀಪಾವಳಿ ಕೊಡುಗೆ:

ದೀಪಾವಳಿ ಕೊಡುಗೆ:

ಇದುವರೆಗೂ ಕಂಪೆನಿಯು ಯಾವಾಗ ಅಧಿಕೃತವಾಗಿ ಬ್ರಾಡ್ ಬ್ಯಾಂಡ್ ಸೇವೆಯು ಬಿಡುಗಡೆಗೊಳ್ಳುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಆದರೆ ಈಗಾಗಲೇ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನವೆಂಬರ್ 6 ರ ಒಳಗೆ ಇದು ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಅಂದರೆ ದೀಪಾವಳಿ ಕೊಡುಗೆಯಾಗಿ ಗ್ರಾಹಕರಿಗೆ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಸಿಗಬಹುದು.

Best Mobiles in India

English summary
Reliance Jio GigaFibre broadband: All you need to know, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X