ಗೂಗಲ್-ಜಿಯೋ ದಿಂದ ಶೀಘ್ರವೇ ರೂ.2,000ಕ್ಕೆ ಉತ್ತಮ 4G ಸ್ಮಾರ್ಟ್‌ಪೋನ್..!!

ಗೂಗಲ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುವ ತವಕದಲ್ಲಿದೇ ಇವೇರೆಡು ಕಂಪನಿಗಳೂ ಸೇರೆ ಭಾರತೀಯ ಮಧ್ಯಮ ವರ್ಗಕ್ಕೆ ಗುರಿ ಇಟ್ಟಿವೆ.

|

ದೇಶಿಯ ಟೆಲಿಕಾಂ ವಲಯದ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಆರಂಭಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ಹಾಗೂ ಸರ್ಚ್ ಇಂಜಿನ್ ಸೇರಿದಂತೆ ಅಂತರ್ಜಾಲದ ಕೀಲಿಕೈ ಯಾಗಿರುವ ಗೂಗಲ್ ಒಂದಾಗಿ ಹೊಸದೊಂದು ಕಾರ್ಯಕ್ಕೆ ಜೊತೆಯಾಗಿರುವ ವಿಚಾರ ಸದ್ಯ ತಿಳಿದಿರುವ ವಿಚಾರವಾಗಿದೆ.

ಗೂಗಲ್-ಜಿಯೋ ದಿಂದ ಶೀಘ್ರವೇ ರೂ.2,000ಕ್ಕೆ ಉತ್ತಮ 4G ಸ್ಮಾರ್ಟ್‌ಪೋನ್..!!

ಓದಿರಿ: ಸ್ನಾರ್ಟ್‌ಪೋನಿನಲ್ಲಿ ಗೇಮಿಂಗ್ ವೇಗವನ್ನು ಹೆಚ್ಚಿಸಿಕೊಳ್ಳುವು ಹೇಗೆ..?

ಈ ಎರಡು ಸಂಸ್ಥೆಗಳು ಒಂದಕ್ಕೊಂದು ಸಹಾಯ ಮಾಡಲಿದ್ದು, ಜಿಯೋ ಸದ್ಯ ದೇಶದಲ್ಲಿ ಅತೀ ವೇಗದ 4G ನೆಟ್‌ವರ್ಕ್ ಜಾಲವನ್ನು ಹೊಂದಿದೆ. ಅಲ್ಲದೇ ದೇಶದಲ್ಲೇ ಅತೀವೇಗವಾಗಿ 10 ಕೋಟಿಗೂ ಹೆಚ್ಚು ಜನರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ. ಇದೇ ಮಾದರಿಯಲ್ಲಿ ಗೂಗಲ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುವ ತವಕದಲ್ಲಿದೇ ಇವೇರೆಡು ಕಂಪನಿಗಳೂ ಸೇರೆ ಭಾರತೀಯ ಮಧ್ಯಮ ವರ್ಗಕ್ಕೆ ಗುರಿ ಇಟ್ಟಿವೆ.

ಜಿಯೋ ನೆಟ್‌ವರ್ಕ್‌ನಲ್ಲಿ ಮಾತ್ರ ಕಾರ್ಯ ನಿರ್ವಹಿಸಿಸುವ ಸ್ಮಾರ್ಟ್‌ಪೋನ್:

ಜಿಯೋ ನೆಟ್‌ವರ್ಕ್‌ನಲ್ಲಿ ಮಾತ್ರ ಕಾರ್ಯ ನಿರ್ವಹಿಸಿಸುವ ಸ್ಮಾರ್ಟ್‌ಪೋನ್:

ಗೂಗಲ್ ಸಹ ಭಾರತೀಯ ಗ್ರಾಮೀಣ ಪ್ರದೇಶವನ್ನು ಗುರಿಯಾಗಿರಿಸಿಕೊಂಡು 200೦ ರೂಗಳಿಗೆ ಆಂಡ್ರಾಯ್ಡ್ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡುವುದಾಗಿ ಈ ಹಿಂದೆಯೇ ತಿಳಿಸಿತ್ತು. ಅದರಂತೆ ಈಗ ಜಿಯೋ ಜೊತೆಗೆ ಸೇರಿ ಈ ಆಶ್ವಾಸನೆಯನ್ನು ಪೂರೈಸಲು ಮುಂದಾಗಿದೆ. ಜಿಯೋ ನೆಟ್‌ವರ್ಕ್‌ನಲ್ಲಿ ಮಾತ್ರ ಬಳಕೆಯಾಗುವಂತಹ 4G ಸ್ಮಾರ್ಟ್‌ಪೋನುಗಳನ್ನು ತಯಾರಿಸಲು ಮುಂದಾಗಿದೆ.

 ರೂ. 2000ಕ್ಕೆ 4G ಸ್ಮಾರ್ಟ್‌ಪೋನು:

ರೂ. 2000ಕ್ಕೆ 4G ಸ್ಮಾರ್ಟ್‌ಪೋನು:

ಗೂಗಲ್ ಜಿಯೋ ಜೊತೆಗೆ ಒಪ್ಪಂದ ಮಾಡಿಕೊಂಡಿರುವಂತೆ ಭಾರತೀಯ ಮಾರುಕಟ್ಟೆಯಲ್ಲಿ 2000 ರೂಗಳಿಗೆ ಆಂಡ್ರಾಯ್ಡ್ ಸ್ಮಾರ್ಟ್‌ಪೋನನ್ನು ಅಭಿವೃದ್ಧಿ ಪಡಿಸಲಿವೆ. ಈಗಾಗಲೇ LYF ಮೊಬೈಲ್ ಮೂಲಕ 1000 ರೂಗಳಿಗೆ ಫೀಚರ್‌ ಪೋನ್ನು ಬಿಡುಗಡೆ ಮಾಡಲು ಮುಂದಾಗಿರುವ ಜಿಯೋ ಈಗ ರೂ. 2000ಕ್ಕೆ 4G ಸ್ಮಾರ್ಟ್‌ಪೋನು ತಯಾರಿಸಲು ಮುಂದಾಗಿದೆ.

 ಈ ವರ್ಷದ ಕೊನೆಗೆ ಮಾರುಕಟ್ಟೆಗೆ:

ಈ ವರ್ಷದ ಕೊನೆಗೆ ಮಾರುಕಟ್ಟೆಗೆ:

ಜಿಯೋ-ಗೂಗಲ್ ಜಂಟಿ ಸಾರಾಥ್ಯದಲ್ಲಿ ಬಿಡುಗಡೆಯಾಗಲಿರುವ 2000 ರೂ. ಬೆಲೆಯ 4G ಸ್ಮಾರ್ಟ್‌ಪೋನು ಈ ವರ್ಷದ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನುವ ಮಾತುಗಳು ಟೆಲಿಕಾಂ ವಲಯದಿಂದ ಕೇಳಿಬಂದಿದೆ. ಈಗಾಗಲೇ ಪೋನಿನ ವಿನ್ಯಾಸ ರೆಡಿಯಾಗಿದ್ದು, ತಯಾರಿಕೆಯೊಂದು ಬಾಕಿ ಉಳಿದಿದೆ ಎನ್ನಲಾಗಿದ್ದು, ಈ ಪೋನುಗಳು ಚೀನಾದಲ್ಲಿ ತಯಾರಾಗಲಿದೆ ಎನ್ನುವ ಮಾಹಿತಿ ದೊರೆತಿದೆ.

ದೇಶದ ಮೂಲೆ ಮೂಲೆಗೆಗೂ ಇಂಟರ್‌ನೆಟ್:

ದೇಶದ ಮೂಲೆ ಮೂಲೆಗೆಗೂ ಇಂಟರ್‌ನೆಟ್:

ಜಿಯೋ ಜತೆ ಸೇರಿರುವ ಗೂಗಲ್ ಭಾರತದ ಪ್ರತಿ ಮೂಲೆಗೂ ಇಂಟರ್‌ನೆಟ್ ಸೇವೆಯನ್ನು ನೀಡುವ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ಜಿಯೋ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ ವ್ಯಾಪ್ತಿಯನ್ನು ವಿಸ್ತರಿಸುವ ಕ್ರಮಕ್ಕೂ ಮುಂದಾಗಲಿದೆ ಎನ್ನಲಾಗಿದೆ. ಗೂಗಲ್ ಸಹಾಯದಿಂದ ಜಿಯೋ 4G ಸೇವೆಗೆ ಮತ್ತಷ್ಟು ವೇಗ ನೀಡಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದೆ.

ಮತ್ತೆ ಜೀವ ಪಡೆಯಲಿದೆ ಆಂಡ್ರಾಯ್ಡ್‌ ಓನ್:

ಮತ್ತೆ ಜೀವ ಪಡೆಯಲಿದೆ ಆಂಡ್ರಾಯ್ಡ್‌ ಓನ್:

ಗೂಗಲ್ ಕನಸಾಗಿದ್ದ ಆಂಡ್ರಾಯ್‌ ಓನ್ ಸ್ಮಾರ್ಟ್‌ಪೋನಗಳ ಕನಸು ಮತ್ತೆ ಚಿಗುರಲಿದ್ದು, ಜಿಯೋ ಪೋನಿನ ಮೂಲಕ ತನ್ನ ಆಂಡ್ರಾಯ್ಡ್ ಓನ್ ಯೋಜನೆಯನ್ನು ಮುಂದುವರೆಸಲಿದ್ದು, ಕಡಿಮೆ ವೆಚ್ಚದ ಸ್ಮಾರ್ಟ್‌ಪೋನುಗಳಿಗೆ ಗೂಗಲ್ ಆಂಡ್ರಾಯ್ಡ್ ಸರ್ಟಿಫಿಕೆಟ್ ನೀಡುವ ಯೋಜನೆ ಇದಾಗಿದೆ.

ಜಿಯೋ ಡಿಜಿಟಲ್ ಟಿವಿ:

ಜಿಯೋ ಡಿಜಿಟಲ್ ಟಿವಿ:

ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ಡಿಟಿಹೆಚ್ ತಂತ್ರಜ್ಞಾನಕ್ಕೆ ತೀಲಾಂಜಲಿ ಇಟ್ಟು ಹೊಸ ಮಾದರಿಯ ಸ್ಮಾರ್ಟ್‌ ಸೆಟಪ್‌ಬಾಕ್ಸ್‌ಗಳನ್ನು ತಯಾರಿಸಲು ಗೂಗಲ್ ನೊಂದಿಗೆ ಜಿಯೋ ಮಾತುಕತೆ ನಡೆಸಿದ್ದು, ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸುವುದಾಗಿ ಗೂಗಲ್ ತಿಳಿಸಿದೆ ಎನ್ನಲಾಗಿದೆ. ಇಂಟರ್ನೆಟ್ ಬಳೆಕೆಯಿಂದಲ್ಲೇ ಈ ಟಿವಿಗಳು ಬಳಕೆಯಾಗುವಂತೆ ಮಾಡುವುದಲ್ಲದೇ ಅದನ್ನು ಸ್ಮಾರ್ಟ್‌ ಮಾಡುವ ಪ್ರಯತ್ನ ನಡೆಯಲಿದೆ.

Best Mobiles in India

Read more about:
English summary
The Google-branding will help Reliance Jio sell the smartphone to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X