ದಸರಾ ಪ್ರಯುಕ್ತ 'ಜಿಯೋ ವೆಲ್ಕಮ್ ಆಫರ್' ಪ್ರಕಟ! ಆಫರ್‌ನಲ್ಲಿ ಏನಿದೆ?

|

ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್‌ ಜಿಯೋ ದಸರಾ ಪ್ರಯುಕ್ತ ತನ್ನ ಬಳಕೆದಾರರಿಗೆ ಬಿಗ್‌ ಗಿಫ್ಟ್‌ ನೀಡಿದೆ. ಭಾರತದಲ್ಲಿ 5G ಸೇವೆಗಳ ಬಿಟಾ ಟ್ರಯಲ್‌ ಪ್ರಾರಂಭಿಸಲು ಮುಂದಾಗಿರುವ ಜಿಯೋ 'ಜಿಯೋ ವೆಲ್ಕಮ್ ಆಫರ್' ಅನ್ನು ಘೋಷಿಸಿದೆ. ಅದರಂತೆ ದಸರಾದಂದು ಭಾರತದ ಪ್ರಮುಖ ನಾಲ್ಕು ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ 5G ಸೇವೆಯ ಬೀಟಾ ಟ್ರಯಲ್‌ ಅನ್ನು ಪ್ರಾರಂಭಿಸಿದೆ. ಈ ಟ್ರಯಲ್‌ನಲ್ಲಿ ಭಾಗವಹಿಸುವರಿಗೆ ಜಿಯೋದ ವೆಲ್‌ಕಮ್‌ ಆಫರ್‌ ಲಭ್ಯವಾಗಲಿದೆ.

ಜಿಯೋ

ಹೌದು, ಜಿಯೋ ಭಾರತದಲ್ಲಿ ದಸರಾ ಪ್ರಯುಕ್ತ 'ಜಿಯೋ ವೆಲ್ಕಮ್ ಆಫರ್' ಪ್ರಕಟಿಸಿದೆ. ದಸರಾ ಪ್ರಯುಕ್ತ ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಜಿಯೋ 5G ಬೀಟಾ ಟ್ರಯಲ್‌ ಅನ್ನು ಪ್ರಾರಂಭಿಸಲಿದೆ. ಇನ್ವೈಟ್‌ ಆಧಾರದ ಮೇಲೆ ಜಿಯೋ 5G ಬೀಟಾ ಟ್ರಯಲ್‌ಗೆ ಆಯ್ಕೆಯಾದ ಬಳಕೆದಾರರಿಗೆ ಈ ಆಫರ್‌ ಲಭ್ಯವಾಗಲಿದೆ. ಹಾಗಾದ್ರೆ ಜಿಯೋ 5G ಬೀಟಾ ಟ್ರಯಲ್‌ ಅವಧಿಯಲ್ಲಿ ಬಳಕೆದಾರರಿಗೆ ಏನೆಲ್ಲಾ ಆಫರ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ 5G

ಜಿಯೋ 5G ಬೀಟಾ ಟ್ರಯಲ್‌ನಲ್ಲಿ ಭಾಗವಹಿಸುವ ಬಳಕೆದಾರರಿಗೆ ಜಿಯೋ ವೆಲ್ಕಮ್‌ ಆಫರ್‌ ಪ್ರಕಟಿಸಿದೆ. ಅದರಂತೆ ಈ ಟ್ರಯಲ್‌ನಲ್ಲಿ ಭಾಗವಹಿಸುವ ಬಳಕೆದಾರರು 1 Gbps ವೇಗದೊಂದಿಗೆ ಅನಿಯಮಿತ 5G ಡೇಟಾಗೆ ಪ್ರವೇಶವನ್ನು ಪಡೆದುಕೊಳ್ಳಲಿದ್ದಾರೆ. ಈಗಾಗಲೇ ದೀಪಾವಳಿ ವೇಳೆಗೆ ಭಾರತದಲ್ಲಿ ಆಯ್ದ ಪ್ರಮುಖ ನಗರಗಳಲ್ಲಿ 5G ಸೇವೆ ನೀಡುವುದಾಗಿ ಘೋಷಿಸಿರುವ ಜಿಯೋ ದಸರಾ ಹಬ್ಬದಂದು ತನ್ನ 5G ಬೀಟಾ ಟ್ರಯಲ್‌ ಆರಂಭಿಸಲಿದೆ.

ಕಾಂಗ್ರೆಸ್

ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾರಂಭದಲ್ಲಿ ತನ್ನ ಟ್ರೂ 5G ಸೇವೆಗಳ ಪ್ರದರ್ಶನವನ್ನು ನೀಡಿರುವ ಜಿಯೋ, ತನ್ನ ಟ್ರೂ-5G ಸೇವೆಗಳ ಬೀಟಾ ಪ್ರಯೋಗವನ್ನು ದಸರಾದ ಪ್ರಯುಕ್ತ ಪ್ರಾರಂಭಿಸಲು ಮುಂದಾಗಿದೆ. 5G ಬೀಟಾ ಟ್ರಯಲ್‌ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಗರದಲ್ಲಿ ಲಭ್ಯವಾಗಲಿದೆ ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಈ ಟ್ರಯಲ್‌ನಲ್ಲಿ ಜಿಯೋ ಸಿಮ್‌ ಬಳಸುವ ಗ್ರಾಹಕರು ಯಾವುದೇ ಬದಲಾವಣೆಯಿಲ್ಲದೆ ಸ್ವಯಂಚಾಲಿತವಾಗಿ ಜಿಯೋ ಟ್ರೂ 5G ಸೇವೆಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಜಿಯೋ 5G

ಜಿಯೋ 5G ಬೀಟಾ ಟ್ರಯಲ್‌ ಸಮಯದಲ್ಲಿ ಗ್ರಾಹಕರು ಜಿಯೋ 4G ಪ್ಲಾನ್‌ಗಳ ಮೂಲಕವೇ 5G ಡೇಟಾವನ್ನು ಬಳಸಬಹುದಾಗಿದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾದ ಅಗತ್ಯವಿಲ್ಲ ಎಂದು ಜಿಯೋ ಹೇಳಿದೆ. ಇದೇ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಮಾತನಾಡಿ, 5Gಯನ್ನು ಅಳವಡಿಸಿಕೊಳ್ಳುವ ಮೂಲಕ, ಜಿಯೋ ಕೌಶಲ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಅಂತಹ ಅನೇಕ ಕ್ಷೇತ್ರಗಳನ್ನು ಪರಿವರ್ತಿಸಬಹುದಾಗಿದೆ ಎಂದು ಭರವಸೆ ನೀಡಿದ್ದಾರೆ.

ಆಕ್ಟೋಬರ್‌

ಇನ್ನು ಆಕ್ಟೋಬರ್‌ 1ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾರತದಲ್ಲಿ 5G ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ಕ್ವಾಲ್‌ಕಾಮ್‌ ಕಂಪೆನಿಗಳು ತಮ್ಮ 5G ಸೇವೆಗಳು ಮತ್ತು ಅದರ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಪ್ರದರ್ಶನವನ್ನು ಮಾಡಿವೆ.

ಪರಿಚಯಿಸಲಾಗುತ್ತಿದೆ

ಸದ್ಯ ಭಾರತದಲ್ಲಿ 5G ಸೇವೆಯನ್ನು ಕೆಲವು ಆಯ್ದ ಮೆಟ್ರೋ ನಗರಗಳಲ್ಲಿ ಪರಿಚಯಿಸಲಾಗುತ್ತಿದೆ. ಇದರಲ್ಲಿ ಭಾರತದಲ್ಲಿ 13 ಪ್ರಮುಖ ನಗರಗಳಾದ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ಸೇರಿವೆ. ಈ ನಗರಗಳಲ್ಲಿ 5G ಸೇವೆ ದೀಪಾವಳಿ ಸಮಯದಲ್ಲಿ ಆರಂಭವಾಗಲಿದೆ. ಇದರಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ಮೊದಲು ತಮ್ಮ 5G ಸೇವೆ ಪ್ರಾರಂಭಿಸಲಿವೆ.

Best Mobiles in India

English summary
Reliance Jio has announced a 'Jio Welcome Offer' on Dussehra

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X