ಫೇಸ್‌ಬುಕ್ ಅನ್ನೇ ಮೀರಿಸಿದ ಜಿಯೋ: ಅಂಬಾನಿಗೆ ಮತ್ತೊಂದು ಗರಿ..!

|

ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜಿಯೋದಿಂದಾಗಿಯೇ ಜಗತ್ತು ಭಾರತದ ಕಡೆ ತಿರುಗುವಂತೆ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಖ್ಯಾತ ಟೆಕ್ ಕಂಪನಿಗಳು ಭಾರತಕ್ಕಾಗಿಯೇ ತಮ್ಮ ಯೋಜನೆಯನ್ನು ರೂಪಿಸುವಂತೆ ಮಾಡುವಲ್ಲಿ ಅಂಬಾನಿ ಮಾಲೀಕತ್ವದ ಜಿಯೋ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪಾತ್ರವನ್ನು ವಹಿಸಿದೆ. ಈ ಹಿನ್ನಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಹೊಂದಿದೆ. ಈ ಕುರಿತು ವರದಿಯೊಂದು ಹೊರಬಂದಿದೆ.

ಫೇಸ್‌ಬುಕ್ ಅನ್ನೇ ಮೀರಿಸಿದ ಜಿಯೋ: ಅಂಬಾನಿಗೆ ಮತ್ತೊಂದು ಗರಿ..!

ಮಾರುಕಟ್ಟೆಯಲ್ಲಿ ಕೇವಲ ಉಚಿತ ಡೇಟಾವನ್ನು ಮಾತ್ರವೇ ನೀಡುವುದಲ್ಲದೇ ಎಲ್ಲಾ ಮಾದರಿಯಲ್ಲಿಯೂ ಬಳಕೆದಾರರಿಗೆ ಖಚಿತ ಭರವಸೆಯನ್ನು ನೀಡುವ ಮೂಲಕ ನಂಬಿಕೆಗೆ ಪಾತ್ರವಾಗಿದೆ. ಜಿಯೋ ಹೆಸರಿನಲ್ಲಿ ಅಂಬಾನಿ ಆರಂಭಿಸಿದೆಲ್ಲವೂ ಚಿನ್ನವಾಗುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಅನ್ನು ಮೀರಿಸುಂತೆ ಖ್ಯಾತಿಯನ್ನು ಜಿಯೋ ಪಡೆದುಕೊಂಡಿದೆ.

ಟಾಪ್ ಕಂಪನಿ:

ಟಾಪ್ ಕಂಪನಿ:

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಭಾವನ್ನು ಹೊಂದಿರುವ ಟಾಪ್ ಟೆನ್ ಕಂಪನಿಗಳಲ್ಲಿ ಗೂಗಲ್ ಮತ್ತು ಅಮೆಜಾನ್ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಇದೇ ಮಾದರಿಯಲ್ಲಿ ರಿಲಯನ್ಸ್ ಜಿಯೋ ಮೂರನೇ ಸ್ಥಾನದಲ್ಲಿದೆ. ಫೇಸ್‌ಬುಕ್ ಅನ್ನು ಮೀರಿಸಿರುವ ಜಿಯೋ ಮೂರನೇ ಸ್ಥಾನದಲ್ಲಿದೆ. ಫೇಸ್‌ಬುಕ್ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಪಟ್ಟಿ ಹೀಗಿದೆ:

ಪಟ್ಟಿ ಹೀಗಿದೆ:

ಮೊದಲ ಸ್ಥಾನದಲ್ಲಿ ಗೂಗಲ್ ಕಾಣಿಸಿಕೊಂಡಿದೆ. ನಂತರದಲ್ಲಿ ಅಮೆಜಾನ್, ಜಿಯೋ, ಫೇಸ್‌ಬುಕ್, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್, ಪತಾಂಜಲಿ, ಮೈಕ್ರೋಸಾಫ್ಟ್, ಐಫೋನ್, ಆಪಲ್ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಜಿಯೋ ಪ್ರಭಾವ:

ಜಿಯೋ ಪ್ರಭಾವ:

ಜಿಯೋ ಕೇವಲ ಟೆಲಿಕಾಂ ಕ್ಷೇತ್ರ ಮಾತ್ರವಲ್ಲದೇ ಬ್ರಾಂಡ್ ಬ್ಯಾಂಡ್ ಲೋಕಕ್ಕೂ ಕಾಲಿಟ್ಟಿದೆ. ಇದಲ್ಲದೇ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿದೆ. ಇದಲ್ಲದೇ ಜಿಯೋ ಹೆಸರಿನಲ್ಲಿ ಆನ್‌ಲೈನ್ ಸ್ಟೋರ್ ವೊಂದನ್ನು ತರೆಯುವ ಯೋಜನೆಯೂ ಅಂಬಾನಿ ತಲೆಯಲ್ಲಿ ಇದೆ ಎನ್ನಲಾಗಿದೆ.

ಜಾಗತಿಕವಾಗಿಯೂ ಹೆಸರು:

ಜಾಗತಿಕವಾಗಿಯೂ ಹೆಸರು:

ಜಿಯೋ ಭಾರತದ ಗಡಿಯನ್ನು ದಾಟಿ ಸದ್ದು ಮಾಡಿದೆ. ಇಡೀ ವಿಶ್ವಕ್ಕೆ ಕೇಬಲ್ ಮೂಲಕ ಅಂತರ್ಜಾಲ ಸಂಪರ್ಕವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಅಲ್ಲದೇ ದೇಶವನ್ನು ಟಾಪ್ ಒನ್ ಡೇಟಾ ಬಳಸುವ ರಾಷ್ಟ್ರ ಎನ್ನುವ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನುವ ಕಾರಣಕ್ಕೆ ಬಳಷ್ಟು ಖ್ಯಾತಿಯನ್ನು ಸಮುದ್ರದ ಆಚೆಯೂ ಪಡೆದುಕೊಂಡಿದೆ.

Best Mobiles in India

English summary
Reliance Jio is the third most influential brand in India after Google and Amazon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X