Subscribe to Gizbot

ಬಳಕೆದಾರರನ್ನು ಮೂರ್ಖರನ್ನಾಗಿ ಮಾಡಿದ ಜಿಯೋ..!

Written By:

ಮಾರ್ಚ್ 31ಕ್ಕೆ ಪ್ರೈಮ್ ಸದಸ್ಯತ್ವ ಕೊನೆಯಾಗಲಿದ್ದು, ಜಿಯೋ ಅಂದು ಹೊಸ ಸೇವೆಯನ್ನು ನೀಡಲಿದೆ ಎಂದು ಕಾಯುತ್ತ ಕುಳಿತಿದ್ದ ಬಳಕೆದಾರರನ್ನು ತನ್ನ ಹೊಸ ಆಡ್ ಮೂಲಕ ಜಿಯೋ ಮೂರ್ಖರನ್ನಾಗಿಸಿದೆ. ಜಿಯೋ ಜ್ಯೂಸ್ ಎನ್ನುವ ಬ್ಯಾಟರಿ ಸೇವರ್ ಆಪ್ ವೊಂದನ್ನು ಬಿಡುಗಡೆ ಮಾಡಲಿದೆ ಎನ್ನವ ಆಡ್ ವೊಂದನ್ನು ಬಿಡುಗಡೆ ಮಾಡುವ ಮೂಲಕ ಹೊಸದೊಂದು ಸೇವೆಯನ್ನು ನೀಡುವುದಾಗಿ ಹೇಳಿತ್ತು.

ಬಳಕೆದಾರರನ್ನು ಮೂರ್ಖರನ್ನಾಗಿ ಮಾಡಿದ ಜಿಯೋ..!

ಆದರೆ ಜಿಯೋ ನೀಡಿದ್ದ ಹೊಸ ಆಡ್‌ ನೋಡಿ ಹಲವು ಬಳಕೆದಾರರು ಹೊಸ ಆಪ್ ಬರಲಿದೆ ಎಂದು ನಂಬಿದ್ದರು ಸಹ. ಆದರೆ ಇದು ಏಪ್ರಿಲ್ 1 ರಂದು ಮೂರ್ಖರ ದಿನ ಆಗಿದ್ದರಿಂದ ಬಳಕೆದಾರರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಎನ್ನಲಾಗಿದೆ. ಇದರಲ್ಲಿ ಜಿಯೋ ಯಶಸ್ಸು ಸಹ ಆಗಿದೆ.

ಜಿಯೋ ಜ್ಯೂಸ್ ಕುರಿತು ಆಡ್ ವೊಂದನ್ನು ಬಿಡುಗಡೆ ಮಾಡಿದ ಜಿಯೋ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಖಾಲಿಯಾಗುವುದಿಲ್ಲ, ಪೋನಿಗೆ ಜಿಯೋ ಸಿಮ್ ಹಾಕಿದೆರೆ ಸಾಕು, ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಆಗಲಿದೆ ಎನ್ನುವ ಆಡ್ ವೊಂದನ್ನು ನೀಡಿತ್ತು. ಆದರೆ ಇದು ಸುಳ್ಳು ಎನ್ನಲಾಗಿದ್ದು, ಮೂರ್ಖರ ದಿನದ ಅಂಗ ಬಿಡುಗಡೆ ಮಾಡಲಾದ ಆಡ್ ಎನ್ನಲಾಗಿದ್ದು, ಬಳಕೆದಾರರ ಗಮನವನ್ನು ಸೆಳೆದು ಮೂರ್ಖರನ್ನಾಗಿ ಮಾಡುವುದು ಇದರ ಉದ್ದೇಶವಾಗಿತ್ತು.

ಬಳಕೆದಾರರನ್ನು ಮೂರ್ಖರನ್ನಾಗಿ ಮಾಡಿದ ಜಿಯೋ..!

ಇದಲ್ಲದೇ ಜಿಯೋ ಮಾರ್ಚ್ 31ಕ್ಕಿಂತಲೂ ಮುಂಚೆಯೇ ಪ್ರೈಮ್ ಸದಸ್ಯರಿಗೆ ಒಂದು ವರ್ಷದ ಉಚಿತ ಸೇವೆಯನ್ನು ನೀಡುವುದಾಗಿ ತಿಳಿಸಿತ್ತು. ಆದರೆ ಬಳಕೆದಾರರು ಜಿಯೋ ಜ್ಯೂಸ್ ಬ್ಯಾಟರಿ ಸೇವಿಂಗ್ ಆಪ್‌ ಬರುವಿಕೆಯನ್ನು ಕಾಯುತ್ತಿದ್ದರೂ ಎನ್ನಲಾಗಿದೆ. ಒಟ್ಟಿನಲ್ಲಿ ಏಪ್ರಿಲ್ ಒಂದಕ್ಕೆ ಬಳಕೆದಾರನ್ನು ಜಿಯೋ ಉತ್ತಮವಾಗಿ ಮೂರ್ಖರನ್ನಾಗಿ ಮಾಡಿದೆ.

ಇದೇ ಮಾದರಿಯಲ್ಲಿ ಒಲಾದಿಂದ ಜನರನ್ನು ಮೂರ್ಖರನ್ನಾಗಿಸುವ ಯೋಜನೆಯನ್ನು ಮಾಡಲಾಗಿತ್ತು. ಇದಕ್ಕಾಗಿಯೇ ಒಲಾ ನೆಟ್‌ವರ್ಕ್ ಆರಂಭಿಸುವ ಆಡ್‌ಗಳನ್ನು ನೀಡಿತ್ತು. ಆದರೆ ಇದು ಸಹ ಮೂರ್ಖರ ದಿನಾಚರಣೆಯ ಅಂಗವಾಗಿ ಮಾಡಲಾಗಿದ್ದ ವಿಡಿಯೋ ಎನ್ನಲಾಗಿದೆ.

English summary
Reliance Jio Juice Best April Fool. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot