ಹ್ಯಾಪಿ ನ್ಯೂ ಇಯರ್ ಆಫರ್ ಪ್ರಶ್ನಿಸಿದ್ದ ಟ್ರಾಯ್‌ಗೆ ಉತ್ತರ ನೀಡಿದ ಜಿಯೋ: ಹೊಸ ಆಫರ್ ಬಗ್ಗೆ ಹೇಳಿದ್ದೇನು..?

Written By:

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಲಾಂಚ್ ಆದ ವೇಳೆಯಲ್ಲಿ ವೆಲ್‌ಕಮ್ ಆಫರ್ ಎಂದು 90 ದಿನಗಳ ಉಚಿತ ಡೇಟಾ ಮತ್ತು ಉಚಿತ ಕರೆ ಮಾಡುವ ಕೊಡುಗೆ ನೀಡಿತ್ತು. ಈ ಆಫರ್ ಡಿಸೆಂಬರ್ 31ಕ್ಕೆ ಕೊನೆಯಾಗುತ್ತಿತ್ತು. ಈ ಮತ್ತೆ ಹ್ಯಾಪಿ ನ್ಯೂ ಇಯರ್ ಅನ್ನು ಹೆಸರಿನಲ್ಲಿ ಮತ್ತೆ ಈ ಉಚಿತ ಕೊಡುಗೆಯನ್ನು 90 ದಿನಗಳ ಕಾಲ ವಿಸ್ತರಿಸಿತ್ತು.

ದೇಶದಲ್ಲಿ ಪ್ರಥಮವಾಗಿ ಬೆಂಗಳೂರಿನಲ್ಲಿ 4G ಸೇವೆ ಆರಂಭಿಸಿದ ಬಿಎಸ್ಎನ್ಎಲ್

ಈ ಕುರಿತು ಇತರೆ ಟೆಲಿಕಾಂ ಕಂಪನಿಗಳು ಚಕಾರ ಎತ್ತಿದವು. ಹಾಗಾಗಿ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತು ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್ ಪ್ರಶ್ನೆ ಮಾಡಿತ್ತು. ಸದ್ಯ ಈ ಪ್ರಶ್ನೆಗೆ ಜಿಯೋ ಉತ್ತರ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಸ್ತರವಾಗಿ ಉತ್ತರಿಸಿದ ಜಿಯೋ:

ವಿಸ್ತರವಾಗಿ ಉತ್ತರಿಸಿದ ಜಿಯೋ:

ಹ್ಯಾಪಿ ನ್ಯೂ ಇಯರ್ ಆಫರ್ ನೀಡಿರುವುದಕ್ಕೇ ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಪ್ರಶ್ನೆ ಮಾಡಿತ್ತು. ಅದಕ್ಕೆ ಉತ್ತರ ನೀಡಿರುವ ಜಿಯೋ, ಟ್ರಾಯ್ ಗೆ ಡಿಟೈಲ್ ಉತ್ತರವೊಂದನ್ನು ನೀಡಿದ್ದು, ಹ್ಯಾಪಿ ನ್ಯೂ ಇಯರ್ ಆಫರ್ ಈ ಹಿಂದಿನ ವೆಲ್‌ಕಮ್ ಆಫರ್ ಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ವಿಸ್ತರವಾಗಿ ವಿವರಿಸಿ ಹೇಳಿದೆ.

ಅದೇ ಬೇರೆ ಆಫರ್, ಇದೇ ಬೇರೆ ಆಫರ್

ಅದೇ ಬೇರೆ ಆಫರ್, ಇದೇ ಬೇರೆ ಆಫರ್

ಹ್ಯಾಪಿ ನ್ಯೂ ಇಯರ್ ಆಫರ್ ಟ್ರಯ್‌ನ ಯಾವುದೇ ಗೈಡ್ ಲೈನ್ ಗಳನ್ನು ಉಲ್ಲಂಘಿಸಿಲ್ಲ. ಪ್ರೋಮೊಷನ್ ಗಾಗಿ ಮೊದಲ 90 ದಿನಗಳಕಾಲ ಬಿಡುಗಡೆ ಮಾಡಿದ್ದ ವೆಲ್ ಕಮ್ ಆಫರ್ ಮತ್ತು ಸದ್ಯ ಘೋಷಿಸಿರುವ ಹ್ಯಾಪಿ ನ್ಯೂ ಇಯರ್ ಆಫರ್ ನಡುವೆ ಸಾಮ್ಯತೆಗಳಿಲ್ಲ. ಅದು ಬೇರೆ ರೀತಿಯ ಕೊಡುಗೆಯಾಗಿದ್ದು, ಸಂಪೂರ್ಣ ಉಚಿತವಾಗಿತ್ತು. ಆದರೆ ಹ್ಯಾಪಿ ನ್ಯೂ ಇಯರ್ ಆಫರ್ ನಲ್ಲಿ ಗ್ರಾಹಕರು ಉತ್ಕೃಷ್ಟ ಸೇವೆ ಪಡೆಯಲು ಹಣ ಪಾವತಿ ಮಾಡಬೇಕು ಎಂದಿದೆ.

ಏನೀನು ಹ್ಯಾಪಿ ನ್ಯೂ ಇಯರ್ ಆಫರ್..?

ಏನೀನು ಹ್ಯಾಪಿ ನ್ಯೂ ಇಯರ್ ಆಫರ್..?

ಜಿಯೋ ಮೊದಲಿಗೆ ಘೋಷಣೆ ಮಾಡಿದ್ದ ವೆಲ್ ಕಮ್ ಆಫರ್ ನಲ್ಲಿ ಗ್ರಾಹಕರು 4G ಡೇಟಾ ಸೇವೆಯನ್ನು ಉಚಿಯವಾಗಿ ಅನುಭವಿಸಬಹುದಾಗಿತ್ತು. ಪ್ರತಿ ನಿತ್ಯ 4GB ಯಷ್ಟು 4G ಸೇವೆಯನ್ನು ಪಡೆಯಬಹುದಾಗಿತ್ತು. ಆದಾದ ನಂತರ ಡೇಟಾ ವೇಗ ಕಡಿಮೆಯಾಗುತ್ತಿತ್ತು. ಆದರೆ ಈಗ ಘೋಷಣೆ ಮಾಡಿರುವ ಹ್ಯಾಪಿ ನ್ಯೂ ಇಯರ್ ಆಫರ್ ನಲ್ಲಿ ಮೊದಲ 1GB ಡೇಟಾ ಉಚಿತವಾಗಿ 4Gಯಲ್ಲಿ ಬ್ರೌಸ್ ಮಾಡಬಹುದಾಗಿದೆ. ನಂತರ ವೇಗದ ನೆಟ್ ಸೌಲಭ್ಯ ಬೇಕಿದ್ದರೆ ಹೆಚ್ಚಿನ ಹಣ ಪಾವತಿ ಮಾಡಿ ವೇಗ ಹೆಚ್ಚಿಸಿಕೊಳ್ಳ ಬಹುದಾಗಿದೆ. ಇದೊಂದೇ ಎರಡು ಆಫರ್ ಗಳ ನಡುವಿನ ವ್ಯತ್ಯಾಸವಾಗಿದೆ.

ಕಾಸು ಕೊಟ್ಟರೆ ವೇಗದ ಇಂಟರ್ ನೆಟ್

ಕಾಸು ಕೊಟ್ಟರೆ ವೇಗದ ಇಂಟರ್ ನೆಟ್

ಹ್ಯಾಪಿ ನ್ಯೂ ಇಯರ್ ಆಫರ್ ನಲ್ಲಿ ಗ್ರಾಹಕರಿಗೆ ಹಣ ಪಾವತಿ ಮಾಡಿ ತಮ್ಮ ಇಂಟರ್ನೆಟ್ ಸೇವೆಯ ವೇಗವನ್ನು ಹೆಚ್ಚಿಸಿಕೊಳ್ಳುವ ಸ್ವಾತಂತ್ರವನ್ನು ನೀಡಲಾಗಿದೆ. ಹಿಂದಿನ ಆಫರ್ ನಲ್ಲಿ ಈ ಆಯ್ಜೆ ಇರಲಿಲ್ಲ. ಉಚಿತ ಕೊಡುಗೆ ನಂತರ 4Gಯಲ್ಲಿ ಬ್ರೌಸ್ ಮಾಡಬೇಕು ಎಂದವರು ಹಣ ನೀಡಿ ವೇಗ ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಎರಡು ಆಫರ್ ಗಳು ಬೇರೆ ಬೇರೆ ಹಾಗಾಗಿ ಟ್ರಾಯ್‌ ನ ಯಾವುದೇ ನಿಯಮಗಳನ್ನು ನಾವು ಮೀರಿಲ್ಲ ಎಂದು ಜಿಯೋ ತನ್ನ ವಾದವನ್ನು ಮಂಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Mukesh Ambani-led Reliance Jio has told telecom regulator TRAI that its latest voice and data offer does not violate any of the existing norms that requires promotional offers to be limited to 90 days. to konw more visit kannnada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot