ದರಸಮರ ಎಫೆಕ್ಟ್..ಆಫರ್‌ಗಳನ್ನು ಚೇಂಜ್ ಮಾಡಿದ ಜಿಯೋ!..ಇಲ್ಲಿದೆ ಡಿಟೇಲ್ಸ್!!

Written By:

ಟೆಲಿಕಾಂ ದರಸಮರದಿಂದ ಜಿಯೋ ಸಹ ಬೇಸತ್ತಿದ್ದು, ಇತರ ಟೆಲಿಕಾಂಗಳಿಗೆ ಸೆಡ್ಡುಹೊಡೆಯಲು ತನ್ನ ಆಫರ್‌ಗಳಲ್ಲಿ ಭಾರಿ ಬದಲಾವಣೆ ಮಾಡಿದೆ.!! ಜಿಯೋ ರಿತಿಯಲ್ಲಿಯೇ ಇತರ ಟೆಲಿಕಾಂಗಳು ಸಹ ಆಫರ್ ನೀಡುತ್ತಿರುವುದರಿಂದ ಗ್ರಾಹಕರಿಗೆ ಇರುವ ಪ್ಲಾನ್‌ಗಳಲ್ಲಿಯೇ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.!!

ಇದಕ್ಕಾಗಿ "ಎವರಿ ಡೇ ಮೋರ್ ಡೇಟಾ" ಆಫರ್ ಅನ್ನು ಜಿಯೋ ಪರಿಚಯಿಸಿದ್ದು, ಪ್ರಸ್ತುತ ಲಭ್ಯವಿರುವ ರೀಚಾರ್ಜ್ ಆಫರ್‌ಗಳಿಗೆ ಹೆಚ್ಚುವರಿ 20% ಡೇಟಾ ನೀಡಲು ಮುಂದಾಗಿದೆ.!! ಹಾಗಾದರೆ, ಜಿಯೋವಿನ ಯಾವ ಯಾವ ಪ್ಲಾನ್‌ಗಳು ಹೆಚ್ಚುವರಿ ಡೇಟಾ ಆಫರ್ ಪಡೆದಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ 309 ರೂ ಆಫರ್.!!

ಜಿಯೋ 309 ರೂ ಆಫರ್.!!

ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕಾಲ್ ಸೇವೆಯನ್ನು ಒಳಗೊಂಡಿದ್ದ 309 ರೂ ಆಫರ್ ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು. ಆದರೆ, ಪ್ರಸ್ತುತ ಈ ಆಫರ್ ಬದಲಾಗಿದ್ದು, 309 ರೂ ಆಫರ್ ರೀಚಾರ್ಜ್ ಮಾಡಿಸಿಕೊಂಡರೆ 56 ದಿನಗಳ ವ್ಯಾಲಿಡಿಟಿ ಪಡೆಯಬಹುದು.!!

ಜಿಯೋ 399 ರೂ. ಆಫರ್!!

ಜಿಯೋ 399 ರೂ. ಆಫರ್!!

399 ರೂ. ರೂಪಾಯಿಗಳಿಗೆ 84 ದಿವಸಗಳ ಕಾಲ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕಾಲ್ ಸೇವೆ ನೀಡಿದ್ದ ಜಿಯೋ ಈ ಆಫರ್ ಅನ್ನು ಬದಲಾವಣೆ ಮಾಡಿ. 399 ರೂ. ರೂಪಾಯಿಗಳಿಗೆ 90 ದಿವಸಗಳ ಕಾಲ ಇದೇ ಸೇವೆಯನ್ನು ಮುಂದುವರೆಸಲು ನಿರ್ಧರಿಸಿದೆ.!!

ಜಿಯೋ ರೂ. 349 ಆಫರ್!!

ಜಿಯೋ ರೂ. 349 ಆಫರ್!!

ಜಿಯೋ ರೂ. 349 ಆಫರ್ ಮೂಲಕ ಜಿಯೋ ಗ್ರಾಹಕರು 4ಜಿ ಸ್ಪೀಡ್ 10 + 10 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು, ಈ ಆಫರ್ ಕೂಡ ಎರಡು ತಿಂಗಳವರೆಗೆ ಲಭ್ಯವಿದ್ದು, ಮೊದಲ 28 ದಿವಸಗಳು 10GB ಡೇಟಾ ಮತ್ತು ನಂತರದ 28 ದಿವಸಗಳು 10GB ಡೇಟಾ ಬಳಕೆ ಮಾಡಬಹುದು.

ಪೋಸ್ಟ್‌ಪೇಡ್ ಗ್ರಾಹಕರಿಗೂ ಒಂದೇ ಆಫರ್!!

ಪೋಸ್ಟ್‌ಪೇಡ್ ಗ್ರಾಹಕರಿಗೂ ಒಂದೇ ಆಫರ್!!

ಜಿಯೋ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ಜಿಯೋವಿನ ಪ್ರಿಪೇಡ್ ಗ್ರಾಹಕರಿಗೆ ಮಾತ್ರವಲ್ಲದೇ ಪೋಸ್ಟ್‌ಪೇಡ್ ಗ್ರಾಹಕರಿಗೂ ಲಭ್ಯವಿದೆ.!! ಹಾಗಾಗಿ, ಪೋಸ್ಟ್‌ಪೇಡ್ ಗ್ರಾಹಕರು ಸಹ ಇನ್ಮುಂದೆ ಹೊಸ ಆಫರ್‌ಗೆ ಲಬ್ಯವಾಗಲಿದ್ದಾರೆ.!!

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
10 ಕೋಟಿ ದಾಟಿದ ಜಿಯೋ ಬಳಕೆದಾರರು!!

10 ಕೋಟಿ ದಾಟಿದ ಜಿಯೋ ಬಳಕೆದಾರರು!!

ಟೆಲಿಕಾಂ ಮಾರುಕಟ್ಟೆಯಲ್ಲಿ ಏರಿಳಿತಕ್ಕೆ ಒಳಗಾಗುತ್ತಿರುವ ಜಿಯೋ ಪ್ರಸ್ತುತ 10 ಕೋಟಿ ಬಳಕೆದಾರರನ್ನು ದಾಟಿದ್ದಾಗಿ ತಿಳಿಸಿದೆ.!! ದೇಶದ ಬಹುತೇಕ 4G ಗ್ರಾಹಕರು ಜಿಯೋ ತೆಕ್ಕೆಯಲ್ಲಿದ್ದು, ಜಿಯೋ ಉಚಿತ ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದರೆ ಇದರ ಪ್ರಮಾಣ ಮೂರರಿಂದ ನಾಲ್ಕರಷ್ಟಾಗುವುದು ಎಂದು ತಜ್ಞರು ಲೆಕ್ಕಹಾಕಿದ್ದಾರೆ.!!

ಓದಿರಿ:ಭಾರತದ ಅತ್ಯಂತ ಕಡಿಮೆ ಬೆಲೆಯ 4G ಪೋನ್ಗೆ ಗ್ರಾಹಕರು ಫಿದಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The new tariffs would come in at Rs 399 and Rs 349, thereby offering 'Everyday More Value' plan, giving 20% more data than the market, the company said.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot