ಜಿಯೋ ಟಿವಿ ಇನ್ನು ಮುಂದೆ ಬ್ರೌಸರ್ ನಲ್ಲಿಯೂ ಲಭ್ಯ..!

Written By: Lekhaka

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಹೊಸ ಫೀಚರ್ ಗಳನ್ನು ನೀಡಲು ಮುಂದಾಗಿದೆ. ಆಪ್ ಮೂಲಕ ನೀಡುತ್ತಿದ್ದ ಸೇವೆಯನ್ನು ವೆಬ್ ಮೂಲಕ ನೀಡಲು ಜಿಯೋ ಮುಂದಾಗಿದೆ. ಈಗಾಗಲೇ ಮೈ ಜಿಯೋ ಆಪ್ ನಲ್ಲಿ ಹಲೋ ಜಿಯೋ ಎಂಬ ವಾಯ್ಸ್ ಅಸಿಸ್ಟೆಂಟ್ ನೀಡಿದ ಮಾದರಿಯಲ್ಲೇ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ.

ಜಿಯೋ ಟಿವಿ ಇನ್ನು ಮುಂದೆ ಬ್ರೌಸರ್ ನಲ್ಲಿಯೂ ಲಭ್ಯ..!

ಜಿಯೋ ಟಿವಿ ಆಪ್ ಸೇವೆಯನ್ನು ಇನ್ನು ಮುಂದೆ ವೆಬ್ ನಲ್ಲಿಯೂ ನೀಡಲಿದ್ದು, ಇದರಲ್ಲಿ ಜಿಯೋ ಬಳಕೆದಾರರು 500 ಕ್ಕೂ ಹೆಚ್ಚು ಟಿವಿ ಚಾನಲ್ ಗಳನ್ನು ನೋಡಬಹುದಾಗಿದೆ. ಮೊದಲಿಗೆ ಇದು ಕೇವಲ ಆಪ್ ಮೂಲಕ ಮಾತ್ರವೇ ಬಳಕೆಗೆ ಸಿಮೀತವಾಗಿತ್ತು ಆದರೆ ಇಂದು ವೆಬ್ ಮೂಲಕವು ಬಳಕೆಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಈ ಹೊಸ ಆಯ್ಕೆಯಿಂದಾಗಿ ಜಿಯೋ ಗ್ರಾಹಕರು ಜಿಯೋ ಟಿವಿಯನ್ನು ಬ್ರೌಸರ್ ಮೂಲಕವೇ ನೋಡಬಹುದಾಗಿದ್ದು, ಜಿಯೋ ಸಿನಿಮಾ ಆಪ್ ಅನ್ನು ಸಹ ಬ್ರೌಸರ್ ಮೂಲಕವೇ ನೋಡುವ ಅವಕಾಶವನ್ನು ಜಿಯೋ ಮಾಡಿಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಜಿಯೋ ಪ್ರೈಮ್ ಮೆಂಬರ್ ಗಳಿಗೆ ಈ ಸೇವೆಯೂ ಉಚಿತವಾಗಿದೆ.

ಜಿಯೋ ಟಿವಿ ಇನ್ನು ಮುಂದೆ ಬ್ರೌಸರ್ ನಲ್ಲಿಯೂ ಲಭ್ಯ..!

http://jioTv.com/ ವೈಬ್ ಸೈಟ್ ನಲ್ಲಿ ಈ ಸೇವೆಯೂ ದೊರೆಯಲಿದ್ದು, ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಚಾನಲ್ ಗಳನ್ನು ಲೈವ್ ಆಗಿ ವಿಕ್ಷಿಸಬಹುದಾಗಿದೆ. ಇದಕ್ಕೆ ಸೈನ್ ಇನ್ ಆಗಲು ಜಿಯೋ ನಂಬರ್ ಮತ್ತು ಪಾಸ್ ವರ್ಡ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದ.

ಇಲ್ಲಿ ಗ್ರಾಹಕರಿಗೆ SD ಮತ್ತು HD ಚಾನಲ್ ಗಳನ್ನು ನೋಡುವ ಅವಕಾಶವು ಇದ್ದು, ತಮ್ಮ ಇಂಟರ್ನೆಟ್ ಸ್ಪೀಡ್ ಅನ್ವಯವಾಗಿ ಚಾನಲ್ ಗಳನ್ನು ವಿಕ್ಷಣೆ ಮಾಡಬಹುದಾಗಿದೆ. ಇದು ಇನ್ನು ಹೆಚ್ಚಿನ ಮಂದಿಯನ್ನು ಆಕರ್ಷಿಸಲು ಮಾಡುತ್ತಿರುವ ಪ್ರಯತ್ನವಾಗಿದೆ ಎನ್ನುವ ಮಾತು ಕೇಳಿಬಂದಿದೆ.

ಶಿಯೋಮಿ ಆದಾಯಕ್ಕೆ ಮೊಬೈಲ್ ಜಗತ್ತು ಸುಸ್ತು!..ಅಭಿಮಾನಿಗಳಿಗೆ ಕಂಪೆನಿಯಿಂದ ಭಾರಿ ಗಿಫ್ಟ್!!

Read more about:
English summary
Reliance Jio has now launched a web version of JioTV app which allows Jio users to access over 500 tv channels.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot