ಈ ವರ್ಷವೂ ಮುಂದುವರೆದಿದೆ ರಿಲಯನ್ಸ್ ಜಿಯೋ ಆರ್ಭಟ!

|

ದೇಶದ ಟೆಲಿಕಾಂ ಲೋಕದಲ್ಲಿ ರಿಲಯನ್ಸ್ ಜಿಯೋ ಆರ್ಭಟ ಮುಂದುವರೆದಿದ್ದು, 4ಜಿ ಡೌನ್‌ಲೋಡ್ ಸ್ಪೀಡ್ ಆಗಸ್ಟ್‌ ತಿಂಗಳ ಪಟ್ಟಿಯಲ್ಲೂ ಸಹ ರಿಲಯನ್ಸ್ ಜಿಯೋ ಅಗ್ರಸ್ಥಾನವನ್ನು ಪಡೆದುಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತಿಳಿಸಿದೆ. ಟ್ರಾಯ್ ಪ್ರತಿ ತಿಂಗಳು ಇಂಟರ್ನೆಟ್ ಸ್ಪೀಡ್ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಅದರಂತೆ ಆಗಸ್ಟ್‌ ತಿಂಗಳಿನಲ್ಲಿ ರಿಲಯನ್ಸ್ ಜಿಯೋ 4ಎ ಸರಾಸರಿ ಡೌನ್ ಲೋಡ್ ಸ್ಪೀಡ್‌ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದೆ.

ರಿಲಯನ್ಸ್ ಜಿಯೋ

ದೇಶದಲ್ಲಿ ರಿಲಯನ್ಸ್ ಜಿಯೋ ಅತಿ ವೇಗದ 4G ಇಂಟರ್‌ನೆಟ್ ಆಪರೇಟರ್ ಆಗಿದ್ದು, 2018ರಲ್ಲಿ ಎಲ್ಲಾ 12 ತಿಂಗಳಲ್ಲಿ ಗರಿಷ್ಠ ಸರಾಸರಿ ಡೌನ್‌ ಲೋಡ್ ವೇಗವನ್ನು ಹೊಂದಿತ್ತು. ಇದೀಗ ಈ ವರ್ಷದ ಇದುವರೆಗಿನ ಎಲ್ಲಾ ಎಂಟು ತಿಂಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಭಾರತೀಯರಿಗೆ ವೇಗದ ಡೇಟಾ ಸೇವೆಯನ್ನು ನೀಡುತ್ತಿದೆ. ಜುಲೈನಲ್ಲಿ 21.0 Mbps ಡೌನ್‌ ಲೋಡ್ ವೇಗವನ್ನು ಹೊಂದಿದ್ದ ಜಿಯೋ ಆಗಸ್ಟ್ ತಿಂಗಳಲ್ಲಿ ಸರಾಸರಿ 21.3 Mbps ಡೌನ್‌ ಲೋಡ್ ವೇಗವನ್ನು ಸಾಧಿಸಿದೆ ಎಂದು ಟ್ರಾಯ್ ಲೆಕ್ಕಾಚಾರ ಮಾಡುವ ಮೂಲಕ ತಿಳಿಸಿದೆ.

ಸರಾಸರಿ ಡೌನ್‌ಲೋಡ್ ವೇಗ

ಜಿಯೋ ಆಗಸ್ಟ್ ತಿಂಗಳಲ್ಲಿ 21.3 Mbps ಸರಾಸರಿ ಡೌನ್‌ಲೋಡ್ ವೇಗವನ್ನು ಸಾಧಿಸಿದ್ದು, ಜುಲೈನಲ್ಲಿ 21.0 Mbps ನಿಂದ ಸುಧಾರಣೆಯಾಗಿದೆ. ವೊಡಾಫೋನ್ ಆಗಸ್ಟ್‌ನಲ್ಲಿ 5.5 ಎಮ್‌ಬಿಪಿಎಸ್ ಸರಾಸರಿ 4 ಜಿ ಅಪ್‌ಲೋಡ್ ವೇಗವನ್ನು ಸಾಧಿಸಿದ್ದು, ಜುಲೈ ತಿಂಗಳಲ್ಲಿ 5.8 ಎಮ್‌ಬಿಪಿಎಸ್ ಇಳಿಕೆ ಕಂಡಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಭಾರ್ತಿ ಏರ್‌ಟೆಲ್‌ನ ಕಾರ್ಯಕ್ಷಮತೆ ಆಗಸ್ಟ್‌ನಲ್ಲಿ 8.8 Mbps ನಿಂದ 8.2 Mbps ಗೆ ಇಳಿದಿದೆ.

ರಿಲಯನ್ಸ್ ಜಿಯೋ

ಇನ್ನು ರಿಲಯನ್ಸ್ ಜಿಯೋ ಪ್ರಸ್ತುತ ಬೆಳೆಯುತ್ತಿರುವ ದರದ ಆಧಾರದ ಮೇಲೆ ಮೂರು ವರ್ಷಗಳಲ್ಲಿ ಜಾಗತಿಕವಾಗಿ 100 ಅಮೂಲ್ಯ ಬ್ರಾಂಡ್‌ಗಳಲ್ಲಿ ಒಂದಾಗಲಿದೆ ಎಂದು ಸಂವಹನ ಸೇವಾ ಪೂರೈಕೆದಾರ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಾಂತರ್ ಮಿಲ್ವರ್ಡ್ ಬ್ರೌನ್ ವರದಿ ಮಾಡಿದೆ. 1995 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ಏರ್‌ಟೆಲ್‌ಗಿಂತ 2016ರಲ್ಲಿ ಪ್ರಾರಂಭವಾದ ಜಿಯೋವನ್ನು ಭಾರತೀಯ ಗ್ರಾಹಕರು ಅಪ್ಪಿಕೊಂಡು ಒಪ್ಪಿದ್ದಾರೆ ಎಂದು 'ಟಾಪ್ 100 ಹೆಚ್ಚು ಮೌಲ್ಯಯುತ ಜಾಗತಿಕ ಬ್ರಾಂಡ್' ವರದಿಯಲ್ಲಿ ಉಲ್ಲೇಖಿಸಲಾಗಿದೆ.

 4.1 ಬಿಲಿಯನ್ ಡಾಲರ್

ಡೇಟಾ ಬಳಕೆಗಾಗಿ ರಿಯಾಯಿತಿ ದರಗಳೊಂದಿಗೆ ಜಿಯೋ, ಈಗ 340 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರಿಕೆಯನ್ನು ಹೊಂದಿದೆ. ಜಿಯೋ ಪ್ರಸ್ತುತ ಬ್ರಾಂಡ್ ಮೌಲ್ಯ 4.1 ಬಿಲಿಯನ್ ಡಾಲರ್ ಎಂದು ವರದಿ ತಿಳಿಸಿದೆ. ಪ್ರಾರಂಭದಲ್ಲಿ, ಜಿಯೋ ಮೊದಲ ಆರು ತಿಂಗಳು ಉಚಿತ ಡೇಟಾವನ್ನು ಒದಗಿಸಿತು ಮತ್ತು ನಂತರ ಮಾತ್ರ ತುಲನಾತ್ಮಕವಾಗಿ ಸಾಧಾರಣ ಬೆಲೆಗಳನ್ನು ಪರಿಚಯಿಸಿತು ಎಂದು ಕಾಂತರ್ ಮಿಲ್ವರ್ಡ್ ಬ್ರೌನ್ ಸಂಶೋಧನಾ ನಿರ್ದೇಶಕ ಮಾರ್ಟಿನ್ ಗೆರಿಯೇರಿಯಾ ಅವರು ಹೇಳಿದ್ದಾರೆ.

Best Mobiles in India

English summary
Jio achieved 21.3 Mbps average download speed in the month of August, witnessing an improvement from 21.0 Mbps in July. to kmow more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X