Subscribe to Gizbot

ರಿಲಾಯನ್ಸ್ ಜಿಯೋ 'ನ್ಯೂಸ್‌ಪೇಪರ್, ಮ್ಯಾಗಜೀನ್' ಲಾಂಚ್‌ ಮಾಡುತಂತೆ!

Written By:

ರಿಲಾಯನ್ಸ್ ಜಿಯೋ ಜನರ ದಿನನಿತ್ಯದ ಬದುಕಿನ ಎಲ್ಲಾ ಸೇವೆಗಳನ್ನು ನೀಡಲು ಮುಂದಾಗುತ್ತಿದೆ ಎಂದರೂ ತಪ್ಪಾಗಲಾರದು. ಯಾಕಂದ್ರೆ ಜಿಯೋ ಸ್ಮಾರ್ಟ್‌ಫೋನ್‌, ಬ್ರಾಡ್‌ಬ್ಯಾಂಡ್, ಡಿಟಿಎಚ್‌ ಕ್ಷೇತ್ರಕ್ಕೆ ಈಗಾಗಲೇ ಕಾಲಿರಿಸಿದೆ. ಏರ್‌ಟೆಲ್‌, ಬಿಎಸ್ಎನ್‌ಎಲ್‌ ನಂತಹ ಟೆಲಿಕಾಂ ದೈತ್ಯಗಳಿಗೆ ನಿದ್ದೆಗೆಡಿಸಿದೆ. ಆದ್ರೆ ಈಗ ಇತರೆ ಕ್ಷೇತ್ರಕ್ಕೂ ರಿಲಾಜಿಯೋ ಕಾಲಿಡುವ ಮುನ್ಸೂಚನೆ ಹೆಚ್ಚಾಗುತ್ತಿದೆ.

ಹೌದು, ರಿಲಾಯನ್ಸ್ ಜಿಯೋ ಕೇವಲ ರೂ.1000 ಕ್ಕೆ 4G VoLTE ಸಪೋರ್ಟ್‌ ಸ್ಮಾರ್ಟ್‌ಫೋನ್‌ ಅನ್ನು 2017 ಕ್ಕೆ ಫೋನ್‌ ಮಾರುಕಟ್ಟೆಗೆ ಪರಿಚಯಿಸಲಿದೆ. ಇದರ ಜೊತೆಗೆ ರಿಲಾಯನ್ಸ್ ಜಿಯೋ ಇತರೆ ಹಲವು ಸೇವೆಗಳನ್ನು ಪರಿಚಯಿಸುತ್ತಿದ್ದು, ಆ ಸೇವೆಗಳು ಯಾವುವು ಎಂದು ತಿಳಿಯಿರಿ.

ಶಾಕಿಂಗ್ ನ್ಯೂಸ್: ರಿಲಾಯನ್ಸ್ ಜಿಯೋ 4G ಉಚಿತ ಸೇವೆ ಸ್ಟಾಪ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಆಂಡ್ರಾಯ್ಡ್ ಟೆಲಿವಿಷನ್ ಬಾಕ್ಸೆಸ್

ಜಿಯೋ ಆಂಡ್ರಾಯ್ಡ್ ಟೆಲಿವಿಷನ್ ಬಾಕ್ಸೆಸ್

ರಿಲಾಯನ್ಸ್ ಜಿಯೋ ಎಕ್ಸ್‌ಪೀರಿಯನ್ಸ್ ಸೆಂಟರ್ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿ ಪ್ರಕಾರ, ಜಿಯೋ 'Nvidia Shield Android TV' ಬಾಕ್ಸ್‌ಗಳನ್ನು ಲಾಂಚ್‌ ಮಾಡಲು ಯೋಜನೆ ರೂಪಿಸಿದೆ. ಅಲ್ಲದೇ ಉತ್ತಮ ಮನರಂಜನೆ ನೀಡುವ ಗುರಿ ಹೊಂದಿದೆ. ಈ ಟಿವಿ ಬಾಕ್ಸ್‌ಗಳು ಗೇಮ್‌ ಫೀಚರ್‌ ಅನ್ನು ಹೊಂದಲಿವೆ.

ವೀಡಿಯೊ ಮತ್ತು ಸಿನಿಮಾ ಸ್ಟ್ರೀಮಿಂಗ್‌ಗಾಗಿ ಆಪ್‌ಗಳು

ವೀಡಿಯೊ ಮತ್ತು ಸಿನಿಮಾ ಸ್ಟ್ರೀಮಿಂಗ್‌ಗಾಗಿ ಆಪ್‌ಗಳು

ಟೆಲಿವಿಷನ್ ಬಾಕ್ಸ್‌ ಹೊರತುಪಡಿಸಿ, ಜಿಯೋ ಗ್ರಾಹಕರು ಮನೆಯಲ್ಲಿ ವೀಡಿಯೊ, ಸಿನಿಮಾಗಳು, ಫೋಟೋಸ್, ಹಾಡುಗಳನ್ನು ಡಿವೈಸ್‌ನಲ್ಲಿ ಸ್ಟ್ರೀಮ್‌ ಮಾಡಲು ಸಹಾಯಕವಾಗಲಿದೆ. ರಿಲಾಯನ್ಸ್ ಜಿಯೋ ಹಲವು ವೈಫೈಗಳಲ್ಲಿ ವರ್ಕ್‌ ಆಗಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡ್ರೈವಿಂಗ್ ಅನುಭವ ಹೆಚ್ಚಿಸಲಿದೆ ಜಿಯೋ

ಡ್ರೈವಿಂಗ್ ಅನುಭವ ಹೆಚ್ಚಿಸಲಿದೆ ಜಿಯೋ

ಜಿಯೋ ಈಗಾಗಲೇ ಆಟೋ ಕ್ವೇತ್ರಕ್ಕೆ ಕಾಲಿರಿಸಿದ್ದು, ಡ್ರೈವಿಂಗ್ ಅನುಭವ ಹೆಚ್ಚಿಸಲು, 'ಜಿಯೋ ಡ್ರೈವ್ ಎಕ್ಸ್‌ಪೀರಿಯನ್ಸ್' ಆಪ್‌ ಅನ್ನು ಹೊರತರಲಿದೆ. ಈ ಆಪ್‌ ಇತರೆ ವಾಹನಗಳನ್ನು ಟ್ರ್ಯಾಕ್‌ ಮಾಡಲು ಸಹಾಯಕವಾಗಲಿದೆ.

ಜಿಯೋ ನ್ಯೂಸ್‌ ಪೇಪರ್ ಮತ್ತು ಮ್ಯಾಗಜೀನ್‌ಗಳು

ಜಿಯೋ ನ್ಯೂಸ್‌ ಪೇಪರ್ ಮತ್ತು ಮ್ಯಾಗಜೀನ್‌ಗಳು

ಡಿಟಿಎಚ್, ಕಾರು, ಮೊಬೈಲ್ ಸೇವಾವಲಯದಲ್ಲಿ ಮಾತ್ರವಲ್ಲದೇ, ಜಿಯೋ ತನ್ನ ಸ್ವಂತ ನ್ಯೂಸ್‌ಪೇಪರ್, ಮ್ಯಾಗಜೀನ್ ಅನ್ನು ದಿನನಿತ್ಯ ಓದುಗರಿಗಾಗಿ ಪರಿಚಯಿಸಲು ಪ್ಲಾನ್‌ ಮಾಡಿದೆ. ಈ ಸೇವೆಗೆ ಕಂಪನಿ ಹಲವು ಪಬ್ಲಿಕೇಷನ್‌'ಗಳೊಂದಿಗೆ ಪಾಲುದಾರಿಕೆ ಹೊಂದಲಿದೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಜಿಯೋ

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಜಿಯೋ

ರಿಲಾಯನ್ಸ್ ಜಿಯೋ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ಕಾಲಿರಿಸಲು ನಿರ್ಧರಿಸಿದೆ. ಶೀಘ್ರದಲ್ಲಿ ಜಿಯೋಹೆಲ್ತ್ ಆಪ್‌ ಅನ್ನು ಮೆಡಿಕಲ್ ವರದಿಗಳಿಗಾಗಿ ಮತ್ತು ಜಿಯೋಎಜುಕೇಷನ್‌ ಆಪ್ ಅನ್ನು ಶಿಕ್ಷಣ ಕುರಿತ ಮಾಹಿತಿಯನ್ನು ಗ್ರಾಮೀಣ ಪ್ರದೇಶಗಳಿಗೆ ತಿಳಿಸುವ ಉದ್ದೇಶದಿಂದ ಲಾಂಚ್ ಮಾಡಲಿದೆ. ಅಲ್ಲದೇ ಜಿಯೋ ಡಾಟಾ ವರ್ಗಾವಣೆ ಮಾಡಲು ಅವಕಾಶ ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio Newspaper, Magazine, Health Store, Gaming Platform, and More Coming Soon. To know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot