ಜಿಯೋ ಗ್ರಾಹಕರ ಹುಡುಗಾಟ!..ಚಿಂತೆಯಲ್ಲಿ ಮುಖೇಶ್ ಅಂಬಾನಿ!!

|

ಜಿಯೋ ಎಷ್ಟೆಲ್ಲಾ ಆಫರ್‌ಗಳನ್ನು ನೀಡಿದರೂ ಸಹ ಜಿಯೋವನ್ನು ಜನರು ಅಪ್ಪಿಕೊಳ್ಳುತ್ತಿಲ್ಲ ಎನ್ನುವ ವರದಿಯೊಂದು ಹೊರಬಿದ್ದಿದೆ.! ಹಾಗಾಗಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಎಷ್ಟೆಲ್ಲಾ ಆಫರ್‌ಗಳನ್ನು ನೀಡಿದರೂ ಸಹ ಜನರು ತನ್ನ ಕೈಹಿಡಿಯುತ್ತಿಲ್ಲ ಎನ್ನುವ ಕೊರಗು ಜಿಯೋ ಮಾಲಿಕ ಅಂಬಾನಿಗೆ ಕಾಡುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.!!

ಹೌದು, ಕೋಟಾಕ್ ಇಕ್ವಿಟಿ ಟೆಲಿಕಾಂ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, 160 ದಶಲಕ್ಷ ಗ್ರಾಹಕರನ್ನು ಹೊಂದಿರುವ ಜಿಯೋ ಈಗಲೂ ಗ್ರಾಹಕರಿಂದ ಹೆಚ್ಚಿನ ಮನ್ನಣೆಗೆ ಪಾತ್ರವಾಗಿಲ್ಲ. ಹಾಗಾಗಿ, ಗ್ರಾಹಕರು ಈಗಲೂ ಸಹ ಇತರ ಟೆಲಿಕಾಂಗಳಲ್ಲಿಯೇ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಅಂಕಿಅಂಶಗಳ ದಾಖಲೆ ಸಮೇತ ತಿಳಿಸಿದೆ.!!

ಜಿಯೋ ಗ್ರಾಹಕರ ಹುಡುಗಾಟ!..ಚಿಂತೆಯಲ್ಲಿ ಮುಖೇಶ್ ಅಂಬಾನಿ!!

ಕೋಟಾಕ್ ಇಕ್ವಿಟಿ ವರದಿಯ ಪ್ರಕಾರ ಭಾರತದಲ್ಲಿ ಜಿಯೋ ಬಳಕೆದಾರರನ್ನು ಸೆಳೆಯಲು ಏನೆಲ್ಲಾ ಪ್ರಯತ್ನಿಸಿದರೂ ಕೂಡ ಜಿಯೋಗೆ ಪೋರ್ಟ್(MNP) ಆಗುವ ಗ್ರಾಹಕರ ಸಂಖ್ಯೆ ಕಡಿಮೆ ಇದೆ.! ಈಗಲೂ ಕೂಡ ಇತರೆ ಟೆಲಿಕಾಂಗಳು ಪೋರ್ಟ್ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ ಎಂದು ಹೇಳಿದೆ.! ಹಾಗಾದರೆ, ಈ ವರದಿಯ ಸಂಪೂರ್ಣ ಅಂಶಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಟೆಲಿಕಾಂನಲ್ಲಿ ಪೋರ್ಟ್ ಪರ್ವ!!

ಟೆಲಿಕಾಂನಲ್ಲಿ ಪೋರ್ಟ್ ಪರ್ವ!!

ಕಳೆದ ವರ್ಷ ಟೆಲಿಕಾಂನ ಹಲವು ಕಂಪೆನಿಗಳು ಒಟ್ಟು 66.6 ದಶಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ರಿಲಯನ್ಸ್ ಕಮ್ಯುನಿಕೇಷನ್ಸ್ 21.5 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿದ್ದರೆ, ಟಿಟಿಎಸ್ಎಲ್ (15 ಮಿಲಿಯನ್), ಏರ್ಸೆಲ್ (13.1 ಮಿಲಿಯನ್), ಟೆಲಿನಾರ್ (6.6 ಮಿಲಿಯನ್) ಮತ್ತು ಬಿಎಸ್ಎನ್ಎಲ್ (1.9 ಮಿಲಿಯನ್) ಗ್ರಾಹಕರನ್ನು ಕಳೆದುಕೊಂಡಿವೆ.!! .

ಪೋರ್ಟ್‌ ಗ್ರಾಹಕರಿಂದ ಜಿಯೋ ದೂರ!!

ಪೋರ್ಟ್‌ ಗ್ರಾಹಕರಿಂದ ಜಿಯೋ ದೂರ!!

ಟೆಲಿಕಾಂ ಗ್ರಾಹಕರು ಪೋರ್ಟ್ಗೆ ಒಲವು ತೋರುತ್ತಿದ್ದರೂ ಸಹ ಹ ಜಿಯೋಗೆ ಪೋರ್ಟ್ ಆಗುತ್ತಿರುವ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಕೋಟಾಕ್ ಇಕ್ವಿಟಿ ವರದಿ ಹೇಳಿದೆ.!! ಜಿಯೋ ಏನೆಲ್ಲಾ ಆಫರ್ ನೀಡಿದರೂ ಟೆಲಿಕಾಂನಲ್ಲಿ ಪೋರ್ಟ್ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ ಸೋತಿದೆ ಎಂಬರ್ಥದಲ್ಲಿ ಈ ವರದಿಯನ್ನು ಪ್ರಕಟಿಸಿದೆ.!!

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಅಂಕಿಅಂಶಗಲ್ಲಿ ದೃಢವಾಗಿದೆ!!

ಅಂಕಿಅಂಶಗಲ್ಲಿ ದೃಢವಾಗಿದೆ!!

ಪ್ರಸ್ತುತ 160 ದಶಲಕ್ಷ ಬಳಕೆದಾರರನ್ನು ಹೊಂದಿರುವ ಜಿಯೋ, ಟ್ರಾಯ್ ಮಾಹಿತಿ ಪ್ರಕಾರ 2017ರ ಅಕ್ಟೋಬರ್‌ನಲ್ಲಿ 3.8 ದಶಲಕ್ಷ ನೆಟ್ ಪೋರ್ಟ್ ಗ್ರಾಹಕರನ್ನು ಸೆಳೆದಿದೆ. ಆದರೆ, ಐಡಿಯಾ 25 ದಶಲಕ್ಷ ಗ್ರಾಹಕರನ್ನು ಸೆಳೆದಿದ್ದರೆ ವೊಡಾಫೋನ್ ಮತ್ತು ಏರ್‌ಟೆಲ್ ಕ್ರಮವಾಗಿ 19.4 ಮತ್ತು 18.4 ದಶಲಕ್ಷ ಪೋರ್ಟ್ ಗ್ರಾಹಕರನ್ನು ಸೆಳೆದಿವೆ.!!

ಎರಡನೇ ಸ್ಲಾಟ್‌ನಲ್ಲಿ ಜಿಯೋ!!

ಎರಡನೇ ಸ್ಲಾಟ್‌ನಲ್ಲಿ ಜಿಯೋ!!

ಜಿಯೋ ಎಷ್ಟು ಕಡಿಮೆ ಬೆಲೆಯಲ್ಲಿ ಡೇಟಾ ಆಫರ್ ನೀಡಿದರೂ ಗ್ರಾಹಕರು ಜಿಯೋವನ್ನು ಎರಡನೇ ಸ್ಲಾಟ್‌ನಲ್ಲಿ ಬಳಕೆ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅಂದರೆ, ಜಿಯೋವನ್ನು ಕೇವಲ ಡೇಟಾ ಬಳಕೆಗಾಗಿ ಉಪಯೋಗಿಸುತ್ತಿದ್ದು, ಇತರ ಟೆಲಿಕಾಂಗಳ ಮೇಲೆ ಗ್ರಾಹಕರಿನ್ನು ಅವಲಂಬಿತರಾಗಿದ್ದಾರೆ ಎಂದು ಹೇಳಲಾಗಿದೆ.!!

ಪೋರ್ಟ್ ಗ್ರಾಹಕರೇ ಜೀವಾಳ.!!

ಪೋರ್ಟ್ ಗ್ರಾಹಕರೇ ಜೀವಾಳ.!!

ಯಾವುದೇ ಟೆಲಿಕಾಂ ಗ್ರಾಹಕರನ್ನು ಹೆಚ್ಚು ಸೆಳೆದಿದೆ ಎನ್ನಲು ಪೋರ್ಟ್ ಗ್ರಾಹಕರೇ ಮುಖ್ಯವಾಗುತ್ತಾರೆ ಎಂದು ಟೆಲಿಕಾಂ ವಲಯ ತಿಳಿದುಕೊಳ್ಳುತ್ತದೆ. ಆದರೆ, ಜಿಯೋಗೆ ಪೋರ್ಟ್ ಆಗುವವರ ಸಂಖ್ಯೆ ಕಡಿಮೆ ಇರುವುದರಿಮದ ಜಿಯೋ ಗ್ರಾಹಕರನ್ನು ಹೆಚ್ಚು ಸೆಳೆದಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿತ್ತದೆ.!!

ವೋಟರ್ ಐಡಿಯಲ್ಲಿ ತಪ್ಪಿದ್ದರೆ ಆನ್‌ಲೈನ್‌ ಮೂಲಕ 2 ನಿಮಿಷದಲ್ಲಿ ಸರಿಪಡಿಸಿಕೊಳ್ಳಿ!!..ಹೇಗೆ ಗೊತ್ತಾ?ವೋಟರ್ ಐಡಿಯಲ್ಲಿ ತಪ್ಪಿದ್ದರೆ ಆನ್‌ಲೈನ್‌ ಮೂಲಕ 2 ನಿಮಿಷದಲ್ಲಿ ಸರಿಪಡಿಸಿಕೊಳ್ಳಿ!!..ಹೇಗೆ ಗೊತ್ತಾ?

Best Mobiles in India

English summary
Mukesh Ambani-led Reliance Jio has still not become the preferred network for subscribers coming from other networks in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X