ರಿಲಯನ್ಸ್ ಜಿಯೋ ಹೊಸ ಟಾರಿಫ್ ಪ್ಲಾನ್ ಗಳು..!

Written By: Lekhaka

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಟಾರಿಫ್ ಪ್ಲಾನ್ ಗಳನ್ನು ಲಾಂಚ್ ಮಾಡಿದೆ. ಅದು ಪ್ರೈಮ್ ಮೆಂಬರ್ ಗಳಿಗೆ ಮತ್ತೇ ಮೂರು ತಿಂಗಳ ಆಫರ್ ನೀಡಿದೆ. ಅದುವೇ ರೂ.399ಕ್ಕೆ ದೊರೆಯಲಿದೆ. ಈ ಹಿಂದೆ ಇದೇ ಪ್ಲಾನ್ ರೂ.309ಗೆ ದೊರೆಯುತ್ತಿತು.

ರಿಲಯನ್ಸ್ ಜಿಯೋ ಹೊಸ ಟಾರಿಫ್ ಪ್ಲಾನ್ ಗಳು..!

ಜುಲೈ 11 ರಿಂದ ಈ ಹೊಸ ಆಫರ್ ಲಭ್ಯವಿರಲಿದ್ದು, ನೂತನ ಮತ್ತು ಹಳೇಯ ಗ್ರಾಹಕರು ಈ ಹೊಸ ಆಫರ್ ಗಳು ದೊರೆಯಲಿದೆ. ಈ ಪ್ಲಾನ್ ನಲ್ಲಿ ಜಿಯೋ ಗ್ರಾಹಕರು ಉಚಿತ ಕರೆ ಮಾಡುವ ಸೇವೆಯನ್ನು ಪಡೆಯಬಹುದಾಗಿದೆ.

ಈ ಆಫರ್ ನಲ್ಲಿ ಗ್ರಾಹಕರು ಪ್ರತಿ ನಿತ್ಯ ಒಂದು GB ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಅದುವೇ 4G ವೇಗದ ಡೇಟಾ ದೊರೆಯಲಿದೆ.

ಅಲ್ಲದೇ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೇ ನ್ಯಾಷಿನಲ್ ರೋಮಿಂಗ್ ಉಚಿತವಾಗಿರಲಿದೆ. ಇಲ್ಲದೇ ಉಚಿತ ಎಸ್ ಎಂಎಸ್ ಕಳುಹಿಸುವ ಕೊಡುಗೆಯನ್ನು ಪಡೆಯಬಹುದಾಗಿದೆ.

ಇದೇ ವರ್ಷದ ಮಾರ್ಚ್ ನಲ್ಲಿ ಪ್ರೈಮ್ ಮೆಂಬರ್ ಶಿಪ್ ಕಾರ್ಯಕ್ರಮವನ್ನು ತಿಳಿಸಿತ್ತು. ಸುಮಾರು 80 ಮಿಲಿಯನ್ ಮಂದಿ ಜಿಯೋ ಗ್ರಾಹಕರು ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಪ್ರೈಮ್ ಮೆಂಬರ್ ಗಳು ಸಾಮಾನ್ಯ ಸದಸ್ಯರಿಗಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

Read more about:
English summary
Reliance Jio the newest telco in the country has announced that Prime Members can enjoy unlimited services for 3 months with Rs 399 Plan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot