ಟೆಲಿಕಾಂ ಆದಾಯದಲ್ಲಿ ವೊಡಾಫೋನ್ ಹಿಂದಿಕ್ಕಿದ ಜಿಯೋ..!

By Avinash
|

2016ರ ನಂತರ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್‌ ಜಿಯೋ ಕ್ರಾಂತಿ ಎಬ್ಬಿಸಿದೆ. ಭಾರತೀಯ ಟೆಲಿಕಾಂ ಲೋಕವನ್ನು ಜಿಯೋ ರಹಿತವಾಗಿ ಊಹಿಸಿಕೊಳ್ಳಲು ಅಸಾಧ್ಯ. ಗ್ರಾಹಕ ಸ್ನೇಹಿಯಾಗಿ ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಾ ಟೆಲಿಕಾಂ ಆಪರೇಟರ್‌ಗಳ ನಿದ್ದೆಗೆಡಿಸಿದ್ದ ಜಿಯೋ ಅಲ್ಪಾವಧಿಯಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ.

ಟೆಲಿಕಾಂ ಆದಾಯದಲ್ಲಿ ವೊಡಾಫೋನ್ ಹಿಂದಿಕ್ಕಿದ ಜಿಯೋ..!

ಹೌದು, ಆದಾಯದಲ್ಲಿ ವೊಡಾಫೋನ್‌ ನೆಟ್‌ವರ್ಕ್‌ನ್ನು ಹಿಂದಿಕ್ಕಿರುವ ಜಿಯೋ ಆದಾಯದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು, ಮಾರುಕಟ್ಟೆಯ ಆದಾಯದಲ್ಲಿ ಮೊದಲ ಸ್ಥಾನದಲ್ಲಿರುವ ಏರ್‌ಟೆಲ್‌ ಜತೆ ಅಲ್ಪ ಮಟ್ಟದ ಅಂತರ ಕಾಯ್ದುಕೊಂಡಿದೆ. ಟ್ರಾಯ್‌ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ವೊಡಾಫೋನ್ ಆದಾಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಎರಡೇ ವರ್ಷ, ಎರಡನೇ ಸ್ಥಾನ

ಎರಡೇ ವರ್ಷ, ಎರಡನೇ ಸ್ಥಾನ

ಮುಖೇಶ್ ಅಂಬಾನಿ ಒಡೆತನದ ಜಿಯೋ 4G ಸೇವೆಗಳನ್ನು ನೀಡಲು ಪ್ರಾರಂಭಿಸಿ ಸರಿಯಾಗಿ ಎರಡು ವರ್ಷ ಕಳೆದಿಲ್ಲ. ಆದರೂ, 253(bps) ಪಡೆದಿರುವ ಜಿಯೋ ಜೂನ್‌ ಅಂತ್ಯಕ್ಕೆ ಟೆಲಿಕಾಂ ಮಾರುಕಟ್ಟೆಯ ಒಟ್ಟು ಆದಾಯದಲ್ಲಿ ಶೇ.22.4 ಪಾಲನ್ನು ಹೊಂದಿದೆ ಎಂದು ಟ್ರಾಯ್‌ ನೀಡಿರುವ ಹಣಕಾಸು ವರದಿಯಲ್ಲಿ ಹೇಳಿದೆ.

ಏರ್‌ಟೆಲ್‌ ಫಸ್ಟ್‌

ಏರ್‌ಟೆಲ್‌ ಫಸ್ಟ್‌

ಟ್ರಾಯ್‌ ಬಿಡುಗಡೆ ಮಾಡಿರುವ ಹಣಕಾಸು ವರದಿಯಲ್ಲಿ ಏರ್‌ಟೆಲ್‌ ಮೊದಲ ಸ್ಥಾನ ಕಾಯ್ದುಕೊಂಡಿದೆ. ಟೆಲಿಕಾಂ ಮಾರುಕಟ್ಟೆಯ ಒಟ್ಟು ಮಾರುಕಟ್ಟೆಯಲ್ಲಿ ಶೇ.31.7 ರಷ್ಟು ಪಾಲನ್ನು ಹೊಂದಿರುವ ಏರ್‌ಟೆಲ್‌ ಮತ್ತೆ ತನ್ನ ಅಧಿಪತ್ಯವನ್ನು ಸಾಬೀತು ಪಡಿಸಿದೆ. ಆದರೆ, ಜಿಯೋ ಏರ್‌ಟೆಲ್‌ಗಿಂತ ದೂರವಿಲ್ಲದಿರುವುದು ಏರ್‌ಟೆಲ್‌ ತಲೆಬಿಸಿಗೆ ಕಾರಣವಾಗಿದೆ.

ಜಿಯೋ ಆದಾಯದಲ್ಲಿ ದ್ವಿಗುಣ

ಜಿಯೋ ಆದಾಯದಲ್ಲಿ ದ್ವಿಗುಣ

ಟ್ರಾಯ್‌ ವರದಿಯಲ್ಲಿ ಮತ್ತೊಂದು ಅಂಶ ಬಹಿರಂಗವಾಗಿದ್ದು, 2018ರ ಮೊದಲ ತ್ರೈಮಾಸಿಕದಲ್ಲಿ ಜಿಯೋ ಆದಾಯ ಶೇ.11.6ರಷ್ಟಿತ್ತು. ಆದರೆ, ದ್ವಿತೀಯ ತ್ರೈಮಾಸಿಕ ಅಂತ್ಯಕ್ಕೆ ಶೇ.22.4ಕ್ಕೆರಿರುವುದು ಅಚ್ಚರಿ ತಂದಿದೆ ಎಂದು ಐಸಿಐಸಿಐ ಸೆಕ್ಯೂರಿಟಿಸ್‌ ವಿಶ್ಲೇಷಣೆ ಮಾಡಿದೆ.

ಐಡಿಯಾವನ್ನು ಮಾರ್ಚ್‌ನಲ್ಲಿಯೇ ಹಿಂದಿಕ್ಕಿದ್ದ ಜಿಯೋ

ಐಡಿಯಾವನ್ನು ಮಾರ್ಚ್‌ನಲ್ಲಿಯೇ ಹಿಂದಿಕ್ಕಿದ್ದ ಜಿಯೋ

ಕುಮಾರ್ ಮಂಗಳಂ ಬಿರ್ಲಾ ನೇತೃತ್ವದ ಐಡಿಯಾವನ್ನು ಮಾರುಕಟ್ಟೆ ಆದಾಯದಲ್ಲಿ ಮಾರ್ಚ್‌ನಲ್ಲಿಯೇ ಜಿಯೋ ಹಿಂದಕ್ಕೆ ಹಾಕಿತ್ತು. ಸದ್ಯ ಐಡಿಯಾ ಶೇ.15.4ರಷ್ಟು ಮಾರುಕಟ್ಟೆಯ ಆದಾಯದಲ್ಲಿ ಪಾಲನ್ನು ಹೊಂದಿದೆ.

ಮೂರನೇ ಸ್ಥಾನಕ್ಕೆ ವೊಡಾಫೋನ್

ಮೂರನೇ ಸ್ಥಾನಕ್ಕೆ ವೊಡಾಫೋನ್

ಜಿಯೋ ಎಫೆಕ್ಟ್‌ನಿಂದ ವೊಡಾಫೋನ್‌ಗೆ ಬಹಳಷ್ಟು ನಕಾರಾತ್ಮಕ ಪರಿಣಾಮಗಳಾಗಿದ್ದು, ಈಗ ಜಿಯೋದಿಂದ ದೇಶದ ಟೆಲಿಕಾಂ ಆದಾಯದ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ವೊಡಾಫೋನ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಸದ್ಯ ಶೇ.19.3ರಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಐಡಿಯಾ ವೊಡಾಫೋನ್‌ ಒಂದಾದರೆ ಅವರೇ ಮೊದಲು

ಐಡಿಯಾ ವೊಡಾಫೋನ್‌ ಒಂದಾದರೆ ಅವರೇ ಮೊದಲು

ಈಗ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಹೊಂದಿರುವ ವೊಡಾಫೋನ್‌ ಮತ್ತು ಐಡಿಯಾ ಎರಡು ಕಂಪನಿಗಳು ಸಮ್ಮಿಲನಗೊಂಡರೆ ಟೆಲಿಕಾಂ ಆದಾಯದಲ್ಲಿ ಮೊದಲನೇ ಸ್ಥಾನಗಳಿಸಲಿವೆ. ಶೇ.35ರಷ್ಟು ಆದಾಯ ಹೊಂದುವ ಮೂಲಕ ಎರಡು ಕಂಪನಿಗಳು ಏರ್‌ಟೆಲ್‌, ಜಿಯೋವನ್ನು ಹಿಂದಾಕಲಿವೆ. ಆಗಸ್ಟ್‌ ಕೊನೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಎರಡು ಕಂಪನಿಗಳು ಸಂಪೂರ್ಣವಾಗಿ ಸಮ್ಮಿಲನಗೊಳ್ಳುತ್ತವೆ.

4ನೇ ಸ್ಥಾನದಲ್ಲಿ ಜಿಯೋ

4ನೇ ಸ್ಥಾನದಲ್ಲಿ ಜಿಯೋ

ಟ್ರಾಯ್‌ನ ವರದಿಯಂತೆ ಗ್ರಾಹಕರ ಆಧಾರದಲ್ಲಿ ಜಿಯೋ ಸದ್ಯ ಭಾರತದಲ್ಲಿ 4ನೇ ಸ್ಥಾನವನ್ನು ಹೊಂದಿದ್ದು, 215 ಮಿಲಿಯನ್‌ ಬಳಕೆದಾರರನ್ನು ಜೂನ್‌ ಅಂತ್ಯಕ್ಕೆ ಹೊಂದಿದ್ದು, ಬಹಳ ವೇಗವಾಗಿ ಬೆಳೆಯುತ್ತಿದೆ.

ದ್ವಿತೀಯ ತ್ರೈಮಾಸಿಕದಲ್ಲಿ ಎಡವಿದ ವೊಡಾ-ಐಡಿಯಾ

ದ್ವಿತೀಯ ತ್ರೈಮಾಸಿಕದಲ್ಲಿ ಎಡವಿದ ವೊಡಾ-ಐಡಿಯಾ

ಭಾರತೀಯ ಟೆಲಿಕಾಂ ಕ್ಷೇತ್ರದ ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್‌ ಮತ್ತು ಐಡಿಯಾಗಳು ಎಡವಿವೆ. ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು 32,200 ಕೋಟಿ ರೂ. ವಹಿವಾಟು ನಡೆದಿದ್ದು, ವೊಡಾಫೋನ್‌ ಕೇವಲ 6,200 ಕೋಟಿ ರೂ. ಆದಾಯ ಹೊಂದಿದೆ. ಐಡಿಯಾ 5,000 ಕೋಟಿ ರೂ. ಆದಾಯ ಹೊಂದಿದ್ದು, ಜಿಯೋ 7,200 ಕೋಟಿ ರೂ. ಹಾಗೂ ಏರ್‌ಟೆಲ್‌ 10,200 ಕೋಟಿ ರೂ. ಆದಾಯವನ್ನು ಹೊಂದಿವೆ.

Best Mobiles in India

English summary
Reliance Jio overtakes Vodafone to become second largest telco by revenue in India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X