ಇಂದಿನಿಂದ ಜಿಯೋ ಫೋನ್ ಬುಕ್ಕಿಂಗ್ ಆರಂಭ!!..ಬುಕ್ ಮಾಡುವುದು ಹೇಗೆ?.ಇಲ್ಲಿದೇ ಎಲ್ಲಾ ಡೀಟೆಲ್ಸ್!!

Written By:

ಇಡೀ ದೇಶವೇ ಎದುರು ನೋಡುತ್ತಿರುವ ಜಿಯೋವಿನ ಉಚಿತ ಫೀಚರ್ ಫೊನ್ ಪ್ರಿ-ಬುಕಿಂಗ್ ಆಗಸ್ಟ್‌ 24ರಂದು ಅಂದರೆ ಇಂದು ಆರಂಭವಾಗುತ್ತಿದೆ.!! ಇಂದು ಸಂಜೆ 5 ಗಂಟೆಯ ನಂತರ ಜಿಯೋ ಫೋನ್ ಬುಕ್ಕಿಂಗ್ ಆರಂಭವಾಗಲಿದ್ದು, ಎಲ್ಲರೂ ಕುತೋಹಲದಿಂದ ಕಾದುಕುಳಿತಿದ್ದಾರೆ.!!

ಮೊದಲು ಕಾಯ್ದಿರಿಸಿದವರಿಗೆ ಮೊದಲು ಫೋನ್‌ನಂತೆ ಗ್ರಾಹಕರಿಗೆ ಫೋನ್‌ ಡೆಲಿವರಿ ಮಾಡುವುದಾಗಿ ಜಿಯೋ ಪ್ರಕಟಣೆಯಲ್ಲಿ ತಿಳಿಸಿದ್ದು, ಗ್ರಾಹಕರು 500 ರೂ.ಹಣ ಪಾವತಿಸಿ ಜಿಯೊ ಫೋನ್‌ ಅನ್ನು ಬುಕ್‌ ಮಾಡಬಹುದು.!! ಹಾಗಾದರೆ, ಜಿಯೋ ಪೋನ್‌ ಬುಕ್ ಮಾಡುವುದು ಹೇಗೆ? ಮತ್ತು ಇತರ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
500ರೂ ಮಾತ್ರನಾ?

500ರೂ ಮಾತ್ರನಾ?

ಗ್ರಾಹಕರು 500 ರೂ.ಹಣ ಪಾವತಿಸಿ ಜಿಯೊ ಫೋನ್‌ ಅನ್ನು ಬುಕ್‌ ಮಾಡಿ. ಉಳಿದ 1000 ರೂ.ಗಳನ್ನು ಡೆಲಿವರಿ ಸಮಯದಲ್ಲಿ ನೀಡಬಹುದು ಎಂದು ಜಿಯೋ ತಿಳಿಸಿದೆ. ಮತ್ತು ಮೂರು ವರ್ಷದ ನಂತರ ಸಂಪೂರ್ಣ ಹಣವನ್ನು ವಾಪಸ್ ನೀಡುವುದಾಗಿ ಜಿಯೋ ಹೇಳಿಕೊಂಡಿದೆ.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಉಚಿತ ಕರೆ, ಉಚಿತ ಡೇಟಾ!!

ಉಚಿತ ಕರೆ, ಉಚಿತ ಡೇಟಾ!!

ಪ್ರತಿತಿಂಗಳಿಗೆ ಕೇವಲ ರೂ.153 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಜಿಯೋ ಪೋನ್ ಬಳಕೆದಾರಿಗೆ ಸಿಗಲಿದೆ. ಇದೇ ಮೊದಲ ಭಾರಿಗೆ ಇಂತಹದೊಮದು ಭಾರಿ ಆಫರ್ ಕಡಿಮೆ ಬೆಲೆಯ ಫೋನ್‌ ಮೂಲಕ ಜನರಿಗೆ ತಲುಪುತ್ತಿದ್ದು, ಟೆಲಿಕಾಂ ಗಢಗಢ ನಡುಗುತ್ತಿದೆ.!!

ಜಿಯೋ ಫೋನ್ ಬುಕ್ ಹೇಗೆ..?

ಜಿಯೋ ಫೋನ್ ಬುಕ್ ಹೇಗೆ..?

ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ಜಿಯೋಫೋನ್ ಅನ್ನು ನೀವು ಎರಡು ಮಾದರಿಯಲ್ಲಿ ಈ ಫೋನ್ ಬುಕ್ ಮಾಡಬಹುದಾಗಿದೆ ಒಂದು ಜಿಯೋ ಆಪ್ ಮತ್ತು ವೆಬ್‌ಸೈಟ್‌ ಮೂಲಕ ಮತ್ತು ಹತ್ತಿರದ ರಿಲಾಯನ್ಸ್ ರೀಟೆಲ್ ಶಾಪ್ ನಲ್ಲಿಯೂ ಜಿಯೋ ಪೋನ್ ಬುಕ್ ಮಾಡಬಹುದು.!!

ಜಿಯೋಫೋನ್ ಜಿಪಿಎಸ್ ನ್ಯಾವಿಗೇಶನ್

ಜಿಯೋಫೋನ್ ಜಿಪಿಎಸ್ ನ್ಯಾವಿಗೇಶನ್

ಜಿಯೋ ಫೀಚರ್ ಪೋನ್ ಜಿಪಿಎಸ್‌ಗೆ ಸಪೋರ್ಟ್ ಆಗಲಿದ್ದು, ಜಿಯೋಫೋನ್ ಮೂಲಕ ಗೂಗಲ್ ನಕ್ಷೆಗಳು ಮತ್ತು ನ್ಯಾವಿಗೇಶನ್ ಅನ್ನು ಬಳಕೆ ಮಾಡಬಹುದಾಗಿದೆ. !!

ಜಿಯೋ ಸಿನಿಮಾ!!

ಜಿಯೋ ಸಿನಿಮಾ!!

ಅನಿಯಮಿತ ವೀಡಿಯೊ ಸ್ಟ್ರೀಮಿಂಗ್ ಮತ್ತು 6000 ಕ್ಕಿಂತಲೂ ಹೆಚ್ಚು ಚಿತ್ರಗಳ ಲೈಬ್ರರಿಯನ್ನು ಜಿಯೋ ಫೋನ್ ಹೊಂದಿದೆ. 10 ವಿವಿಧ ಭಾಷೆಗಳಲ್ಲಿ 6000 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೊಗಳು, ಉಚಿತ HD ವಿಡಿಯೋಗಳಿರುತ್ತವೆ.

 22 ಭಾಷೆ ಬದಲಾವಣೆ!!

22 ಭಾಷೆ ಬದಲಾವಣೆ!!

ಜಿಯೋ ಫೋನ್‌ ಅನ್ನು 22 ಭಾಷೆಗಳಲ್ಲಿ ಬಳಸಬಹುದಾಗಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಹಿಂದಿ, ತಮಿಳು, ತೆಲುಗು, ಅಸ್ಸಾಮಿ, ಬಂಗಾಳಿ, ಒರಿಯಾ, ಹೀಗೆ 22 ಅಧಿಕೃತ ಭಾಷೆಗಳನ್ನು ಜಿಯೋಫೋನ್ ಬೆಂಬಲಿಸುತ್ತದೆ.

ಜಿಯೋಫೋನ್ ಫೀಚರ್ಸ್!!

ಜಿಯೋಫೋನ್ ಫೀಚರ್ಸ್!!

ಜಿಯೋಫೋನ್ 2 ಎಂಪಿ ಫ್ರಂಟ್ ಕ್ಯಾಮೆರಾ ಮತ್ತು 2 ಎಂಪಿ ಹಿಂಬದಿಯ ಕ್ಯಾಮರಾ ಹೊಂದಿದೆ. 4 ಜಿಬಿ ಆಂತರಿಕ ಮೆಮೊರಿ ಹಾಗೂ ಮೈಕ್ರೋ ಎಸ್‌ ಕಾರ್ಡ್ ಮೂಲಕ 128 ಜಿಬಿ ವರೆಗೆ ಮೆಮೊರಿಯನ್ನು ಫೋನ್‌ನಲ್ಲಿ ವಿಸ್ತರಿಸಬಹುದಾಗಿದೆ.!!

ಜಿಯೋಫೋನ್ ಟಿವಿ ಕನೆಕ್ಟರ್!!

ಜಿಯೋಫೋನ್ ಟಿವಿ ಕನೆಕ್ಟರ್!!

ಜಿಯೋಫೋನ್‌ನಿಂದ ಟಿವಿ ಕೂಡ ಕನೆಕ್ಟ್ ಮಾಡಬಹುದಾದ ಆಯ್ಕೆ ಹೊಂದಿದ್ದು, ನೀವು ಯಾವುದೇ ರೀತಿಯ TV ಯೊಂದಿಗೆ ನಿಮ್ಮ JioPhone ಅನ್ನು ಸಂಪರ್ಕಿಸಬಹುದು.!!

ಓದಿರಿ:ಪ್ರತಿದಿನ 10 ಕೋಟಿ ಖರ್ಚು ಮಾಡಿದರೆ!..ಬಿಲ್‌ಗೇಟ್ಸ್ ಆಸ್ತಿ ಕರಗಲು ಎಷ್ಟು ವರ್ಷ ಬೇಕು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
according to a message sent out by the telecom firm.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot