ಹೊಸ ವರ್ಷಕ್ಕೆ ಜಿಯೋವಿನಿಂದ ಊಹಿಸಲಾಗದ ಭರ್ಜರಿ ಘೋಷಣೆ?!

|

ಪ್ರತಿವರ್ಷವೂ ಏನಾದರೂ ಹೊಸತನ್ನು ತರುತ್ತಿರುವ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಸಂಸ್ಥೆ ಈ ವರ್ಷದ ಆರಂಭದಲ್ಲಿ ಭರ್ಜರಿ ಘೋಷಣೆಯೊಂದನ್ನು ಹೊರಡಿಸುತ್ತಿದೆ. ಫೀಚರ್ 4G ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸನ್ನು ಪಡೆದಿರುವ ಜಿಯೋ ಟೆಲಿಕಾಂ ಕಂಪೆನಿ ಈಗ ದೇಶದ ಪ್ರಖ್ಯಾತ ಮೊಬೈಲ್ ಕಂಪೆನಿಗಳಿಗೆ ಬಿಗ್ ಶಾಕ್ ನೀಡಲು ತಯಾರಾಗಿದೆ.

ಹೌದು, ಜಿಯೋ ಗಿಗಾಫೈಬರ್ ಬಿಡಗಡೆಗೂ ಮುನ್ನವೇ ಜಿಯೋ ತನ್ನದೇ ಸ್ಮಾರ್ಟ್‌ಫೋನ್ ಒಂದನ್ನು ಘೋಷಣೆ ಮಾಡಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿರುವಂತೆ, ಜಿಯೋ ಮುಂದಿನ ವರ್ಷ ದೊಡ್ಡ ಪರದೆಯ ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂಬ ಸುದ್ದಿ ಇದೀಗ ಖಚಿತವಾಗಿದೆ.

ಹೊಸ ವರ್ಷಕ್ಕೆ ಜಿಯೋವಿನಿಂದ ಊಹಿಸಲಾಗದ ಭರ್ಜರಿ ಘೋಷಣೆ?!

ದೇಶದಲ್ಲಿ ಆಪಲ್, ಸ್ಯಾಮ್‌ಸಂಗ್, ಬ್ರ್ಯಾಂಡ್ಗಳಂತೆಯೇ ಜಿಯೋ ಕೂಡ ಹೊಸ ಬ್ರ್ಯಾಂಡ್ ಹುಟ್ಟುಹಾಕಲು ತಯಾರಾಗಿದೆ. ಶೀಘ್ರದಲ್ಲೇ ಜಿಯೋ ಸ್ಮಾರ್ಟ್‌ಫೋನ್ ಭಾರತೀಯರ ಕೈಸೇರಿಲಿದೆ ಎಂಬುದನ್ನು ಜಿಯೋ ಮೂಲಗಳು ಸಹ ಖಚಿತಪಡಿಸಿವೆ. ಹಾಗಾದರೆ, ಏನಿದು ವೈರಲ್ ಸುದ್ದಿ?, ಜಿಯೋ ಸ್ಮಾರ್ಟ್‌ಫೋನ್‌ಗಳು ಹೇಗಿರಲಿವೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಜಿಯೋ ಸ್ಮಾರ್ಟ್‌ಪೋನ್!

ಜಿಯೋ ಸ್ಮಾರ್ಟ್‌ಪೋನ್!

ದೇಶದ ಟೆಲಿಕಾಂನಲ್ಲಿ ಮಾರುಕಟ್ಟಯಲ್ಲಿ ದಿಗ್ಗಜನಾಗುವತ್ತಿರುವ ಜಿಯೋ ಫೀಚರ್ 4G ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸನ್ನು ಪಡೆದಿರುವುದು ನಿಮಗೆಲ್ಲಾ ತಿಳಿದಿದೆ. ಇದೇ ಯಶಸ್ಸನ್ನು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲೂ ಪಡೆಯಲು ಜಿಯೋ ಕಂಪೆನಿ ಮುಂದಾಗಿದ್ದು, ಜಿಯೋ ಬ್ರ್ಯಾಂಡ್ ಹೆಸರಿನಲ್ಲಿ ದೊಡ್ಡ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತರಲು ತಯಾರಾಗಿದೆ.

ಅಮೆರಿಕಾ ಕಂಪೆನಿ ಜೊತೆ ಒಪ್ಪಂದ!

ಅಮೆರಿಕಾ ಕಂಪೆನಿ ಜೊತೆ ಒಪ್ಪಂದ!

ಹೊಸ ಸ್ಮಾರ್ಟ್‌ಪೋನ್ ಬ್ರ್ಯಾಂಡ್ ಒಂದನ್ನು ಹುಟ್ಟಿಹಾಕಲು ಜಿಯೋ ಅಮೆರಿಕಾದ ಕಂಪೆನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿ ಎಂದು ತಿಳಿದುಬಂದಿದೆ. ಅಮೆರಿಕದ ಗುತ್ತಿಗೆ ತಯಾರಕ ಕಂಪೆನಿ ಫ್ಲೆಕ್ಸ್‌ನೊಂದಿಗೆ (Flex) ಸ್ಮಾರ್ಟ್‌ಪೋನ್‌ಗಳನ್ನು ಉತ್ಪಾದಿಸಲು ಕಂಪನಿಯು ಮಾತುಕತೆ ನಡೆಸಿ ಯಶಸ್ವಿಯಾಗಿದೆ ಎಂಬುದನ್ನು ಜಿಯೋ ಅಧಿಕಾರಿಗಳು ಸಹ ಖಚಿತಪಡಿಸಿದ್ದಾರೆ.

100 ದಶಲಕ್ಷ ಸ್ಮಾರ್ಟ್‌ಪೋನ್‌

100 ದಶಲಕ್ಷ ಸ್ಮಾರ್ಟ್‌ಪೋನ್‌

ಅಮೆರಿಕದ ಗುತ್ತಿಗೆ ತಯಾರಕ ಕಂಪೆನಿ ಫ್ಲೆಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಜಿಯೋ ಕಂಪೆನಿ ದೇಶದಲ್ಲಿ 100 ದಶಲಕ್ಷ ಸ್ಮಾರ್ಟ್‌ಪೋನ್‌ಗಳನ್ನು ತಯಾರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ, ಈ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಸ್ಥಳಿಯವಾಗಿ ಉತ್ಪಾದನೆಯಾಗುತ್ತವೆ ಎಂಬುದನ್ನು ಜಿಯೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಯೋ ಅಧಿಕಾರಿಗಳು ಹೇಳಿದ್ದೇನು?

ಜಿಯೋ ಅಧಿಕಾರಿಗಳು ಹೇಳಿದ್ದೇನು?

ಭಾರತದ 4G ಮೊಬೈಲ್ ಮಾರುಕಟ್ಟೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ದೇಶ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬದಲಾವಣೆಯನ್ನು ತರಲು ನಾವು ದೊಡ್ಡ ಸ್ಕ್ರೀನ್ ಸ್ಮಾರ್ಟ್ಫೋನ್ ಹೊಂದಿರುವ ಪಾಲುದಾರರೊಂದಿಗೆ ನಾವು ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ರಿಲಯನ್ಸ್ ಜಿಯೋ ಮುಖ್ಯ ಮಾರಾಟ ಅಧಿಕಾರಿ ಸುನಿಲ್ ದತ್ ಅವರು ಹೇಳಿದ್ದಾರೆ.

ಹೇಗಿರಲಿದೆ ಜಿಯೋ ಸ್ಮಾರ್ಟ್‌ಫೋನ್?

ಹೇಗಿರಲಿದೆ ಜಿಯೋ ಸ್ಮಾರ್ಟ್‌ಫೋನ್?

ಜಿಯೋವಿನ ಮುಂಬರುವ ಸ್ಮಾರ್ಟ್‌ಫೋನ್‌ಗಳ ಕೈಗೆಟುಕುವ ಬೆಲೆಯಲ್ಲಿ ನೀಡುವುದಾಗಿ ಜಿಯೋ ಮೂಲಗಳು ತಿಳಿಸಿವೆ. ಜಿಯೋವಿನ ಎಲ್ಲಾ ಸ್ಮಾರ್ಟ್‌ಪೋನ್‌ಗಳು 4G ವೋಲ್ಟ್ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳಾಗಿರುತ್ತವೆ ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಹೊಂದಿರುವಂತಹ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಾಗಿರಲಿವೆ ಎಂದು ಜಿಯೋ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಕಂಪೆನಿಗಳಿಗೆ ಭಯ!

ಮೊಬೈಲ್ ಕಂಪೆನಿಗಳಿಗೆ ಭಯ!

ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವುದು ದೇಶದ ಪ್ರಖ್ಯಾತ ಮೊಬೈಲ್ ಕಂಪೆನಿಗಳಿಗೆ ಭಯ ಮೂಡಿಸುವ ಸುದ್ದಿಯಾಗಿದೆ. ಈಗಾಗಲೇ 4G ಫೀಚರ್ ಫೋನ್ ಮಾರಾಟದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿರುವ ಜಿಯೋ ಇದೀಗ ತನ್ನದೇ ಸ್ಮಾರ್ಟ್‌ಪೋನ್‌ಗಳ ಮೂಲಕ ಯಶಸ್ಸನ್ನು ಕಾಣಲು ತಯಾರಾಗುತ್ತಿದೆ.

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

ಹತ್ತನೇ ವಯಸ್ಸಿನಲ್ಲಿ ಆತನಿಗೆ ಉಡುಗೊರೆಯಾಗಿ ಸಿಕ್ಕಿದ್ದು ಒಂದು ಕಂಪ್ಯೂಟರ್ ಮಾತ್ರ. ಅಲ್ಲಿಂದ ಆತ ಯಾವತ್ತೂ ಸಹ ಜೀವನವನ್ನು ಹಿಂತಿರುಗಿ ನೋಡಲೇ ಇಲ್ಲ. ಏಕೆಂದರೆ, ಆ ಕಂಪ್ಯೂಟರ್ ಜೊತೆಗಿನ ಅವನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಇಂದು ಆತನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಆತನ 21ನೇ ವಯಸ್ಸಿನ ವೇಳೆಗೆ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಹೊಂದಿರುವ ಕಂಪೆನಿಯ ಮಾಲಿಕನನ್ನಾಗಿಸಿದೆ ಎಂದರೆ ನೀವು ನಂಬಲೇಬೇಕು.!

ಹೌದು, ಇದು ಕೇರಳ ರಾಜ್ಯದ ಕಣ್ಣೂರಿನ ಹುಡುಗ ಜಾವೇದ್ ಎಂಬ ಯುವಕನ ಯಶಸ್ವಿ ಯುವಕನ ಕಥೆ. ಈ ಉದ್ಯಮಶೀಲ ಯುವಕನ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆ. ಎಳೆಯ ವಯಸ್ಸಿನಲ್ಲಿಯೇ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಅದ್ಬುತ ಯಶಸ್ಸನ್ನು ಸಾಧಿಸಿರುವ ಈತ ಈಗ ಯುವಕರ ಆಶಾಕಿರಣ ಎಂದರೆ ತಪ್ಪಾಗಲಾರದು.! ಏಕೆಂದರೆ, ಈಗ ತನ್ನ 21ನೇ ವಯಸ್ಸಿನ ವೇಳೆಗೆ ಹತ್ತಾರು ಜನರಿಗೆ ಉದ್ಯೋಗ ನೀಡಿರುವ ಈಗ ವಿಶ್ವದಾಧ್ಯಂತ ಗ್ರಾಹಕರನ್ನು ಹೊಂದಿದ್ದಾನೆ.

ಇ-ಕಾಮರ್ಸ್, ವೆಬ್‌ಡಿಸೈನ್ ಮತ್ತು ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ತನ್ನದೇ ಸ್ವಂತ ಕಂಪೆನಿಯನ್ನು ಹುಟ್ಟಿಹಾಕಿಕೊಂಡಿರುವ ಜಾವೇದ್ ಈಗ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ, ಹಾಗಾದರೆ, ಕಣ್ಣೂರಿನ ಹುಡುಗ ಜಾವೇದ್ ಬಾಲ್ಯ ಜೀವನ ಹೇಗಿತ್ತು? ಕಂಪ್ಯೂಟರ್ ಪ್ರಪಂಚದಲ್ಲಿ ಜಾವೇದ್ ಕೋಟಿ ಕೋಟಿ ಹಣವನ್ನು ಗಳೀಸಲು ಸಾಧ್ಯವಾಗಿದ್ದು ಹೇಗೆ? ಕಂಪ್ಯೂಟರ್ ಜೊತೆಗಿನ ಜಾವೆದ್‌ನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಹೇಗಿತ್ತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ತಿಳಿಯಿರಿ.

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

ಈಗ ಯಶಸ್ವಿ ಉದ್ಯಮಿಯಾಗಿರುವ ಜಾವೇದ್ ಅವರ ಮೂಲ ಹೆಸರು ಮೊಹಮ್ಮದ್ ಜಾವೇದ್ ಟಿ ಎನ್ ಎಂದಾಗಿತ್ತು. ಹತ್ತನೇ ವಯಸ್ಸಿನಲ್ಲಿ ಜಾವೇದ್ ಹುಟ್ಟುಹಬ್ಬಕ್ಕೆ ಅವರ ತಂದೆ ಕಂಪ್ಯೂಟರ್ ಮತ್ತುನ ಇಂಟರ್‌ನೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಜಾವೇದ್‌ಗೆ ಬಹಳ ಕುತೋಹಲ ಮೂಡಿಸಿತ್ತು. ನಂತರದ ದಿನಗಳಲ್ಲಿ ಜಾವೇದ್‌ನ ಕಂಪ್ಯೂಟರ್ ಮೇಲಿನ ಕುತೋಹಲ ಅವನನ್ನು ಕಂಪ್ಯೂಟರ್ ಲೋಕಕ್ಕೆ ಇಳಿಸಿಬಿಟ್ಟಿತ್ತು.

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

ಅಪ್ಪ ಏನೋ ಕಂಪ್ಯೂಟರ್ ಕೊಡಿಸಿದರು. ಆದರೆ, ಆ ಹಂತದಲ್ಲಿ ಜಾವೇದ್ ಬಳಿಯಲ್ಲಿ ಐಡಿ ಇರಲಿಲ್ಲ. ಹಾಗಾಗಿ, ಜಾವೇದ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಲು ಮುಂದಾಗಿದ್ದರೆ, ಆ ಹೆಸರಿನಲ್ಲಿ ಐಡಿ ಲಭ್ಯವಿರಲಿಲ್ಲ. ಇದರ ಬದಲಾಗಿ ಟಿಎನ್‌ಎಮ್ ಜಾವೇದ್ ಎಂಬ ಹೆಸರಿನಲ್ಲಿ ಐಡಿ ಸೃಷ್ಟಿಸುವಂತೆ ಗೂಗಲ್‌ನಿಂದ ಸಲಹೆ ಬಂತು. ಆ ಹೆಸರು ಜಾವೇದ್ ಅವರಿಗೆ ಲಕ್ಕಿ ಹೆಸರಾಗಿಯೂ ಕ್ಲಿಕ್ ಆಯಿತು. ಗೂಗಲ್‌ನ ಸದ್ಬಳಕೆಯಿಂದ ಕೋಟಿ, ಕೋಟಿ ಹಣಗಳಿಸುವಂತೆ ಸಹ ಮಾಡಿತು.

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

ಬಾಲಕ ಜಾವೇದ್ ಕಂಪ್ಯೂಟರ್ ಜೊತೆಗೆ ಸಮಯ ಕಳೆಯುವ ವೇಳೆ ಆತನಿಗೆ ಯಾವಾಗಲೂ ತಲೆಯಲ್ಲಿ ಪ್ರಶ್ನೆಗಳು ತುಂಬಿರುತ್ತಿದ್ದವಂತೆ.! ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇದನ್ನೆಲ್ಲಾ ಮಾಡುವವರು ಯಾರು? ಹೀಗೆ ಪ್ರತಿಯೊಂದನ್ನು ತಿಳಿದುಕೊಳ್ಳುವುದರಲ್ಲಿ ನನಗೆ ಕುತೋಹಲವಿತ್ತು. ಒಂದರ್ಥದಲ್ಲಿ ಆ ಸಮಯದಲ್ಲಿ ನಾನು ಕಂಪ್ಯೂಟರ್ ವ್ಯಸನಿಯಾಗಿದ್ದೆ, ಆದರೆ ಒಳ್ಳೆಯ ಉದ್ದೇಶಕ್ಕಾಗಿ ಎಂದು ಜಾವೇದ್ ಅವರು ನೆನಪಿಸಿಕೊಳ್ಳುತ್ತಾರೆ.

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

ಕಂಪ್ಯೂಟರ್ ಜಗತ್ತಿನ ಬಗ್ಗೆ ಜಾವೇದ್‌ಗೆ ತಿಳಿದುಕೊಳ್ಳುವ ಹಂಬಲದಿಂದ ಆ ಕಂಪ್ಯೂಟರ್ ಬಗ್ಗೆ ಹೆಚ್ಚೆಚ್ಚು ತಿಳಿಯಲು ಆರಂಭಿಸಿದ. ಬ್ಲಾಗಿಂಗ್ ಮತ್ತು ವೆಬ್‌ಡಿಸೈನಿಂಗ್ ವಿಷಯಗಳ ಬಗ್ಗೆ ಆನ್‌ಲೈನ್ ಮೂಲಕವೇ ಹೆಚ್ಚು ತಿಳಿದುಕೊಳ್ಳುತ್ತಿದ್ದನಂತೆ. ತನ್ನ ಹತ್ತನೇ ತರಗತಿ ವೇಳೆಗೆ ಹಲವು ಬ್ಲಾಗ್‌ಗಳನ್ನು ಸೃಷ್ಟಿಸಿದ್ದ ಜಾವೇದ್, ನಂತರ ತನ್ನ ಸಹಪಾಠಿ ಸಿರಾಜ್ ಜೊತೆ ಸೇರಿ ಜೆಸ್ರಿ.ಟಿಕೆ ಎಂಬ ವೆಬ್‌ಸೈಟ್ ಕ್ರಿಯೇಟ್ ಮಾಡಿದ್ದರಂತೆ. ಡೊಮೈನ್ ಖರೀದಿಸಲು ಹಣವಲ್ಲದೇ ಉಚಿತ ಡೊಮೈನ್ ಮೂಲಕ ವೆಬ್‌ಸೈಟ್ ಸೃಷ್ಟಿಮಾಡಿದ್ದರಂತೆ.!

"ಟಿಎಂಎನ್ ಆನ್‌ಲೈನ್ ಸೊಲ್ಯೂಷನ್''

ಕಂಪ್ಯೂಟರ್ ಆಸಕ್ತಿಯ ಜೊತೆಗೆ ಅಧ್ಯಯನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಜಾವೇದ್, ವೆಬ್‌ಸೈಟ್ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿರುವುದನ್ನು ಅಂದೇ ಕಂಡುಕೊಂಡಿದ್ದ. ಆಗಲೇ ತನ್ನ ಮೊಟ್ಟ ಮೊದಲ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ಡೊಮೈನ್ ನೇಮ್ ಅನ್ನು ನೊಂದಾಯಿಸಿದ. ಅಂದು ಜಾವೇದ್ ನೊಂದಾಯಿಸಿದ ಈ ಡೊಮೈನ್ ನೇಮ್ ಈಗಲೂ ವರ್ಚುವಲ್ ಕಂಪೆನಿಯಾಗಿ ಬೆಳದುನಿಂತಿದೆ. ಆಗಲೇ ಹೇಳಿದಂತೆ ಜಾವೇದ್‌ಗೆ ಇದು ಗೂಗಲ್ ಲಕ್ಕಿ ನೇಮ್.!!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!

ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!

ಡೊಮೈನ್ ನೇಮ್ ಖರೀದಿಸಿ ಕಂಪೆನಿಯನ್ನು ಕಟ್ಟಿದ ಜಾವೇದ್, ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್ ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ. ಆದರೆ, ಹೆಚ್ಚಿನ ತಾಂತ್ರಿಕ ಕೌಶಲ್ಯಗಳಿಲ್ಲದೆ ಅವರ ಕೆಲಸ ವಿಫಲವಾಗಿತ್ತು. ಆದರೆ, ಛಲಬಿಡದ ಜಾವೇದ್ ಕೆಲ ವೆಬ್‌ಸೈಟ್ ಡಿಸೈನ್ ಕಂಪೆನಿಗಳಿಗೆ ಭೇಟಿ ನೀಡಿ ಅಲ್ಲಿ ಹೆಚ್ಚಿನದನ್ನು ತಿಳಿದುಕೊಂಡ. ನಂತರ ಶಿಕ್ಷಕಿಯೋರ್ವರು ಕೇಳಿದಂತೆ ಮೊದಲ ವೆಬ್‌ಸೈಟ್ ತಯಾರಿಸಿ ನೀಡಿ 2500 ರೂ.ಹಣಗಳಿಸಿ ತನ್ನ ತಾಯಿಯ ಕೈಗಿಟ್ಟನಂತೆ ಜಾವೇದ್.!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

ಜಾವೇದ್ ಇತ್ತ ವೆಬ್‌ಡಿಸೈನಿಂಗ್ ಕಲಿಯುತ್ತದ್ದ ವೇಳೆಯೇ ಅವನಿಗೆ ಮತ್ತೊಂದು ಕಷ್ಟ ಎದುರಾಗಿತ್ತು. ದುಬೈನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್ ತಂದೆ ಉದ್ಯೋಗ ತೊತರೆದು ವಾಪಸ್ ಆಗಿದ್ದರು. ಇದರಿಂದ ಜಾವೇದ್ ಅವರ ಮನೆಯ ಪರಿಸ್ಥಿತಿ ಬಹಳ ಕಷ್ಟವಾಗಿತ್ತು. ಈ ಸಮಯದಲ್ಲಿ ಜಾವೇದ್ ಅವರ ತಂದೆಗೆ 1 ಲಕ್ಷ ಹಣ ನೀಡಿದರೆ ಕಂಪೆನಿ ಶುರುಮಾಡುವುದಾಗಿ ಕೇಳಿಕೊಂಡನು. ಕಂಪ್ಯೂಟರ್ ಬಗ್ಗೆ ಜಾವೇದ್‌ಗೆ ಇದ್ದ ಆಸಕ್ತಿ ನೋಡಿ ಆ ಕಷ್ಟದಲ್ಲಿಯೇ ಅವರ ತಂದೆ 1 ಲಕ್ಷ ಹಣವನ್ನು ಹೊಂದಿಸಿ ನೀಡಿದ್ದರಂತೆ.

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ

ಚಿನ್ನದ ಬಳೆಗಳನ್ನು ಇಟ್ಟು ಕಚೇರಿ ನಿರ್ವಹಣೆ

1 ಲಕ್ಷ ಹಣ ಹೂಡಿ ಕಂಪೆನಿ ತೆರೆದಿದ್ದ ಜಾವೇದ್‌ನ ಮೊದಲ ದಿನಗಳು ಬಹಳ ಕಷ್ಟದ ದಿನಗಳಾಗಿದ್ದವು. ಆ ಸಮಯದಲ್ಲಿ ಓದು ಮತ್ತು ಕೆಲಸ ಎರಡರಲ್ಲಿಯೂ ಜೀವನದ ಜಂಜಾಟದಲ್ಲಿ ಜಾವೇದ್ ಇದ್ದರು. ಆಫಿಸ್ ಬಾಡಿಗೆ ನಿಡುವಷ್ಟು ಸಹ ಆದಾಯವಿರಲಿಲ್ಲ. ಮನೆ ಪರಿಸ್ಥಿತಿ ಸಹ ಹದಗೆಟ್ಟಿತ್ತು. ಯಾವುದೇ ಪ್ರಾಜೆಕ್ಟ್ ಸಹ ಜಾವೇದ್ ಕೈ ಸೇರಿರಲಿಲ್ಲ. ಇಂತಹ ಸಮಯದಲ್ಲಿ ಜಾವೇದ್ ಧೃತಿಗೆಟ್ಟಿದ್ದರಂತೆ. ತಮ್ಮ ತಾಯಿಯ ಚಿನ್ನದ ಬಳೆಗಳನ್ನು ಇಟ್ಟು ಕಚೇರಿಯನ್ನು ನಿರ್ವಹಣೆ ಮಾಡಿದ್ದರಂತೆ.

ಇಂದು ಸ್ವಂತ ಮನೆ, ಐಶಾರಾಮಿ ಕಾರು!!

ಇಂದು ಸ್ವಂತ ಮನೆ, ಐಶಾರಾಮಿ ಕಾರು!!

ಹಗಲು, ರಾತ್ರಿ ಎನ್ನದೇ ಸಿಕ್ಕಿದ ಕೆಲ ಗ್ರಾಹಕರ ಜೊತೆ ವ್ಯವಹರಿಸಿದ ಜಾವೇದ್ ನಂತರ ಕೇರಳದಲ್ಲಿ 10 ಸಣ್ಣ ಪ್ರಮಾಣದ ಕೆಲಸ ಪಡೆದರಂತೆ. ಆ ಸಮಯದಲ್ಲಿ ಆದಾಯಕ್ಕಿಂತ ಕೆಲಸದಲ್ಲಿ ವೈವಿಧ್ಯ ಮುಖ್ಯ ಎಂಬುದನ್ನು ಅರಿತ ಜಾವೇದ್ ಅವರು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನಂತರ ಯಶಸ್ವಿ ವೆಬ್‌ಡಿಸೈನ್ ಉದ್ಯಮಿಯಾಗಿ ಜಾವೇದ್ ಬೆಳೆದು ನಿಂತಿದ್ದಾರೆ. ಬಾಡಿಗೆ ಮನೆಯಲ್ಲಿಯೇ ಬೆಳೆದ ಜಾವೇದ್ ತನ್ನ ಆಸೆಯಂತೆ 19ನೇ ವಯಸ್ಸಿನಲ್ಲಿಯೇ ಸ್ವಂತ ಮನೆಯನ್ನು ಕಟ್ಟಿದ್ದಾರೆ. ಬಿಎಂಡಬ್ಲೂ ಕಾರನ್ನು ಸಹ ಖರೀದಿಸಿದ್ದಾರೆ.!

Best Mobiles in India

English summary
Reliance Jio Infocomm is working with partners to bring in affordable large screen smartphones that can cater to large mass of customers who aspire to upgrade from feature phones to own such a 4G device, a top company executive said. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X