2 ವರ್ಷದ ನಂತರ ಜಿಯೋಗೆ ಮೊದಲ ಬಾರಿ ಆದಾಯ!!..ಏರ್‌ಟೆಲ್‌ಗಿಂತ ಹೆಚ್ಚು!!

ವಾಣಿಜ್ಯ ಟೆಲಿಕಾಂ ಶುರುವಾಗಿ 15 ತಿಂಗಳ ನಂತರ ಜಿಯೋ ಇದೇ ಮೊದಲ ಬಾರಿಗೆ ಆದಾಯವನ್ನು ಘೋಷಿಸಿಕೊಂಡಿದೆ.!

|

ವಾಣಿಜ್ಯ ಟೆಲಿಕಾಂ ಶುರುವಾಗಿ 15 ತಿಂಗಳ ನಂತರ ಜಿಯೋ ಇದೇ ಮೊದಲ ಬಾರಿಗೆ ಆದಾಯವನ್ನು ಘೋಷಿಸಿಕೊಂಡಿದೆ.! ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ 504 ಕೋಟಿ ಲಾಭವನ್ನು ಹೊಂದಿರುವುದಾಗಿ ಜಿಯೋ ರಿಪೋರ್ಟ್ ನೀಡಿದ್ದು, ಜಿಯೋ ಮೇಲೆ ಗ್ರಾಹಕರ ವಿಶ್ವಾಸಕ್ಕೆ ಅಂಬಾನಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.!!

2 ವರ್ಷದ ನಂತರ ಜಿಯೋಗೆ ಮೊದಲ ಬಾರಿ ಆದಾಯ!!..ಏರ್‌ಟೆಲ್‌ಗಿಂತ ಹೆಚ್ಚು!!

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 271 ಕೋಟಿ ನಷ್ಟವನ್ನು ಅನುಭವಿಸಿದ್ದ ಜಿಯೋ ಈ ಬಾರಿಯೂ ನಷ್ಟ ಅನುಭವಿಸಲಿದೆ ಎಂದು ತಿಳಿದಿದ್ದವರಿಗೆ ಈ ಸುದ್ದಿ ಶಾಕ್ ನೀಡಿದೆ.! ಪ್ರತಿ ಬಳಕೆದಾರರಿಂದ ಏರ್‌ಟೆಲ್‌ಗಿಂತಲೂ ಸರಾಸರಿ ಹೆಚ್ಚು ಆದಾಯ ಗಳಿಸಿ ಅಚ್ಚರಿ ಮೂಡಿಸಿದೆ.!! ಹಾಗಾದರೆ, ಜಿಯೋ ಆದಾಯದ ಬಗ್ಗೆ ಅಂಬಾನಿ ಹೇಳಿದ್ದೇನು? ಜಿಯೋವಿನ ಸರಾಸರಿ ಆದಾಯ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏರ್‌ಟೆಲ್‌ಗೆ ಭಾರಿ ಲಾಸ್!!

ಏರ್‌ಟೆಲ್‌ಗೆ ಭಾರಿ ಲಾಸ್!!

ನೆನ್ನೆಯಷ್ಟೆ ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದ ಏರ್‌ಟೆಲ್ ಸತತ ಏಳನೇ ಬಾರಿ ನಷ್ಟವಾಗಿರುವ ಬಗ್ಗೆ ಮಾಹಿತಿ ನೀಡಿತ್ತು. ಪ್ರಸಕ್ತ ವರ್ಷ 306 ಕೋಟಿ ನಿವ್ವಳ ಲಾಭವನ್ನು ಏರ್‌ಟೆಲ್ ಕಳೆದುಕೊಂಡಿದ್ದು, ಜಿಯೋ ಮಾತ್ರ 504 ಕೋಟಿ ಲಾಭವನ್ನು ಗಳಿಸಿದೆ.!!

ಈ ಬಗ್ಗೆ ಅಂಬಾನಿ ಹೇಳಿದ್ದೇನು?

ಈ ಬಗ್ಗೆ ಅಂಬಾನಿ ಹೇಳಿದ್ದೇನು?

ದಕ್ಷತೆ ಮತ್ತು ಸರಿಯಾದ ಕ್ರಮಗಳನ್ನು ಈ ಬಾರಿಯ ಜಿಯೋ ಆದಾಯವು ಪ್ರತಿಬಿಂಬಿಸುತ್ತಿದೆ. ಜಿಯೋ ತನ್ನ ಪ್ರಬಲ ಆರ್ಥಿಕ ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿದೆ. ಇದಕ್ಕೆ ಜಿಯೋ ಗ್ರಾಹಕರಿಗೆ ನಮ್ಮ ಧನ್ಯವಾದಗಳು ಎಂದು ಅಂಬಾನಿ ಹೇಳಿದ್ದಾರೆ.!!

ಪಾಲುದಾರರಿಗೆ ಅಭಿನಂದನೇ!!

ಪಾಲುದಾರರಿಗೆ ಅಭಿನಂದನೇ!!

ಡೇಟಾ ಕ್ರಾಂತಿಯಲ್ಲಿ ಜಿಯೋ ಜೊತೆಗೆ ಪಾಲುದಾರಿಕೆ ಹೊಂದ್ದಿವವರೆಲ್ಲರೂ ಸೇರಿ ಬಾರತವನ್ನು ಜಾಗತಿಕ ಡಿಜಿಟಲ್ ಮನೆಯನ್ನಾಗಿ ಮಾಡಿದ್ದಾರೆ.!! ಇಂತಹ ಒಂದು ದೊಡ್ಡ ಸಾಧನೆಗಾಗಿ ನಮ್ಮ ನೌಕರರು ಮತ್ತು ಪಾಲುದಾರರನ್ನು ಅಭಿನಂದಿಸುತ್ತೇನೆ "ಎಂದು ಅವರು ಹೇಳಿದ್ದಾರೆ.!!

ಏರ್‌ಟೆಲ್‌ಗಿಂತ ಹೆಚ್ಚು ಆದಾಯ!!

ಏರ್‌ಟೆಲ್‌ಗಿಂತ ಹೆಚ್ಚು ಆದಾಯ!!

ಪ್ರತಿ ಬಳಕೆದಾರರಿಂದ ಏರ್‌ಟೆಲ್‌ಗಿಂತಲೂ ಸರಾಸರಿ ಹೆಚ್ಚು ಆದಾಯ ಗಳಿಸಿ ಜಿಯೋ ಅಚ್ಚರಿ ಮೂಡಿಸಿದೆ.! ಜಿಯೊ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವು (ARPU) 154 ರೂ.ಗಳಿದ್ದರೆ, ಇದೇ ಅವಧಿಯಲ್ಲಿ ಭಾರತಿ ಏರ್‌ಟೆಲ್‌ನ ಪ್ರತಿ ಬಳಕೆದಾರ ಸರಾಸರಿ ಆದಾಯ 123ರೂ.ಗೆ ಇಳಿದಿದೆ.!!

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಆದಾಯಕ್ಕೆ ಪಾಲುದಾರರು ಖುಷ್!!

ಆದಾಯಕ್ಕೆ ಪಾಲುದಾರರು ಖುಷ್!!

ಜಿಯೋ ಇದೇ ಮೊದಲ ಸಾರಿ ಆದಾಯವನ್ನು ಗಳಿಸಿರುವುದರಿಂದ ಜಿಯೋ ಪಾಲುದಾರರು ಖುಷಿಯಾಗಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿಯೂ ಉತ್ತಮ ಸೇವೆ ನೀಡುವ ಮೂಲಕ ಜಿಯೋ ಗ್ರಾಹಕರ ಪ್ರೀತಿಯ ಜೊತೆಗೆ ಆದಾಯವನ್ನು ಗಳಿಸಿದೆ ಎಂದು ಜಿಯೋ ಪಾಲುದಾರರು ಅಂಬಾನಿ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.!!

ಏರ್‌ಟೆಲ್‌ಗೆ ಸತತ 7ನೇ ಸಾರಿಯೂ ಭಾರೀ ನಷ್ಟ!..ಟ್ರಾಯ್ ಮತ್ತು ಜಿಯೋಗೆ ಖಡಕ್ ವಾರ್ನಿಂಗ್!!ಏರ್‌ಟೆಲ್‌ಗೆ ಸತತ 7ನೇ ಸಾರಿಯೂ ಭಾರೀ ನಷ್ಟ!..ಟ್ರಾಯ್ ಮತ್ತು ಜಿಯೋಗೆ ಖಡಕ್ ವಾರ್ನಿಂಗ್!!

Best Mobiles in India

English summary
Mukesh Ambani-led Reliance Jio has reported its first-ever profit within 15 months of the start of commercial operations at Rs 504 crore for the third quarter. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X