Subscribe to Gizbot

170 ದಿನದಲ್ಲಿ ಜಿಯೋ ಮಾಡಿದ್ದೇನು...!? ಎಪ್ರಿಲ್‌ನಿಂದ ಟಾರಿಫ್ ಜಾರಿ, ಡಬ್ಬಲ್ ಡೇಟಾ..!

Written By:

ದೇಶಿಯ ಟಿಲಿಕಾಮ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದಲ್ಲಿ ಜಿಯೋ ಕೇವಲ 170 ದಿನಗಳಲ್ಲೇ 10 ಕೋಟಿ ಮಂದಿ ಗ್ರಾಹಕರನ್ನು ತನ್ನ ಜೋಳಿಗೆಗೆ ಸೇರಿಸಿಕೊಂಡಿದ್ದು, ಹಿನ್ನಲೆಯಲ್ಲಿ ತನ್ನ ಷೇರುದಾರರೊಂದಿಗೆ ಮಾತುಕತೆ ನಡೆಸಿದ ರಿಲಯನ್ಸ್ ಮಾಲೀಕ ಮುಖೇಶ್‌ ಅಂಬಾನಿ ಎಲ್ಲಾರಿಗೂ ಧನ್ಯವಾದ ಸಲ್ಲಿಸಿದ್ದಾರೆ. 

170 ದಿನದಲ್ಲಿ ಜಿಯೋ ಮಾಡಿದ್ದೇನು...!? ಎಪ್ರಿಲ್‌ನಿಂದ ಟಾರಿಫ್ ಜಾರಿ, ಡಬ್ಬಲ್ ಡೇಟ

ಓದಿರಿ: ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

ಇದೇ ಸಂದರ್ಭದಲ್ಲಿ ಇಲ್ಲಿಯವರೆಗೆ ಜಿಯೋ ಮಾಡಿದ ಸಾಧನೆಗಳೇನು, ದೇಶಿಯ ಟೆಲಿಕಾಮ್ ವಲಯದಲ್ಲಿ ಸಾಧಿಸಿದ ಹೊಸ ಮೈಲಿಗಲ್ಲುಗಳ ಬಗ್ಗೆ ಮಾಹಿತಿ ನೀಡಿದಲ್ಲದೇ ಮುಂದೇ ದೇಶದಲ್ಲಿ ಜಿಯೋ ಮಾಡಲಿರುವ ಹೊಸ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಷಣವೊಂದಕ್ಕೆ ಜಿಯೋ ಕುಟುಂಬಕ್ಕೆ ಸೇರಿದವರು 7 ಮಂದಿ:

ಕ್ಷಣವೊಂದಕ್ಕೆ ಜಿಯೋ ಕುಟುಂಬಕ್ಕೆ ಸೇರಿದವರು 7 ಮಂದಿ:

ಜಿಯೋ ತನ್ನ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಕ್ಷಣವೊಂದಕ್ಕೆ ಜಿಯೋ ಕುಟುಂಬವನ್ನು ಸೇರಿದವರ ಸಂಖ್ಯೆ 7, 170 ದಿನದಲ್ಲಿ ಜಿಯೋ ಗ್ರಾಹಕರ ಸಂಖ್ಯೆ 10 ಕೋಟಿ. ಹೀಗಾಗಿ ಜಿಯೋ ದೇಶದಲ್ಲಿ ಡೇಟಾ ಬಳಸುವ ನಂಬರ್ 1 ಡೇಟಾ ಬಳಕೆ ಮಾಡುವ ನೆಟ್‌ವರ್ಕ್ ಆಗಿದೆ.

 ಜಿಯೋ ಬಳಕೆದಾರರು ತಿಂಗಳಿಗೆ ಬಳಸುತ್ತಿರುವುದು 100 ಕೋಟಿ GB ಡೇಟಾ..!

ಜಿಯೋ ಬಳಕೆದಾರರು ತಿಂಗಳಿಗೆ ಬಳಸುತ್ತಿರುವುದು 100 ಕೋಟಿ GB ಡೇಟಾ..!

ಜಿಯೋ ತನ್ನ ಗ್ರಾಹಕರಿಗೆ ಉಚಿತವಾಗಿ ಡೇಟಾ ಬಳಸುವ ಅಧಿಕಾರವನ್ನು ನೀಡಿತ್ತು, ಈ ಹಿನ್ನಲೆಯಲ್ಲಿ ಪ್ರತಿ ತಿಂಗಳು ಜಿಯೋ ಬಳಕೆದಾರರು 100 ಕೋಟಿ GB ಡೇಟಾ ಇಂಟರ್ನೆಟ್ ಬಳಸಿದ್ದಾರೆ ಎನ್ನಲಾಗಿದೆ. ಪ್ರತಿ ದಿನ ಸುಮಾರು 5.5 ಕೋಟಿ ಗಂಟೆಗಳ ವಿಡಿಯೋ ವನ್ನು ಜಿಯೋ ಬಳಕೆದಾರರು ನೋಡುತ್ತಿದ್ದಾರೆ ಎನ್ನಲಾಗಿದೆ.

 ಶೇ.99 ಮಂದಿಯನ್ನು ತಲುಪಲಿರುವ ಜಿಯೋ:

ಶೇ.99 ಮಂದಿಯನ್ನು ತಲುಪಲಿರುವ ಜಿಯೋ:

ಜಿಯೋ ಮುಂದಿನ ದಿನಗಳಲ್ಲಿ ಭಾರೀ ದೊಡ್ಡ ಮಟ್ಟದ ಗುರಿಯನ್ನು ಇಟ್ಟುಕೊಂಡಿದ್ದು, ಕಡಿಮೆ ಅವಧಿಯಲ್ಲಿ 1೦ ಕೋಟಿ ಮಂದಿ ಗ್ರಾಹಕರನ್ನು ಹೊಂದಿದ ಮಾದರಿಯಲ್ಲಿ ದೇಶದಲ್ಲಿರುವ ಶೇ.99 ರಷ್ಟು ಮಂದಿಯನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ಮುಂದಿನ ತಿಂಗಳಿಂದ ಟಾರಿಫ್ ಜಾರಿ , ಡಬ್ಬಲ್ ಡೇಟಾ ಆಫರ್:

ಮುಂದಿನ ತಿಂಗಳಿಂದ ಟಾರಿಫ್ ಜಾರಿ , ಡಬ್ಬಲ್ ಡೇಟಾ ಆಫರ್:

ಸದ್ಯ ನೂರು ಕೋಟಿ ಗ್ರಾಹಕರನ್ನು ಹೊಂದಿರುವ ಜಿಯೋ, ಮುಂದಿನ ತಿಂಗಳಿಂದ ಜಿಯೋ ಬಳಕೆದಾರಿಗೆ ಟಾರಿಫ್ ಜಾರಿ. ಮುಂದಿನ ತಿಂಗಳಿಂದ ಡಬ್ಬಲ್ ಡೇಟಾ ಅಫರ್ ಅನ್ನು ನೀಡುವುದಾಗಿ ಅಂಬಾನಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಕೊಡುಗೆಯನ್ನು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
just 170 days since its launch, Jio has crossed the 100 million customer mark on its 4G LTE network. Jio has added, on average, nearly 7 customers on its network every second of every day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot