ಜಿಯೋವಿನಿಂದ ಮತ್ತೆ 3 ಭರ್ಜರಿ ಆಫರ್ ರಿಲೀಸ್!..ಬೆಚ್ಚಿದವು ಏರ್‌ಟೆಲ್, ವೊಡಾಫೋನ್!

|

ದೇಶದ ಟೆಲಿಕಾಂನಲ್ಲಿ ಭಾರೀ ಬದಲಾವಣೆ ತಂದಿರುವ ಜಿಯೋ ಇದೀಗ ಮತ್ತೊಂದು 'ಆಲ್-ಇನ್-ಒನ್' ಪ್ಲಾನ್‌ಗಳ ಬಿಡುಗಡೆ ಮೂಲಕ ಭರ್ಜರಿ ಸದ್ದು ಮಾಡಿದೆ. ಶುಲ್ಕದ ಸರಳತೆಯ ಮುಂದುವರಿಕೆಗಾಗಿ ಜಿಯೋ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಇದಕ್ಕೆ ಜಿಯೋ 'ಆಲ್-ಇನ್-ಒನ್' ಪ್ಲಾನ್ ಎಂದು ಕರೆದುಕೊಂಡಿದೆ. ಹೆಚ್ಚು ಡೇಟಾ, ಹೆಚ್ಚು ವಾಯ್ಸ್, ಹೆಚ್ಚು ಮೌಲ್ಯ ಎಂಬ ಉದ್ದೇಶದಿಂದ ಬಂದಿರುವ ಈ 'ಆಲ್-ಇನ್-ಒನ್' ಪ್ಲಾನ್ ಆರ್‌ಗಳಲ್ಲಿ 222, 333, ಮತ್ತು 444 ರೂ.ಗಳ ದರಗಳ ಮೂರು ಅಪರಿಮಿತ ಸೇವೆಗಳು ಜಿಯೋ ಗ್ರಾಹಕರಿಗೆ ಸಿಗುತ್ತಿವೆ.

ಆಲ್-ಇನ್-ಒನ್

ಹೌದು, ಜಿಯೋ 'ಆಲ್-ಇನ್-ಒನ್' ಪ್ಲಾನ್‌ಗಳು ಸರಳ ಹಾಗೂ ಗೊಂದಲರಹಿತ ಪ್ಲಾನ್‌ಗಳಾಗಿದ್ದು, ಎಲ್ಲ ಸೇವೆಗಳೂ ಒಂದೇ ಪ್ಲಾನ್‌ನಲ್ಲಿ ಲಭ್ಯವಿರುವುದರ ಜೊತೆಗೆ ಅವುಗಳ ದರವನ್ನು ನೆನಪಿಟ್ಟುಕೊಳ್ಳುವುದೂ ಸುಲಭವಾಗಿದೆ. ಅಪರಿಮಿತ ವಾಯ್ಸ್, SMS, ಆಪ್‌ಗಳ ಜೊತೆಗೆ ಪ್ರತಿದಿನ 2 ಜಿಬಿ ಡೇಟಾವನ್ನೂ ನೀಡುವ ಈ ಪ್ಲಾನ್‌ಗಳಿಂದ ಗ್ರಾಹಕರಿಗೆ ಅಭೂತಪೂರ್ವ ಮೌಲ್ಯ ದೊರಕಲಿದೆ. ಅಲ್ಲದೆ, ಇತರ ಸಂಸ್ಥೆಗಳ ಸದ್ಯದ ಪ್ಲಾನ್‌ಗಳ ಹೋಲಿಕೆಯಲ್ಲಿ 20-50% ಕಡಿಮೆ ಬೆಲೆಯಲ್ಲಿ ದೊರಕುವ ಇವು ಮಾರುಕಟ್ಟೆಯಲ್ಲೇ ಅತ್ಯಂತ ಕಡಿಮೆ ದರದ ಪ್ಲಾನ್‌ಗಳಾಗಿವೆ.

ಟೆಲಿಕಾಂ

ಜಿಯೋ ಇತ್ತೀಚಿಗೆ ಇತರೆ ಟೆಲಿಕಾಂ ನೆಟ್‌ವರ್ಕ್‌ಗಳನ್ನು ಮಾಡಲು ಶುಲ್ಕವನ್ನು ವಿಧಿಸಿತ್ತು. ಇದರಿಂದ ಐಸಿಯು ಚಾರ್ಜ್ ಆಗಿ ಗ್ರಾಹಕರು ಕರೆಗಳಿಗಾಗಿ ಹೆಚ್ಚುವರಿ ಪಾವತಿಸಬೇಕಾಗಿತ್ತು. ಆದರೆ, ಇದೀಗ ಜಿಯೋ ಇದನ್ನು ಸರಳಗೊಳಿಸಲು ಮುಂದಾಗಿದೆ. ಅದಕ್ಕಾಗಿ 'ಆಲ್-ಇನ್-ಒನ್' ಪ್ಲಾನ್‌ಗಳ ಬಿಡುಗಡೆ ಮಾಡಿರುವ ಜಿಯೋ ಒಂದೇ ದರದಲ್ಲಿ ಎಲ್ಲ ಉಚಿತ ಸೇವೆಗಳನ್ನು ಬಿಡುಗಡೆ ಮಾಡಿದೆ. ಈ 'ಆಲ್-ಇನ್-ಒನ್' ಪ್ಲಾನ್‌ಗಳಲ್ಲಿ 222, 333, ಮತ್ತು 444 ರೂ.ಗಳ ದರಗಳ ಮೂರು ಅಪರಿಮಿತ ಸೇವೆಗಳ ಆಫರ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಜಿಯೋವಿನ 222 ರೂ. ಗಳ 'ಆಲ್-ಇನ್-ಒನ್' ಪ್ಲಾನ್‌ನಲ್ಲಿ ಗ್ರಾಹಕರು ಪ್ರತಿದಿನ ಎರಡು ಜಿಬಿ ಡೇಟಾ ಪಡೆಯಲಿದ್ದಾರೆ. ಈ ಆಫರ್ ಒಂದು ತಿಂಗಳ ವ್ಯಾಲಿಡಿಟಯಲ್ಲಿ ಲಭ್ಯವಿದ್ದು, ಗ್ರಾಹಕರು ಜಿಯೋದಿಂದ ಜಿಯೋಗೆ ಉಚಿತ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ 1000 ಇತರೆ (ನಾನ್ ಜಿಯೋ ಎಫ್‌ಯುಪಿ) ನೆಟ್‌ವರ್ಕ್‌ಗಳನ್ನು ಸಹ ಪಡೆಯಲಿದ್ದಾರೆ. ಹಾಗೆಯೇ, 333 ರೂಪಾಯಿಗಳಲ್ಲಿ ಎರಡು ತಿಂಗಳು ಹಾಗೂ 444 ರೂಪಾಯಿಗಳಲ್ಲಿ ಮೂರು ತಿಂಗಳು ತಿಂಗಳ ವ್ಯಾಲಿಡಿಟಿ ಗ್ರಾಹರಿಗೆ ಲಭ್ಯವಿದ್ದು, ಮೂರು ಯೋಜನೆಗಳು ಕೂಡ ಅತ್ಯುತ್ತಮ ಯೋಜನೆಗಳಂತೆ ಕಾಣುತ್ತಿವೆ.

ಜಿಯೋ

ಜಿಯೋ ಸದ್ಯ ನೀಡುತ್ತಿರುವ ಪ್ಲಾನ್‌ನೊಡನೆ ಹೋಲಿಸಿದಾಗ, ಈ ಹೊಸ ಪ್ಲಾನ್‌ಗಳು ಒಂದು ರೂಪಾಯಿಗೆ ಒಂದು ಜಿಬಿಯಂತೆ ಹೆಚ್ಚುವರಿ ಡೇಟಾ ನೀಡಲಿವೆ. ಅಷ್ಟೇ ಅಲ್ಲದೆ, 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳೂಉಚಿತವಾಗಿ ದೊರಕಲಿವೆ. ಉದಾಹರಣೆಗೆ, ಜಿಯೋ ಸದ್ಯ ನೀಡುತ್ತಿರುವ ದೈನಿಕ 2 ಜಿಬಿ ಪ್ಲಾನ್‌ನೊಡನೆ ಹೋಲಿಸಿದಾಗ ಮೂರು ತಿಂಗಳ ದೈನಿಕ 2 ಜಿಬಿ ಪ್ಯಾಕ್ ಇದೀಗ ರೂ. 448ರ ಬದಲಿಗೆ ರೂ. 444ಕ್ಕೆ ಲಭ್ಯವಾಗಲಿದೆ. ಸುಮಾರು 80 ರೂ ಮೌಲ್ಯದ 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳೂ ಹೆಚ್ಚುವರಿಯಾಗಿ ದೊರಕಲಿವೆ.

Best Mobiles in India

English summary
Jio has fired another shot in the telecom battles with rival operators including Airtel and Vodafone Idea. The company has announced new All-In-One plans for the Jio mobile users in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X