ಜಿಯೋ ಎಂಟ್ರಿಯಿಂದ ಬದಲಾಗ್ತಿದೆ ಕಾರ್ಡ್‌ ಪೇಮೆಂಟ್ ಕ್ಷೇತ್ರ..!

By Gizbot Bureau
|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ಜಿಯೋ, ಈಗ ಮರ್ಚಂಟ್ ಪೇಮೆಂಟ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಹೊಸ ಬದಲಾವಣೆಯನ್ನು ತರ್ತಿದೆ. ಜಿಯೋ ಇನ್ಫೋಕಾಂ ಪ್ರವೇಶಾತಿಯಿಂದ ಕಾರ್ಡ್‌ ಪೇಮೆಂಟ್ ವ್ಯವಹಾರದಲ್ಲಿ ಹೆಚ್ಚಿನ ಬದಲಾವಣೆಗಳಾಗುತ್ತಿದ್ದು, ಹೊಸ ಪೀಳಿಗೆಯ ಆಂಡ್ರಾಯ್ಡ್‌ ಟರ್ಮಿನಲ್ಸ್ ಕಡೆ ವ್ಯಾಪಾರಿಗಳು ಮುಖ ಮಾಡ್ತಿದ್ದಾರೆ.

ಓದಿರಿ : ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು! ಓದಿರಿ : ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ದೇಶದ ಅತಿದೊಡ್ಡ ಪೇಮೆಂಟ್ ಟರ್ಮಿನಲ್ ಗಳಲ್ಲಿ ಒಂದಾಗಿರುವ ವರ್ಡ್‌ಲೈನ್‌ನಂತಹ ಲೀಡಿಂಗ್‌ ಕಂಪನಿಯು ಸಹ ಬದಲಾವಣೆಗೆ ಒಗ್ಗಿಕೊಳ್ಳುತ್ತಿದ್ದು, ಜಿಯೋಗೆ ಹೆಚ್ಚಿನ ಸ್ಪರ್ಧೆ ನೀಡಲು ಹೊಸ ಮಾರ್ಗವನ್ನು ಸೃಷ್ಟಿಸಿಕೊಳ್ಳುತ್ತಿದ್ದು, ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಹೆಚ್ಚಿನ ಸ್ಪರ್ಧೆ..! ಹೆಚ್ಚಿನ ಸೇವೆ..!

ಹೆಚ್ಚಿನ ಸ್ಪರ್ಧೆ..! ಹೆಚ್ಚಿನ ಸೇವೆ..!

ರಿಲಾಯನ್ಸ್‌ ಜಿಯೋ ಹೊರತುಪಡಿಸಿ, ಡೋಮೆಸ್ಟಿಕ್ ಕಂಪನಿಗಳಾದ ಎಂಸ್ವೈಪ್, ಇನ್ನೋವಿಟಿ ಪೇಮೆಂಟ್ಸ್‌ಗಳಿಂದಲೂ ಹೆಚ್ಚಿನ ಸ್ಪರ್ಧೆ ಬರುತ್ತಿದೆ. ಇದರರ್ಥ ವರ್ಡ್‌ಲೈನ್‌ನಂತಹ ಕಂಪನಿಗಳು ವ್ಯಾಪಾರಿ ಆಧಾರಿತ ಫೀಚರ್‌ಗಳನ್ನು ನೀಡಲು ಮುಂದಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಹೊಸ ಸಾಧನಗಳು ಸ್ವಲ್ಪ ದುಬಾರಿಯಾಗುತ್ತವೆ. ಆದರೆ, ವ್ಯಾಪಾರಿಗಳಿಗೆ ಈ ಸಾಧನಗಳು ಹೆಚ್ಚಿನ ಸೇವೆಗಳನ್ನು ಒದಗಿಸುತ್ತವೆ. ಹಾಗೂ ಜೂನ್ ಅಂತ್ಯದ ಹೊತ್ತಿಗೆ ಹೊಸ ಸಾಧನಗಳನ್ನು ನಾವು ವ್ಯಾಪಾರಿಗಳಿಗೆ ನೀಡಲು ಬಯಸುತ್ತೇವೆ ಎಂದು ವರ್ಡ್‌ಲೈನ್‌ನ ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯ ಸಿಇಒ ದೀಪಕ್ ಚಾಂದ್‌ನಾನಿ ಹೇಳುತ್ತಾರೆ.

ಲಾಭ ಏನು..?

ಲಾಭ ಏನು..?

ಆಂಡ್ರಾಯ್ಡ್‌ ಆಧಾರಿತ ಮಾರಾಟ ಡಿವೈಸ್‌ ವ್ಯಾಪಾರಿಗಳಿಗೆ ಹೋಲ್‌ಸೇಲ್‌ ಮರ್ಚಂಟ್ಸ್‌ ಆಪ್‌ಗಳನ್ನು ಡೌನ್‌ಲೋಡ್‌ ಮಾಡಲು ಅನುಮತಿಸುತ್ತದೆ. ಅದಲ್ಲದೇ ಗ್ರಾಹಕರಿಗೆ ಸುಲಭವಾಗಿ ಕ್ರೆಡಿಟ್‌ ಪರಿಹಾರಗಳನ್ನು ನೀಡುತ್ತದೆ. ಇದಲ್ಲದೇ, ವರ್ಡ್‌ಲೈನ್‌ ಕಂಪನಿ ಮೂಲಭೂತ ಪಾವತಿಗಳ ಮೇಲೆ ಮೌಲ್ಯ ವರ್ಧಿತ ಸೇವೆಗಳನ್ನು ನೀಡುತ್ತಿದ್ದು, ಇದು ವ್ಯಾಪಾರಿಗಳಿಗೆ ಲಾಭ ಹೆಚ್ಚಿಸುತ್ತದೆ.

ನವ ತಂತ್ರಜ್ಞಾನ

ನವ ತಂತ್ರಜ್ಞಾನ

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಆಧಾರಿತ ಪೇಮೆಂಟ್‌ ಆಯ್ಕೆಯನ್ನು ಹೊಂದಿರುವ ಪೇಟಿಎಂ, ಫೋನ್‌ಪೇ, ಗೂಗಲ್‌ ಪೇನಂತಹ ಆಪ್‌ಗಳು ಸ್ಮಾರ್ಟ್‌ PoS ವ್ಯವಸ್ಥೆ ಹೊಂದಿವೆ. ಇನ್ನು, ಎಂಸ್ವೈಪ್‌ ನಂತಹ ಕಂಪನಿಗಳು ಆಂಡ್ರಾಯ್ಟ್‌ ಟರ್ಮಿನಲ್ ಹೊಂದಿದ್ದು, ಇವು ಸ್ಮಾರ್ಟ್‌ PoSಗಿಂತ ಉನ್ನತೀಕರಿಸಿದ Wise PoS Plus ವ್ಯವಸ್ಥೆಯನ್ನು ಹೊಂದಿವೆ. ವರ್ಡ್‌ಲೈನ್‌ ಕೂಡ ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸಲು, ಫೀಚರ್‌ಗಳನ್ನು ಅಳವಡಿಸಿಕೊಳ್ಳಲು ಮುಕ್ತ ಅವಕಾಶ ಹೊಂದಿರುವುದರಿಂದ ಈ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಬಹುದು.

ವರ್ಡ್‌ಲೈನ್ ಕಾರ್ಯಕ್ಷೇತ್ರ ವಿಸ್ತರಣೆ

ವರ್ಡ್‌ಲೈನ್ ಕಾರ್ಯಕ್ಷೇತ್ರ ವಿಸ್ತರಣೆ

ನಮ್ಮ ಕಂಪನಿಯ ಅತಿದೊಡ್ಡ ಷೇರುದಾರ ಕಂಪನಿ ಆಟೋಸ್ ವರ್ಡ್‌ಲೈನ್‌ನಿಂದ 23.4% ಷೇರನ್ನು ಕಡಿಮೆ ಮಾಡಿದೆ, ಇದರಿಂದ ನಾವು ಸ್ವತಂತ್ರವಾಗಿ ಹಣ ಸಂಗ್ರಹಿಸಲು ಸಾಧ್ಯವಾಗುತ್ತದೆ. ವರ್ಡ್‌ಲೈನ್‌ ​​ತನ್ನ ಪ್ರಸ್ತುತ ಕಾರ್ಡ್ ಯಂತ್ರಗಳನ್ನು ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಮುಂದುವರಿಸುತ್ತದೆ. ದೇಶದಲ್ಲಿ ಈಗಾಗಲೇ ಒಂದು ಮಿಲಿಯನ್‌ಗಿಂತ ಹೆಚ್ಚು ಟರ್ಮಿನಲ್‌ಗಳನ್ನು ಸ್ಥಾಪಿಸಲು ವರ್ಡ್‌ಲೈನ್‌ ಯಶಸ್ವಿಯಾಗಿದೆ.

ನಮ್ಮ ಆದಾಯ ಇಲ್ಲಿಂದ ಸೃಷ್ಟಿಯಾಗುತ್ತಿರುವುದರಿಂದ ಭಾರತದಲ್ಲಿ ನಮ್ಮ ವ್ಯವಹಾರವನ್ನು ಹೆಚ್ಚು ಕೇಂದ್ರಿಕರಿಸುತ್ತೇವೆ. ನಾವೀಗ ಭೂತಾನ್, ಶ್ರೀಲಂಕಾದಂತಹ ದೇಶಗಳಿಗೆ ಕಾಲಿಡುತ್ತಿದ್ದೇವೆ. ಅಷ್ಟೇ ಅಲ್ಲದೇ ಭಾರತದಿಂದ ಯುರೋಪ್‌ಗೆ ಉತ್ಪನ್ನಗಳನ್ನು ರಫ್ತು ಮಾಡುವ ಉದ್ಯಮಕ್ಕೂ ಪ್ರವೇಶಿಸುತ್ತಿದ್ದೇವೆ ಎಂದು ಚಾಂದ್‌ನಾನಿ ಹೇಳಿದ್ರು. ಇನ್ನು, ಪ್ರಸಕ್ತ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ವರ್ಡ್‌ಲೈನ್‌ 560 ಮಿಲಿಯನ್ ಯುರೋ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6.2ರಷ್ಟು ಹೆಚ್ಚಿನ ಆದಾಯವನ್ನು ವರ್ಡ್‌ಲೈನ್‌ ದಾಖಲಿಸಿದೆ.

ಓದಿರಿ : ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌! ಓದಿರಿ : ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌!

Best Mobiles in India

English summary
Reliance Jio's PoS 2.0 Is Here Based on Android OS

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X