ಮಾರ್ಚ್‌ವೇಳೆಗೆ ಮತ್ತೊಂದು ದಾಖಲೆ ನಿರ್ಮಿಸಲಿದೆ ಜಿಯೋ!..ಏನು ಗೊತ್ತಾ!?

Written By:

ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬಂದಾಗಿನಿಂದ ಪ್ರತಿದಿನವೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುತ್ತಲೇ ಇದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ 26 ದಿವಸಗಳಲ್ಲಿಯೇ 16 ಮಿಲಿಯನ್ ಗ್ರಾಹಕರನ್ನು ಸೆಳೆದು ವಿಶ್ವದಾಖಲೆಯನ್ನು ನಿರ್ಮಿಸಿದ್ದ ಜಿಯೋ ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ರೆಡಿಯಾಗುತ್ತಿದೆ!

ಮಾರ್ಚ್‌ವೇಳೆಗೆ ಮತ್ತೊಂದು ದಾಖಲೆ ನಿರ್ಮಿಸಲಿದೆ ಜಿಯೋ!..ಏನು ಗೊತ್ತಾ!?

ಹೌದು, ಗ್ರಾಹಕರನ್ನು ಸೆಳೆಯುವ ಸರಾಸರಿ ರೇಟಿಂಗ್‌ನಲ್ಲಿ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ ಹಿಂದಿಕ್ಕಿದ ಜಿಯೋ ಇದೀಗ ಮಾರ್ಚ್ ವೇಳೆಗೆ ಒಂದು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದುತ್ತದೆ ಎಂದು ಫಿಚ್ (Fitch) ರೇಟಿಂಗ್ಸ್ ಹೇಳಿದೆ! ಹಾಗಾಗಿ, ಪ್ರಪಂಚದಲ್ಲಿಯೇ ಇಷ್ಟು ವೇಗವಾಗಿ 1 ಬಿಲಿಯನ್ ಗ್ರಾಹಕರನ್ನು ಹೊಂದುವ ಮೊದಲ ಸಂಸ್ಥೆಯಾಗಿ ಜಿಯೋ ಹೊರಹೊಮ್ಮುತ್ತದೆ!

ಮಾರ್ಚ್‌ವೇಳೆಗೆ ಮತ್ತೊಂದು ದಾಖಲೆ ನಿರ್ಮಿಸಲಿದೆ ಜಿಯೋ!..ಏನು ಗೊತ್ತಾ!?

ಸ್ಮಾರ್ಟ್‌ಫೋನ್‌ ಹೆಚ್ಚು ಉಪಯೋಗಿಸುವುದು ಮಹಿಳೆಯರ?..ಪುರುಷರ?...ವರದಿ!!

ಭಾರತದ ನಂಬರ್‌ ಒನ್ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಜಿಯೋ ಉಚಿತ ಸೇವೆಯನ್ನು ಹೆಚ್ಚಿಸಿದ್ದು, ಇದರ ಪರಿಣಾಮವಾಗಿ ಭಾರತೀಯರು ಮತ್ತೆ ಜಿಯೋ ಸೇವೆಗೆ ಮಾರುಹೋಗುತ್ತಿದ್ದಾರೆ. ಇನ್ನು ಜಿಯೋ ಮಾರುಕಟ್ಟೆಗೆ ಬಂದ ನಂತರ 4G ಸ್ಮಾರ್ಟ್‌ಫೋನ್‌ ಖರೀದಿ ಹೆಚ್ಚಾಗಿದೆ ಎಂದು ಫಿಚ್ (Fitch) ರೇಟಿಂಗ್ಸ್ ಮುಖ್ಯಸ್ಥ ನಿತಿನ್ ಸೋನಿ ಹೇಳಿದ್ದಾರೆ.

ಪ್ರಸ್ತುತ ಜಿಯೋ 52-55 ಬಿಲಿಯನ್‌ ಬಳಕೆದಾರರನ್ನು ಹೊಂದಿದ್ದು, 2017 ರ ಮಾರ್ಚ್ ವೇಳೆಗೆ 100 ಮಿಲಿಯನ್ ಗ್ರಾಹಕರು ಜಿಯೋ ಸೇರಲಿದ್ದಾರೆ. ಆದರೆ ಉಚಿತವಾಗಿ ಸೇವೆ ನೀಡುತ್ತಿರುವುದನ್ನು ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಿದೆ ಎಂದರು.

ಮಾರ್ಚ್‌ವೇಳೆಗೆ ಮತ್ತೊಂದು ದಾಖಲೆ ನಿರ್ಮಿಸಲಿದೆ ಜಿಯೋ!..ಏನು ಗೊತ್ತಾ!?

ಈಗಾಗಲೇ ಮೂರು ತಿಂಗಳು ಉಚಿತ ಸೇವೆ ನೀಡಿದ ಜಿಯೋ ಮೇಲೆ ಭಾರತೀಯರಿಗೆ ಇದೀಗ ಹೆಚ್ಚು ನಂಬಿಕೆ ಬಂದಿದ್ದು, ಜಿಯೋ ಟೆಲಿಕಾಂ ಶಾಶ್ವತವಾಗಿ ಉಳಿಯಲಿದೆ ಎನ್ನುವುದನ್ನು ಜನರು ತಿಳಿಯುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಯೋಗೆ ಬರುವವರ ಹೊಸ ಗ್ರಾಹಕರ ಸಂಖ್ಯೆ ಇನ್ನು ಹೆಚ್ಚಾಗಲಿದೆ ಎನ್ನಲಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Fitch Ratings says the Reliance Jio subscriber base could touch 100 million by March.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot