ಸ್ಮಾರ್ಟ್‌ಫೋನ್‌ ಹೆಚ್ಚು ಉಪಯೋಗಿಸುವುದು ಮಹಿಳೆಯರ?..ಪುರುಷರ?..ಶಾಕಿಂಗ್ ರಿಸಲ್ಟ್!!

|

ಭಾರತೀಯರು ಇತರ ಎಲ್ಲಾ ಮಾಧ್ಯಮಗಳಿಗಿಂತ ಹೆಚ್ಚು ಸಮಯವನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದಾರೆ ಎನ್ನುವ ವರದಿಯೊಂದು ಬಿಡುಗಡೆಯಾಗಿದೆ. ಕೆಲವೇ ವರ್ಷಗಳ ಹಿಂದೆ ಮನರಂಜನೆಗಾಗಿ ಹೆಚ್ಚು ಟಿವಿಯನ್ನು ಬಳಸುತ್ತಿದ್ದ ಜನರು ಇದೀಗ ಹೆಚ್ಚು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ!. ಬುಧವಾರ ಈ ಬಗ್ಗೆ ರಿಪೋರ್ಟ್ ಒಂದು ಬಂದಿದ್ದು, ಸ್ಮಾರ್ಟ್‌ಫೋನ್‌ ಬಳಕೆಯ ಬಗ್ಗೆ ಸಂಪೂರ್ಣ ಚಿತ್ರಣವನ್ನೆ ನೀಡಿದೆ!

ಮೊಬೈಲ್ ಮಾರ್ಕೆಟಿಂಗ್ ಅಸೋಶಿಯೇಶನ್ (MNA) ಈ ಬಗ್ಗೆ ವರದಿಯನ್ನು ತಯಾರಿಸಿದ್ದು, ಪ್ರತಿಯೊಬ್ಬ ಸ್ಮಾರ್ಟ್‌ಫೋನ್‌ ಬಳಕೆದಾರನ ಸಾರಾಸರಿ ಸ್ಮಾರ್ಟ್‌ಫೋನ್‌ ಬಳಕೆಯ ಸಮಯ 3 ಗಂಟೆಗಳು ಎಂದು ತಿಳಿಸಿದೆ. ಇನ್ನು 2015 ನೇ ವರ್ಷಕ್ಕಿಂತ 2016 ನೇ ವರ್ಷದಲ್ಲಿ ಸ್ಮಾರ್ಟ್‌ಫೋನ್‌ ಬಳಕೆಯು 55% ಪರ್ಸೆಂಟ್‌ನಷ್ಟು ಹೆಚ್ಚಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಸ್ಮಾರ್ಟ್‌ಫೋನ್‌ ಹೆಚ್ಚು ಉಪಯೋಗಿಸುವುದು ಮಹಿಳೆಯರ?.ಪುರುಷರ?..ಶಾಕಿಂಗ್ ರಿಸಲ್ಟ್!!

ಆಪಲ್ ಸ್ಮಾರ್ಟ್‌ಫೊನ್ 10ನೇ ವರ್ಷದ ಸಂಭ್ರಮಕ್ಕೆ ಐಫೋನ್ 8 ಹೇಗಿರಲಿದೆ ಗೊತ್ತಾ!?

ಸ್ಮಾರ್ಟ್‌ಫೋನ್‌ ಬಳಕೆಯ ಹೆಚ್ಚು ಪ್ರಮಾಣವನ್ನು ಸೋಶಿಯಲ್ ಮೀಡಿಯಾ ಮತ್ತು ಮೆಸೆಂಜಿಂಗ್ ಆಪ್‌ಗಳು ಆವರಿಸಿಕೊಂಡಿದ್ದು, ಸ್ಮಾರ್ಟ್‌ಫೋನ್‌ ಬಳಕೆಯ ಶೇಕಡ 50% ಪರ್ಸೆಂಟ್ ಇವುಗಳಿಗೆ ಮೀಸಲಾಗಿದೆ. ಇನ್ನು ಭಾರತದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಸ್ಮಾರ್ಟ್‌ಫೋನ್‌ ಉಪಯೋಗಿಸುತ್ತಾರೆ ಎಂದು ರಿಪೋರ್ಟ್‌ ನೀಡಿದೆ.!!

ಸ್ಮಾರ್ಟ್‌ಫೋನ್‌ ಹೆಚ್ಚು ಉಪಯೋಗಿಸುವುದು ಮಹಿಳೆಯರ?.ಪುರುಷರ?..ಶಾಕಿಂಗ್ ರಿಸಲ್ಟ್!!

ಪುರುಷರಿಗಿಂತ ಮಹಿಳೆಯರು ಎಷ್ಟು ಪ್ರಮಾಣದಲ್ಲಿ ಹೆಚ್ಚು ಸ್ಮಾರ್ಟ್‌ಫೋನ್‌ನಲ್ಲಿ ಸಮಯವನ್ನು ಕಳಯುತ್ತಾರೆ ಎನ್ನುವ ಮಾಹಿತಿಯನ್ನು ಈ ರಿಪೋರ್ಟ್ ನೀಡಿದ್ದು, ಮಹಿಳೆಯರು ಪುರುಷರಿಗಿಂತ ಸರಾಸರಿ 80 ಪಟ್ಟು ಹೆಚ್ಚು ಸಮಯವನ್ನು ಫೇಸ್‌ಬುಕ್‌ನಲ್ಲಿ ಕಳೆಯುತ್ತಿದ್ದಾರೆ. ಇನ್ನು ಗೇಮಿಂಗ್ ಮತ್ತು ಯೂಟ್ಯೂಬ್‌ನಲ್ಲಿ ಪುರುಷರಿಗಿಂತ 2 ಪಟ್ಟು ಹೆಚ್ಚು ಸಮಯವನ್ನು ವಿನಿಯೋಗಿಸುತ್ತಾರೆ ಎಂದು ರಿಪೋರ್ಟ್ ತಿಳಿಸಿದೆ.

ಸ್ಮಾರ್ಟ್‌ಫೋನ್‌ ಹೆಚ್ಚು ಉಪಯೋಗಿಸುವುದು ಮಹಿಳೆಯರ?.ಪುರುಷರ?..ಶಾಕಿಂಗ್ ರಿಸಲ್ಟ್!!

30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಟಾಪ್ 5 ಲ್ಯಾಪ್‌ಟಾಪ್‌ಗಳು!?

ಸ್ಮಾರ್ಟ್‌ಫೋನ್‌ ಮೂಲಕ ಆನ್‌ಲೈನ್‌ ಶಾಪಿಂಗ್ ನಡೆಸುವ ಪ್ರಮಾಣ 2016 ರಲ್ಲಿ ಶೇಕಡ 15 ರಷ್ಟು ಹೆಚ್ಚಾಗಿದೆ ಎಂದು ರಿಪೋರ್ಟ್ ಹೇಳಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಪ್ರಮಾಣ ಇನ್ನು ಹೆಚ್ಚಾಗಲಿದ್ದು, ಸ್ಮಾರ್ಟ್‌ಫೋನ್ ಖರೀದಿಯ ಪ್ರಮಾಣ ಎರಡರಷ್ಟಾಗುತ್ತದೆ ಎಂದು ತಿಳಿಸಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The time spent on smartphones has gone up considerably in the country, surpassing the time spent on any other media including TV, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X